Homeಮುಖಪುಟ'ಲವ್ ಜಿಹಾದ್, ಮೆಹಂದಿ ಜಿಹಾದ್' ಕಾರ್ಯಕ್ರಮಗಳ ಪ್ರಸಾರ : ಝೀ ನ್ಯೂಸ್, ಟೈಮ್ಸ್ ನೌ ನವಭಾರತ್‌ಗೆ...

‘ಲವ್ ಜಿಹಾದ್, ಮೆಹಂದಿ ಜಿಹಾದ್’ ಕಾರ್ಯಕ್ರಮಗಳ ಪ್ರಸಾರ : ಝೀ ನ್ಯೂಸ್, ಟೈಮ್ಸ್ ನೌ ನವಭಾರತ್‌ಗೆ ಎನ್‌ಬಿಡಿಎಸ್‌ಎ ತರಾಟೆ

ವಿಡಿಯೋ, ತಲೆಬರಹಗಳನ್ನು ತೆಗೆದುಹಾಕಲು ಸೂಚನೆ

- Advertisement -
- Advertisement -

ನಿವೃತ್ತ ನ್ಯಾಯಮೂರ್ತಿ ಎ.ಕೆ ಸಿಕ್ರಿ ನೇತೃತ್ವದ ಸುದ್ದಿ ಪ್ರಸಾರ ಮತ್ತು ಡಿಜಿಟಲ್ ಮಾನದಂಡಗಳ ಪ್ರಾಧಿಕಾರ (ಎನ್‌ಬಿಡಿಎಸ್‌ಎ) ‘ಮೆಹಂದಿ ಜಿಹಾದ್’ ಎಂಬ ಶೀರ್ಷಿಕೆಯಡಿ ಕಾರ್ಯಕ್ರಮಗಳನ್ನು ಪ್ರಸಾರ ಮಾಡಿದ ಝೀ ನ್ಯೂಸ್‌ಗೆ ಎಚ್ಚರಿಕೆ ನೀಡಿದ್ದು, ನೀತಿ ಸಂಹಿತೆಯ ಉಲ್ಲಂಘನೆ ಹಿನ್ನೆಲೆ ಸಾಮಾಜಿಕ ಮಾಧ್ಯಮ ವೇದಿಕೆಗಳಿಂದ ಅಂತಹ ಕಾರ್ಯಕ್ರಮಗಳ ವಿಡಿಯೋಗಳನ್ನು ತೆಗೆದುಹಾಕುವಂತೆ ನಿರ್ದೇಶಿಸಿದೆ ಎಂದು ಲೈವ್‌ ಲಾ ವರದಿ ಮಾಡಿದೆ.

ಪ್ರತ್ಯೇಕ ಆದೇಶದಲ್ಲಿ, ಕಾನೂನುಬಾಹಿರ ಮತಾಂತರ ಪ್ರಕರಣದಲ್ಲಿ ನ್ಯಾಯಾಲಯದ ತೀರ್ಪನ್ನು ವರದಿ ಮಾಡುವಾಗ ‘ಲವ್ ಜಿಹಾದ್’ ಕುರಿತು ಕೆಲವು ಪ್ರಚೋದನಕಾರಿ ತಲೆಬರಹಗಳನ್ನು ಬಳಸಿದ್ದಕ್ಕಾಗಿ ಎನ್‌ಬಿಡಿಎಸ್‌ಎ ‘ಟೈಮ್ಸ್ ನೌ ನವಭಾರತ್’ ವಾಹಿನಿಯನ್ನು ತರಾಟೆಗೆ ತೆಗೆದುಕೊಂಡಿದೆ. ವಾಹಿನಿಯು ತಲೆಬರಹಗಳಲ್ಲಿ ತೀರ್ಪಿನ ಭಾಗವಲ್ಲದ ಕೆಲವು ಅಂಶಗಳನ್ನು ಪರಿಚಯಿಸಿರುವ ಹಿನ್ನೆಲೆ ಅವುಗಳನ್ನು ತೆಗೆದುಹಾಕಲು ಆದೇಶಿಸಿದೆ ಎಂದು ವರದಿ ವಿವರಿಸಿದೆ.

