ಹಿಮಾಚಲ ಪ್ರದೇಶ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಆಯೋಗದ ಅಧ್ಯಕ್ಷ ಕುಲದೀಪ್ ಕುಮಾರ್ ಧಿಮಾನ್ ಅವರು ಶಿಮ್ಲಾ ಪೊಲೀಸರ ಕಾರ್ಯವೈಖರಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಶಿಮ್ಲಾ ಜಿಲ್ಲೆಯ ಹಳ್ಳಿಯೊಂದರಲ್ಲಿ ಕೆಲವು ಪ್ರಬಲಜಾತಿ ಮಹಿಳೆಯರು ತಮ್ಮ ಮನೆಗೆ ಪ್ರವೇಶಿಸಿದ್ದಕ್ಕಾಗಿ 12 ವರ್ಷದ ಬಾಲಕನನ್ನು ಕೊಟ್ಟಿಗೆಯಲ್ಲಿ ಬಂಧಿಸಿದ ಬಳಿಕ ಆತ ಮನನೊಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಆರೋಪಿಸಲಾಗಿದೆ.
ಪರಿಶಿಷ್ಟ ಜಾತಿಗೆ ಸೇರಿದ 12 ವರ್ಷದ ಬಾಲಕನ ಸಾವಿನ ಕುರಿತು ಚರ್ಚಿಸಲು ಧಿಮಾನ್ ಅವರು, ಆಯೋಗದ ಇತರ ಸದಸ್ಯರೊಂದಿಗೆ ಶಿಮ್ಲಾದ ಪೊಲೀಸ್ ಪ್ರಧಾನ ಕಚೇರಿಗೆ ಭೇಟಿ ನೀಡಿದ್ದರು.
ಶಿಮ್ಲಾ ಜಿಲ್ಲೆಯ ಹಳ್ಳಿಯೊಂದರಲ್ಲಿ ಕೆಲವು ಪ್ರಬಲ ಜಾತಿ ಮಹಿಳೆಯರು ತಮ್ಮ ಮನೆಗೆ ಪ್ರವೇಶಿಸಿದ್ದಕ್ಕಾಗಿ 12 ವರ್ಷದ ಬಾಲಕನನ್ನು ಕೊಟ್ಟಿಗೆಯೊಳಗೆ ಕೂಡಿಹಾಕಿದ ನಂತರ ಆತ ಮನನೊಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಆರೋಪಿಸಲಾಗಿದೆ. ಸೆಪ್ಟೆಂಬರ್ 20 ರಂದು ಮೃತನ ತಂದೆ ನೀಡಿದ ದೂರಿನ ಪ್ರಕಾರ, ಸೆಪ್ಟೆಂಬರ್ 16 ರ ಸಂಜೆ ಹಾಸಿಗೆಯ ಮೇಲೆ ಪ್ರಜ್ಞಾಹೀನನಾಗಿ ಬಿದ್ದಿದ್ದ ತನ್ನ ಮಗನನ್ನು ರೋಹ್ರುವಿನ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದರು, ಅಲ್ಲಿಂದ ಅವನನ್ನು ಶಿಮ್ಲಾದ ಇಂದಿರಾ ಗಾಂಧಿ ವೈದ್ಯಕೀಯ ಕಾಲೇಜಿಗೆ (ಐಜಿಎಂಸಿ) ಸಾಗಿಸಲಾಯಿತು, ಅಲ್ಲಿ ಮರುದಿನ ಚಿಕಿತ್ಸೆಯ ಸಮಯದಲ್ಲಿ ಆತ ಸಾವನ್ನಪ್ಪಿದ.
