ನಾಲ್ಕು ವರ್ಷ ವಯಸ್ಸಿನ ಹೆಣ್ಣು ಮಗುವನ್ನು ಅಪಹರಿಸಿ, ಲೈಂಗಿಕ ದೌರ್ಜನ್ಯವೆಸಗಿದ ಆಘಾತಕಾರಿ ಘಟನೆ ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯಲ್ಲಿ ನಡೆದಿರುವುದಾಗಿ ವರದಿಯಾಗಿದೆ.
ಶುಕ್ರವಾರ (ನ.7) ರಾತ್ರಿ ಈ ಘಟನೆ ನಡೆದಿದೆ. ಅಪರಿಚಿತರು ದುಷ್ಕೃತ್ಯವೆಸಗಿದ್ದಾರೆ. ಮಗುವಿನ ಪೋಷಕರು ರೈಲ್ವೆ ಶೆಡ್‌ನಲ್ಲಿ ಆಶ್ರಯ ಪಡೆದಿದ್ದರು. ಮಗು ಸೊಳ್ಳೆ ಪರದೆಯ ಒಳಗೆ ತನ್ನ ಅಜ್ಜಿಯ ಜೊತೆ ಮಲಗಿತ್ತು. ಅಲ್ಲಿಂದ ಅಪಹರಿಸಲಾಗಿದೆ ಎಂದು ವರದಿಗಳು ಹೇಳಿವೆ.
ಪೋಷಕರು ಹುಡುಕಾಡಿದಾಗ ಚರಂಡಿಯಲ್ಲಿ ರಕ್ತಡ ಮಡುವಿನಲ್ಲಿ ಮಗು ಪತ್ತೆಯಾಗಿದ್ದಾಳೆ. ಈ ಸಂದರ್ಭದಲ್ಲಿ ಆಕೆಯ ಖಾಸಗಿ ಅಂಗದಲ್ಲಿ ರಕ್ತಸ್ರಾವವಾಗುತ್ತಿತ್ತು. ಕೆನ್ನೆಯ ಮೇಲೆ ಕಚ್ಚಿದ ಗುರುತುಗಳಿತ್ತು. ತಕ್ಷಣ ಮಗುವನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ನಂತರ ಅಲ್ಲಿಂದ ಚಂದನ್‌ನಗರ ಆಸ್ಪತ್ರೆಗೆ ರವಾನಿಸಲಾಯಿತು ಎಂದು ವರದಿಗಳು ವಿವರಿಸಿವೆ.
ಮಗು ಮಲಗಿದ್ದಾಗ ಯಾರೋ ಸೊಳ್ಳೆ ಪರದೆಯನ್ನು ಹರಿದು ಆಕೆಯನ್ನು ಅಪಹರಿಸಿದ್ದಾರೆ. ನಂತರ ಮಗು ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾಯಿತು ಎಂದು ಮೃತ ಬಾಲಕಿಯ ಅಜ್ಜಿ ಹೇಳಿದ್ದಾರೆ.
ಹೂಗ್ಲಿ ಗ್ರಾಮೀಣ ಪೊಲೀಸ್ ಠಾಣೆಯ ಹಿರಿಯ ಅಧಿಕಾರಿಯೊಬ್ಬರು ಘಟನೆಯನ್ನು ದೃಢಪಡಿಸಿದ್ದಾರೆ. ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಸ್ಥಳೀಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
“ನಾವು ತನಿಖೆ ಪ್ರಾರಂಭಿಸಿದ್ದೇವೆ. ಅಪರಾಧಿಯನ್ನು ಗುರುತಿಸಲು ಮತ್ತು ಬಂಧಿಸಲು ಪ್ರಯತ್ನಿಸುತ್ತಿದ್ದೇವೆ” ಎಂದು ಅಧಿಕಾರಿ ತಿಳಿಸಿದ್ದಾರೆ.
ಈ ಘಟನೆಯು ರಾಜಕೀಯ ಬಣ್ಣ ಪಡೆದುಕೊಂಡಿದೆ. ಬಿಜೆಪಿ ನಾಯಕರು ಪೊಲೀಸರ ಆರಂಭಿಕ ನಿರ್ಲಕ್ಷ್ಯದ ಆರೋಪ ಮಾಡಿದ್ದಾರೆ. “ಪೊಲೀಸರು ಅಪರಾಧವನ್ನು ಮರೆ ಮಾಚುವಲ್ಲಿ ನಿರತರಾಗಿದ್ದಾರೆ” ಎಂದು ಪಶ್ಚಿಮ ಬಂಗಾಳದ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಹೇಳಿದ್ದಾರೆ.
“ಇದು ಮಮತಾ ಬ್ಯಾನರ್ಜಿಯವರ ಎಲ್ಲರಿಗೂ ಉಚಿತ ಆಡಳಿತದ ನಿಜವಾದ ಮುಖ. ಒಂದು ಮಗುವಿನ ಜೀವನ ಛಿದ್ರಗೊಂಡಿದೆ. ಆದರೆ, ಪೊಲೀಸರು ಸತ್ಯವನ್ನು ನಿಗ್ರಹಿಸುವ ಮೂಲಕ ರಾಜ್ಯದ ನಕಲಿ ಕಾನೂನು ಮತ್ತು ಸುವ್ಯವಸ್ಥೆಯ ಪ್ರತಿಷ್ಠೆಯನ್ನು ರಕ್ಷಿಸುತ್ತಿದ್ದಾರೆ. ಅವರು ಪೊಲೀಸ್ ಅಧಿಕಾರಿಗಳೋ ಅಥವಾ ಮಮತಾ ಬ್ಯಾನರ್ಜಿಯವರ ವಂಚಕರೋ?” ಎಂದು ಸುವೇಂದು ಅಧಿಕಾರಿ ಪ್ರಶ್ನಿಸಿದ್ದಾರೆ.
