ಶಾಲೆಯಿಂದ ಹಿಂತಿರುಗುತ್ತಿದ್ದ 8 ನೇ ತರಗತಿಯ ವಿದ್ಯಾರ್ಥಿನಿಯ ಮೇಲೆ ಮಧ್ಯವಯಸ್ಕ ವ್ಯಕ್ತಿಯೊಬ್ಬ ಲೈಂಗಿಕ ದೌರ್ಜನ್ಯ ನಡೆಸುತ್ತಿರುವುದನ್ನು ತೋರಿಸುವ ಒಂದು ಆತಂಕಕಾರಿ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದೆ. ಈ ಘಟನೆ, ನವೆಂಬರ್ 8 ರ ಸಂಜೆ 5:15 ರ ಸುಮಾರಿಗೆ ಉತ್ತರ ಪ್ರದೇಶದ ಮೊರಾದಾಬಾದ್‌ನ ಮುಘಲ್‌ಪುರ ಪ್ರದೇಶದಲ್ಲಿ ನಡೆದಿದೆ ಎಂದು ವರದಿಯಾಗಿದೆ.
ಆರೋಪಿಯನ್ನು ನಾಗಫಾನಿ ಪ್ರದೇಶದ ನವಾಬ್‌ಪುರ ನಿವಾಸಿ 43 ವರ್ಷದ ಇಬ್ರಾಹಿಂ ಎಂದು ಗುರುತಿಸಲಾಗಿದೆ. ವರದಿಗಳ ಪ್ರಕಾರ, ಹುಡುಗಿ ಮನೆಗೆ ಹೋಗುತ್ತಿದ್ದಾಗ, ಇಬ್ರಾಹಿಂ ಅವಳನ್ನು ಅಡ್ಡಗಟ್ಟಿ, ತನ್ನ ಸೈಕಲ್ ಮತ್ತು ಗೋಡೆಯ ನಡುವೆ ಬಂಧಿಸಿ ಅನುಚಿತವಾಗಿ ಸ್ಪರ್ಶಿಸಿದ್ದಾನೆ.
ಹುಡುಗಿ ಸಹಾಯಕ್ಕಾಗಿ ಕೂಗಿಕೊಂಡಾಗ, ಆರೋಪಿ ತನ್ನ ಸೈಕಲ್‌ನೊಂದಿಗೆ ಅಲ್ಲಿಂದ ಪರಾರಿಯಾಗಿದ್ದಾನೆ.
ಮನೆಗೆ ತಲುಪಿದ ನಂತರ, ಹುಡುಗಿ ತನ್ನ ಪೋಷಕರಿಗೆ ನಡೆದ ದೌರ್ಜನ್ಯದ ಕುರಿತು ವಿವರಿಸಿದಳು. ಕುಟುಂಬವು ತಕ್ಷಣ ಆರೋಪಿಯನ್ನು ಹುಡುಕಿತು. ಆದರೆ, ಆತ ಆಗಲೇ ಪರಾರಿಯಾಗಿದ್ದ. ನಂತರ ಸಂತ್ರಸ್ತೆ ತಂದೆ ಪೊಲೀಸರಿಗೆ ಲಿಖಿತ ದೂರು ಸಲ್ಲಿಸಿದರು, ಆರಂಭದಲ್ಲಿ ಎಫ್‌ಐಆರ್ ದಾಖಲಿಸಲು ನಿರಾಕರಿಸಿದರು.
ನ್ಯಾಯ ಪಡೆಯಲು ದೃಢನಿಶ್ಚಯ ಮಾಡಿದ ಕುಟುಂಬವು ಹತ್ತಿರದ ಮನೆ ಮತ್ತು ಅಂಗಡಿಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿತು. ಆ ದೃಶ್ಯಗಳಲ್ಲಿ ಆರೋಪಿಯ ಕೃತ್ಯಗಳು ಸ್ಪಷ್ಟವಾಗಿ ಸೆರೆಯಾಗಿತ್ತು. ಹುಡುಗಿ ಸಹ ಪ್ರತಿರೋಧ ತೋರುವ ಮೂಲಕ ಧೈರ್ಯ ಪ್ರದರ್ಶಿಸುವುದು ರೆಕಾರ್ಡ್ ಆಗಿದೆ.
उत्तर प्रदेश के मुरादाबाद जिले में मनचले का आतंक. मुगलपुरा थाना क्षेत्र में 8वीं कक्षा में पढ़ने वाली एक छात्रा से अधेड़ व्यक्ति ने छेड़खानी की. मनचले व्यक्ति की शर्मनाक हरकत सीसीटीवी में हुई कैद. पुलिस सीसीटीवी फुटेज के आधार पर आरोपी की तलाश में जुटी…#Uttarpradesh #Moradabad… pic.twitter.com/7u5h3AcVqc
— Nedrick News (@nedricknews) November 17, 2025
ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿ ವಿಷಯ ಹಿರಿಯ ಅಧಿಕಾರಿಗಳಿಗೆ ತಲುಪಿದ ನಂತರವೇ ಪೊಲೀಸರು ಕ್ರಮ ಕೈಗೊಂಡರು. ಈಗ ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಎಸ್‌ಪಿ ಸಿಟಿ ಕುಮಾರ್ ರಣವಿಜಯ್ ಸಿಂಗ್ ಅವರು, ಎಫ್ಐಆರ್ ದಾಖಲಿಸಲಾಗಿದೆ, ಇಬ್ರಾಹಿಂನನ್ನು ಬಂಧಿಸಲು ತಂಡಗಳನ್ನು ರಚಿಸಲಾಗಿದೆ ಎಂದು ದೃಢಪಡಿಸಿದರು.
ಉತ್ತರ ಪ್ರದೇಶ| ಮನೆಗೆ ನುಗ್ಗಿ ದಲಿತ ಸಹೋದರಿಯರ ಬಟ್ಟೆ ಹರಿದು ಹಲ್ಲೆ ನಡೆಸಿದ ಯುವಕರು