ಚಾನೆಲ್‌ಗಳು ತಪ್ಪು ಮಾಹಿತಿಗಳನ್ನು ಹರಡುತ್ತಿವೆ ಮತ್ತು ಜನರನ್ನು ವಿಭಜಿಸುವ ಕಾರ್ಯಕ್ರಮಗಳನ್ನು ಹೆಚ್ಚಾಗಿ ಪ್ರಸಾರ ಮಾಡುತ್ತಿವೆ ಎಂದು ಆರೋಪಿಸಿ ಹೋರಾಟಗಾರ ಇಂದ್ರಜೀತ್ ಘೋರ್ಪಡೆ ಅವರು ಅಕ್ಟೋಬರ್ 2024ರಲ್ಲಿ ಸಲ್ಲಿಸಿದ್ದ ದೂರುಗಳ ಮೇರೆಗೆ ಎನ್‌ಬಿಡಿಎಸ್‌ಎ ಆದೇಶ ನೀಡಿದೆ.

ಝೀ ನ್ಯೂಸ್ – ‘ಮೆಹಂದಿ ಜಿಹಾದ್’ ಕಾರ್ಯಕ್ರಮಗಳು

‘ಮೆಹಂದಿ ಜಿಹಾದ್’ ಎಂಬ ಕಾಲ್ಪನಿಕ ವಿಷಯದ ಅಡಿ, ಮುಸ್ಲಿಂ ಮೆಹಂದಿ ಕಲಾವಿದರು ಹಿಂದೂ ಮಹಿಳೆಯರಿಗೆ ಮೆಹಂದಿ ಹಚ್ಚುವ ಮುನ್ನ ಅದಕ್ಕೆ ಉಗುಳುತ್ತಾರೆ. ಮುಸ್ಲಿಂ ಪುರುಷರು ಮೆಹಂದಿ ಕಲಾವಿದರಾಗಿ ಕೆಲಸ ಮಾಡಿ, ಹಿಂದೂ ಮಹಿಳೆಯರ ಫೋನ್ ನಂಬರ್‌ಗಳನ್ನು ತೆಗೆದುಕೊಳ್ಳುತ್ತಾರೆ. ಅದರ ಮೂಲಕ ಅವರನ್ನು ಬಲೆಗೆ ಬೀಳಿಸಿ ಮದುವೆಯಾಗುತ್ತಾರೆ. ಬಳಿಕ ಅವರ ಧರ್ಮ ಬದಲಾಯಿಸುವ ಗುಪ್ತ ಯೋಜನೆ ಇದೆ ಎಂಬ ಕಪೋಲಕಲ್ಪಿತ ಕಾರ್ಯಕ್ರಮಗಳನ್ನು ಪ್ರಸಾರ ಮಾಡಿದ್ದ ಆರೋಪಗಳನ್ನು ಝೀ ನ್ಯೂಸ್ ವಿರುದ್ದ ಮಾಡಲಾಗಿತ್ತು.

ಅಲ್ಲದೆ, ಈ ಕಾರ್ಯಕ್ರಮಗಳ ಪ್ರಸಾರದ ಬಳಿಕ, ಕೆಲವು ಗುಂಪುಗಳು ಮುಸ್ಲಿಂ ಮೆಹಂದಿ ಕಲಾವಿದರ ವಿರುದ್ಧ ಹಿಂಸಾತ್ಮಕ ಮಾತುಗಳನ್ನು ಆಡಿತ್ತು, ಅವರನ್ನು ಬಹಿಷ್ಕರಿಸಬೇಕು ಎಂದು ಕರೆ ಕೊಟ್ಟಿತ್ತು. ಇವುಗಳನ್ನು ಝೀ ನ್ಯೂಸ್ ಹೆಚ್ಚು ಹೆಚ್ಚು ಪ್ರಸಾರ ಮಾಡಿದೆ ಎಂದು ದೂರಲಾಗಿತ್ತು. ಝೀ ನ್ಯೂಸ್ ಮಾಡಿದ ಆರೋಪಗಳು ಮತ್ತು ಪ್ರಸಾರ ಮಾಡಿದ ಕಾರ್ಯಕ್ರಮಗಳು ಸತ್ಯವನ್ನು ತಿರುಚುವಂತಿದ್ದವು. ಜನರಲ್ಲಿ ತಪ್ಪು ಭಾವನೆಗಳನ್ನು ಹುಟ್ಟಿಸುವಂತಿದ್ದವು ಎಂದು ದೂರಿನಲ್ಲಿ ಆರೋಪಿಸಲಾಗಿತ್ತು.

