ಕೇಂದ್ರ ಸರ್ಕಾರವು ಸಂವಿಧಾನದ 240 ನೇ ವಿಧಿಯ ವ್ಯಾಪ್ತಿಗೆ ಚಂಡೀಗಢವನ್ನು ತರುವ ಉದ್ದೇಶವನ್ನು ಸೂಚಿಸಿದ ನಂತರ ಪಂಜಾಬ್‌ನಲ್ಲಿ ದೊಡ್ಡ ರಾಜಕೀಯ ಬಿರುಗಾಳಿ ಎದ್ದಿದೆ, ಇದು ಕೇಂದ್ರಾಡಳಿತ ಪ್ರದೇಶಕ್ಕೆ ರಾಷ್ಟ್ರಪತಿಗಳು ನೇರವಾಗಿ ನಿಯಮಗಳನ್ನು ರೂಪಿಸಲು ಅಧಿಕಾರ ನೀಡುವ ಕ್ರಮವಾಗಿದೆ.
ಪ್ರಸ್ತುತ, ಚಂಡೀಗಢ ಪಂಜಾಬ್ ರಾಜ್ಯಪಾಲರ ಆಡಳಿತದಲ್ಲಿದ್ದು, ಪಂಜಾಬ್ ಮತ್ತು ಹರಿಯಾಣ ರಾಜ್ಯಗಳ ಜಂಟಿ ರಾಜಧಾನಿಯಾಗಿ ಕಾರ್ಯನಿರ್ವಹಿಸುತ್ತದೆ.
ಸಂವಿಧಾನ (131 ನೇ ತಿದ್ದುಪಡಿ) ಮಸೂದೆ, 2025 ಅನ್ನು ಡಿಸೆಂಬರ್ 1 ರಿಂದ ಪ್ರಾರಂಭವಾಗುವ ಚಳಿಗಾಲದ ಅಧಿವೇಶನದಲ್ಲಿ ಪರಿಚಯಿಸುವ ಸಾಧ್ಯತೆಯಿದೆ ಎಂದು ಸಂಸತ್ತಿನ ಬುಲೆಟಿನ್ ಸೂಚಿಸಿದೆ. ಇದು ಪಂಜಾಬ್‌ನಲ್ಲಿ ರಾಜಕೀಯ ವಲಯದಲ್ಲಿ ಪ್ರತಿಭಟನೆ ಹುಟ್ಟುಹಾಕಿದೆ.
ಎಎಪಿ, ಕಾಂಗ್ರೆಸ್ ಮತ್ತು ಶಿರೋಮಣಿ ಅಕಾಲಿ ದಳ ಸೇರಿದಂತೆ ಇತರೆ ಪಕ್ಷಗಳು ಈ ಪ್ರಸ್ತಾಪವನ್ನು ತೀವ್ರವಾಗಿ ಟೀಕಿಸಿವೆ. ಕೇಂದ್ರದ ನಿರ್ಧಾರವನ್ನು “ಪಂಜಾಬ್ ವಿರೋಧಿ” ಎಂದು ಕರೆದಿವೆ.
ಚಂಡೀಗಢವನ್ನು ಪ್ರಸ್ತುತ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಲಕ್ಷದ್ವೀಪ, ದಾದ್ರಾ ಮತ್ತು ನಗರ ಹವೇಲಿ, ದಮನ್ ಮತ್ತು ಡಿಯು ಮತ್ತು ಪುದುಚೇರಿಗಳನ್ನು ಒಳಗೊಂಡಿರುವ 240 ನೇ ವಿಧಿಯ ಅಡಿಯಲ್ಲಿ ಚಂಡೀಗಢವನ್ನು ಸೇರಿಸುವುದರಿಂದ ನಗರದ ಮೇಲಿನ ಪಂಜಾಬ್‌ನ ದೀರ್ಘಕಾಲದ ಹಕ್ಕನ್ನು ದುರ್ಬಲಗೊಳಿಸುತ್ತದೆ ಎಂದು ಅವರು ವಾದಿಸುತ್ತಾರೆ.
1966 ರಲ್ಲಿ ಹರಿಯಾಣವನ್ನು ಪಂಜಾಬ್‌ನಿಂದ ಬೇರ್ಪಡಿಸಿದಾಗ ಚಂಡೀಗಢವನ್ನು ಕೇಂದ್ರಾಡಳಿತ ಪ್ರದೇಶವಾಗಿ ರಚಿಸಲಾಯಿತು. ಅಂದಿನಿಂದ ಉಭಯ ರಾಜ್ಯಗಳ ಹಂಚಿಕೆಯ ರಾಜಧಾನಿಯಾಗಿ ಕಾರ್ಯನಿರ್ವಹಿಸುತ್ತಿದೆ.
ಪಂಜಾಬ್ ರಾಜ್ಯಪಾಲರು ಚಂಡೀಗಢದ ಆಡಳಿತಾಧಿಕಾರಿಯಾಗಿಯೂ ಸೇವೆ ಸಲ್ಲಿಸುತ್ತಿದ್ದರೂ, ರಾಜ್ಯದ ರಾಜಕೀಯ ನಾಯಕರು ಚಂಡೀಗಢ ಪಂಜಾಬ್‌ಗೆ ಸೇರಿದ್ದು ಮತ್ತು ಹರಿಯಾಣಕ್ಕೆ ಪ್ರತ್ಯೇಕ ರಾಜಧಾನಿ ಇರಬೇಕು ಎಂದು ನಿರಂತರವಾಗಿ ವಾದಿಸುತ್ತಿದ್ದಾರೆ.
