ಬಾಬರಿ ಮಸೀದಿ ಧ್ವಂಸವಾಗಿ 33ನೇ ವರ್ಷ ತುಂಬುತ್ತಿದೆ. ಮುಂಜಾಗ್ರತಾ ಕ್ರಮವಾಗಿ ಅಯೋಧ್ಯೆ ಮತ್ತು ಉತ್ತರ ಪ್ರದೇಶದ ಇತರ ಪ್ರದೇಶಗಳಲ್ಲಿ ಭದ್ರತಾ ಪಡೆಗಳು ಜಾಗರೂಕರಾಗಿದ್ದು, ಎಲ್ಲಾ ಮಾರ್ಗಗಳಲ್ಲಿ ವಾಹನಗಳ ಸಂಪೂರ್ಣ ತಪಾಸಣೆ ನಡೆಸುತ್ತಿವೆ.
ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ಅಯೋಧ್ಯೆ ಪೊಲೀಸ್ ವರಿಷ್ಠಾಧಿಕಾರಿಚಕ್ರಪಾಣಿ ತ್ರಿಪಾಠಿ, “ಜಿಲ್ಲೆಯಾದ್ಯಂತ ವಿವಿಧ ತಂಗುವಿಕೆ ಕೇಂದ್ರಗಳನ್ನು ಮಾಡಲಾಗಿದೆ, ಹೋಟೆಲ್‌ಗಳು ಸಂದರ್ಶಕರ ದಾಖಲೆಗಳನ್ನು ಸೂಕ್ತವಾಗಿ ದಾಖಲಿಸಬೇಕು” ಎಂದು ವಿನಂತಿಸಿದ್ದಾರೆ.
“ವಿವಿಧ ಸ್ಥಳಗಳಲ್ಲಿ ತಪಾಸಣೆ ವ್ಯವಸ್ಥೆ ಇದೆ… ಎಲ್ಲಾ ಹೋಟೆಲ್‌ಗಳು ಮತ್ತು ಧರ್ಮಶಾಲೆಗಳು ಅಲ್ಲಿ ತಂಗುವ ಸಂದರ್ಶಕರ ದಾಖಲೆಗಳನ್ನು ನಿರ್ವಹಿಸಲು ನಾವು ವಿನಂತಿಸಿದ್ದೇವೆ, ಅದನ್ನು ನಮ್ಮ ಅಧಿಕಾರಿಗಳು ಪರಿಶೀಲಿಸುತ್ತಾರೆ. ವಾಹನಗಳನ್ನು ನಿಯಮಿತವಾಗಿ ಪರಿಶೀಲಿಸಲಾಗುತ್ತಿದೆ. ನಮ್ಮ ತಂಡಗಳು ಘಾಟ್‌ಗಳು ಮತ್ತು ಇತರ ಪ್ರದೇಶಗಳಲ್ಲಿಯೂ ಗಸ್ತು ತಿರುಗುತ್ತಿವೆ… ಭದ್ರತಾ ತಪಾಸಣೆ ಮತ್ತು ಕಣ್ಗಾವಲು ಹಾಗೂ ಜನಸಂದಣಿ ನಿರ್ವಹಣೆಗಾಗಿ ಪ್ರತ್ಯೇಕ ತಂಡಗಳಿವೆ” ಎಂದು ಅಧಿಕಾರಿ ಹೇಳಿದರು.
ಬಾಬರಿ ಮಸೀದಿ ಧ್ವಂಸಕ್ಕೆ 33ನೇ ವರ್ಷಾಚರಣೆಯಂದು ವಾರಣಾಸಿಯ ಶ್ರೀ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿಯೂ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ವಾರಣಾಸಿಯ ಉಪ ಪೊಲೀಸ್ ಆಯುಕ್ತ (ಅಪರಾಧ) ಸರವಣನ್ ತಗಮಾನಿ ಅವರು, ನಗರದಾದ್ಯಂತ ಸಂಪೂರ್ಣ ತಪಾಸಣೆ ನಡೆಸಲಾಗುತ್ತಿದೆ ಮತ್ತು ಭದ್ರತಾ ಸಿಬ್ಬಂದಿ ತೀವ್ರ ಜಾಗರೂಕರಾಗಿದ್ದಾರೆ ಎಂದು ತಿಳಿಸಿದರು.