“1. ಮೆಹೆಂದಿ ಜಿಹಾದ್ ಪರ್ ದೇ ದನಾ-ದನ್, 2. ಆವೇದನ್ ನಿವೇದನ್ ನಹಿ ಮಾನೆ ತೋ ದೇ ದನಾ-ದನ್, 3. ಮೆಹಂದಿ ಜಿಹಾದ್ ಕೆ ಖಿಲಾಫ್ ಲಾಟ್ ಮಾಡೆಲ್ ಲಾಂಚ್, 4. ಲಾಠಿ ಸೆ ಲೈಸ್ ರಹೇಂಗೆ ಜಿಹಾದಿಯೋಂಕೊ ರೊಕೇಂಗೆ, 5. ಪಕಡೆ ಜಾನೆ ಪರ್ ಸಬಕ್ ಸಿಕಾಯ ಜಾಯೆಗ” ಈ ರೀತಿಯ ತಲೆಬರಹಗಳನ್ನು ಝೀ ನ್ಯೂಸ್ ತನ್ನ ಕಾರ್ಯಕ್ರಮಗಳಿಗೆ ಕೊಟ್ಟಿತ್ತು ಎಂದು ದೂರಿನಲ್ಲಿ ವಿವರಿಸಲಾಗಿತ್ತು.

ಝೀ ನ್ಯೂಸ್ ಮುಸ್ಲಿಂ ಮೆಹಂದಿ ಕಲಾವಿದರರ ವಿರುದ್ದದ ಆರೋಪಗಳ ಸತ್ಯಾಸತ್ಯತೆ ಪರಿಶೀಲಿಸಿರಲಿಲ್ಲ. ಮುಸ್ಲಿಂ ಕಲಾವಿದರ ವಿರುದ್ಧದ ಬೆದರಿಕೆಗಳನ್ನು ಮತ್ತು ಅವಮಾನಗಳನ್ನು ಖಂಡಿಸಿರಲಿಲ್ಲ. ವಿರೋಧಿ ದೃಷ್ಟಿಕೋನಗಳನ್ನು ನಿರ್ಲಕ್ಷಿಸಿತ್ತು ಮತ್ತು ತನ್ನ ಥಂಬ್‌ನೇಲ್‌ಗಳು, ತಲೆ ಬರಹಗಳು ಮತ್ತು ಶೀರ್ಷಿಕೆಗಳ ಮೂಲಕ ಸಾಮುದಾಯಿಕ ಭಯ ಮತ್ತು ದ್ವೇಷವನ್ನು ಹರಡಿದೆ ಎಂದು ದೂರಿನಲ್ಲಿ ಆರೋಪಿಸಲಾಗಿತ್ತು.

ಝೀ ನ್ಯೂಸ್ ಎನ್‌ಬಿಡಿಎಸ್‌ಎ ಮುಂದೆ ತಾವು ಕೇವಲ ಕೆಲವು ಸಂಘಟನೆಗಳ ಹೇಳಿಕೆಗಳನ್ನು ವರದಿ ಮಾಡಿದ್ದೇವೆ ಎಂದು ವಾದಿಸಿತ್ತು. ಆದರೆ, ಎನ್‌ಬಿಡಿಎಸ್‌ಎ ತಲೆ ಬರಹಗಳು ಮತ್ತು ಕಾರ್ಯಕ್ರಮದ ಪ್ರಸ್ತುತಿಯ ರೀತಿಯಿಂದ ಚಾನೆಲ್ ಸ್ವತಃ ಈ ಆರೋಪಗಳನ್ನು ಬೆಂಬಲಿಸುತ್ತಿರುವಂತೆ ಭಾಸವಾಗಿದೆ ಎಂದಿದೆ. ಆದ್ದರಿಂದ, ಝೀ ನ್ಯೂಸ್‌ಗೆ ಆ ಕಾರ್ಯಕ್ರಮಗಳನ್ನು ತೆಗೆದುಹಾಕಲು ಆದೇಶಿಸಿದೆ. ಭವಿಷ್ಯದಲ್ಲಿ ಎಚ್ಚರಿಕೆಯಿಂದ ವಿರೋಧಿ ದೃಷ್ಟಿಕೋನಗಳನ್ನು ಸೇರಿಸಿಕೊಂಡು ವರದಿ ಮಾಡುವಂತೆ ಎಚ್ಚರಿಕೆ ನೀಡಿದೆ ಎಂದು ಲೈವ್ ಲಾ ವರದಿ ಹೇಳಿದೆ.