ಮುಖ್ಯಮಂತ್ರಿ ಭಗವಂತ್ ಮಾನ್ ಕೇಂದ್ರ ಸರ್ಕಾರದ ನಿರ್ಧಾರವನ್ನು ಖಂಡಿಸಿದರು. ಬಿಜೆಪಿ ನೇತೃತ್ವದ ಕೇಂದ್ರವು ಪಂಜಾಬ್‌ನ ರಾಜಧಾನಿಯನ್ನು ‘ಕಿತ್ತುಕೊಳ್ಳಲು ಪಿತೂರಿ ನಡೆಸುತ್ತಿದೆ’ ಎಂದು ಹೇಳಿಕೊಂಡರು.
“ಚಂಡೀಗಢವು ರಾಜ್ಯದ ಅವಿಭಾಜ್ಯ ಅಂಗವಾಗಿತ್ತು, ಈಗಲೂ ಇದೆ ಮತ್ತು ಯಾವಾಗಲೂ ಉಳಿಯುತ್ತದೆ. ನಗರವನ್ನು ನಿರ್ಮಿಸಲು ಹಳ್ಳಿಗಳನ್ನು ತ್ಯಾಗ ಮಾಡಲಾಗಿದೆ ಮತ್ತು ಪಂಜಾಬ್ ಮಾತ್ರ ಸರಿಯಾದ ಹಕ್ಕನ್ನು ಹೊಂದಿದೆ” ಎಂದು ಹೇಳಿದರು.
ಎಎಪಿ ರಾಷ್ಟ್ರೀಯ ಸಂಚಾಲಕ ಮತ್ತು ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕೂಡ ಈ ಕ್ರಮದ ಮೇಲೆ ದಾಳಿ ನಡೆಸಿ, ಇದನ್ನು ಪಂಜಾಬ್‌ನ ಗುರುತಿನ ಮೇಲಿನ ದಾಳಿ ಎಂದು ಕರೆದರು.
“ಇತಿಹಾಸವೇ ಸಾಕ್ಷಿ: ಪಂಜಾಬಿಗಳು ಎಂದಿಗೂ ಸರ್ವಾಧಿಕಾರಕ್ಕೆ ತಲೆಬಾಗಿಲ್ಲ” ಎಂದು ಅವರು ಬರೆದಿದ್ದಾರೆ. “ಭದ್ರತೆ, ಧಾನ್ಯಗಳು ಮತ್ತು ನೀರಿನ” ಮೂಲಕ ರಾಷ್ಟ್ರಕ್ಕೆ ಅಪಾರ ಕೊಡುಗೆ ನೀಡಿದ ಪಂಜಾಬ್‌ಗೆ ಈಗ ಅದರ ಹಕ್ಕುಗಳನ್ನು ನಿರಾಕರಿಸಲಾಗುತ್ತಿದೆ ಎಂದು ಹೇಳಿದ್ದಾರೆ.
ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ಅಮರಿಂದರ್ ಸಿಂಗ್ ರಾಜಾ ವಾರಿಂಗ್ ಈ ಬೆಳವಣಿಗೆಯನ್ನು ಅನಗತ್ಯ ಎಂದು ಟೀಕಿಸಿದ್ದಾರೆ. ಪಂಜಾಬ್‌ನ ಹಕ್ಕು ಕಸಿದುಕೊಳ್ಳುವ ಯಾವುದೇ ಪ್ರಯತ್ನವು ಗಂಭೀರ ಪರಿಣಾಮಗಳನ್ನು ಬೀರುತ್ತದೆ ಎಂದು ಎಚ್ಚರಿಸಿದರು.
“ನೀವು ಪಂಜಾಬ್‌ನೊಂದಿಗೆ ಇದ್ದೀರೋ ಅಥವಾ ಪಂಜಾಬ್ ವಿರುದ್ಧ ಇದ್ದೀರೋ ಎಂಬುದು ಇಂದು ನೀವು ತೆಗೆದುಕೊಳ್ಳುವ ನಿಲುವಿನಿಂದ ನಿರ್ಧರಿಸಲ್ಪಡುತ್ತದೆ” ಎಂದು ಹೇಳುವ ಮೂಲಕ ಅವರು ರಾಜ್ಯದ ಬಿಜೆಪಿ ನಾಯಕರನ್ನು ತಮ್ಮ ನಿಲುವನ್ನು ಸ್ಪಷ್ಟಪಡಿಸುವಂತೆ ಕರೆ ನೀಡಿದರು.
“ಪಂಜಾಬ್ ವಿರೋಧಿ ಮಸೂದೆ ಒಕ್ಕೂಟ ರಚನೆಯ ಮೇಲಿನ ಸ್ಪಷ್ಟ ದಾಳಿ” ಎಂದು ಅಕಾಲಿ ದಳದ ಮುಖ್ಯಸ್ಥ ಮತ್ತು ಮಾಜಿ ಉಪಮುಖ್ಯಮಂತ್ರಿ ಸುಖ್‌ಬೀರ್ ಸಿಂಗ್ ಬಾದಲ್ ಹೇಳಿದರು. “ಪ್ರತಿಯೊಂದು ರಂಗದಲ್ಲೂ ಕೇಂದ್ರದ ನಿರ್ಧಾರದ ವಿರುದ್ಧ ಹೋರಾಡುವುದಾಗಿ” ಪ್ರತಿಜ್ಞೆ ಮಾಡಿದರು.



Stupidity of central governance. It not end.