Homeಮುಖಪುಟ2025 ರ ಏಷ್ಯಾ ಪವರ್ ಇಂಡೆಕ್ಸ್‌: ಮೊದಲೆರಡು ಸ್ಥಾನದಲ್ಲಿ ಅಮೆರಿಕ-ಚೀನಾ, ಭಾರತಕ್ಕೆ ಮೂರನೇ ಶ್ರೇಯಾಂಕ

2025 ರ ಏಷ್ಯಾ ಪವರ್ ಇಂಡೆಕ್ಸ್‌: ಮೊದಲೆರಡು ಸ್ಥಾನದಲ್ಲಿ ಅಮೆರಿಕ-ಚೀನಾ, ಭಾರತಕ್ಕೆ ಮೂರನೇ ಶ್ರೇಯಾಂಕ

- Advertisement -
- Advertisement -

2025 ರ ಏಷ್ಯಾ ಪವರ್ ಇಂಡೆಕ್ಸ್‌ನಲ್ಲಿ ಭಾರತ ಮೂರನೇ ಶ್ರೇಯಾಂಕವನ್ನು ಪಡೆದುಕೊಂಡಿದೆ. ಆದರೆ, ಯುನೈಟೆಡ್ ಸ್ಟೇಟ್ಸ್-ಚೀನಾ ಕ್ರಮವಾಗಿ ಮೊದಲ ಮತ್ತು ಎರಡನೇ ಸ್ಥಾನವನ್ನು ಪಡೆದುಕೊಂಡಿವೆ ಎಂದು ಜಾಗತಿಕವಾಗಿ ಪ್ರಸಿದ್ಧವಾದ ಚಿಂತಕರ ಚಾವಡಿ ತನ್ನ ಸಂಶೋಧನೆಗಳಲ್ಲಿ ತಿಳಿಸಿದೆ ಎಂದು ‘ದಿ ನ್ಯೂಸ್‌ ಮಿನಿಟ್’ ವರದಿ ಮಾಡಿದೆ.

ಆಸ್ಟ್ರೇಲಿಯಾ ಮೂಲದ ಚಿಂತಕರ ಚಾವಡಿ ಲೋವಿ ಇನ್‌ಸ್ಟಿಟ್ಯೂಟ್ ಇತ್ತೀಚೆಗೆ ತನ್ನ ವಾರ್ಷಿಕ ಏಷ್ಯಾ ಪವರ್ ಇಂಡೆಕ್ಸ್ ಅನ್ನು ಬಿಡುಗಡೆ ಮಾಡಿದೆ. ಇದು ವಿಶೇಷವಾಗಿ ಏಷ್ಯಾ ಖಂಡದಲ್ಲಿರುವ ರಾಷ್ಟ್ರಗಳು ತಮ್ಮ ಬಾಹ್ಯ ಪರಿಸರದ ಮೇಲೆ ಪ್ರಭಾವ ಬೀರುವ ಸಾಮರ್ಥ್ಯವನ್ನು ನಿರ್ಣಯಿಸುತ್ತದೆ.

ಅದರ ಶ್ರೇಯಾಂಕಗಳ ಪ್ರಕಾರ, ಭಾರತವು ತನ್ನ ಸಮಾನಸ್ಥರಿಗಿಂತ ಬಹಳ ಮುಂದಿದೆ ಎಂದು ಕಂಡುಬರುತ್ತದೆ. ಆದರೆ, ದೊಡ್ಡ ವ್ಯತ್ಯಾಸದೊಂದಿಗೆ ಚೀನಾಕ್ಕಿಂತ ಹಿಂದುಳಿದಿದೆ. ಭಾರತ ಮತ್ತು ಚೀನಾ ಎರಡೂ ವಿವಿಧ ಮೆಟ್ರಿಕ್‌ಗಳಲ್ಲಿ ಉತ್ತಮ ಅಂಕಗಳನ್ನು ಗಳಿಸಿವೆ. ಮೊದಲಿಗಿಂತ ತಮ್ಮ ಸ್ಥಾನವನ್ನು ಸುಧಾರಿಸಿಕೊಂಡಿವೆ. ಆದರೆ, ಎರಡರ ನಡುವೆ ವಿಶಾಲ ಅಂತರವಿದೆ. 2019 ರ ನಂತರ ಮೊದಲ ಬಾರಿಗೆ ಏಷ್ಯಾದಲ್ಲಿ ರಷ್ಯಾ ತನ್ನ ಒಟ್ಟಾರೆ ಶಕ್ತಿಯನ್ನು ಸುಧಾರಿಸುತ್ತಿದೆ ಎಂದು ಕಂಡುಬರುತ್ತದೆ.

