Homeಅಂತರಾಷ್ಟ್ರೀಯಟ್ರಂಪ್ 'ಫ್ಯಾಸಿಸ್ಟ್' ಎಂಬ ಹೇಳಿಕೆಗೆ ಈಗಲೂ ಬದ್ಧ: ನ್ಯೂಯಾರ್ಕ್‌ನ ನೂತನ ಮೇಯರ್ ಮಮ್ದಾನಿ

ಟ್ರಂಪ್ ‘ಫ್ಯಾಸಿಸ್ಟ್’ ಎಂಬ ಹೇಳಿಕೆಗೆ ಈಗಲೂ ಬದ್ಧ: ನ್ಯೂಯಾರ್ಕ್‌ನ ನೂತನ ಮೇಯರ್ ಮಮ್ದಾನಿ

- Advertisement -
- Advertisement -

ನ್ಯೂಯಾರ್ಕ್ ನಗರದ ನೂತನ ಮೇಯರ್ ಆಗಿ ಆಯ್ಕೆಯಾಗಿರುವ ಝೊಹ್ರಾನ್ ಮಮ್ದಾನಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ (ನ.21) ಶ್ವೇತಭವನದಲ್ಲಿ ತಮ್ಮ ಮೊದಲ ಮುಖಾಮುಖಿ ಮಾತುಕತೆ ನಡೆಸಿದ್ದಾರೆ.

ರಾಜಕೀಯ ಮತ್ತು ಸೈದ್ದಾಂತಿಕವಾಗಿ ಪರಸ್ಪರ ಶತ್ರುಗಳಾಗಿರುವ ಮಮ್ದಾನಿ ಮತ್ತು ಟ್ರಂಪ್, ಮೊದಲ ಭೇಟಿಯಲ್ಲಿ ಬಹಳ ಆತ್ಮೀಯತೆಯಿಂದ, ನಗು ನಗುತ್ತಾ ಮಾತನಾಡಿರುವುದು ಹಲವರನ್ನು ಆಶ್ವರ್ಯಗೊಳಿಸಿದೆ.

ಶ್ವೇತ ಭವನದಲ್ಲಿ ಟ್ರಂಪ್ ಜೊತೆ ಬಹಳ ಆಪ್ತವಾಗಿ ಮಾತುಕತೆ ನಡೆಸಿರುವ ಮಮ್ದಾನಿ, ಅಲ್ಲಿಂದ ಹೊರ ಬಂದ ಬಳಿಕ ಟ್ರಂಪ್ ವಿಚಾರದಲ್ಲಿ ತಮ್ಮ ನಿಲುವನ್ನು ಬದಲಿಸಿಲ್ಲ. ಟ್ರಂಪ್ ಒಬ್ಬ ‘ಫ್ಯಾಸಿಸ್ಟ್’ ಎಂದು ಪುನರುಚ್ಚರಿಸಿದ್ದಾರೆ.

ಶನಿವಾರ (ನ.22) ಎನ್‌ಬಿಸಿ ನ್ಯೂಸ್‌ನ ಮೀಟ್ ದಿ ಪ್ರೆಸ್ ಕಾರ್ಯಕ್ರಮದಲ್ಲಿ ಮಾತನಾಡಿದ ಮಮ್ದಾನಿ, ಶುಕ್ರವಾರ ಟ್ರಂಪ್ ಜೊತೆ ನಡೆಸಿರುವ ಮಾತುಕತೆ ಫಲದಾಯಕವಾಗಿದೆ. ಆದರೆ, ಟ್ರಂಪ್ ಒಬ್ಬ ‘ಫ್ಯಾಸಿಸ್ಟ್’ ಮತ್ತು ‘ನಿರಂಕುಶಾಧಿಕಾರಿ’ ಎಂದು ಎಂಬ ನಿಲುವನ್ನು ಈಗಲೂ ಹೊಂದಿದ್ದೇನೆ ಎಂದಿದ್ದಾರೆ.