“ತಲೆಬರಹಗಳನ್ನು ಕೊಡುವಾಗ ಪ್ರಸಾರಕರು ಇವು ಮೂರನೇ ವ್ಯಕ್ತಿಗಳು ನೀಡಿದ ಹೇಳಿಕೆಗಳು ಎಂದು ಯಾವುದೇ ಸ್ಪಷ್ಟೀಕರಣವನ್ನು ನೀಡಿಲ್ಲ ಅಥವಾ ಈ ತಲೆಬರಹಗಳು ಪ್ರಸಾರಕರ ಅಭಿಪ್ರಾಯಗಳನ್ನು ಪ್ರತಿನಿಧಿಸುವುದಿಲ್ಲ ಎಂಬುದಕ್ಕೆ ಯಾವುದೇ ಸ್ಪಷ್ಟನೆಯನ್ನೂ ನೀಡಿಲ್ಲ” ಎಂದು ಎನ್‌ಬಿಡಿಎಸ್‌ಎ ಹೇಳಿದೆ.

“ಸಂಪಾದಕೀಯ ವಿವೇಚನೆಯ ಭಾಗವಾಗಿರುವ, ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಅಡಿಯಲ್ಲಿ ರಕ್ಷಿಸಲ್ಪಟ್ಟಿರುವ ಪ್ರಸಾರದ ವಿಷಯದ ಬಗ್ಗೆ ತಾನು ಯಾವುದೇ ಹೇಳಿಕೆ ನೀಡಲು ಸಾಧ್ಯವಿಲ್ಲ ಎಂದು ಎನ್‌ಬಿಡಿಎಸ್‌ಎ ಸ್ಪಷ್ಟಪಡಿಸಿದೆ. ಆದರೆ, ಈ ಹಂತದಲ್ಲಿ ಸಾರ್ವಜನಿಕ ಸಂವಾದವನ್ನು ರೂಪಿಸುವಲ್ಲಿ ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭವಾಗಿ ಮಾಧ್ಯಮವು ವಹಿಸುವ ಪಾತ್ರವನ್ನು ನೆನಪಿಸುವುದು ಅಗತ್ಯವಾಗಿದೆ. ಸಂಭಾವ್ಯ ಸೂಕ್ಷ್ಮ ವಿಷಯಗಳೊಂದಿಗೆ ವ್ಯವಹರಿಸುವಾಗ, ಪ್ರಸಾರಕರು ತಾವು ಪ್ರಸಾರ ಮಾಡುವ ವಿಷಯವನ್ನು ವಿಮರ್ಶಾತ್ಮಕವಾಗಿ ಪರಿಶೀಲಿಸಬೇಕು. ಅದು ನೀತಿ ಸಂಹಿತೆಯಲ್ಲಿ ವಿವರಿಸಿರುವ ಪತ್ರಿಕೋದ್ಯಮ ಮಾನದಂಡಗಳಿಗೆ ಹೊಂದಿಕೆಯಾಗುತ್ತದೆ ಎಂದು ಖಚಿತಪಡಿಸಿಕೊಳ್ಳಬೇಕು” ಎಂದು ಎನ್‌ಡಿಬಿಎಸ್‌ಎ ತಿಳಿಸಿದೆ.

ಟೈಮ್ಸ್ ನೌ ನವಭಾರತ್: ‘ಲವ್ ಜಿಹಾದ್’ ವರದಿ

ಟೈಮ್ಸ್ ನೌ ನವಭಾರತ್ ಚಾನೆಲ್‌ ವಿರುದ್ಧದ ದೂರು, ಹಿಂದೂ ಮಹಿಳೆಯನ್ನು ಧಾರ್ಮಿಕ ಮತಾಂತರದ ನಂತರ ಮದುವೆಗೆ ಒತ್ತಾಯಿಸಿದ್ದಕ್ಕಾಗಿ ಮುಸ್ಲಿಂ ಪುರುಷನಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಬರೇಲಿ ಸೆಷನ್ಸ್ ನ್ಯಾಯಾಲಯದ ತೀರ್ಪಿನ ವರದಿಗೆ ಸಂಬಂಧಿಸಿದೆ.