ವರದಿಯ ಮತ್ತೊಂದು ಗಮನಾರ್ಹ ವೈಶಿಷ್ಟ್ಯವೆಂದರೆ, ಭಾರತದ ಸ್ಥಿರವಾಗಿ ಬೆಳೆಯುತ್ತಿರುವ ಶಕ್ತಿ ಮತ್ತು 2025 ರಲ್ಲಿ, ಪ್ರಮುಖ ಶಕ್ತಿ ಸ್ಥಾನಮಾನಕ್ಕಾಗಿ ಏಷ್ಯಾ ಪವರ್ ಇಂಡೆಕ್ಸ್ ವ್ಯಾಖ್ಯಾನಿಸಿದ ಮಿತಿಯನ್ನು ದಾಟಿದೆ.

ಏಷ್ಯಾ ಪವರ್ ಇಂಡೆಕ್ಸ್‌ನ ಏಳನೇ ಆವೃತ್ತಿಯು ಏಷ್ಯಾದಾದ್ಯಂತ 27 ದೇಶಗಳು ಮತ್ತು ಪ್ರಾಂತ್ಯಗಳ ಶಕ್ತಿಯನ್ನು ಮೌಲ್ಯಮಾಪನ ಮಾಡುತ್ತದೆ, ಇದನ್ನು ಎಂಟು ವಿಷಯಾಧಾರಿತ ಸೂಕ್ಯಂಕದಲ್ಲಿ 131 ಸೂಚಕಗಳ ಆಧಾರದ ಮೇಲೆ ನಡೆಸಲಾಗುತ್ತದೆ. ಅವುಗಳೆಂದರೆ, ಮಿಲಿಟರಿ ಸಾಮರ್ಥ್ಯ ಮತ್ತು ರಕ್ಷಣಾ ಜಾಲಗಳು, ಆರ್ಥಿಕ ಸಾಮರ್ಥ್ಯ ಮತ್ತು ಸಂಬಂಧಗಳು, ರಾಜತಾಂತ್ರಿಕ ಮತ್ತು ಸಾಂಸ್ಕೃತಿಕ ಪ್ರಭಾವ, ಹಾಗೆಯೇ ಸ್ಥಿತಿಸ್ಥಾಪಕತ್ವ ಮತ್ತು ಭವಿಷ್ಯದ ಸಂಪನ್ಮೂಲಗಳು ಸೇರಿವೆ.

ಅಮೆರಿಕಾ 81.7 ಅಂಕಗಳೊಂದಿಗೆ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದು, ನಿರ್ವಿವಾದ ನಾಯಕನಾಗಿ ಉಳಿದಿದೆ. ಚೀನಾ 27 ರಲ್ಲಿ 2 ನೇ ಸ್ಥಾನದಲ್ಲಿದೆ, ಒಟ್ಟಾರೆ 100 ರಲ್ಲಿ 73.7 ಅಂಕಗಳೊಂದಿಗೆ, 2025 ರಲ್ಲಿ ಒಟ್ಟಾರೆ ಅಂಕಗಳಲ್ಲಿ ಶೇಕಡಾ 1 ರಷ್ಟು ಲಾಭ ಗುರುತಿಸುತ್ತದೆ.

