Homeಮುಖಪುಟ'ಲವ್ ಜಿಹಾದ್' ಕಾರ್ಯಕ್ರಮಗಳನ್ನು ತೆಗೆದು ಹಾಕಲು ಐದು ಚಾನೆಲ್‌ಗಳಿಗೆ ಎನ್‌ಬಿಡಿಎಸ್‌ಎ ಆದೇಶ

‘ಲವ್ ಜಿಹಾದ್’ ಕಾರ್ಯಕ್ರಮಗಳನ್ನು ತೆಗೆದು ಹಾಕಲು ಐದು ಚಾನೆಲ್‌ಗಳಿಗೆ ಎನ್‌ಬಿಡಿಎಸ್‌ಎ ಆದೇಶ

- Advertisement -
- Advertisement -

ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿಯ (ಎನ್‌ಸಿಆರ್‌ಟಿ) ಪಠ್ಯಪುಸ್ತಕವನ್ನು ‘ಲವ್ ಜಿಹಾದ್’ ಪಿತೂರಿಯೊಂದಿಗೆ ಜೋಡಿಸುವ ಎಂಟು ಕಾರ್ಯಕ್ರಮಗಳನ್ನು ತೆಗೆದುಹಾಕುವಂತೆ ಸುದ್ದಿ ಪ್ರಸಾರ ಮತ್ತು ಡಿಜಿಟಲ್ ಮಾನದಂಡಗಳ ಪ್ರಾಧಿಕಾರವು (ಎನ್‌ಬಿಡಿಎಸ್‌ಎ) ಮಂಗಳವಾರ (ಡಿಸೆಂಬರ್ 2) ಐದು ಸುದ್ದಿ ವಾಹಿನಿಗಳಿಗೆ ನಿರ್ದೇಶನ ನೀಡಿದೆ ಎಂದು ವರದಿಯಾಗಿದೆ.

ಎನ್‌ಸಿಇಆರ್‌ಟಿಯ 3ನೇ ತರಗತಿಯ ಪರಿಸರ ಅಧ್ಯಯನದ ಹಳೆಯ ಅಧ್ಯಾಯವಾದ ‘ಚಿಟ್ಟಿ ಆಯಿ ಹೈ’ ನಲ್ಲಿ ಕಾಲ್ಪನಿಕ ಪತ್ರವೊಂದನ್ನು ತಪ್ಪಾಗಿ ನಿರೂಪಿಸಿರುವ ಬಗ್ಗೆ ದೂರು ದಾಖಲಾಗಿತ್ತು. ರೀನಾ ಎಂಬ ಪಾತ್ರಧಾರಿ ಅಹ್ಮದ್ ಎಂಬ ಮತ್ತೊಂದು ಪಾತ್ರಕ್ಕೆ ಬರೆದ ಪತ್ರವನ್ನು ದೂರದರ್ಶನ ವಾಹಿನಿಗಳು ಲವ್ ಜಿಹಾದ್ ಪಿತೂರಿಯ ಪುರಾವೆಯಾಗಿ ತಪ್ಪಾಗಿ ಬಿಂಬಿಸಿವೆ ಎಂದು ದೂರಿನಲ್ಲಿ ತಿಳಿಸಲಾಗಿತ್ತು.

ಇಂಡಿಯಾ ಟಿವಿ, ನ್ಯೂಸ್ 18 ಎಂಪಿ/ಛತ್ತೀಸ್‌ಗಢ, ಝೀ ಎಂಪಿ/ಛತ್ತೀಸ್‌ಗಢ, ಜೀ ನ್ಯೂಸ್ ಮತ್ತು ಎಬಿಪಿ ನ್ಯೂಸ್‌ನಲ್ಲಿ ಪ್ರಸಾರ ಮಾಡಲಾಗಿದ್ದ ಕಾರ್ಯಕ್ರಮಗಳ ವಿರುದ್ಧ ಇಂದ್ರಜೀತ್ ಘೋರ್ಪಡೆ ಮತ್ತು ಉತ್ಕರ್ಷ್ ಮಿಶ್ರಾ ಎಂಬವರು ದೂರು ನೀಡಿದ್ದರು.

