ಸೋಮವಾರ ಸಂಜೆ ದೆಹಲಿಯ ಕೆಂಪು ಕೋಟೆ (ಲಾಲ್ ಕಿಲಾ) ಮೆಟ್ರೋ ನಿಲ್ದಾಣದ ಗೇಟ್ ಸಂಖ್ಯೆ 1 ರ ಬಳಿ ಕಾರಿನಲ್ಲಿ ಸಂಭವಿಸಿದ ಪ್ರಬಲ ಸ್ಫೋಟದಲ್ಲಿ ಕನಿಷ್ಠ ಎಂಟು ಜನರು ಸಾವನ್ನಪ್ಪಿದ್ದು, 24 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ.
ದೆಹಲಿ ಅಗ್ನಿಶಾಮಕ ಇಲಾಖೆಯ ಪ್ರಕಾರ, ಸಂಜೆ 6:55 ರ ಸುಮಾರಿಗೆ ಸ್ಫೋಟದ ಬಗ್ಗೆ ಕರೆ ಬಂದಿತು. ನಂತರ ಏಳು ಅಗ್ನಿಶಾಮಕ ವಾಹನಗಳು ಮತ್ತು 15 ಸಿಎಟಿ ಆಂಬ್ಯುಲೆನ್ಸ್‌ಗಳನ್ನು ಸ್ಥಳಕ್ಕೆ ರವಾನಿಸಲಾಯಿತು. ಸ್ಫೋಟದಿಂದಾಗಿ ಹತ್ತಿರದ ಮೂರರಿಂದ ನಾಲ್ಕು ವಾಹನಗಳು ಬೆಂಕಿಗೆ ಆಹುತಿಯಾದವು, ಅವೆಲ್ಲವನ್ನೂ ನಂತರ ನಂದಿಸಲಾಯಿತು.
ಹಲವಾರು ಶವಗಳನ್ನು ಎಲ್‌ಎನ್‌ಜೆಪಿ ಆಸ್ಪತ್ರೆಗೆ ತರಲಾಗಿದ್ದು, ಗಾಯಗೊಂಡವರು ಚಿಕಿತ್ಸೆ ಪಡೆಯುತ್ತಿದ್ದಾರೆ.
ಪೊಲೀಸ್ ಮೂಲಗಳ ಪ್ರಕಾರ, ಸ್ಫೋಟವು ಅತ್ಯಂತ ಶಕ್ತಿಶಾಲಿಯಾಗಿದ್ದು, ಹತ್ತಿರದ ಬೀದಿ ದೀಪಗಳನ್ನು ಪುಡಿಮಾಡಿ, ಸ್ಥಳದ ಬಳಿ ನಿಲ್ಲಿಸಿದ್ದ ವಾಹನಗಳಿಗೆ ಹಾನಿ ಉಂಟು ಮಾಡಿದೆ. ಹಿರಿಯ ಅಧಿಕಾರಿಗಳು ಮತ್ತು ಡಿಸಿಪಿ ಸೇರಿದಂತೆ ದೆಹಲಿ ಪೊಲೀಸ್ ವಿಶೇಷ ಕೋಶದ ತಂಡವು ತನಿಖೆಯ ಮೇಲ್ವಿಚಾರಣೆಗೆ ಸ್ಥಳಕ್ಕೆ ತಲುಪಿದೆ.
ಸ್ಫೋಟದ ಕಾರಣ ತನಿಖೆ ಹಂತದಲ್ಲಿದ್ದರೂ, ಪೊಲೀಸರು ನಿಷೇಧಿತ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿರುವ ಅಂತರರಾಜ್ಯ ಭಯೋತ್ಪಾದಕ ಮಾಡ್ಯೂಲ್ ಅನ್ನು ಭೇದಿಸಿ, ಸ್ಫೋಟಕಗಳನ್ನು ತಯಾರಿಸಲು ಬಳಸುವ ರಾಸಾಯನಿಕವಾದ 2,900 ಕಿಲೋಗ್ರಾಂಗಳಿಗೂ ಹೆಚ್ಚು ಶಂಕಿತ ಅಮೋನಿಯಂ ನೈಟ್ರೇಟ್ ಅನ್ನು ವಶಪಡಿಸಿಕೊಂಡ ಕೆಲವೇ ಗಂಟೆಗಳ ನಂತರ ಈ ಘಟನೆ ನಡೆದಿದೆ. ವಶಪಡಿಸಿಕೊಂಡ ವಸ್ತುಗಳಿಂದ ತಯಾರಿಸಿದ ನೂರಾರು ಶಕ್ತಿಶಾಲಿ ಐಇಡಿಗಳನ್ನು ಬಳಸಿಕೊಂಡು ದೆಹಲಿಯನ್ನು ಭಯಭೀತಗೊಳಿಸಲು ಮಾಡ್ಯೂಲ್ ಯೋಜಿಸಿದೆ ಎಂದು ಅಧಿಕಾರಿಗಳು ಹೇಳಿದ್ದರು.
