ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಗೆಲುವು ದಾಖಲಿಸುತ್ತಿದ್ದಂತೆ ಅಸ್ಸಾಂನ ಆರೋಗ್ಯ ಸಚಿವ ಅಶೋಕ್ ಸಿಂಘಾಲ್ ಅವರು ಹೂಕೋಸು ಫೋಟೋವನ್ನು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಹಂಚಿಕೊಂಡಿದ್ದು, ‘ಬಿಹಾರ ಹೂಕೋಸು ಕೃಷಿಗೆ ಒಪ್ಪಿಗೆ ನೀಡಿದೆ” ಎಂದು ಬರೆದುಕೊಂಡಿದ್ದಾರೆ.
ಈ ಮೂಲಕ ಮುಸ್ಲಿಮರ ಹತ್ಯಾಕಾಂಡಕ್ಕೆ ಬಿಹಾರದ ಗೆಲುವು ಅನುಮತಿ ನೀಡಿದೆ ಎಂಬ ದಾಟಿಯಲ್ಲಿ ಸಚಿವ ಸಿಂಘಾಲ್ ಹೇಳಿದ್ದಾರೆ.
Bihar approves Gobi farming ✅ pic.twitter.com/SubrTQ0Mu5
— Ashok Singhal (@TheAshokSinghal) November 14, 2025
ಸಾಂವಿಧಾನಿಕ ಹುದ್ದೆಯಲ್ಲಿರುವ ಸಚಿವನ ಈ ಆಘಾತಕಾರಿ ಪೋಸ್ಟ್‌ಗೆ ರಾಜಕೀಯ ನಾಯಕರು ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಹಲವರು ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ.
ಹೂಕೋಸು ಕೃಷಿ 1989ರಲ್ಲಿ ಬಿಹಾರದ ಭಾಗಲ್ಪುರದಲ್ಲಿ ನಡೆದ ಮುಸ್ಲಿಮರ ಸಾಮೂಹಿಕ ಹತ್ಯೆಯನ್ನು ಉಲ್ಲೇಖಿಸುತ್ತದೆ. ಮುಸ್ಲಿಮರ ಹತ್ಯಾಕಾಂಡದ ಬಳಿಕ ಸಾಕ್ಷ್ಯ ಮರೆಮಾಚಲು ಲೋಗೇನ್ ಗ್ರಾಮದಲ್ಲಿ ಹೆಣಗಳ ಹೂತ ಸಮಾಧಿಗಳ ಮೇಲೆ ಹೂಕೋಸು ಕೃಷಿ ಮಾಡಲಾಗಿತ್ತು. ಭಾಗಲ್ಪುರ ಹತ್ಯಾಕಾಂಡದಲ್ಲಿ 1,000ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು ಮತ್ತು ಅಂದಾಜು 50,000 ಜನರು ಸ್ಥಳಾಂತರಗೊಂಡಿದ್ದರು.
ಬಿಜೆಪಿ, ಸಂಘಪರಿವಾರದ ಬೆಂಬಲಿಗರು ಮತ್ತು ಇತರ ಕಟ್ಟರ್ ಬಲಪಂಥೀಯರು ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ಹೂಕೋಸು ಫೋಟೋಗಳನ್ನು ಹಂಚಿಕೊಂಡು ಮುಸ್ಲಿಮರ ವಿರುದ್ದ ದ್ವೇಷ ಕಾರುವುದು ಮಾಡುತ್ತಿರುತ್ತಾರೆ.
