Homeಚಳವಳಿನನ್ನ ಬಂಧನವನ್ನು ಅಶ್ಫಾಕುಲ್ಲಾ ಖಾನ್ ಮತ್ತು ರಾಂಪ್ರಸಾದ್ ಬಿಸ್ಮಿಲ್ಲಾರಿಗೆ ಅರ್ಪಿಸುತ್ತೇನೆ! : ಮೇವಾನಿ

ನನ್ನ ಬಂಧನವನ್ನು ಅಶ್ಫಾಕುಲ್ಲಾ ಖಾನ್ ಮತ್ತು ರಾಂಪ್ರಸಾದ್ ಬಿಸ್ಮಿಲ್ಲಾರಿಗೆ ಅರ್ಪಿಸುತ್ತೇನೆ! : ಮೇವಾನಿ

- Advertisement -
- Advertisement -

ಸಿಎಎ ಮತ್ತು ಎನ್‌ಆರ್‌ಸಿ ವಿರುದ್ಧ ನಾನು ಪ್ರತಿಭಟನೆ ಆರಂಭಿಸುವ ಮುನ್ನವೇ ಅಹಮದಾಬಾದ್ ಪೊಲೀಸರು ನನ್ನನ್ನು ಪ್ರತಿಭಟನಾ ಸ್ಥಳದಿಂದ ಬಂಧಿಸಿದ್ದಾರೆ. ನನ್ನ ಬಂಧನವನ್ನು ಅಶ್ಫಾಕುಲ್ಲಾ ಖಾನ್ ಮತ್ತು ರಾಂಪ್ರಸಾದ್ ಬಿಸ್ಮಿಲ್ಲಾಗೆ ಅರ್ಪಿಸುತ್ತೇನೆ! ಇಂಕ್ವಿಲಾಬ್ ಜಿಂದಾಬಾದ್! ಎಂದು ಗುಜರಾತ್‌ನ ಶಾಸಕ ಮತ್ತು ಹೋರಾಟಗಾರ ಜಿಗ್ನೇಶ್‌ ಮೇವಾನಿ ತಿಳಿಸಿದ್ದಾರೆ.

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಅವರು ಇಂದು ಅಹಮದಾಬಾದ್‌ನಲ್ಲಿ ಸುಮಾರು 5 ಸಾವಿರ ಜನರೊಂದಿಗೆ ಆಗಮಿಸಿದ್ದಾಗ ಪೊಲೀಸರು ಅವರನ್ನು ಬಂಧಿಸಿದ್ದಾರೆ.

ಅಶ್ಫಾಕುಲ್ಲಾ ಖಾನ್ ಮತ್ತು ರಾಂಪ್ರಸಾದ್ ಬಿಸ್ಮಿಲ್ಲಾ ಭಗತ್‌ ಸಿಂಗ್‌ನ ಸಹಚರರಾಗಿದ್ದು ಭಾರತೀಯ ಸ್ವಾತಂತ್ರ ಹೋರಾಟದ ಸೌಹಾರ್ದದ ಸಂಕೇತವಾಗಿದ್ದಾರೆ. ಅವರಿಬ್ಬರೂ ಸಹ ಹುತಾತ್ಮರಾದುದ್ದು ಇದೇ ದಿನ. ಹಾಗಾಗಿ ಜಿಗ್ನೇಶ್‌ ಮೇವಾನಿ ಅವರಿಗೆ ಬಂಧನವನ್ನು ಅರ್ಪಿಸಿದ್ದಾರೆ.

ಅಹಮದಾಬಾದ್‌ನ ಹಲವೆಡೆ ಪೊಲೀಸರಿಂದ ಘರ್ಷಣೆಗಳು ನಡೆದಿದ್ದು ಲಾಠಿಚಾರ್ಜ್‌ ಮಾಡಲಾಗಿದೆ. ಹಲವರನ್ನು ಬಂಧಿಸಿಲಾಗಿದೆ. ಪೊಲೀಸ್‌ ಠಾಣೆಗಳಲ್ಲಿಯೇ ಪ್ರತಿಭಟನೆ ಮುಂದುವರೆದಿದೆ.

 

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ತನ್ನದೇ ಕೈಪಿಡಿ ಮರೆತ ಚುನಾವಣಾ ಆಯೋಗ, ನ್ಯಾಯಾಲಯಕ್ಕೆ ಸುಳ್ಳು ಹೇಳಿತಾ?

0
ನಮೂನೆ 17ಸಿ ಅಡಿ ಮತಗಟ್ಟೆಗಳಲ್ಲಿ ಚಲಾವಣೆಯಾದ ಮತಗಳ ಅಂಕಿ ಅಂಶಗಳನ್ನು ಒದಗಿಸುವುದು ಕಷ್ಟವೇನಲ್ಲ. ಆದರೆ, ಅದನ್ನು ಮಾಡಲು ಸಮಯ ಹಿಡಿಯುತ್ತದೆ ಎಂದು ಭಾರತೀಯ ಚುನಾವಣಾ ಆಯೋಗವು ಮೇ 17ರಂದು ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ. 'ಸಮಯ...