ಭಾರತವು ಸಮಗ್ರ ಶಕ್ತಿಗಾಗಿ 27 ರಲ್ಲಿ 3 ನೇ ಸ್ಥಾನದಲ್ಲಿದೆ, ಒಟ್ಟಾರೆ 100 ರಲ್ಲಿ 40 ಅಂಕಗಳೊಂದಿಗೆ, ಇದು ಒಟ್ಟಾರೆ ಅಂಕಗಳಲ್ಲಿ ಶೇಕಡಾ 2 ರಷ್ಟು ಲಾಭವನ್ನು ಸೂಚಿಸುತ್ತದೆ. ಕೋವಿಡ್ ನಂತರದ ಅವಧಿಯಲ್ಲಿ ಬಲವಾದ ಆರ್ಥಿಕ ಚೇತರಿಕೆ ಮತ್ತು ಅದರ ಹೆಚ್ಚುತ್ತಿರುವ ಭೌಗೋಳಿಕ ರಾಜಕೀಯ ಪ್ರಭಾವದ ಹಿನ್ನೆಲೆಯಲ್ಲಿ ಭಾರತದ ಹೆಚ್ಚುತ್ತಿರುವ ಪ್ರಾಬಲ್ಯ ಕಂಡುಬರುತ್ತದೆ.

“ಏಷ್ಯಾ ಪವರ್ ಇಂಡೆಕ್ಸ್‌ನ 2025 ರ ಆವೃತ್ತಿಯಲ್ಲಿ ಭಾರತದ ಆರ್ಥಿಕ ಮತ್ತು ಮಿಲಿಟರಿ ಸಾಮರ್ಥ್ಯ ಎರಡೂ ಹೆಚ್ಚಾಗಿದೆ. ಅದರ ಆರ್ಥಿಕತೆಯು ಬಲವಾಗಿ ಬೆಳೆಯುತ್ತಲೇ ಇದೆ. ಅದರ ಭೌಗೋಳಿಕ ರಾಜಕೀಯ ಪ್ರಸ್ತುತತೆಯ ವಿಷಯದಲ್ಲಿ ಸಣ್ಣ ಲಾಭಗಳನ್ನು ಗಳಿಸಿದೆ. ಅಂತರರಾಷ್ಟ್ರೀಯ ಹತೋಟಿ, ಸಂಪರ್ಕ ಮತ್ತು ತಂತ್ರಜ್ಞಾನದ ಪರಿಭಾಷೆಯಲ್ಲಿ ವ್ಯಾಖ್ಯಾನಿಸಲಾಗಿದೆ. ಭಾರತದ ಮಿಲಿಟರಿ ಸಾಮರ್ಥ್ಯವು ಸ್ಥಿರವಾಗಿ ಸುಧಾರಿಸಿದೆ” ಎಂದು ಲೋಲಿ ಇನ್ಸ್ಟಿಟ್ಯೂಟ್ ತನ್ನ ವರದಿಯಲ್ಲಿ ತಿಳಿಸಿದೆ.

ಇತರ ಏಷ್ಯಾದ ರಾಷ್ಟ್ರಗಳಲ್ಲಿ, ಉತ್ತರ ಕೊರಿಯಾ ಮತ್ತು ಚೀನಾದಂತಹ ರಾಷ್ಟ್ರಗಳೊಂದಿಗೆ ರಕ್ಷಣಾ ಮತ್ತು ಆರ್ಥಿಕ ಪಾಲುದಾರಿಕೆಯನ್ನು ಪಡೆದುಕೊಂಡಿರುವ ರಷ್ಯಾದ ಶಕ್ತಿಯು ಚೇತರಿಕೆಯತ್ತ ಸಾಗುತ್ತಿದೆ. ವಿವಿಧ ಮೆಟ್ರಿಕ್‌ಗಳ ಅಡಿಯಲ್ಲಿ ನಕಾರಾತ್ಮಕ ಫಲಿತಾಂಶಗಳನ್ನು ದಾಖಲಿಸಿದರೂ ಜಪಾನ್‌ನ ಶಕ್ತಿ ಸ್ಥಿರವಾಗಿದೆ. ಆದರೆ, ಇತರ ಆಗ್ನೇಯ ಏಷ್ಯಾದ ದೇಶಗಳು 2025 ರಲ್ಲಿ ತಮ್ಮ ಸಮಗ್ರ ಶಕ್ತಿಯಲ್ಲಿ ಸಣ್ಣ ಸುಧಾರಣೆಗಳನ್ನು ದಾಖಲಿಸಿವೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂತ್ರಸ್ತೆ ಮತ್ತು ಆರೋಪಿ ನಡುವಿನ ‘ಒಪ್ಪಂದ’ವನ್ನಷ್ಟೇ ಆಧರಿಸಿ ಅತ್ಯಾಚಾರ ಪ್ರಕರಣ ರದ್ದುಗೊಳಿಸಲು ಸಾಧ್ಯವಿಲ್ಲ : ಸುಪ್ರೀಂ ಕೋರ್ಟ್