“ಗೋಬಿ ಕೃಷಿ’ (ಹೂಕೋಸು ಕೃಷಿ) ಎಂದರೆ 1989ರಲ್ಲಿ ಬಿಹಾರದ ಭಾಗಲ್ಪುರದಲ್ಲಿ ನಡೆದ ಮುಸ್ಲಿಮರ ಸಾಮೂಹಿಕ ಹತ್ಯೆಯನ್ನು ವೈಭವೀಕರಿಸುವುದಾಗಿದೆ. ಭಾಗಲ್ಪುರ ಹತ್ಯಾಕಾಂಡದ ಬಳಿಕ ಸಾಕ್ಷ್ಯಗಳನ್ನು ಮರೆಮಾಡಲು ಸಮಾಧಿಗಳ ಮೇಲೆ ಹೂಕೋಸು ನೆಡಲಾಗಿತ್ತು. ಇದು ಅಸ್ಸಾಂನ ಮೋದಿಯ ಬಿಜೆಪಿ ಸಚಿವರ ಪೋಸ್ಟ್ ಯಾವುದೋ ಒಂದು ಸಣ್ಣ ವಿಷಯವಲ್ಲ. ಹಾಗಾದರೆ, ಪ್ರಧಾನಿ ಮೋದಿಯವರು ಇದನ್ನು ಒಪ್ಪುತ್ತಾರೆಯೇ ಜಗತ್ತು ತಿಳಿದುಕೊಳ್ಳಬೇಕಿದೆ” ಎಂದು ಪಶ್ಚಿಮ ಬಂಗಾಳದ ಟಿಎಂಸಿ ಸಂಸದ ಸಾಕೇತ್ ಗೋಖಲೆ ಪ್ರಶ್ನಿಸಿದ್ದಾರೆ.
“Gobi farming” refers to glorifying the mass killing of Muslims in Bhagalpur, Bihar, in 1989. A cauliflower farm was planted on the graves to hide evidence.
This is Modi’s BJP Minister from Assam. Not some fringe element.
Clearly, @PMOIndia approves this. The world should know. https://t.co/y4faGndOrQ
— Saket Gokhale MP (@SaketGokhale) November 15, 2025
“ಭಾಗಲ್ಪುರದಂತಹ ಸ್ಥಳಗಳಲ್ಲಿ ಹಿಂಸಾಚಾರದ ನೋವಿನ ಇತಿಹಾಸವಿದ್ದರೂ, ‘ಹೂಕೋಸು ಕೃಷಿ’ಯನ್ನು ಇಡೀ ಸಮುದಾಯವನ್ನು ಅಮಾನವೀಯಗೊಳಿಸಲು ಅಪಹಾಸ್ಯವಾಗಿ ಬಳಸಲಾಗುತ್ತಿರುವಾಗ, ಮುಸ್ಲಿಮರು ಮಾತ್ರ ಉಗ್ರಗಾಮಿಗಳು ಆಗುವುದು ಏಕೆ? ಅಮಾನವೀಯೀಕರಣವು ಪರಿಣಾಮಗಳನ್ನು ಬೀರುತ್ತದೆ” ಎಂದು ಮತ್ತೊಬ್ಬ ಎಕ್ಸ್ ಬಳಕೆದಾರರು ಬರೆದುಕೊಂಡಿದ್ದಾರೆ.
“ಒಬ್ಬ ಸಂಪುಟ ಸಚಿವ ಈ ರೀತಿ ವರ್ತಿಸಿದರೆ, ಅವರನ್ನು ಅನುಸರಿಸುವ ಜನರಿಗೆ ಅದು ನೀಡುವ ಧೈರ್ಯವನ್ನು ಊಹಿಸಿ” ಎಂದು ಮತ್ತೊಬ್ಬರು ಬಳಕೆದಾರರು ಪೋಸ್ಟ್ ಮಾಡಿದ್ದಾರೆ.
ನಾಗ್ಪುರ ಗಲಭೆ | ‘ಹೂಕೋಸು’ ಮೂಲಕ ಮುಸ್ಲಿಮರ ಹತ್ಯಾಕಾಂಡಕ್ಕೆ ಕರೆ ನೀಡುತ್ತಿರುವ ಬಿಜೆಪಿ ಪರ ಬಲಪಂಥೀಯರು!


