ಇಂಡಿಯನ್ ಪ್ರೀಮಿಯರ್ ಲೀಗ್ 2026 ರ ಸೀಸನ್‌ಗಾಗಿ ಕೋಲ್ಕತ್ತಾ ನೈಟ್ ರೈಡರ್ಸ್ ಬಾಂಗ್ಲಾದೇಶದ ಕ್ರಿಕೆಟಿಗ ಮುಸ್ತಾಫಿಜುರ್ ರೆಹಮಾನ್ ಅವರನ್ನು ಖರೀದಿ ಮಾಡಿದ್ದಕ್ಕಾಗಿ ಬಾಲಿವುಡ್ ನಟ ಶಾರುಖ್ ಖಾನ್ ಅವರನ್ನು ಹಿಂದೂ ಆಧ್ಯಾತ್ಮಿಕ ನಾಯಕ ಎಂದು ಹೇಳಲಾಗುವ ಜಗದ್ಗುರು ರಾಮಭದ್ರಾಚಾರ್ಯ ಟೀಕಿಸಿದ್ದಾರೆ.
ನಾಗ್ಪುರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ರಾಮಭದ್ರಾಚಾರ್ಯ, ಕೆಕೆಆರ್ ತಂಡದ ನಿರ್ಧಾರಕ್ಕೆ ಪ್ರತಿಕ್ರಿಯಿಸಿದ ರಾಮಭದ್ರಾಚಾರ್ಯ, ಈ ಕ್ರಮವನ್ನು ತುಂಬಾ ದುರದೃಷ್ಟಕರ ಎಂದು ಕರೆದಿದ್ದಾರೆ. ಶಾರುಖ್ ಖಾನ್ ಅವರ ದೃಷ್ಟಿಕೋನವು ಯಾವಾಗಲೂ ದೇಶದ್ರೋಹಿಯಂತೆ ಇದೆ ಎಂದು ಆರೋಪಿಸಿದರು.
ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ವರದಿಯಾದ ದಾಳಿಗಳನ್ನು ಉಲ್ಲೇಖಿಸಿ, ಭಾರತ ಸರ್ಕಾರವು ಇಂತಹ ಘಟನೆಗಳನ್ನು ಸಹಿಸಬಾರದು. ನೆರೆಯ ದೇಶದಲ್ಲಿ ವಾಸಿಸುವ ಹಿಂದೂಗಳನ್ನು ರಕ್ಷಿಸಲು ದೃಢ ಮತ್ತು ಆಕ್ರಮಣಕಾರಿ ನಿಲುವನ್ನು ಅಳವಡಿಸಿಕೊಳ್ಳಬೇಕು ಎಂದು ಅವರು ಪ್ರಚೋಧನಾತ್ಮಕ ಹೇಳಿಕೆ ನೀಡಿದ್ದಾರೆ.
ದೇಶ ರಚನೆಯಲ್ಲಿ ಹಿಂದೂಗಳು ವಹಿಸಿದ ಪಾತ್ರವನ್ನು ಬಾಂಗ್ಲಾದೇಶಕ್ಕೆ ನೆನಪಿಸಬೇಕು, ದೇಶದ ಕೊಡುಗೆಯನ್ನು ಮರೆಯಬಾರದು ಎಂದು ಪ್ರತಿಪಾದಿಸಿದರು.
ಅವರ ಹೇಳಿಕೆಗಳು ರಾಜಕೀಯ ಪ್ರತಿಕ್ರಿಯೆಗಳನ್ನು ಹುಟ್ಟುಹಾಕಿದೆ. ಶಾರುಖ್ ಖಾನ್ ವಿರುದ್ಧ ಬಳಸಿದ ದೇಶದ್ರೋಹಿ ಪದಕ್ಕೆ ಕಾಂಗ್ರೆಸ್ ಸಂಸದ ಮಾಣಿಕಮ್ ಟ್ಯಾಗೋರ್ ತೀವ್ರವಾಗಿ ಖಂಡಿಸಿದರು. ಇದು ಭಾರತದ ಬಹುತ್ವದ ಮೇಲಿನ ದಾಳಿ ಎಂದು ಕರೆದರು. ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ವಿರುಧುನಗರ ಸಂಸದ, ದ್ವೇಷವು ರಾಷ್ಟ್ರೀಯತೆಯನ್ನು ವ್ಯಾಖ್ಯಾನಿಸಲು ಸಾಧ್ಯವಿಲ್ಲ. ಆರ್‌ಎಸ್‌ಎಸ್ ಸಮಾಜವನ್ನು ವಿಷಪೂರಿತಗೊಳಿಸುತ್ತಿದೆ ಎಂದು ಆರೋಪಿಸಿದರು.
ಮುಸ್ತಾಫಿಜುರ್ ರೆಹಮಾನ್ ಅವರ ಜೊತೆಗಿನ ಒಪ್ಪಂದವು ಕೆಲವು ಹಿಂದೂ ಧಾರ್ಮಿಕ ಮುಖಂಡರು ಮತ್ತು ಬಿಜೆಪಿ ವ್ಯಕ್ತಿಗಳಿಂದ ಟೀಕೆಗೆ ಗುರಿಯಾಗಿದೆ. ಬಿಜೆಪಿ ನಾಯಕ ಸಂಗೀತ್ ಸೋಮ್ ಶಾರುಖ್ ಖಾನ್ ಅವರನ್ನು ದೇಶದ್ರೋಹಿ ಎಂದು ಕರೆದಿದ್ದಾರೆ. ಬಾಂಗ್ಲಾದೇಶದ ಆಟಗಾರರಲ್ಲಿ ಹೂಡಿಕೆ ಮಾಡುವುದು ರಾಷ್ಟ್ರೀಯ ಹಿತಾಸಕ್ತಿಗೆ ವಿರುದ್ಧವಾಗಿದೆ ಎಂದು ಹೇಳಿಕೊಂಡರು, ದೇಶದಲ್ಲಿ ಹಿಂದೂಗಳ ಕಿರುಕುಳವನ್ನು ಆರೋಪಿಸಿದ್ದಾರೆ.
ಅಬುಧಾಬಿಯಲ್ಲಿ ನಡೆದ 2026 ರ ಐಪಿಎಲ್ ಮಿನಿ ಹರಾಜಿನಲ್ಲಿ, ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ಮುಸ್ತಾಫಿಜುರ್ ರೆಹಮಾನ್ ಅವರನ್ನು ₹9.2 ಕೋಟಿಗೆ ಖರೀದಿಸಿತು. 30 ವರ್ಷದ ಎಡಗೈ ವೇಗಿ 2016 ರಲ್ಲಿ ಪಾದಾರ್ಪಣೆ ಮಾಡಿದ ನಂತರ 60 ಐಪಿಎಲ್ ಪಂದ್ಯಗಳಲ್ಲಿ 65 ವಿಕೆಟ್‌ಗಳನ್ನು ಪಡೆದಿದ್ದಾರೆ.