ಪ್ರಾಥಮಿಕ ಚುನಾವಣೆಯಲ್ಲಿ ಗೆಲುವು ಸಾಧಿಸಿ ಮಮ್ದಾನಿ ಡೆಮಾಕ್ರಟಿಕ್ ಪಕ್ಷದ ನ್ಯೂಯಾರ್ಕ್ ಮೇಯರ್ ಅಭ್ಯರ್ಥಿಯಾಗಿ ಆಯ್ಕೆಯಾದಾಗಲೇ ಟ್ರಂಪ್ ಟೀಕಿಸಿದ್ದರು. ಮಮ್ದಾನಿ ‘ಶೇ.100ರಷ್ಟು ಕಮ್ಯೂನಿಸ್ಟ್ ಹುಚ್ಚ’ ಎಂದು‌ ಜರೆದಿದ್ದರು. ಆದರೆ, ಶುಕ್ರವಾರದ ಸಭೆಯಲ್ಲಿ ಮಮ್ದಾನಿಗೆ ಶುಭಾಷಯ ಕೋರಿ, ಅವರನ್ನು ಬೆಂಬಲಿಸುತ್ತೇನೆ ಎಂದು ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಮಮ್ದಾನಿ, ಟ್ರಂಪ್ ಜೊತೆಗಿನ ಚರ್ಚೆಗಳು ಧನಾತ್ಮಕವಾಗಿತ್ತು. ಮುಖ್ಯವಾಗಿ ಜನರ ಜೀವನ ವೆಚ್ಚ ಮತ್ತು ಆರ್ಥಿಕ ಸಾಧ್ಯತೆಗಳ ಸಮಸ್ಯೆಗಳ ಮೇಲೆ ಕೇಂದ್ರೀಕೃತವಾಗಿದ್ದವು ಎಂದು ತಿಳಿಸಿದ್ದಾರೆ.

ನಿಲುವಿಗೆ ಬದ್ದ-ಮಮ್ದಾನಿ

ಚುನಾವಣಾ ಪ್ರಚಾರದ ಸಮಯದಲ್ಲಿ ಟ್ರಂಪ್ ಬಗ್ಗೆ ನೀಡಿದ್ದ ನೇರ ಹೇಳಿಕೆಗಳಿಗೆ ತಾನು ಈಗಲೂ ಬದ್ಧನಾಗಿರುವುದಾಗಿ ಮಮ್ದಾನಿ ಸ್ಪಷ್ಟಪಡಿಸಿದ್ದಾರೆ.

“ನಾನು ಹಿಂದೆ ಯಾವ ಯಾವ ಮಾತುಗಳನ್ನು ಹೇಳಿದ್ದೆಯೋ, ಅವೆಲ್ಲವನ್ನೂ ಇಂದಿಗೂ ನಾನು ಪೂರ್ತಿಯಾಗಿ ನಂಬುತ್ತೇನೆ. ನನ್ನ ಆಲೋಚನೆಗಳು ಬದಲಾಗಿಲ್ಲ. ಆದರೆ ರಾಜಕೀಯದಲ್ಲಿ ಒಂದು ಒಳ್ಳೆಯ ವಿಷಯ ಇದೆ: ನಮಗೆ ಭಿನ್ನಾಭಿಪ್ರಾಯಗಳಿದ್ದರೂ ಅದನ್ನು ಮುಚ್ಚಿಹಾಕುವುದಿಲ್ಲ. ನಾವು ತಾಳ್ಮೆಯಿಂದ ಕೂತು ಮಾತಾಡುತ್ತೇವೆ. ನಾನು ಅಧ್ಯಕ್ಷರ ಓವಲ್ ಆಫೀಸ್‌ಗೆ ಹೋಗಿರುವುದು ತಮಾಷೆಗೋ, ತೋರಿಕೆಗೋ ಅಲ್ಲ. ನನ್ನ ಸಿದ್ಧಾಂತಗಳನ್ನು ಜಗಳ ಮಾಡಿಕೊಳ್ಳಲು ಅಲ್ಲ. ನಾನು ಅಲ್ಲಿಗೆ ಹೋಗಿರುವುದು ಕೇವಲ ನ್ಯೂಯಾರ್ಕ್ ನಗರದ ಜನರಿಗೆ ಒಳ್ಳೆಯ ಕೆಲಸ ಮಾಡಲು, ಅವರ ಸಮಸ್ಯೆಗಳಿಗೆ ಪರಿಹಾರ ತಂದುಕೊಡಲು ಮಾತ್ರ” ಎಂದು ಮಮ್ದಾನಿ ಹೇಳಿದ್ದಾರೆ.