ಆಟವಾಡುವಾಗ ಪ್ರಬಲ ಜಾತಿ ಜನರ ಮನೆಗೆ ಪ್ರವೇಶಿಸಿದ ನಂತರ ಮೂವರು ಮಹಿಳೆಯರು ನನ್ನ ಮಗನಿಗೆ ಕಿರುಕುಳ ನೀಡಿ ಕೊಟ್ಟಿಗೆಯೊಳಗೆ ಕೂಡಿಹಾಕಿದ್ದಾರೆ ಎಂದು ತನ್ನ ಹೆಂಡತಿ ಹೇಳಿದ್ದಾಳೆ ಎಂದು ದೂರುದಾರರು ತಿಳಿಸಿದ್ದಾರೆ. ಕಿರುಕುಳದಿಂದ ಆಘಾತಕ್ಕೊಳಗಾದ ಹುಡುಗ ಆತ್ಮಹತ್ಯೆ ನಿರ್ಧಾರ ಮಾಡಿದ್ದಾರೆ ಎಂದು ದೂರುದಾರರು ತಿಳಿಸಿದ್ದಾರೆ. ನಂತರ ಪೊಲೀಸರು ಮಹಿಳೆಯರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ, ಅವರಿಗೆ ನ್ಯಾಯಾಲಯದಿಂದ ಮಧ್ಯಂತರ ಜಾಮೀನು ನೀಡಲಾಗಿದೆ.
ಪೊಲೀಸರೊಂದಿಗಿನ ಸಭೆಯ ಬಳಿಕ ಮಾತನಾಡಿದ ಧೀಮನ್, “ನಾವು ಎರಡು ದಿನಗಳಲ್ಲಿ ಶಿಮ್ಲಾ ಪೊಲೀಸರಿಂದ ವಿವರವಾದ ವರದಿಯನ್ನು ಕೋರಿದ್ದೆವು. ಆದರೆ, ಅವರು ವಿಳಂಬ ಮಾಡಿದರು. ಬಹಳ ವಿಳಂಬದ ನಂತರ ಇಂದು ನಮಗೆ ಅದೇ ಮಾಹಿತಿ ಸಿಕ್ಕಿತು, ಆದ್ದರಿಂದ ನಾವು ಡಿಜಿಪಿಗೆ ನಮ್ಮ ಅಸಮಾಧಾನವನ್ನು ತಿಳಿಸಿದ್ದೇವೆ” ಎಂದು ಹೇಳಿದರು.
ಅಕ್ಟೋಬರ್ 1 ರಂದು ಪೊಲೀಸರೊಂದಿಗೆ ಸಭೆ ನಡೆಸಲಾಯಿತು, ಅಧ್ಯಕ್ಷರು ಕೆಲವು ವರದಿಗಳು ಮತ್ತು ಸಂಬಂಧಿತ ದಾಖಲೆಗಳನ್ನು ಕೋರಿದ್ದಾರೆ ಎಂದು ಅವರು ಹೇಳಿದರು. ಅಕ್ಟೋಬರ್ 1 ರಿಂದ ಈ ಪ್ರಕರಣದಲ್ಲಿ ಆಗಿರುವ ಪ್ರಗತಿಯ ಬಗ್ಗೆ ಮಂಗಳವಾರ ಆಯೋಗಕ್ಕೆ ವಿವರಿಸಲಾಯಿತು.
ಹಿಮಾಚಲ ಪ್ರದೇಶದ ಪೊಲೀಸ್ ಮಹಾನಿರ್ದೇಶಕರು, ಈ ಕಾಯ್ದೆಯ ಎಲ್ಲ ನಿಬಂಧನೆಗಳನ್ನು ಅಕ್ಷರಶಃ ಜಾರಿಗೆ ತರಲಾಗುವುದು, ಅಂತಹ ವಿಷಯಗಳಲ್ಲಿ ನ್ಯಾಯ ಮತ್ತು ಸೂಕ್ಷ್ಮತೆಯನ್ನು ಖಚಿತಪಡಿಸಿಕೊಳ್ಳಲು ಅಗತ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಆಯೋಗಕ್ಕೆ ಭರವಸೆ ನೀಡಿದ್ದಾರೆ ಎಂದು ವರದಿಯಾಗಿದೆ.