ದೂರಿನ ಪ್ರಕಾರ, ಟೈಮ್ಸ್ ನೌ ನವಭಾರತ್ ಪತ್ರಿಕೋದ್ಯಮದ ಪರಿಶೀಲನೆಯಿಲ್ಲದೆ ನ್ಯಾಯಾಧೀಶರ ಮಾತುಗಳನ್ನು ಪ್ರಸಾರ ಮಾಡಿದೆ. ಮಹಿಳೆಯ ಸಾಕ್ಷ್ಯವನ್ನು ಬಿಟ್ಟುಬಿಟ್ಟಿದೆ ಮತ್ತು ‘ಲವ್ ಜಿಹಾದ್’ ನಿರೂಪಣೆಯನ್ನು ಬಲಪಡಿಸುವ ಬಿಜೆಪಿ ರಾಜಕಾರಣಿಗಳ ಹೇಳಿಕೆಗಳನ್ನು ಮತ್ತಷ್ಟು ಪ್ರಸಾರ ಮಾಡಿದೆ. “ಪ್ಯಾರ್ ಕೆ ಜಹಾಝ್ ಮೇ ಜಿಹಾದ್ ಕಾ ತೂಫಾನ್,” “ಲವ್ ಜಿಹಾದ್ ಪರ್ ಕೋರ್ಟ್ ಕಾ ಸಖ್ತ್ ಫೈಸ್ಲಾ,” “ಜಿಹಾದಿಯೋನ್ ಕಿ ಮೊಹಬ್ಬತ್ ಕಾ ಸಚ್,” ಮತ್ತು “ಜಿಹಾದಿಯೋಂ ಕೆ ಇರಾದಾನ್ ಪರ್ ಲಗೀ ಮೊಹರ್” ಮುಂತಾದ ತಲೆಬರಹಗಳನ್ನು ಪ್ರಸಾರ ಮಾಡಿದೆ.

ನ್ಯಾಯಾಲಯದ ತೀರ್ಪನ್ನು ವರದಿ ಮಾಡುವ ಮೊದಲು ಚಾನೆಲ್ ಸ್ವತಂತ್ರ ಸತ್ಯ ಪರಿಶೀಲನೆ ಮಾಡಬೇಕಿತ್ತು ಎಂಬ ದೂರುದಾರರ ವಾದದಿಂದ ಎನ್‌ಬಿಡಿಎಸ್‌ಎ ಪ್ರಭಾವಿತ ಆಗಿಲ್ಲ.

ನ್ಯಾಯಾಲಯದ ತೀರ್ಪಿನ ಕುರಿತು ಚಾನೆಲ್ ವರದಿ ಮಾಡಿದೆ ಅದು ಆಕ್ಷೇಪಾರ್ಹವಲ್ಲ ಎಂದು ಎನ್‌ಬಿಡಿಎಸ್‌ಎ ಹೇಳಿದೆ. ಆದರೆ, ಟೈಮ್ಸ್ ನೌ ನವಭಾರತ್ ತೀರ್ಪಿನ ನಿರೂಪಣೆಯನ್ನು ಮೀರಿ ಸಂವೇದನಾಶೀಲ ತಲೆಬರಹಗಳ ಮೂಲಕ ಹೆಚ್ಚುವರಿ ಅಂಶಗಳನ್ನು ಪರಿಚಯಿಸಿದೆ ಎಂದು ಅದು ಹೇಳಿದೆ. “ಯುಪಿ ಮೇ ಲವ್ ಜಿಹಾದ್… ಟೂಲ್‌ಕಿಟ್ ಪಾಕಿಸ್ತಾನಿ” ಮತ್ತು “ಝುತೇ ನಾಮ್ ಕಾ ಅಫ್ಸಾನಾ, ಮಕ್ಸದ್ ಮುಸಲ್ಮಾನ್ ಬನಾನ” ಮುಂತಾದ ಶೀರ್ಷಿಕೆಗಳ ಬಳಕೆಯನ್ನು ಎಮ್‌ಡಿಬಿಎಸ್‌ಎ ನಿರ್ದಿಷ್ಟವಾಗಿ ಸೂಚಿಸಿದೆ. ಇದು ವರದಿಯ ಉದ್ದೇಶಿತ ವಿಷಯಕ್ಕೆ ಹೊಂದಿಕೆಯಾಗುವುದಿಲ್ಲ ಎಂದು ಹೇಳಿದೆ.