“ಮಮತಾ ಬ್ಯಾನರ್ಜಿಯವರೇ ನೀವು ವಿಫಲ ಮುಖ್ಯಮಂತ್ರಿ. ನಿಮ್ಮ ಆಳ್ವಿಕೆಯಲ್ಲಿ, ಪಶ್ಚಿಮ ಬಂಗಾಳದ ಕಾನೂನು ಮತ್ತು ಸುವ್ಯವಸ್ಥೆ ಕುಸಿದಿದೆ. ಪ್ರತಿ ಬಾರಿಯೂ ಅದೇ ಸನ್ನಿವೇಶ : ಅತ್ಯಾಚಾರ → ಇಲ್ಲ/ವಿಳಂಬವಾದ ಎಫ್‌ಐಆರ್ → ಆಸ್ಪತ್ರೆ ಉಲ್ಲೇಖ → ಮಾಧ್ಯಮ ನಿಷೇಧ → ಟಿಎಂಸಿ ನಾಯಕರು ಪ್ರಕರಣವನ್ನು ಮುಚ್ಚಿ ಹಾಕುವುದು ಎಂದಿದ್ದಾರೆ.
“ಮಮತಾ ಬ್ಯಾನರ್ಜಿಯವರ ಭಯಾನಕ ರಾಕ್ಷಸ ಕ್ರೌರ್ಯದ ಆಳ್ವಿಕೆಯಲ್ಲಿ, ನಾಲ್ಕು ವರ್ಷದ ಬಾಲಕಿ ಕೂಡ ಸುರಕ್ಷಿತವಾಗಿಲ್ಲ” ಎಂದು ಕೇಂದ್ರ ಈಶಾನ್ಯ ಪ್ರದೇಶ ಶಿಕ್ಷಣ ಮತ್ತು ಅಭಿವೃದ್ಧಿ ಖಾತೆಯ ರಾಜ್ಯ ಸಚಿವ ಸುಕಾಂತ ಮಜುಂದಾರ್ ಹೇಳಿದ್ದಾರೆ.
“ಅಪಹರಣಗೊಂಡು ತುಂಬಾ ಸಮಯದ ನಂತರ ಗಾಯಗೊಂಡ ಸ್ಥಿತಿಯಲ್ಲಿ ಬಾಲಕಿ ಪತ್ತೆಯಾದಳು. ವಿಚಿತ್ರವೆಂದರೆ, ಬಾಲಕಿಯ ಕುಟುಂಬ ಈ ಬಗ್ಗೆ ಮಾಹಿತಿ ನೀಡಲು ಪೊಲೀಸ್ ಠಾಣೆಗೆ ಹೋದಾಗ ಅವರು ವಾಪಸ್ ಕಳುಹಿಸಿದರು ಎಂದು ಆರೋಪಿಸಲಾಗಿದೆ. ಬಾಲಕಿಯ ಕುಟುಂಬದ ಪ್ರಕಾರ, ಪೊಲೀಸರು ದೂರು ಸ್ವೀಕರಿಸಲೂ ನಿರಾಕರಿಸಿದ್ದಾರೆ. ಇದು ಯಾವ ರೀತಿಯ ಪಶ್ಚಿಮ ಬಂಗಾಳ? ಇಲ್ಲಿ ಮಲಗಿರುವ ಶಿಶುವನ್ನೂ ಅಪಹರಿಸಿ ಅತ್ಯಾಚಾರ ಮಾಡಲಾಗುತ್ತದೆ” ಎಂದು ಸುಕಾಂತ ಮಜುಂದಾರ್ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ.
“ನಗರಗಳಿಂದ ಸಣ್ಣ ಪಟ್ಟಣಗಳವರೆಗೆ, ಉಪನಗರಗಳಿಂದ ದೂರದ ಹಳ್ಳಿಗಳವರೆಗೆ, ಎಲ್ಲೆಡೆ ಮಹಿಳೆಯರು ದಬ್ಬಾಳಿಕೆ ಮತ್ತು ದೌರ್ಜನ್ಯವನ್ನು ಎದುರಿಸುತ್ತಿದ್ದಾರೆ. ಒಂದೆಡೆ, ಮಹಿಳೆಯರ ಮೇಲಿನ ದೌರ್ಜನ್ಯದ ಅಂತಿಮ ಭಯಾನಕತೆ, ಮತ್ತೊಂದೆಡೆ, ಕಾನೂನು ಜಾರಿ ಪೊಲೀಸರು ಸ್ವತಃ ಅತ್ಯಾಚಾರಿ ರಾಕ್ಷಸರನ್ನು ರಕ್ಷಿಸಲು ಹತಾಶ ಪ್ರಯತ್ನಗಳನ್ನು ಮಾಡುತ್ತಿದ್ದಾರೆ! ವಿಫಲ ಮುಖ್ಯಮಂತ್ರಿ. ಮಮತಾ ಬ್ಯಾನರ್ಜಿ ಎಷ್ಟು ಕಾಲ ಅಧಿಕಾರಕ್ಕೆ ಅಂಟಿಕೊಳ್ಳುತ್ತಾರೆ?” ಎಂದು ಸುಕಾಂತ ಮಜುಂದಾರ್ ಪ್ರಶ್ನಿಸಿದ್ದಾರೆ.
ವಂದೇ ಭಾರತ್ ರೈಲಿನಲ್ಲಿ ಆರ್‌ಎಸ್‌ಎಸ್ ಗೀತೆ ಹಾಡಿದ ಮಕ್ಕಳು, ವಿಡಿಯೋ ಹಂಚಿಕೊಂಡ ರೈಲ್ವೆ : ತೀವ್ರ ವಿರೋಧ


