HomeUncategorizedಪೌರತ್ವ ತಿದ್ದುಪಡಿ ಕಾಯ್ದೆ: ಬಿಜೆಪಿಗೆ ಉಲ್ಟಾ ಹೊಡೆಯುತ್ತಿರುವ ಮತ್ತೊಂದು ಮಿತ್ರಪಕ್ಷ..

ಪೌರತ್ವ ತಿದ್ದುಪಡಿ ಕಾಯ್ದೆ: ಬಿಜೆಪಿಗೆ ಉಲ್ಟಾ ಹೊಡೆಯುತ್ತಿರುವ ಮತ್ತೊಂದು ಮಿತ್ರಪಕ್ಷ..

- Advertisement -
- Advertisement -

ಮುಸ್ಲಿಮರನ್ನು ಸಹ ಪೌರತ್ವ ತಿದ್ದುಪಡಿ ಕಾಯ್ದೆಯೊಳಗೆ ಸೇರಿಸಬೇಕೆಂದು ಪಂಜಾಬ್‌ನಲ್ಲಿ ಬಿಜೆಪಿಯ ಮಿತ್ರಪಕ್ಷ ಶಿರೋಮಣಿ ಅಕಾಲಿ ದಳ (ಎಸ್‌ಎಡಿ) ಒತ್ತಾಯಿಸಿದೆ. ಭಾರತವು ಜಾತ್ಯತೀತ ದೇಶವಾಗಿದ್ದು, ಮುಸ್ಲಿಮರನ್ನು ಹೊರಗಿಡುವುದು “ಸಮರ್ಥನೀಯವಲ್ಲ” ಎಂದು ಪಕ್ಷ ಹೇಳಿದೆ.

ಮಸೂದೆಯ ಅಂಗೀಕಾರವನ್ನು ಸ್ವಾಗತಿಸಿರುವ ಶಿರೋಮಣಿ ಅಕಾಲಿ ದಳದ ಪ್ರಧಾನ ಕಾರ್ಯದರ್ಶಿ ಮತ್ತು ವಕ್ತಾರ ದಲ್ಜಿತ್ ಸಿಂಗ್ ಚೀಮಾ ಅವರು, ಈ ಮಸೂದೆಯು ಕಿರುಕುಳಕ್ಕೊಳಗಾದ ಅಲ್ಪಸಂಖ್ಯಾತರಿಗೆ ಪೌರತ್ವದ ಪ್ರಯೋಜನಗಳನ್ನು ಪಡೆಯಲು ಅನುವು ಮಾಡಿಕೊಡುತ್ತದೆ ಆದರೆ ಅದನ್ನು ಮುಸ್ಲಿಂ ಸಮುದಾಯಕ್ಕೂ ವಿಸ್ತರಿಸಬೇಕು ಎಂದಿದ್ದಾರೆ.

“ನಮ್ಮ ಪಕ್ಷದ ನಿಲುವು ತುಂಬಾ ಸ್ಪಷ್ಟವಾಗಿದೆ. ನಮ್ಮ ದೇಶ ಮತ್ತು ಅದರ ಸಂವಿಧಾನವು ಜಾತ್ಯತೀತವಾಗಿರುವುದರಿಂದ ಮುಸ್ಲಿಮರಿಗೂ ಅದರ ಪ್ರಯೋಜನವನ್ನು ನೀಡಬೇಕು. ಕೇಂದ್ರ ಸರ್ಕಾರವು ಮುಸ್ಲಿಮರನ್ನು ಸಹ ಒಳಗೊಂಡಿರಬೇಕು. ಧರ್ಮದ ಆಧಾರದ ಮೇಲೆ ಅನ್ಯಾಯ ಮಾಡಬಾರದು ಎಂದು ನಮ್ಮ ಸಂವಿಧಾನ ಸ್ಪಷ್ಟವಾಗಿ ಹೇಳಿದೆ” ಎಂದಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಬಿಜೆಪಿಯ ಮಿತ್ರಪಕ್ಷಗಳಿಗೆ ತಡವಾಗಿಯಾದರೂ ಜ್ಞಾನೋದಯ ಆಗುತ್ತಿರುವುದು ಆಶಾದಾಯಕ ಬೆಳೆವಣಿಗೆ.

LEAVE A REPLY

Please enter your comment!
Please enter your name here

- Advertisment -

Must Read

ಕೇಜ್ರಿವಾಲ್‌ ನ್ಯಾಯಾಂಗ ಬಂಧನದ ಅವಧಿ ಮೇ.20ರವರೆಗೆ ವಿಸ್ತರಣೆ: ಮಧ್ಯಂತರ ಜಾಮೀನು ನೀಡುತ್ತಾ ಸುಪ್ರೀಂಕೋರ್ಟ್‌?

0
ದೆಹಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧಿತರಾಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ನ್ಯಾಯಾಂಗ ಬಂಧನದ ಅವಧಿಯನ್ನು ದೆಹಲಿ ಹೈಕೋರ್ಟ್ ಮೇ 20ರವರೆಗೆ ವಿಸ್ತರಿಸಿದೆ. ಈ...