ಕಾರ್ಯಕ್ರಮ ಪ್ರಸಾರ ಮಾಡುವಾಗ, ಪ್ರಸಾರಕರು ನ್ಯಾಯಾಲಯದ ತೀರ್ಪಿನ ನಿರೂಪಣೆಯನ್ನು ಮೀರಿ, ತೀರ್ಪಿನ ಭಾಗವಲ್ಲದ ಕೆಲವು ಅಂಶಗಳನ್ನು ಪರಿಚಯಿಸಿದ್ದಾರೆ. ಅವುಗಳಿಗೆ ವರದಿಯ ಉದ್ದೇಶಿತ ವಿಷಯಕ್ಕೆ ಹೊಂದಿಕೆಯಾಗದ ತಲೆಬರಹಗಳನ್ನು ಬಳಸಲಾಗಿದೆ. ಆದ್ದರಿಂದ ಆಕ್ಷೇಪಾರ್ಹ ತಲೆಬರಹಗಳನ್ನು ತೆಗೆದುಹಾಕುವಂತೆ ಎನ್‌ಡಿಬಿಎಸ್‌ಎ ಚಾನೆಲ್‌ಗೆ ನಿರ್ದೇಶಿಸಿದೆ. ಇದೇ ವೇಳೆ, ಈ ಶೀರ್ಷಿಕೆಗಳನ್ನು ಹೊರತುಪಡಿಸಿ, ತೀರ್ಪಿನ ನಿರೂಪಣೆಯು ನೀತಿಸಂಹಿತೆ ಮತ್ತು ಪ್ರಸಾರ ಸಂಹಿತೆಯನ್ನು ಉಲ್ಲಂಘಿಸಿಲ್ಲ ಎಂದು ಎನ್‌ಡಿಬಿಎಸ್‌ಎ ತಿಳಿಸಿದೆ.

Courtesy : livelaw.in

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕರ್ನಾಟಕ ಎಸ್ಐಆರ್: ಹೆಸರಿನ ಸಣ್ಣ ವ್ಯತ್ಯಾಸಕ್ಕಾಗಿ ನಿವೃತ್ತ ಐಎಎಸ್ ಅಧಿಕಾರಿ ಎ.ಬಿ. ಇಬ್ರಾಹಿಂ ಅವರಿಗೆ ನೋಟಿಸ್; ‘ಸುಳ್ಳು ಮಾಹಿತಿ ನೀಡಿದರೆ ಜೈಲು’ ಎಂಬ ಬೆದರಿಕೆ

ಮೈಸೂರು: ಸುಮಾರು ಮೂರೂವರೆ ದಶಕಗಳ ಕಾಲ ರಾಜ್ಯದ ಆಡಳಿತ ವ್ಯವಸ್ಥೆಯಲ್ಲಿ ಸೇವೆ ಸಲ್ಲಿಸಿ, ಸ್ವತಃ ಚುನಾವಣಾ ಪ್ರಕ್ರಿಯೆಯ ಜವಾಬ್ದಾರಿಯುತ ಹುದ್ದೆಯಲ್ಲಿ ಕಾರ್ಯನಿರ್ವಹಿಸಿದ್ದ ನಿವೃತ್ತ ಐಎಎಸ್ ಅಧಿಕಾರಿ ಎ.ಬಿ. ಇಬ್ರಾಹಿಂ ಅವರೇ ಇದೀಗ ತಮ್ಮ...

SIR : ತಂದೆಯೊಂದಿಗೆ ಮ್ಯಾಪಿಂಗ್ ಮಾಡಿದರೂ ಅಜ್ಜನ ವಯಸ್ಸಿನ ವ್ಯತ್ಯಾಸದ ನೆಪ ಹೇಳಿ ನೋಟಿಸ್ ನೀಡಿದ ಚುನಾವಣಾ ಆಯೋಗ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ದಿನಕ್ಕೊಂದು ವಿಲಕ್ಷಣ ಹಾಗೂ ಯಾಂತ್ರಿಕ ದೋಷಗಳನ್ನು ಹೊರಹಾಕುತ್ತಿದ್ದು, ಪ್ರಜಾಪ್ರಭುತ್ವದ ಹಕ್ಕನ್ನು ಚಲಾಯಿಸಲು ಬಯಸುವ ನೈಜ ಮತದಾರರನ್ನು ಆತಂಕಕ್ಕೆ ತಳ್ಳುತ್ತಿದೆ. ಬ್ಯಾಟರಾಯನಪುರ...