ಪಠ್ಯಪುಸ್ತಕದಲ್ಲಿ ಕೇವಲ ಒಬ್ಬ ಹುಡುಗಿ ಬೇರೆ ಧರ್ಮದ ಹುಡುಗನಿಗೆ ಪತ್ರ ಬರೆದಿದ್ದಾರೆ ಎಂಬ ಕಾರಣಕ್ಕಾಗಿ ಅದನ್ನು ಲವ್ ಜಿಹಾದ್ ಎಂದು ಪ್ರಚಾರ ಮಾಡಿ ವಿಡಿಯೋಗಳನ್ನು ಹಾಕುವುದು ಸರಿಯಲ್ಲ ಎಂದು ಎನ್‌ಬಿಡಿಎಸ್‌ಎ ಡಿಸೆಂಬರ್ 2ರಂದು ನೀಡಿರುವ ಆದೇಶದಲ್ಲಿ ಸ್ಪಷ್ಟಪಡಿಸಿದೆ. ಆದ್ದರಿಂದ ಅಂತಹ ವಿಡಿಯೋಗಳನ್ನು ತೆಗೆದುಹಾಕಬೇಕಲು ಸೂಚಿಸಿದೆ ಎಂದು scroll.in ವರದಿ ಮಾಡಿದೆ.

ಎನ್‌ಬಿಡಿಎ ಅಧ್ಯಕ್ಷರಾದ ನಿವೃತ್ತ ನ್ಯಾಯಮೂರ್ತಿ ಎ.ಕೆ. ಸಿಕ್ರಿ ಅವರು, “ಭಾರತವು ಜಾತ್ಯತೀತ ರಾಷ್ಟ್ರವಾಗಿದೆ, ಇದು ಸಂವಿಧಾನದ ಆದೇಶವೂ ಹೌದು. ಆದ್ದರಿಂದ ಪ್ರಸಾರಕರು (ಚಾನೆಲ್‌ಗಳು) ಎನ್‌ಸಿಇಆರ್‌ಟಿ ಪುಸ್ತಕದ ಒಂದು ಅಧ್ಯಾಯದಲ್ಲಿ ಇರುವ ವಿಷಯವನ್ನು ನಿಜವಾದ ಅರ್ಥದಿಂದ ಬೇರೆ ರೀತಿಗೆ ತಂದು, ಪಕ್ಷಪಾತಿಯಾಗಿರುವಂತೆ ತೋರಿಸಿದರೆ, ಅದು ನಿಯಮಗಳಿಗೆ ವಿರುದ್ಧವಾಗುತ್ತದೆ ಎಂದು ಆದೇಶ ಪ್ರತಿಯಲ್ಲಿ ಹೇಳಿರುವುದಾಗಿ ವರದಿ ತಿಳಿಸಿದೆ.

ಕಪೋಲಕಲ್ಪಿತ ಲವ್ ಜಿಹಾದ್ ವಿಷಯಗಳನ್ನು ಪ್ರಸಾರ ಮಾಡಿದ್ದಕ್ಕಾಗಿ ಈ ಹಿಂದೆ ಟೀಕೆಗೆ ಗುರಿಯಾಗಿದ್ದರೂ, ವೈಯಕ್ತಿಕ ಅಭಿಪ್ರಾಯ ಆಧಾರಿತ, ಜನರನ್ನು ವಿಭಜಿಸುವ ಮತ್ತು ಗಮನ ಸೆಳೆಯಲು ಕೆಲವು ಗುಂಪುಗಳು ರಚಿಸಿದ ವಿಷಯವನ್ನು ಮುಖ್ಯ ಸುದ್ದಿಯಾಗಿ ಚಾನೆಲ್‌ಗಳು ತೋರಿಸಿವೆ ಎಂದು ದೂರುದಾರರು ಆರೋಪಿಸಿದ್ದರು.

ಚಾನೆಲ್‌ಗಳು ಆ ವಿಷಯವನ್ನು (ಲವ್ ಜಿಹಾದ್) ಪ್ರಚಾರ ಮಾಡುವವರಿಗೆ ಅವಕಾಶ ಕೊಟ್ಟಿದ್ದು ಮಾತ್ರವಲ್ಲ, ಕೆಲವು ನಿರೂಪಕರು ಕೂಡ ಪರೋಕ್ಷ ಸಂಕೇತಗಳು (dog-whistling) ಮತ್ತು ಪರದೆಯಲ್ಲಿನ ಬರಹಗಳ ಮೂಲಕ ಆ ಹೇಳಿಕೆಗಳನ್ನು ಬೆಂಬಲಿಸುವ ರೀತಿಯಲ್ಲಿ ವರ್ತಿಸಿದ್ದಾರೆ ಎಂದು ಹೇಳಿದ್ದರು.

