ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆಸಿದ್ದಾನೆ ಎಂದು ವರದಿಯಾಗಿದೆ. ಘಟನೆ ನಡೆದ ನಿಖರವಾದ ಸ್ಥಳ ತಿಳಿದಿಲ್ಲ. ಆದರೆ, ಕಾರು ಹರಿಯಾಣದ ಫರಿದಾಬಾದ್‌ನದ್ದಾಗಿದೆ ಎಂದು ನಂಬರ್‌ಪ್ಲೇಟ್‌ನಿಂದ ತಿಳಿದುಬಂದಿದೆ.
ಚಾಲನೆ ಮಾಡುವಾಗ ಫೋನ್ ಬಳಸದೆ ಕೈಗಳನ್ನು ಸ್ಟೀರಿಂಗ್ ವೀಲ್ ಮೇಲೆ ಇಡುವಂತೆ ಪ್ರಯಾಣಿಕ ವಿನಂತಿಸಿದ ನಂತರ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ಹಲ್ಲೆಗೆ ಒಳಗಾದ ವ್ಯಕ್ತಿಯನ್ನು ಡಿಜಿಟಲ್ ಸುದ್ದಿ ಪೋರ್ಟಲ್ ಸ್ಕ್ರೋಲ್‌ನ ರಾಜಕೀಯ ಸಂಪಾದಕ ಶೋಯೆಬ್ ರ್ಯಾಲಿಲ್ ಎಂದು ಗುರುತಿಸಲಾಗಿದೆ. ಈ ಘಟನೆ ಎರಡು ದಿನಗಳ ಹಿಂದೆ ನಡೆದಿರುವುದಾಗಿ ವರದಿಯಾಗಿದೆ.
ಘಟನೆಯ ಕ್ಲಿಪ್ ಅನ್ನು ಎಕ್ಸ್‌ನಲ್ಲಿ ಹಂಚಿಕೊಂಡಿದ್ದು, ಸಾರ್ವಜನಿಕರು ಹಲ್ಲೆ ಪ್ರಶ್ನಿಸಿದ ಬಳಿಕ ಚಾಲಕ ಸ್ಥಳದಿಂದ ಕಾಲ್ಕಿತ್ತಿದ್ದಾನೆ. ಈ ಸಂದರ್ಭದಲ್ಲಿ ಅವರ ಕಾರಿನಲ್ಲಿ ರಾಡ್ ಇರುವುದು ಪತ್ತೆಯಾಗಿದೆ.
“ರಾಪಿಡೋ ಚಾಲಕನಿಗೆ ರಾಡ್‌ನಿಂದ ಹಲ್ಲೆ. ಕಾರಣ ನಾನು ಅವನ ಫೋನ್ ಕಿವಿಗೆ ಹಿಡಿದುಕೊಳ್ಳುವುದನ್ನು ನಿಲ್ಲಿಸಿ ಎರಡೂ ಕೈಗಳನ್ನು ಸ್ಟೀರಿಂಗ್ ವೀಲ್ ಮೇಲೆ ಇಡಲು ಹೇಳಿದ್ದಕ್ಕೆ. ಇದಕ್ಕೂ ಮೊದಲು ಅವನು ಈಗಾಗಲೇ ಮೋಟಾರ್ ಸೈಕಲ್‌ಗೆ ಡಿಕ್ಕಿ ಹೊಡೆಯುವ ಹಂತಕ್ಕೆ ಬಂದಿದ್ದ. ನಿಜವಾದ ಆಘಾತಕಾರಿ ವಿಷಯವೆಂದರೆ ರ್ಯಾಪಿಡೋನಿಂದ ಎರಡು ದಿನಗಳವರೆಗೆ ಯಾವುದೇ ಪ್ರತಿಕ್ರಿಯೆ ಇಲ್ಲ. ದಯವಿಟ್ಟು ರಾಪಿಡೋ ತೆಗೆದುಕೊಳ್ಳುವಾಗ ಜಾಗರೂಕರಾಗಿರಿ. ಇದು ಉಬರ್‌ಗಿಂತ ಸ್ವಲ್ಪ ಅಗ್ಗವಾಗಿದೆ. ಆದರೆ, ನೀವು ನಿಮ್ಮ ಸುರಕ್ಷತೆಯನ್ನು ಅಪಾಯಕ್ಕೆ ಸಿಲುಕಿಸಬಹುದು” ಎಂದು ಅವರು ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ.