ಪಕ್ಷಕಾರರ (ಸಂತ್ರಸ್ತೆ ಮತ್ತು ಆರೋಪಿ) ನಡುವಿನ ರಾಜಿ ಸಂಧಾನದ ಆಧಾರದ ಮೇಲೆ ಅತ್ಯಾಚಾರ ಪ್ರಕರಣವನ್ನು ರದ್ದುಗೊಳಿಸಿದ್ದ ಮಧ್ಯಪ್ರದೇಶ ಹೈಕೋರ್ಟ್‌ನ ಆದೇಶವನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ. ಕೇವಲ ಒಪ್ಪಂದದ ಆಧಾರದ ಮೇಲೆ ಗಂಭೀರ ಅಪರಾಧಗಳನ್ನು...

DELHI SIR : 2026ರ ಮತದಾರರ ಪಟ್ಟಿಯಲ್ಲಿದ್ದರೂ ಕೂಡ ಡಿಲಿಟೆಡ್ ವೋಟರ್ಸ್ ಫಾರಂ-6 ಸಲ್ಲಿಸುವಂತೆ ಸೂಚಿಸಿದ್ದು ಏಕೆ? ಚು. ಆಯೋಗಕ್ಕೆ ಸುಪ್ರೀಂ ಕೋರ್ಟ್ ಪ್ರಶ್ನೆ

ದೆಹಲಿಯ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಗೆ (ಎಸ್‌ಐಆರ್‌) ಸಂಬಂಧಿಸಿದಂತೆ, 2026ರ ಮತದಾರರ ಪಟ್ಟಿಯಲ್ಲಿದ್ದರೂ ಸಹ ಗಣತಿ ನಮೂನೆಗಳನ್ನು (enumeration forms) ಭರ್ತಿ ಮಾಡದ ಕಾರಣಕ್ಕಾಗಿ ಕರಡು ಪಟ್ಟಿಯಿಂದ ಹೆಸರನ್ನು ಕಳೆದುಕೊಂಡಿರುವ ವ್ಯಕ್ತಿಗಳು,...

ಮರ್ಯಾದೆಗೇಡು ಹತ್ಯೆ ಶಂಕೆ: ದಲಿತ ಯುವಕನನ್ನು ಇಟ್ಟಿಗೆಯಿಂದ ಹೊಡೆದು ಕೊಂದ ಪತ್ನಿಯ ಸಹೋದರ ಬಂಧನ

ಉತ್ತರ ಪ್ರದೇಶದ ಮುಜಫ್ಫರ್‌ನಗರ ಜಿಲ್ಲೆಯಲ್ಲಿ 23 ವರ್ಷದ ದಲಿತ ಯುವಕನನ್ನು ಇಟ್ಟಿಗೆಗಳಿಂದ ಹೊಡೆದು ಕೊಲೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಇದು ಮರ್ಯಾದೆಗೇಡು ಹತ್ಯೆ ಶಂಕೆಗೆ ಕಾರಣವಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಯುವಕನ ಪತ್ನಿಯ ಹಿರಿಯ...