“ನ್ಯೂಸ್18 ಮಧ್ಯಪ್ರದೇಶ/ಛತ್ತೀಸ್‌ಗಢ ಚಾನೆಲ್‌ನ ಕಾರ್ಯಕ್ರಮದಲ್ಲಿ ಸಂಪೂರ್ಣ ಚರ್ಚೆ ಭಾಗೇಶ್ವರಧಾಮದ ಧೀರೆಂದ್ರ ಶಾಸ್ತ್ರಿಯವರ ಮಾತುಗಳನ್ನೇ ಕೇಂದ್ರವಾಗಿಸಿಕೊಂಡಿತ್ತು. ಅವರು ಲವ್ ಜಿಹಾದ್ ಮೂಲಕ ಮುಸ್ಲಿಂ ಜನಸಂಖ್ಯೆ ಹೆಚ್ಚಿಸಲು ಪ್ರಯತ್ನಿಸಲಾಗುತ್ತಿದೆ ಮತ್ತು ಇದರಿಂದ ಹಿಂದೂ ಮಹಿಳೆಯರು ಅಪಾಯಕ್ಕೆ ಒಳಗಾಗುತ್ತಿದ್ದಾರೆ ಎಂದು ಹೇಳಿದ್ದರು”

“ಕಾರ್ಯಕ್ರಮ ಟಿಕ್ಕರ್‌ಗಳು, ಗ್ರಾಫಿಕ್‌ಗಳು ಮತ್ತು ದೃಶ್ಯಗಳ ಮೂಲಕ ಶಾಸ್ತ್ರಿಯವರ ಮಾತುಗಳನ್ನು ಇನ್ನೂ ಗಟ್ಟಿ ಮಾಡಿತ್ತು, ಆದರೆ ಆ ಹೇಳಿಕೆಗಳು ತಪ್ಪು ಕಲಹ ಉಂಟುಮಾಡುವಂತಿವೆಯೇ ಎಂದು ಯಾವುದೇ ಪ್ರಶ್ನೆ ಅಥವಾ ಪರಿಶೀಲನೆ ಮಾಡಿಲ್ಲ”

“ಝೀ ನ್ಯೂಸ್ ಹಾಗೂ ಝೀ ಮಧ್ಯಪ್ರದೇಶ/ಛತ್ತೀಸ್‌ಗಢ ಚಾನೆಲ್‌ಗಳು ಶಿಕ್ಷಕರ ಮಾತುಗಳನ್ನು ಪ್ರಸಾರ ಮಾಡಿದರೂ, ಕಾರ್ಯಕ್ರಮದ ಒಟ್ಟು ರೂಪ ಮತ್ತು ವಿಷಯವು ಆ ಅಧ್ಯಾಯದಲ್ಲಿ ಏನೋ ಅನುಮಾನಾಸ್ಪದ ವಿಷಯ ಇದೆ ಎಂದು ಜನರಿಗೆ ಭಾಸವಾಗುವಂತೆ ಮಾಡಿತ್ತು”

“ವರದಿಗಾರರು ಆ ಅಧ್ಯಾಯವನ್ನು ಯಾಕೆ ಸೇರಿಸಲಾಗಿದೆ ಎಂಬುದನ್ನು ನೇರವಾಗಿ ಪ್ರಶ್ನಿಸಿ, ರೀನಾ ಮತ್ತು ಅಹಮದ್ ಎಂಬ ಹೆಸರಿನ ಪಾತ್ರಗಳಿರುವ ಪತ್ರವನ್ನು ಸೇರಿಸಿರುವುದೇ ಸಮಸ್ಯೆ ಎಂಬಂತೆ ತೋರಿಸಿದ್ದಾರೆ. ಕಾರ್ಯಕ್ರಮದಲ್ಲಿ ವರದಿಗಾರನ ವರ್ತನೆ, ಮಾತು ಹಾಗೂ ತೋರಿಸಿರುವ ದೃಶ್ಯಗಳು, ಆ ಅಧ್ಯಾಯವನ್ನು ಅವನು ಒಪ್ಪುತ್ತಿಲ್ಲ ಮತ್ತು ಅದಕ್ಕೆ ವಿರೋಧಿಯಾಗಿ ನಿಲ್ಲುತ್ತಿದ್ದಾನೆ ಎಂಬ ಸಂದೇಶ ನೀಡಿವೆ” ಎಂದು ದೂರುದಾರರು ಆರೋಪಿಸಿದ್ದರು.

