ಆಂಧ್ರ ಪ್ರದೇಶದ ಶಿಕ್ಷಕಿಯೊಬ್ಬರು ಕುರ್ಚಿಯ ಮೇಲೆ ಕುಳಿತು ಫೋನ್‌ನಲ್ಲಿ ಮಾತನಾಡುತ್ತಿರುವಾಗ ಶಾಲಾ ಮಕ್ಕಳು ಅವರ ಪಾದಗಳಿಗೆ ಮಸಾಜ್ ಮಾಡುತ್ತಿರುವುದನ್ನು ತೋರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡ ನಂತರ ಅವರನ್ನು ಅಮಾನತುಗೊಳಿಸಲಾಗಿದೆ.
ಶ್ರೀಕಾಕುಳಂ ಜಿಲ್ಲೆಯ ಮೆಲಿಯಪುಟ್ಟಿ ಮಂಡಲದಲ್ಲಿರುವ ಬಂಡಪಲ್ಲಿ ಬಾಲಕಿಯರ ಬುಡಕಟ್ಟು ಆಶ್ರಮ ಶಾಲೆಯಲ್ಲಿ ಈ ಘಟನೆ ನಡೆದಿದೆ.
ಇಬ್ಬರು ವಿದ್ಯಾರ್ಥಿಗಳು ಶಿಕ್ಷಕಿಯ ಪಾದಗಳಿಗೆ ಮಸಾಜ್ ಮಾಡುತ್ತಿರುವುದನ್ನು ತೋರಿಸುವ ವೀಡಿಯೊ ವೈರಲ್ ಆಗಿದ್ದು, ಅಧಿಕಾರಿಗಳು ತ್ವರಿತ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.
ಇಂಟಿಗ್ರೇಟೆಡ್ ಟ್ರೈಬಲ್ ಡೆವಲಪ್‌ಮೆಂಟ್ ಏಜೆನ್ಸಿ (ಐಟಿಡಿಎ) ಸೀತಾಂಪೇಟ ಯೋಜನಾ ಅಧಿಕಾರಿ ಪವಾರ್ ಸ್ವಪ್ನಿಲ್ ಜಗನ್ನಾಥ್ ಅವರು ಶಿಕ್ಷಕಿಗೆ ಶೋ-ಕಾಸ್ ನೋಟಿಸ್ ನೀಡಿ ತನಿಖೆಗೆ ಆದೇಶಿಸಿದ್ದಾರೆ. ತನ್ನ ವಿವರಣೆ ನೀರುವ ಶಿಕ್ಷಕಿ, ತಾನು ಮೊಣಕಾಲು ನೋವಿನಿಂದ ಬಳಲುತ್ತಿದ್ದೆ ಎಂದು ಸಮಜಾಯಿಷಿ ನೀಡಿದ್ದಾರೆ, ಹಿಂದಿನ ದಿನ ನಾನು ಬಿದ್ದಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ವಿದ್ಯಾರ್ಥಿಗಳು ಕೇವಲ ತನಗೆ ಸಹಾಯ ಮಾಡಿದ್ದಾರೆ, ವೀಡಿಯೊ ಸತ್ಯಗಳನ್ನು ತಪ್ಪಾಗಿ ನಿರೂಪಿಸಿದೆ ಎಂದು ವಿವರಿಸಿದ್ದಾರೆ.
ಆದರೆ, ಹೊಸ ವೀಡಿಯೊ ಹೊರಬಂದ ನಂತರ, ಅಧಿಕಾರಿಗಳು ತನಿಖೆಗೆ ಆದೇಶಿಸಿದ್ದಾರೆ. ತನಿಖೆ ಪೂರ್ಣಗೊಳ್ಳುವವರೆಗೆ ಮುಖ್ಯೋಪಾಧ್ಯಾಯಿನಿಯನ್ನು ಅಮಾನತುಗೊಳಿಸಲಾಗಿದೆ.
ಬಿಲಾಸ್‌ಪುರ ರೈಲು ಅಪಘಾತ: 6 ಮಂದಿ ಸಾವನ್ನಪ್ಪಿರುವ ಶಂಕೆ; ಹಲರಿಗೆ ಗಾಯ


