ಮಧ್ಯಪ್ರದೇಶದ ಸೆಹೋರ್ ಜಿಲ್ಲಾ ಆಸ್ಪತ್ರೆಯಲ್ಲಿ ಪೊಲೀಸ್ ಸಿಬ್ಬಂದಿಯ ಸಮ್ಮುಖದಲ್ಲಿ ದಲಿತ ಯುವಕ ಮತ್ತು ಆತನ ತಂದೆಯ ಮೇಲೆ ಕ್ರೂರವಾಗಿ ಹಲ್ಲೆ ಮಾಡಲಾಗಿದೆ.
ಹಲ್ಲೆಯ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಕೆಲವು ದುಷ್ಕರ್ಮಿಗಳು ಯುವಕ ಮತ್ತು ಆತನ ತಂದೆಯನ್ನು ಥಳಿಸುತ್ತಿರುವುದನ್ನು ಸೆರೆಯಾಗಿದೆ. ಗುಂಪಿನಿಂದ ಹಲ್ಲೆಗೊಳಗಾದ ನಂತರ ಚಿಕಿತ್ಸೆಗಾಗಿ ಇಬ್ಬರೂ ಆಸ್ಪತ್ರೆಗೆ ಹೋಗಿದ್ದರು. ಆರೋಪಿಗಳು ಜಿಲ್ಲಾ ಆಸ್ಪತ್ರೆವರೆಗೂ ಸಂತ್ರಸ್ತರನ್ನು ಹಿಂಬಾಲಿಸಿಕೊಂಡು ಹೋಗಿ ಅವರ ಮೇಲೆ ಮತ್ತೆ ಹಲ್ಲೆ ನಡೆಸಿದ್ದಾರೆ.
ಅಂಬೇಡ್ಕರ್ ನಗರ ಗಂಜ್ ನಿವಾಸಿ ಪ್ರವೇಶ್ ಪರಿಹಾರ್ ಎಂದು ಗುರುತಿಸಲಾದ ಬಲಿಪಶುವಿನ ಪ್ರಕಾರ, ತಡರಾತ್ರಿ ಆರೋಪಿಗಳಲ್ಲಿ ಒಬ್ಬನಾದ ದೀಪಕ್ ಪರ್ಮಾರ್ ಇದ್ದಕ್ಕಿದ್ದಂತೆ ತನ್ನ ಕಾರಿನ ಮುಂದೆ ಬಂದು ಜಗಳ ಆರಂಭಿಸಿದ್ದಾನೆ.
ಜಗಳ ಬೇಡವೆಂದು ಪರಿಹಾರ್ ಪಕ್ಕಕ್ಕೆ ಸರಿದಿದ್ದು ದೀಪಕ್ ಕೋಪಕ್ಕೆ ಕಾರಣವಾಗಿದೆ. ಆರೋಪಿಯು ಪರಿಹಾರ್‌ಗೆ ಕಪಾಳಮೋಕ್ಷ ಮಾಡಿದ್ದಾನೆ. ಕೆಲ ಹೊತ್ತಿನಲ್ಲೇ ಅವನ ಸಹಚರರು ಬಂದು ದಲಿತ ಯುವಕನನ್ನು ನಿಂದಿಸಲು ಪ್ರಾರಂಭಿಸಿದರು. ಜಗಳ ಉಲ್ಬಣಗೊಳ್ಳುವುದನ್ನು ತಪ್ಪಿಸುವ ಸಲುವಾಗಿ ಅವರು ಮನೆಗೆ ತೆರಳಿದ್ದಾರೆ. ಆದರೆ, ವಿಷಯ ಅಲ್ಲಿಗೆ ಮುಗಿಯಲಿಲ್ಲ. ಸ್ವಲ್ಪ ಸಮಯದ ನಂತರ, ದೀಪಕ್ ಮತ್ತು ಅವನ ಸ್ನೇಹಿತರು ಭೋಪಾಲ್ ನಾಕಾ ಪ್ರದೇಶದಲ್ಲಿಇರುವ ಮನೆಗೆ ತರಳಿ ಪ್ರವೇಶ್ ಮತ್ತು ಆತನ ತಂದೆ ಹರಿ ಸಿಂಗ್ ಮೇಲೆ ಹಲ್ಲೆ ನಡೆಸಿದ್ದಾರೆ.
सीहोर में 'दलित' बाप–बेटे को दो बार पीटा, VIDEO ने मचाया हड़कंप, कर्मचारियों ने मांगी सुरक्षा
#SehoreNews #DalitAtrocity #HospitalAttack #PolicePresence #ViralVideo #LawAndOrder pic.twitter.com/Ifu0cQ7dTm
— Bansal News Digital (@BansalNews_) November 17, 2025
ಗಾಯಗೊಂಡ ಇಬ್ಬರು ಚಿಕಿತ್ಸೆಗಾಗಿ ಸೆಹೋರ್‌ನ ಜಿಲ್ಲಾ ಆಸ್ಪತ್ರೆಗೆ ತೆರಳಿದ್ದಾರೆ. ದೀಪಕ್ ಪರ್ಮಾರ್, ಭಾನು ರಾಥೋಡ್ ಮತ್ತು ನವೀನ್ ರಾಥೋಡ್ ಅವರನ್ನು ಹಿಂಬಾಲಿಸಿಕೊಂಡು ಆಸ್ಪತ್ರೆಗೆ ಬಂದರು ಎಂದು ವರದಿಯಾಗಿದೆ. ಅವರು ಪ್ರವೇಶ್ ಮತ್ತು ಅವರ ತಂದೆಯನ್ನು ಪೊಲೀಸರ ಸಮ್ಮುಖದಲ್ಲೇ ಆಸ್ಪತ್ರೆಯಲ್ಲಿ ಹಲ್ಲೆ ನಡೆಸಿದರು.
ಕೊತ್ವಾಲಿ ಪೊಲೀಸರು ಎಸ್‌ಸಿ/ಎಸ್‌ಟಿ ದೌರ್ಜನ್ಯ ಕಾಯ್ದೆ ಮತ್ತು ಇತರ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಎಫ್‌ಐಆರ್ ದಾಖಲಿಸಲಾಗಿದೆ, ಪರಾರಿಯಾಗಿರುವ ಆರೋಪಿಗಳನ್ನು ಪತ್ತೆಹಚ್ಚಲು ತಂಡಗಳನ್ನು ನಿಯೋಜಿಸಲಾಗಿದೆ ಎಂದು ಸಿಎಸ್‌ಪಿ ಅಭಿನಂದನಾ ಶರ್ಮಾ ದೃಢಪಡಿಸಿದ್ದಾರೆ.
ಉತ್ತರ ಪ್ರದೇಶ| ಮನೆಗೆ ನುಗ್ಗಿ ದಲಿತ ಸಹೋದರಿಯರ ಬಟ್ಟೆ ಹರಿದು ಹಲ್ಲೆ ನಡೆಸಿದ ಯುವಕರು