ಇಂಡಿಯಾ ಟಿವಿಯಲ್ಲಿ, ಪಠ್ಯಪುಸ್ತಕಕ್ಕೆ ‘ಕಪ್ಪು ಬಣ್ಣ ಬಳಿಯುವ’ ವ್ಯಕ್ತಿಯ ಪ್ರತಿಕ್ರಿಯೆಯೂ ಸೇರಿದಂತೆ ತೀವ್ರ ಅತಿರೇಕಗಳನ್ನು ತೋರಿಸಿದೆ. ಚಾನೆಲ್ ಅದನ್ನು ತಪ್ಪು ಎಂದು ಹೇಳಿಲ್ಲ. ಇದರಿಂದ ಆತನ ವರ್ತನೆಗೆ ಮತ್ತಷ್ಟು ಪ್ರೋತ್ಸಾಹ ಸಿಕ್ಕಂತಾಗಿದೆ ಎಂದು ಘೋರ್ಪಡೆ ಮತ್ತು ಮಿಶ್ರಾ ಹೇಳಿದ್ದರು.

ಬಹುತೇಕ ಎಲ್ಲಾ ಚಾನೆಲ್‌ಗಳು ಹೇಳಿಕೆಗಳನ್ನು ತಟಸ್ಥವಾಗಿ ಪರಿಶೀಲಿಸದೆ, ವಿಮರ್ಶಾತ್ಮಕ ಪ್ರಶ್ನೆಗಳು ಕೇಳದೆ ಪ್ರಸಾರ ಮಾಡುತ್ತಿದ್ದವು. ಆದರೆ ನ್ಯೂಸ್18 ಎಂ.ಪಿ/ಛತ್ತೀಸ್‌ಗಢ ಮತ್ತು ಎಬಿಪಿ ನ್ಯೂಸ್ ಮಾತ್ರ ಶಾಸ್ತ್ರಿಯವರ ಆರೋಪಗಳನ್ನು ಪ್ರಶ್ನಿಸುವ ಅಥವಾ ಅವುಗಳನ್ನು ಪರಿಶೀಲಿಸುವ ಕೆಲಸ ಮಾಡಿದ್ದವು ಎಂದಿದ್ದರು.

ಯಾವುದೇ ಚಾನೆಲ್‌ಗಳು ಎನ್‌ಸಿಇಆರ್‌ಟಿ ಅಭಿಪ್ರಾಯ ಕೇಳುವ ಪ್ರಯತ್ನ ಮಾಡಿಲ್ಲ ಎಂದು ಹೇಳಿದ್ದರು.


ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮೈಸೂರು| ಒಳಮೀಸಲಾತಿ ಹೋರಾಟ ಹತ್ತಿಕ್ಕಲು ನಿಷೇಧಾಜ್ಞೆ ಹೇರಿದ ಕಾಂಗ್ರೆಸ್ ಸರ್ಕಾರ

ಪೂರ್ಣ ಪ್ರಮಾಣದ ಒಳಮೀಸಲಾತಿ ಜಾರಿಗೆ ಆಗ್ರಹಿಸಿ 'ಸಾಮಾಜಿಕ ನ್ಯಾಯಕ್ಕಾಗಿ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಹೋರಾಟ ಸಮಿತಿ' ನಡೆಸುತ್ತಿದ್ದ ಹೋರಾಟಕ್ಕೆ ಜಿಲ್ಲಾ ಪೊಲೀಸರು ಅನುಮತಿ ನಿರಾಕರಿಸಿದ್ದು, ಸಿದ್ದರಾಮನಹುಂಡಿಯಿಂದ ಮೈಸೂರಿಗೆ ಇಂದು ಪಾದಯಾತ್ರೆ ಆರಂಭಿಸಿದ ಹೋರಾಟಗಾರರನ್ನು...

