ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯದ (ಎಎಂಯು) ವಿದ್ಯಾರ್ಥಿ ಕಾರ್ಯಕರ್ತನೊಬ್ಬನ ಮೇಲೆ ನವೆಂಬರ್ 5, 2025 ರ ಸಂಜೆ ಗ್ರಂಥಾಲಯದ ಪಾರ್ಕಿಂಗ್ ಪ್ರದೇಶದಲ್ಲಿ ನಾಲ್ವರು ಅಪರಿಚಿತ ವ್ಯಕ್ತಿಗಳು ಸೇರಿದಂತೆ ಏಳು ಜನರ ಗುಂಪು ದಾಳಿ ನಡೆಸಿದೆ ಎಂದು ವರದಿಯಾಗಿದೆ. ‘ದಾಳಿಕೋರರು ತನ್ನ ಮೇಲೆ ಗುಂಡು ಹಾರಿಸಿ ಅಪಹರಿಸಲು ಪ್ರಯತ್ನಿಸಿದ್ದಾರೆ’ ಎಂದು ಅಂಬೇಡ್ಕರ್ ಹಾಲ್ ನಿವಾಸಿ ಮತ್ತು ಎರಡನೇ ವರ್ಷದ ಕಾನೂನು ವಿದ್ಯಾರ್ಥಿ ಅಮ್ಜಾದ್ ಅಲಿ ಆರೋಪಿಸಿದ್ದಾರೆ.
ಅಮ್ಜಾದ್ ಅವರ ದೂರಿನ ಪ್ರಕಾರ, ಸಂಜೆ 5 ಗಂಟೆ ಸುಮಾರಿಗೆ ತನ್ನ ಸ್ಕೂಟರ್ ನಿಲ್ಲಿಸಿ ಗ್ರಂಥಾಲಯದ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ ಈ ಘಟನೆ ನಡೆದಿದೆ. ಅಪರಿಚಿತ ಮೂವರು ವಿದ್ಯಾರ್ಥಿಗಳೊಂದಿಗೆ ಪರಿಚಿತ ನಾಲ್ವರು ವಿದ್ಯಾರ್ಥಿಗಳು ತನ್ನನ್ನು ಎದುರಿಸಿ, ಮಾತಿನ ಚಕಮಕಿ ನಡೆಸಿ, ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ ಎಂದು ಅವರು ಹೇಳಿಕೊಂಡಿದ್ದಾರೆ. ದಾಳಿಕೋರರಲ್ಲಿ ಒಬ್ಬರು ದೇಶೀಯ ಪಿಸ್ತೂಲ್ ಅನ್ನು ತೋರಿಸಿ ಗುಂಡು ಹಾರಿಸಿದರು, ಅದು ಸ್ವಲ್ಪದರಲ್ಲೇ ತಪ್ಪಿತು. ಗಲಾಟೆಯ ಸಮಯದಲ್ಲಿ, ನನ್ನ ಕೈಗಡಿಯಾರವನ್ನು ಕಸಿದುಕೊಳ್ಳಲಾಗಿದೆ ಎಂದು ಅವರು ದೂರು ನೀಡಿದ್ದಾರೆ.
ವಿದ್ಯಾರ್ಥಿ ಚಟುವಟಿಕೆಯಲ್ಲಿ, ವಿಶೇಷವಾಗಿ ಹಿಂದಿನ ಧರಣಿ ಪ್ರತಿಭಟನೆಯ ಸಮಯದಲ್ಲಿ, ತೊಡಗಿಸಿಕೊಂಡಿದ್ದರಿಂದ ತಿಂಗಳುಗಟ್ಟಲೆ ಅದೇ ಗುಂಪಿನಿಂದ ತನಗೆ ಬೆದರಿಕೆ ಇತ್ತು ಎಂದು ಅಮ್ಜಾದ್ ಹೇಳಿದ್ದಾರೆ. “ಅವರು ನನ್ನ ಹಾಸ್ಟೆಲ್ ಬಳಿ ಶಸ್ತ್ರಾಸ್ತ್ರಗಳೊಂದಿಗೆ ಸುತ್ತಾಡುತ್ತಿದ್ದರು, ಕೊಲೆ ಬೆದರಿಕೆ ಹಾಕುತ್ತಿದ್ದರು. ನನ್ನನ್ನು ಕೊಲ್ಲಲು ಯೋಜಿಸುತ್ತಿದ್ದರು” ಎಂದು ಅವರು ಅಧಿಕಾರಿಗಳಿಗೆ ತಿಳಿಸಿದರು. ದೂರಿನಲ್ಲಿ ಹೆಸರಿಸಲಾದ ನಾಲ್ವರು ವಿದ್ಯಾರ್ಥಿಗಳು, ಮೂವರು ಅಪರಿಚಿತ ಸಹಚರರ ವಿರುದ್ಧ ದೂರು ದಾಖಲಿಸಲಾಗಿದೆ. ಈ ವಿಷಯ ತನಿಖೆಯಲ್ಲಿದೆ ಎಂದು ಇನ್ಸ್‌ಪೆಕ್ಟರ್ ಪಂಕಜ್ ಮಿಶ್ರಾ ದೃಢಪಡಿಸಿದ್ದಾರೆ.
ಆದರೆ, ವಿಶ್ವವಿದ್ಯಾಲಯದ ಪ್ರೊಕ್ಟೋರಿಯಲ್ ತಂಡ ಮತ್ತು ಪೊಲೀಸ್ ತನಿಖೆಯು ಗುಂಡು ಹಾರಿಸುವುದು ಅಥವಾ ಅಪಹರಣಕ್ಕೆ ಯತ್ನಿಸಿದ ಆರೋಪಗಳನ್ನು ದೃಢಪಡಿಸಿಲ್ಲ. ವಿದ್ಯಾರ್ಥಿಗಳ ನಡುವಿನ ವಿವಾದದಿಂದ ಈ ಘಟನೆ ಉದ್ಭವಿಸಿದೆ. ಎರಡೂ ಕಡೆಯವರು ದೂರು ದಾಖಲಿಸಿದ್ದಾರೆ ಎಂದು ಡೆಪ್ಯೂಟಿ ಪ್ರೊಕ್ಟರ್ ಪ್ರೊ. ಹಶ್ಮತ್ ಅಲಿ ಹೇಳಿದರು.
ಹೆದ್ದಾರಿ, ಶಾಲೆ, ಆಸ್ಪತ್ರೆ, ರೈಲು ನಿಲ್ದಾಣಗಳಿಂದ ಬೀದಿ ನಾಯಿಗಳನ್ನು ತೆರವುಗೊಳಿಸುವಂತೆ ಸುಪ್ರೀಂ ಕೋರ್ಟ್ ಆದೇಶ