“ವಾರಣಾಸಿ ಕಮಿಷನರೇಟ್‌ನ ಎಲ್ಲ ವಲಯದಲ್ಲಿರುವ ಎಲ್ಲರೂ ತೀವ್ರ ಜಾಗರೂಕರಾಗಿದ್ದಾರೆ… ವಾರಣಾಸಿ ನಗರ, ವಾರಣಾಸಿ ಜಂಕ್ಷನ್ ಮತ್ತು ಬನಾರಸ್ ರೈಲು ನಿಲ್ದಾಣಗಳಲ್ಲಿ ತಪಾಸಣೆ ನಡೆಸಲಾಗುತ್ತಿದೆ. ಎಲ್ಲ 84 ಘಾಟ್‌ಗಳಲ್ಲಿ ಗಸ್ತು ತಿರುಗುವಿಕೆಯನ್ನು ನಿಯೋಜಿಸಲಾಗಿದೆ. ಅಸ್ಸಿ ಘಾಟ್, ನಮೋ ಘಾಟ್ ಮತ್ತು ದಶಾಶ್ವಮೇಧ ಘಾಟ್‌ಗಳಲ್ಲಿ ಸಂಜೆ ಆರತಿ ಸಮಯದಲ್ಲಿ ವಿಶೇಷ ಕಣ್ಗಾವಲು ನಡೆಸಲಾಗುತ್ತದೆ” ಎಂದು ಅಧಿಕಾರಿ ಹೇಳಿದರು.
“ಬಾಂಬ್ ಸ್ಕ್ವಾಡ್ ಮತ್ತು ಶ್ವಾನ ದಳವು ಆರ್‌ಪಿಎಫ್ ಮತ್ತು ಜಿಆರ್‌ಪಿ ಜೊತೆಗೆ ರೈಲ್ವೆ ನಿಲ್ದಾಣದ ಪಾರ್ಕಿಂಗ್‌ನಲ್ಲಿ ಪರಿಶೀಲನೆ ನಡೆಸುತ್ತಿದೆ. ಬಸ್ ನಿಲ್ದಾಣಗಳಲ್ಲಿಯೂ ತಪಾಸಣೆ ನಡೆಯುತ್ತಿದೆ. ಕಾಶಿ ವಿಶ್ವನಾಥ ದೇವಸ್ಥಾನ, ಕಾಳ ಭೈರವ ದೇವಸ್ಥಾನ ಮತ್ತು ಸಂಕಟಮೋಚನ ಹನುಮಾನ್ ದೇವಸ್ಥಾನದಲ್ಲಿ ವಿಶೇಷ ಭದ್ರತೆಯನ್ನು ನಿಯೋಜಿಸಲಾಗಿದೆ” ಎಂದು ಅವರು ಹೇಳಿದರು.
ಬಾಬ್ರಿ ಮಸೀದಿ ಧ್ವಂಸ
ಡಿಸೆಂಬರ್ 6, 1992 ರಂದು ಅಯೋಧ್ಯೆಯಲ್ಲಿ ‘ಕರ ಸೇವಕರ’ ದೊಡ್ಡ ಗುಂಪಿನಿಂದ ಬಾಬರಿ ಮಸೀದಿ ಕೆಡವಲಾಯಿತು. ಬಾಂಬ್ರಿ ಮಸೀದಿ ಧ್ವಂಸದ ಬಳಿಕ ಅಯೋಧ್ಯೆಯ ಅನೇಕ ಮುಸ್ಲಿಂ ನಿವಾಸಗಳನ್ನು ದೋಚಿದ ನಂತರ ಸುಟ್ಟುಹಾಕಲಾಯಿತು. ದೇಶದ ವಿವಿಧ ಭಾಗಗಳಲ್ಲಿ ಗಲಭೆಗಳು ಭುಗಿಲೆದ್ದವು, ಇದರ ಪರಿಣಾಮವಾಗಿ 1,000 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದರು.