‘ನಕಲಿ ಬ್ಯಾಂಕ್ ಗ್ಯಾರಂಟಿ’ ಪ್ರಕರಣ : ರಿಲಯನ್ಸ್ ಪವರ್, ಇತರ ಸಂಸ್ಥೆಗಳ ವಿರುದ್ಧ ಚಾರ್ಜ್‌ಶೀಟ್‌ ಸಲ್ಲಿಸಿದ ಇಡಿ

ರಿಲಯನ್ಸ್ ಪವರ್ ಕಂಪನಿಯು ಭಾರತೀಯ ಸೌರಶಕ್ತಿ ನಿಗಮಕ್ಕೆ (ಎಸ್‌ಇಸಿಐ) ಟೆಂಡರ್ ಪಡೆಯಲು ಸಲ್ಲಿಸಿದ 68 ಕೋಟಿ ರೂಪಾಯಿಗಳ ನಕಲಿ ಬ್ಯಾಂಕ್ ಗ್ಯಾರಂಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ರಿಲಯನ್ಸ್ ಪವರ್ ಲಿಮಿಟೆಡ್ ಮತ್ತು ರಿಲಯನ್ಸ್ ಇನ್ಫ್ರಾಸ್ಟ್ರಕ್ಚರ್‌ನ...

ಉತ್ತರ ಪ್ರದೇಶ| ಬಾಬರಿ ಮಸೀದಿ ಮೇಲಿನ ದಾಳಿಗೆ 33 ವರ್ಷ; ಅಯೋಧ್ಯೆ-ವಾರಣಾಸಿಯಲ್ಲಿ ಬಿಗಿ ಭದ್ರತೆ

ಬಾಬರಿ ಮಸೀದಿ ಧ್ವಂಸವಾಗಿ 33ನೇ ವರ್ಷ ತುಂಬುತ್ತಿದೆ. ಮುಂಜಾಗ್ರತಾ ಕ್ರಮವಾಗಿ ಅಯೋಧ್ಯೆ ಮತ್ತು ಉತ್ತರ ಪ್ರದೇಶದ ಇತರ ಪ್ರದೇಶಗಳಲ್ಲಿ ಭದ್ರತಾ ಪಡೆಗಳು ಜಾಗರೂಕರಾಗಿದ್ದು, ಎಲ್ಲಾ ಮಾರ್ಗಗಳಲ್ಲಿ ವಾಹನಗಳ ಸಂಪೂರ್ಣ ತಪಾಸಣೆ ನಡೆಸುತ್ತಿವೆ. ಈ ಕುರಿತು...

ನ್ಯಾಷನಲ್ ಹೆರಾಲ್ಡ್‌ಗೆ ದೇಣಿಗೆ: ‘ಡಿಕೆ’ ಸಹೋದರರಿಗೆ ಇಡಿ-ದೆಹಲಿ ಪೊಲೀಸರಿಂದ ಸಮನ್ಸ್

ನ್ಯಾಷನಲ್ ಹೆರಾಲ್ಡ್ ಮತ್ತು ಯಂಗ್ ಇಂಡಿಯಾ ಸಂಸ್ಥೆಗಳಿಗೆ ನೀಡಿದ ದೇಣಿಗೆಗಳಿಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ಕೈಗೊಂಡಿರುವ ತನಿಖೆಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಮತ್ತು ಜಾರಿ ನಿರ್ದೇಶನಾಲಯವು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಮತ್ತು...

ಇಂಡಿಗೋ ಹಾರಾಟದಲ್ಲಿ ಐದನೇ ದಿನವೂ ವ್ಯತ್ಯಯ: ವಿಮಾನ ದರಕ್ಕೆ ತಾತ್ಕಾಲಿಕ ಮಿತಿ ವಿಧಿಸಿದ ಕೇಂದ್ರ

ಇಂಡಿಗೋದ ದೇಶೀಯ ಕಾರ್ಯಾಚರಣೆಗಳು ಸತತ ಐದನೇ ದಿನವೂ ಅಸ್ತವ್ಯಸ್ತಗೊಂಡಿದ್ದರಿಂದ ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ ಶನಿವಾರ (ಡಿಸೆಂಬರ್ 6) ವಿಮಾನ ಟಿಕೆಟ್ ದರಗಳ ಮೇಲೆ ತಾತ್ಕಾಲಿಕ ಮಿತಿಯನ್ನು ವಿಧಿಸಿದೆ. ನಿಗದಿತ ಮಾನದಂಡಗಳ ಯಾವುದೇ...

