ಕನ್ನಡ ಅಭಿವೃದ್ದಿ ಪ್ರಾಧಿಕಾರದ ಮನವಿ ಮೇರೆಗೆ ಮದರಸ ಹಾಗೂ ಉರ್ದು ಶಾಲೆಗಳಲ್ಲಿ ಕನ್ನಡ ಕಲಿಸುವುದು ಕಡ್ಡಾಯ ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಸಚಿವ ಜಮೀರ್ ಅಹಮದ್ ಘೋಷಿಸಿದ್ದಾರೆ.
ಇತ್ತೀಚೆಗಷ್ಟೆ ಕನ್ನಡ ಅಭಿವೃದ್ದಿ ಪ್ರಾದಿಕಾರದ ಅಧ್ಯಕ್ಷರಾದ ಪ್ರೊ. ಪುರೂಷೋತ್ತಮ ಬಿಳಿಮಲೆಯವರು ಕನ್ನಡ ಬಾರದವರಿಗೆ, ಉರ್ದು ಶಾಲೆಗಳಲ್ಲಿ 90 ದಿನಗಳಲ್ಲಿ ಕನ್ನಡ ಕಲಿಸುವು ಯೋಜನೆಯನ್ನು ಸರ್ಕಾರದ ಮುಂದಿಟ್ಟಿದ್ದರು. ಇದಕ್ಕೆ ಸ್ಪಂದಿಸಿದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸಚಿವರಾದ ಜಮೀರ್ ಅಹಮ್ಮದ್ ಖಾನ್ ರವರು “ಕನ್ನಡ ನೆಲದಲ್ಲಿ ಹತ್ತಾರು ವರ್ಷಗಳಿಂದ ಇದ್ದರೂ ಕನ್ನಡ ಬಾರದಿದ್ದರೆ ಇದು ಕನ್ನಡ ನಾಡಿನ ದುರಂತ. ಇಲ್ಲಿ ವಾಸಿಸುವ ಎಲ್ಲರೂ ಕನ್ನಡ ಕಲಿಯಬೇಕು. ಹಾಗಾಗಿ ಮದರಸಗಳು ಹಾಗೂ ಉರ್ದು ಶಾಲೆಗಳಲ್ಲಿ 90 ದಿನಗಳಲ್ಲಿ ಕನ್ನಡ ಕಲಿಸುವ ಯೋಜನೆಯನ್ನು ಅನುಷ್ಟಾನಗೊಳಿಸಲಾಗುವುದು ಎಂದು ಹೇಳಿದ್ದಾರೆ.
ಉರ್ದು ಶಾಲೆಗಳಲ್ಲಿ ತ್ರಿಭಾಷಾ ಸೂತ್ರಕ್ಕೆ ಅನುಗುಣವಾಗಿ ಮೊದಲ ಭಾಷೆಯಾಗಿ ಕನ್ನಡ, ದ್ವಿತೀಯ ಭಾಷೆಯಾಗಿ ಉರ್ದು ಹಾಗೂ ತೃತೀಯ ಭಾಷೆಯಾಗಿ ಇಂಗ್ಲಿಶ್ ನ್ನು ಕಲಿಸಲಾಗುವುದು ಎಂದು ಹೇಳಿಲಾಗಿದೆ.