Karnataka SIR | ಅಂತಿಮ ಮತದಾರರ ಪಟ್ಟಿಯನ್ನು ತಿರಸ್ಕರಿಸಿದ ಹೋರಾಟಗಾರರು : ಮುಖ್ಯ ಚುನಾವಣಾಧಿಕಾರಿ ಅನ್ಬುಕುಮಾರ್‌ಗೆ ಬಹಿರಂಗ ಸವಾಲು

ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಬಳಿಕ ಮಂಗಳವಾರ (ಅ.27) ರಾಜ್ಯ ಚುನಾವಣಾ ಆಯೋಗ ಪ್ರಕಟಿಸಿರುವ ಅಂತಿಮ ಮತದಾರರ ಪಟ್ಟಿಯನ್ನು ಹೋರಾಟಗಾರರು ತಿರಸ್ಕರಿಸಿದ್ದು, ಹೋರಾಟ ಮುಂದುವರಿಸುವ ಘೋಷಣೆ ಮಾಡಿದ್ದಾರೆ. ಬುಧವಾರ (ಅ.28) ಬೆಂಗಳೂರಿನ ಶಾಸಕರ ಭವನದಲ್ಲಿ...

ಜಾಮಿಯಾ ವಿದ್ಯಾರ್ಥಿಗಳ ಪ್ರತಿಭಟನೆಗೆ ಕಾಂಗ್ರೆಸ್ ಬೆಂಬಲ; ಪ್ರತಿಭಟನಾ ಸ್ಥಳಕ್ಕೆ ರಾಹುಲ್ ಗಾಂಧಿ ಭೇಟಿ ಸಾಧ್ಯತೆ

ಹಲಿಯ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಪ್ರತಿಭಟನಾ ಸ್ಥಳಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭೇಟಿ ನೀಡುವ ನಿರೀಕ್ಷೆಯಿರುವ ಬೆನ್ನಲ್ಲೇ, ವಿದ್ಯಾರ್ಥಿಗಳ ಹೋರಾಟಕ್ಕೆ ಪಕ್ಷವು ಬೆಂಬಲ ವ್ಯಕ್ತಪಡಿಸಿದೆ. ವಿದ್ಯಾರ್ಥಿ ಸಂಘವನ್ನು (ಜೆಎಂಐಎಸ್‌ಯು)...

ಎಂಎಲ್‌ಸಿ ಚುನಾವಣೆ ಸೋಲಿನ ಹಿಂದಿರುವ ರಾಜಕೀಯ – ಸಂಘಟನಾತ್ಮಕ ಕಾರಣಗಳ ಕುರಿತು ಪರಾಮರ್ಶಿಸುತ್ತೇವೆ: ಕೆಪಿಸಿಸಿ ಅಧ್ಯಕ್ಷ ಹರಿಪ್ರಸಾದ್

ಎರಡು ಪದವೀಧರ ಹಾಗೂ ಎರಡು ಶಿಕ್ಷಕರ ಕ್ಷೇತ್ರಗಳಿಗೆ ನಡೆದ ವಿಧಾನ ಪರಿಷತ್ ಚುನಾವಣೆಯ ಸೋಲಿನ ಹಿಂದಿರುವ ರಾಜಕೀಯ ಹಾಗೂ ಸಂಘಟನಾತ್ಮಕ ಕಾರಣಗಳ ಕುರಿತು ಸಮಗ್ರ ಪರಾಮರ್ಶೆ ನಡೆಸುತ್ತೇವೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್...