ಪಶ್ಚಿಮ ಬಂಗಾಳ| ಎಸ್‌ಐಆರ್‌ನಲ್ಲಿ ಹೆಸರು ನೋಂದಾಯಿಸಲು ನಿರಾಕರಿಸಿದ 79 ಬುಡಕಟ್ಟು ಜನಾಂಗಗಳು

ಪಶ್ಚಿಮ ಬಂಗಾಳದ ಬಂಕುರಾದ ಮುಚಿಕಟಾ ಮತ್ತು ವೆದುವಾಶೋಲ್ ಗ್ರಾಮಗಳ ಬುಡಕಟ್ಟು ಜನಾಂಗದವರು 'ಸಮಾಜ್ವಾದ್ ಅಂತರ-ರಾಜ್ಯ ಮಾಝಿ ಸರ್ಕಾರ್'ಗೆ ನಿಷ್ಠೆಯನ್ನು ಉಲ್ಲೇಖಿಸಿ, ಚುನಾವಣಾ ಆಯೋಗ್ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯಲ್ಲಿ ಭಾಗವಹಿಸಲು ನಿರಾಕರಿಸಿದ್ದಾರೆ...

ವಿದ್ಯಾರ್ಥಿಗಳಿಗೆ ಭಗವದ್ಗೀತೆ ಬೋಧಿಸುವಂತೆ ಪತ್ರ ಬರೆದ ‘ಜಾತ್ಯತೀತ ಜನತಾದಳ’ ನಾಯಕ ಕುಮಾರಸ್ವಾಮಿ

ಭಗವದ್ಗೀತೆಯನ್ನು 'ಪವಿತ್ರ ಗ್ರಂಥ' ಎಂದಿರುವ ಜಾತ್ಯತೀತ ಜನತಾದಳ ಪಕ್ಷದ ರಾಜ್ಯಾಧ್ಯಕ್ಷ ಹಾಗೂ ಕೇಂದ್ರ ಕೈಗಾರಿಕಾ ಸಚಿವ ಎಚ್‌.ಡಿ. ಕುಮಾರಸ್ವಾಮಿ, ವಿದ್ಯಾರ್ಥಿಗಳಿಗೆ ಪಠ್ಯದಲ್ಲಿ ಭಗವದ್ಗೀತೆ ಬೋಧಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಕೇಂದ್ರ ಶಿಕ್ಷಣ...

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ಗೆ ಪ್ರಪ್ರಥಮ ‘ಫಿಫಾ ಶಾಂತಿ’ ಪ್ರಶಸ್ತಿ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಅವರಿಗೆ ಹೊಸ ಫಿಫಾ ಶಾಂತಿ ಪ್ರಶಸ್ತಿಯನ್ನು ಶುಕ್ರವಾರ ನೀಡಲಾಯಿತು. ನೊಬೆಲ್ ಶಾಂತಿ ಪ್ರಶಸ್ತಿಗಾಗಿ ಬಹಿರಂಗವಾಗಿ ಆಸೆ ವ್ಯಕ್ತಪಡಿಸಿದ್ದ ಅವರಿಗೆ, ಹೊಸದಾಗಿ ರಚಿಸಲಾದ ಫಿಫಾ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಟ್ರಂಪ್...

ಬಾಬಾ ಸಾಹೇಬರ ಪರಿನಿಬ್ಬಾಣ ಜಗತ್ತಿನ ಕವಲುದಾರಿಗೊಂದು ಕೈಮರದಂತೆ ಕಾಣಿಸುತ್ತಿದೆ

ಬುದ್ಧನ ತತ್ವಗಳು, ಬಸವ- ಅಲ್ಲಮರ ಚಿಂತನೆಗಳು, ಬಾಬಾ ಸಾಹೇಬರ ವಿಚಾರಗಳು , ನಮ್ಮ ಸಂವಿಧಾನದ ದಿಕ್ಸೂಚಿಗಳು ಹಾಗೂ ಕಳೆದ 75 ವರ್ಷಗಳಿಂದ ಸ್ಕ್ಯಾಂಡಿನೇವಿಯನ್ ದೇಶಗಳು ಒಂದು ಮಟ್ಟಿಗೆ ಸಾಧಿಸಿದ ಆಧುನಿಕ‌ ಮಾನವೀಯ‌- ವೈಜ್ಞಾನಿಕ...

ಮಧ್ಯಪ್ರದೇಶ| ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ಬಿಟ್ಟ ಚಿರತೆ ಮರಿ ಸಾವು

ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಕಾಡಿಗೆ ಬಿಟ್ಟ ಒಂದು ದಿನದ ನಂತರ ಚಿರತೆ ಮರಿ ಸಾವನ್ನಪ್ಪಿದೆ ಎಂದು ಅರಣ್ಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಗುರುವಾರ ಅಂತರರಾಷ್ಟ್ರೀಯ ಚಿರತೆ ದಿನದ...