ಬ್ಯಾಂಕ್ ಮುಷ್ಕರ: ದೇಶಾದ್ಯಂತ ಶಾಖಾ ಸೇವೆಗಳಿಗೆ ಅಡಚಣೆ; ವಾರಾಂತ್ಯ, ಗಣೇಶ ಚತುರ್ಥಿಯಿಂದ ಹಲವು ದಿನ ಸೇವೆ ವ್ಯತ್ಯಯ 

ನವದೆಹಲಿ: ಯುನೈಟೆಡ್ ಫೋರಮ್ ಆಫ್ ಬ್ಯಾಂಕ್ ಯೂನಿಯನ್ಸ್ (UFBU) ಕರೆ ನೀಡಿರುವ ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರ ಸೆಪ್ಟೆಂಬರ್ 11ರಂದು (ಇಂದು) ನಡೆಯುತ್ತಿದ್ದು, ದೇಶದಾದ್ಯಂತ ಬ್ಯಾಂಕ್ ಗ್ರಾಹಕರ ಸಾಮಾನ್ಯ ಸೇವೆಗಳ ಮೇಲೆ ಪರಿಣಾಮ ಬೀರುವ...

ಹನೂರು ಶೂಟೌಟ್ ಪ್ರಕರಣ: ಮೂವರು ಅರಣ್ಯ ಸಿಬ್ಬಂದಿಗೆ ನಿರೀಕ್ಷಣಾ ಜಾಮೀನು.!

ಕಾವೇರಿ ವನ್ಯಜೀವಿ ಅಭಯಾರಣ್ಯದ ಹನೂರು ವ್ಯಾಪ್ತಿಯಲ್ಲಿ ಮೂವರು ಮೃತಪಟ್ಟಿದ್ದ ವಿವಾದಾತ್ಮಕ ಗುಂಡಿನ ದಾಳಿ ಪ್ರಕರಣಕ್ಕೆ ಇದೀಗ ಕಾನೂನು ತಿರುವು ಸಿಕ್ಕಿದೆ. ಪ್ರಕರಣದಲ್ಲಿ ಆರೋಪ ಎದುರಿಸುತ್ತಿರುವ ಮೂವರು ಅರಣ್ಯ ಸಿಬ್ಬಂದಿಗೆ ಕೊಳ್ಳೇಗಾಲದ ಮೊದಲ ಹೆಚ್ಚುವರಿ...

ವಂದೇ ಮಾತರಂ ಗೀತೆಯ 6 ಚರಣಕ್ಕೆ ಕರ್ನಾಟಕ ಸರ್ಕಾರದ ಬ್ರೇಕ್

ವಂದೇ ಮಾತರಂ ಗೀತೆಯ ಗಾಯನಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ನಿರ್ಧಾರ ಮತ್ತು ಕಡ್ಡಾಯ ನೀತಿಗೆ ಕರ್ನಾಟಕ ಸರ್ಕಾರ ನೇರವಾಗಿ ಸೆಡ್ಡು ಹೊಡೆದಿದೆ. ರಾಜ್ಯ ಸರ್ಕಾರದ ಅಧಿಕೃತ ಕಾರ್ಯಕ್ರಮಗಳಲ್ಲಿ ವಂದೇ ಮಾತರಂ ಗೀತೆಯ ಸಂಪೂರ್ಣ...

ಸಿಜೆಪಿ ಪ್ರತಿಭಟನೆಯಲ್ಲಿ ಬಾಲಕಿ ನಿಶು ಆಜಾದ್‌ಗೆ ಬೆದರಿಕೆ; ಕ್ರಮಕ್ಕೆ ಸುಪ್ರೀಂ ಕೋರ್ಟ್ ಸೂಚನೆ

ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ 14 ವರ್ಷದ ನಿಶು ಆಜಾದ್‌ಗೆ ಕಿಡಿಗೇಡಿಗಳು ಅತ್ಯಾಚಾರದ ಬೆದರಿಕೆ ಹಾಕಿದ್ದಾರೆ ಹಾಗೂ ಅವರ ಮನೆ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ ಎಂಬ...