ಸ್ಪೇನ್‌ನಲ್ಲಿ ಅತಿ ವೇಗದ ರೈಲುಗಳ ನಡುವೆ ಡಿಕ್ಕಿ; ಕನಿಷ್ಠ 46 ಮಂದಿ ಸಾವು

ಸ್ಪೇನ್‌ನ ಟೊಲೆಡೊ ಪ್ರಾಂತ್ಯದಲ್ಲಿ ಬುಧವಾರ ಬೆಳಿಗ್ಗೆ ಎರಡು ಅತಿ ವೇಗದ ರೈಲುಗಳ ನಡುವೆ ಡಿಕ್ಕಿ ಸಂಭವಿಸಿ ಕನಿಷ್ಠ 46 ಮಂದಿ ಮೃತಪಟ್ಟಿದ್ದಾರೆ ಎಂದು ಸ್ಪೇನ್‌ನ ಎಬಿಸಿ (ಎಬಿಸಿ) ಸುದ್ದಿ ಸಂಸ್ಥೆ ವರದಿ ಮಾಡಿದೆ....

ಇಸ್ರೇಲ್ ಚುನಾವಣೆಯಲ್ಲಿ ಸಿಗದ ಬಹುಮತ; ಆದರೂ ಗೆಲುವಿನ ಹಕ್ಕು ಮಂಡಿಸಿದ ನೆತನ್ಯಾಹು

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಅರಬ್ ಪಕ್ಷಗಳ ಬೆಂಬಲದೊಂದಿಗೆ ಸರ್ಕಾರ ರಚಿಸುವ ಸಾಧ್ಯತೆಯನ್ನು ತಳ್ಳಿಹಾಕಿದ್ದಾರೆ. ಜೆರುಸಲೇಮ್‌ನಲ್ಲಿರುವ ಲಿಕುಡ್ ಪಕ್ಷದ ಪ್ರಧಾನ ಕಚೇರಿಯಲ್ಲಿ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಅವರು, ಯಹೂದಿ ಮತ್ತು ಝಿಯೋನಿಸ್ಟ್...

ದೆಹಲಿ: 2020ರ ಮುಸ್ಲಿಂ ವಿರೋಧಿ ಹಿಂಸಾಚಾರದಲ್ಲಿ 22 ವರ್ಷದ ಯುವಕನ ಹತ್ಯೆ: ಐವರು ಹಿಂದುತ್ವವಾದಿಗಳಿಗೆ ಏಳು ವರ್ಷ ಜೈಲು ಶಿಕ್ಷೆ ಎತ್ತಿಹಿಡಿದ ಹೈಕೋರ್ಟ್

2020ರ ಫೆಬ್ರವರಿಯಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಮುಸ್ಲಿಂ ವಿರೋಧಿ ಹಿಂಸಾಚಾರದ ಸಂದರ್ಭದಲ್ಲಿ 22 ವರ್ಷದ ಮುಸ್ಲಿಂ ಯುವಕ ಮೋನಿಷ್  ಅವರನ್ನು ಹತ್ಯೆ ಮಾಡಿದ ಪ್ರಕರಣದಲ್ಲಿ ಐವರು ಹಿಂದುತ್ವವಾದಿ ಪುರುಷರಿಗೆ ವಿಧಿಸಲಾಗಿದ್ದ ಏಳು ವರ್ಷಗಳ...

ಅರ್ನಬ್ ಚಂಡಮಾರುತ: ಆಂಧ್ರಪ್ರದೇಶದಲ್ಲಿ ಮೂವರ ಸಾವು; ಹಲವು ಮನೆಗಳಿಗೆ ಹಾನಿ

ಅರ್ನಬ್ ಚಂಡಮಾರುತವು ಆಂಧ್ರಪ್ರದೇಶದಲ್ಲಿ ಭಾರೀ ಹಾನಿಯನ್ನುಂಟುಮಾಡಿದೆ. ಚಂಡಮಾರುತದಿಂದಾಗಿ ಮೂವರು ಮೃತಪಟ್ಟಿದ್ದು, 31 ಮನೆಗಳು ಹಾನಿಗೀಡಾಗಿವೆ ಎಂದು ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ (ಎನ್‌ಡಿಆರ್‌ಎಫ್‌)ಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪ್ರಸ್ತುತ ಚಂಡಮಾರುತವು ಪುದುಚೇರಿಯ ಯಾನಂ ಸಮೀಪದ...