ಪ್ರತ್ಯಕ್ಷದರ್ಶಿಗಳು ಸ್ಫೋಟವನ್ನು ‘ಭಯಾನಕ’ ಎಂದು ಆಘಾತ ವ್ಯಕ್ತಪಡಿಸಿದ್ದಾರೆ. “ನಾನು ನನ್ನ ಮನೆಯಿಂದಲೇ ಬೆಂಕಿ ಜ್ವಾಲೆ ನೋಡಿದೆ. ನಂತರ ಏನಾಯಿತು ಎಂದು ನೋಡಲು ಕೆಳಗೆ ಬಂದೆ. ಜೋರಾದ ಸ್ಫೋಟ ಸಂಭವಿಸಿದೆ. ನಾನು ಹತ್ತಿರದಲ್ಲಿ ವಾಸಿಸುತ್ತಿದ್ದೇನೆ” ಎಂದು ಸ್ಥಳೀಯ ನಿವಾಸಿ ರಾಜಧರ್ ಪಾಂಡೆ ಹೇಳಿದರು.
Those who terrorized Delhi's "Red
Fort" will not be spared, no matter
who is behind it.
Wherever they are, they will not be spared.#RedFort pic.twitter.com/kmYpANS1WZ
— श्रवण बिश्नोई (किसान/ Hindus) (@SKBishnoi29Rule) November 10, 2025
“ನನ್ನ ಜೀವನದಲ್ಲಿ ನಾನು ಎಂದಿಗೂ ಇಷ್ಟು ದೊಡ್ಡ ಸ್ಫೋಟವನ್ನು ಕೇಳಿಲ್ಲ. ಸ್ಫೋಟದಿಂದಾಗಿ ನಾನು ಮೂರು ಬಾರಿ ಬಿದ್ದೆ. ನಾವೆಲ್ಲರೂ ಸಾಯುತ್ತೇವೆ ಎಂದು ಭಾಸವಾಯಿತು” ಎಂದು ಸ್ಥಳೀಯ ಅಂಗಡಿಯೊಬ್ಬ ನೆನಪಿಸಿಕೊಂಡರು.
ವಿಧಿವಿಜ್ಞಾನ ತಜ್ಞರು ಸ್ಥಳವನ್ನು ಪರಿಶೀಲಿಸುತ್ತಿದ್ದಾರೆ. ಕೆಂಪು ಕೋಟೆಯ ಸುತ್ತಲಿನ ಇಡೀ ಪ್ರದೇಶವನ್ನು ಸಂಪೂರ್ಣವಾಗಿ ಸುತ್ತುವರೆದಿದ್ದಾರೆ.
ದೆಹಲಿಯಾದ್ಯಂತ ಹೈ ಅಲರ್ಟ್ ಘೋಷಿಸಲಾಗಿದ್ದು, ಹೆಚ್ಚಿನ ಭದ್ರತಾ ನಿಯೋಜನೆ ಮಾಡಲಾಗಿದೆ. ಮುಂಬೈ ಪೊಲೀಸರನ್ನು ಸಹ ಹೈ ಅಲರ್ಟ್‌ನಲ್ಲಿ ಇರಿಸಲಾಗಿದ್ದು, ಎಲ್ಲಾ ಠಾಣೆಗಳು ಗಸ್ತು ತಿರುಗುವಿಕೆಯನ್ನು ತೀವ್ರಗೊಳಿಸಲ. ನಾಕಬಂದಿ ನಡೆಸುವ ಜೊತೆಗೆ ಅನುಮಾನಾಸ್ಪದ ವ್ಯಕ್ತಿಗಳ ಮೇಲೆ ತೀವ್ರ ತಪಾಸಣೆ ನಡೆಸಲು ನಿರ್ದೇಶಿಸಲಾಗಿದೆ.
ತಿರುಪತಿ ಪ್ರವೇಶ ಮಾರ್ಗದಲ್ಲಿ ಮಾಂಸಾಹಾರ ಸೇವನೆ; ಇಬ್ಬರು ನೌಕರರನ್ನು ವಜಾಗೊಳಿಸಿದ ಟಿಟಿಡಿ