ಜಾದವ್‌ಪುರ ವಿವಿ ವಿರುದ್ಧ ಸುವೇಂದು ಅಧಿಕಾರಿಯ ‘ಕೇಸರಿ ಯಾತ್ರೆ’: ‘ಆಜಾದಿ’, ‘ಲಾಲ್ ಸಲಾಂ’ ಕೂಗುವವರನ್ನು ಬೇರುಸಹಿತ ಕಿತ್ತುಹಾಕುತ್ತೇನೆ ಎಂದು ಬೆದರಿಕೆ

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಬಿಜೆಪಿ ನಾಯಕ ಹಾಗೂ ಮುಖ್ಯಮಂತ್ರಿ ಸುವೇಂದು ಅಧಿಕಾರಿ ನೇತೃತ್ವದಲ್ಲಿ ಕೋಲ್ಕತ್ತಾದ ಜಾದವ್‌ಪುರ ವಿಶ್ವವಿದ್ಯಾಲಯದತ್ತ ನಡೆದ ‘ಗೆರುವಾ ಸಮ್ಮಾನ್ ಯಾತ್ರೆ’ (ಕೇಸರಿ ಗೌರವ ಮೆರವಣಿಗೆ) ಇದೀಗ ರಾಜ್ಯದ ರಾಜಕೀಯ ವಲಯದಲ್ಲಿ...

SIR : ಒಂದೇ ಮತಗಟ್ಟೆಯ 729 ಮತದಾರರಲ್ಲಿ 728 ಮಂದಿಯ ಹೆಸರು ಡಿಲೀಟ್!

ದೆಹಲಿಯ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಗೆ (ಎಸ್‌ಐಆರ್‌) ಮುನ್ನ, ಯಮುನಾ ನದಿ ಪಾತ್ರದ ಕೊಳಗೇರಿ ಪ್ರದೇಶವಾದ ಬೇಲಾ ಎಸ್ಟೇಟ್‌ನ ಭಾಗವೊಂದನ್ನು ಒಳಗೊಂಡಿರುವ ಮತಗಟ್ಟೆಯಲ್ಲಿ 729 ನೋಂದಾಯಿತ ಮತದಾರರಿದ್ದರು. ಆದರೆ, ಆಗಸ್ಟ್‌ನಲ್ಲಿ ಕರಡು...

ಬಂಗಾಳದ ನಾನ್‌ವೆಜ್ ವಿವಾದ: ಬಾಗೇಶ್ವರ್ ಬಾಬಾ ಹೇಳಿಕೆಗೆ ಹಿಂದೂ ವಲಯದಲ್ಲೇ ವಿರೋಧ; ‘ಹಿಂದೂ ಧರ್ಮ ಆಹಾರದ ಕೋಡ್ ಅಲ್ಲ!

ದುರ್ಗಾ ಪೂಜೆಯ ಸಂದರ್ಭದಲ್ಲಿ ಮೀನು, ಮಾಂಸ ಸೇವನೆ ಹಾಗೂ ಮಾರಾಟದ ವಿರುದ್ಧ ಬಾಗೇಶ್ವರ್ ಧಾಮದ ಮುಖ್ಯಸ್ಥ ಧೀರೇಂದ್ರ ಕೃಷ್ಣ ಶಾಸ್ತ್ರಿ ನೀಡಿದ್ದ ಹೇಳಿಕೆ ಪಶ್ಚಿಮ ಬಂಗಾಳದಲ್ಲಿ ರಾಜಕೀಯ ವಿವಾದ ಹುಟ್ಟುಹಾಕಿದ ಬೆನ್ನಲ್ಲೇ, ಇದೀಗ...

SIR: ಪಂಜಾಬ್‌ ಮತದಾರರ ಪಟ್ಟಿಯಿಂದ ಡಿಲೀಟ್ ಆಗಿದ್ದ ರಾಘವ್ ಚಡ್ಡಾ ಹೆಸರು ದೆಹಲಿಯಲ್ಲಿ ಎಂಟ್ರಿ!

ರಾಜ್ಯಸಭಾ ಸಂಸದ ರಾಘವ್ ಚಡ್ಡಾ ಅವರ ಹೆಸರು ಪಂಜಾಬ್‌ನ ಕರಡು ಮತದಾರರ ಪಟ್ಟಿಯಿಂದ ತೆಗೆದುಹಾಕಲ್ಪಟ್ಟ ಕೆಲವೇ ದಿನಗಳಲ್ಲಿ, ದೆಹಲಿಯ ಮತದಾರರ ಪಟ್ಟಿಯಲ್ಲಿ ದಿಢೀರನೆ ಪ್ರತ್ಯಕ್ಷವಾಗಿರುವುದು ದೇಶಾದ್ಯಂತ ಭಾರಿ ರಾಜಕೀಯ ಚರ್ಚೆಗೆ ಕಾರಣವಾಗಿದೆ. ಈ...