ಶುಕ್ರವಾರದ ಮಾತುಕತೆ ವೇಳೆ, “ನಾನು ನಿನ್ನನ್ನು ಫ್ಯಾಸಿಸ್ಟ್ ಅಂತ ಕರ್ದಿದ್ದಲ್ಲಾ? ಇನ್ನೊಮ್ಮೆ ‘ಹೌದು’ ಅಂತ ಹೇಳಿಬಿಡು” ಎಂದು ಟ್ರಂಪ್ ನಗು ನಗುತ್ತಾ ಮಮ್ದಾನಿಗೆ ಹೇಳಿದ್ದರು. ಮಮ್ದಾನಿ ಕೂಡ ನಗು ನಗುತ್ತಾ, ಅದನ್ನು ಈಗಾಗಲೇ ಹೇಳಿದ್ದೇನೆ ಸರ್” ಅಂತ ಶುರು ಮಾಡ್ತಿದ್ದಂತೆ, “ಅಯ್ಯೋ ಬಿಡು ವಿವರಣೆ ಬೇಡ, ಕೇವಲ ‘ಹೌದು’ ಅಂತ ಹೇಳು, ಅಷ್ಟೇ ಸಾಕು. ನನಗೆ ಚಿಂತೆಯೇ ಇಲ್ಲ!” ಎಂದು ಟ್ರಂಪ್ ಹೇಳಿದ್ದರು. ಮಮ್ದಾನಿಯ ತೋಳಿಗೆ ಗಟ್ಟಿಯಾಗಿ ತಟ್ಟಿದ್ದರು. ಇಬ್ಬರೂ ಒಟ್ಟಿಗೆ ಜೋರಾಗಿ ನಕ್ಕಿದ್ದರು.

ಟ್ರಂಪ್‌ಗೆ ಮತ ಹಾಕಿದವರೇ ಆಗಲಿ, ನನ್ನ ಪರ ಮತ ಹಾಕಿದವರೇ ಆಗಲಿ, ಎಲ್ಲರ ಸಮಸ್ಯೆ ಒಂದೇ : ಬಾಡಿಗೆ, ಆಹಾರ, ಎಲ್ಲವೂ ದುಬಾರಿಯಾಗಿದೆ. ಅದನ್ನು ಕಡಿಮೆ ಮಾಡುವುದೇ ನನ್ನ ಮೊದಲ ಕೆಲಸ ಎಂದು ಮಮ್ದಾನಿ ತಿಳಿಸಿದ್ದಾರೆ.

ನಾನು ಶ್ವೇತಭವನಕ್ಕೆ ಹೋಗುವಾಗ ಒಂದೇ ಉದ್ದೇಶ ಇತ್ತು, ಅದು ಟ್ರಂಪ್ ಜೊತೆ ಒಳ್ಳೆಯ, ಕೆಲಸ ಮಾಡಬಹುದಾದ ಸಂಬಂಧವನ್ನು ಬೆಳೆಸಿಕೊಳ್ಳಬೇಕು. ಆ ಸಂಬಂಧ ನ್ಯೂಯಾರ್ಕ್ ಜನರನ್ನು ರಾತ್ರಿಯೆಲ್ಲಾ ನಿದ್ರೆ ಬರದಂತೆ ಕಾಡುವ ಸಮಸ್ಯೆಗಳ ಮೇಲೆಯೇ ಕೇಂದ್ರೀಕೃತವಾಗಿರಬೇಕು ಎಂಬುವುದು ಎಂದು ಮಮ್ದಾನಿ ಹೇಳಿದ್ದಾರೆ.

ಟ್ರಂಪ್ ಜೊತೆ ಮಾತನಾಡುವಾಗ, “ನಾನು ಎರಡನೇ ಬಾರಿ ಅಧ್ಯಕ್ಷನಾದರೆ ಮೊದಲ ದಿನದಿಂದಲೇ ಜೀವನ ವೆಚ್ಚವನ್ನು ಕಡಿಮೆ ಮಾಡುತ್ತೇನೆ ಎಂದು ನೀವೇ ಕಳೆದ ವರ್ಷ ಚುನಾವಣೆಯ ಸಂದರ್ಭದಲ್ಲಿ ಹೇಳಿದ್ದೀರಿ. ಅದಕ್ಕಾಗಿಯೇ ನಾವಿಬ್ಬರೂ ಒಟ್ಟಾಗಿ ಕೆಲಸ ಮಾಡೋಣ” ಎಂದು ಮಮ್ದಾನಿ ಹೇಳಿದ್ದರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...

ಕೊಲ್ಕತ್ತಾದ 26 ಲಕ್ಷ ಮತದಾರರ ಹೆಸರು 2002 ರ ಪಟ್ಟಿಗೆ ಹೊಂದಿಕೆಯಾಗುತ್ತಿಲ್ಲ: ಮುಖ್ಯ ಚುನಾವಣಾ ಅಧಿಕಾರಿ

ಕೋಲ್ಕತ್ತಾ ಮತ್ತು ಸುತ್ತಮುತ್ತಲಿನ ಹಲವಾರು ವಿಧಾನಸಭಾ ಕ್ಷೇತ್ರಗಳ ಮತದಾರರ ಹೆಸರುಗಳು 2002 ರ ಮತದಾರರ ಪಟ್ಟಿಯಲ್ಲಿರುವ ನಮೂದುಗಳಿಗೆ ಹೊಂದಿಕೆಯಾಗುತ್ತಿಲ್ಲ ಎಂದು ಮುಖ್ಯ ಚುನಾವಣಾ ಅಧಿಕಾರಿ ಮನೋಜ್ ಕುಮಾರ್ ಅಗರ್ವಾಲ್ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ...

