ಜಮ್ಮು ಮತ್ತು ಕಾಶ್ಮೀರದ ಎಲ್ಲ ನಾಗರಿಕರೂ ಭಯೋತ್ಪಾದನೆಯೊಂದಿಗೆ ಸಂಬಂಧ ಹೊಂದಿಲ್ಲ ಎಂದು ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಗುರುವಾರ ಹೇಳಿದ್ದಾರೆ.
ಜಮ್ಮುವಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಒಮರ್, ಎಲ್ಲ ಕಾಶ್ಮೀರಿಗಳನ್ನು ಅನುಮಾನದಿಂದ ನೋಡುವುದರ ವಿರುದ್ಧ ಎಚ್ಚರಿಕೆ ನೀಡಿದ್ದಾರೆ. ಅಂತಹ ಮನೋಭಾವವು ಜನರನ್ನು ಸರಿಯಾದ ಹಾದಿಯಲ್ಲಿ ಇಡಲು ಕಷ್ಟಕರವಾಗಿಸುತ್ತದೆ ಎಂದು ಹೇಳಿದರು.
“ನಾನು ಮೊದಲ ದಿನವೇ ನನ್ನ ಮೊದಲ ಪ್ರತಿಕ್ರಿಯೆಯನ್ನು ನೀಡಿದ್ದೇನೆ. ಈ ಘಟನೆಯನ್ನು ಎಷ್ಟೇ ಖಂಡಿಸಿದರೂ ಸಾಕಾಗುವುದಿಲ್ಲ. ಈ ರೀತಿ ಅಮಾಯಕ ಜನರ ಕ್ರೂರ ಹತ್ಯೆ ಸ್ವೀಕಾರಾರ್ಹವಲ್ಲ. ಯಾವುದೇ ಧರ್ಮವು ಇದನ್ನು ಅನುಮತಿಸುವುದಿಲ್ಲ” ಎಂದು ಅವರು ದೆಹಲಿಯಲ್ಲಿ ಇತ್ತೀಚಿನ ಹಿಂಸಾಚಾರವನ್ನು ಉಲ್ಲೇಖಿಸಿ ಹೇಳಿದರು.
ಜಮ್ಮು-ಕಾಶ್ಮೀರದಲ್ಲಿ ಶಾಂತಿ ಮತ್ತು ಸಹೋದರತ್ವವನ್ನು ಕದಡಲು ಕೆಲವೇ ವ್ಯಕ್ತಿಗಳು ಮಾತ್ರ ಕಾರಣ ಎಂದು ಒಮರ್ ಹೇಳಿದರು.
“ಇಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯೂ ಭಯೋತ್ಪಾದಕನಲ್ಲ ಅಥವಾ ಭಯೋತ್ಪಾದಕರೊಂದಿಗೆ ಸಂಪರ್ಕ ಹೊಂದಿರುವುದಿಲ್ಲ” ಎಂದು ಅವರು ಹೇಳಿದರು.
“ದುರದೃಷ್ಟವಶಾತ್, ನಾವು ಪ್ರತಿಯೊಬ್ಬ ಕಾಶ್ಮೀರಿ ಮುಸ್ಲಿಮರನ್ನು ಅನುಮಾನದಿಂದ ನೋಡಲು ಪ್ರಾರಂಭಿಸಿದಾಗ ಮತ್ತು ಪ್ರತಿಯೊಬ್ಬ ಕಾಶ್ಮೀರಿಯನ್ನು ಭಯೋತ್ಪಾದಕ ಎಂದು ಚಿತ್ರಿಸಿದಾಗ, ಜನರನ್ನು ಸರಿಯಾದ ಹಾದಿಯಲ್ಲಿ ಇಡುವುದು ತುಂಬಾ ಕಷ್ಟಕರವಾಗುತ್ತದೆ” ಎಂದರು.
ಕೆಲವು ವಿದ್ಯಾವಂತ ವ್ಯಕ್ತಿಗಳು ಇಂತಹ ಕೃತ್ಯಗಳಲ್ಲಿ ಭಾಗಿಯಾಗಿರುವುದು ಕಂಡುಬಂದಿದ್ದರೂ, ಮುಗ್ಧ ಜನರನ್ನು ಗುರಿಯಾಗಿಸಬಾರದು ಎಂದು ಅವರು ಹೇಳಿದರು.
“ಘಟನೆಗೆ ಕಾರಣರಾದವರನ್ನು ಕಠಿಣವಾಗಿ ಶಿಕ್ಷಿಸಬೇಕು. ಆದರೆ ನಿರಪರಾಧಿಗಳನ್ನು ಇದರಿಂದ ದೂರವಿಡಬೇಕು” ಎಂದು ಒಮರ್ ಹೇಳಿದರು.
ದಲಿತ ಮಹಾಸಂಘದ ಅಧ್ಯಕ್ಷನ ಇರಿದು ಹತ್ಯೆ : ಹುಟ್ಟು ಹಬ್ಬ ಆಚರಣೆ ವೇಳೆಯೇ ಘಟನೆ