ಮೊದಲ ಪತ್ನಿಗೆ ಮುಸ್ಲಿಂ ಪತಿ ಜೀವನಾಂಶ ನಿರಾಕರಿಸುವಂತಿಲ್ಲ: ಕೇರಳ ಹೈಕೋರ್ಟ್

ಎರಡನೇ ಪತ್ನಿಯ ಮೇಲಿನ ಆರ್ಥಿಕ ಜವಾಬ್ದಾರಿ ಕುರಿತ ಮಹತ್ವದ ತೀರ್ಪಿನಲ್ಲಿ, ಮುಸ್ಲಿಂ ಪುರುಷನು ತನ್ನ ಮೊದಲ ಪತ್ನಿಗೆ ಜೀವನಾಂಶ ಪಾವತಿಸುವುದನ್ನು ತಪ್ಪಿಸಲು ಸಾಧ್ಯವಿಲ್ಲ ಎಂದು ಕೇರಳ ಹೈಕೋರ್ಟ್ ಹೇಳಿದೆ. ಎಲ್ಲ ಪತ್ನಿಯರನ್ನು ಸಮಾನವಾಗಿ...

ಆಸ್ಪತ್ರೆಗಳು ಕಡ್ಡಾಯವಾಗಿ ದರಪಟ್ಟಿ ಪ್ರದರ್ಶಿಸಬೇಕು, ಹಣ ಪಾವತಿಸದ ಕಾರಣ ತುರ್ತು ಆರೈಕೆ ನಿರಾಕರಿಸುವಂತಿಲ್ಲ : ಕಾನೂನು ಎತ್ತಿ ಹಿಡಿದ ಹೈಕೋರ್ಟ್

ಕೇರಳ ವೈದ್ಯಕೀಯ ಸಂಸ್ಥೆಗಳ ಕಾಯ್ದೆ ಮತ್ತು ನಿಬಂಧನೆಗಳನ್ನು ಎತ್ತಿಹಿಡಿದ ಹೈಕೋರ್ಟ್‌ನ ಏಕ ಸದಸ್ಯ ಪೀಠದ ಆದೇಶದ ವಿರುದ್ಧ ಭಾರತೀಯ ವೈದ್ಯಕೀಯ ಸಂಘ (ಐಎಂಎ) ಮತ್ತು ಕೇರಳ ಖಾಸಗಿ ಆಸ್ಪತ್ರೆಗಳ ಸಂಘ ಸಲ್ಲಿಸಿದ್ದ ಮೇಲ್ಮನವಿಗಳನ್ನು...

ಎಸ್‌ಐಆರ್‌ನ ನಿಜವಾದ ಉದ್ದೇಶ ಎನ್‌ಆರ್‌ಸಿ : ಮಮತಾ ಬ್ಯಾನರ್ಜಿ

ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯ (ಎಸ್‌ಐಆರ್‌) ಹಿಂದಿನ ಕೇಂದ್ರ ಸರ್ಕಾರದ ನಿಜವಾದ ಉದ್ದೇಶ ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್‌ಆರ್‌ಸಿ) ಮಾಡುವುದು ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬುಧವಾರ (ನವೆಂಬರ್...

ಬೆಂಗಳೂರು ಚಲೋ: ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಸಚಿವ ಮಹದೇವಪ್ಪ: ಸಿಎಂ ಜೊತೆ ಚರ್ಚಿಸುವ ಭರವಸೆ 

ಕೇಂದ್ರ ಸರ್ಕಾರದ ರೈತ, ಕಾರ್ಮಿಕ, ಜನವಿರೋಧಿ ನೀತಿಗಳು ಹಾಗೂ ರಾಜ್ಯ ಸರ್ಕಾರದ ನಿರ್ಲಕ್ಷ್ಯ, ನಿರ್ಲಜ್ಜ ಧೋರಣೆಯ ವಿರುದ್ಧ ಸಂಯುಕ್ತ ಹೋರಾಟ ಕರ್ನಾಟಕದ ನೇತೃತ್ವದಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ನಡೆಯುತ್ತಿರುವ ‘ಬೆಂಗಳೂರು ಚಲೋ’...