ವರ್ಷದ ಆರಂಭದಲ್ಲಿ ಅಚ್ಚರಿ ಎಂಬಂತೆ, ಕೇರಳ ಬಿಜೆಪಿಯ ಮುಖವಾಣಿಯಾದ ಮಲಯಾಳಂ ದಿನಪತ್ರಿಕೆ ‘ಜನ್ಮಭೂಮಿ’, ಪ್ರತಿಸ್ಪರ್ಧಿ ಪತ್ರಿಕೆಯಾದ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್) ಪಕ್ಷದ ಮುಖವಾಣಿ ‘ಚಂದ್ರಿಕಾ’ದ ಸಂಪಾದಕೀಯ ಪ್ರಕಟಿಸಿ ಮುಜುಗರಕ್ಕೀಡಾಗಿದೆ.
‘ಜನ್ಮಭೂಮಿ’ ಪತ್ರಿಕೆಯ ಕಣ್ಣೂರು-ಕಾಸರಗೋಡು ಆವೃತ್ತಿಯಲ್ಲಿ ಈ ಗೊಂದಲ ಉಂಟಾಗಿದೆ. “ಇದು ಮುದ್ರಣ ಪ್ರಕ್ರಿಯೆಯಲ್ಲಿ ಉಂಟಾದ ತಾಂತ್ರಿಕ ಗೊಂದಲ” ಎಂದು ಜನ್ಮಭೂಮಿಯ ಕಣ್ಣೂರು ಬ್ಯೂರೋ ಮುಖ್ಯಸ್ಥ ಗಣೇಶ್ ಮೋಹನ್ ಹೇಳಿದ್ದಾರೆ.
ಕಣ್ಣೂರಿನ ಅದೇ ಖಾಸಗಿ ಕಂಪ್ಯೂಟರ್-ಟು-ಪ್ಲೇಟ್ (CTP) ಕೇಂದ್ರದಲ್ಲಿ ಪ್ರತಿಸ್ಪರ್ಧಿ ಪತ್ರಿಕೆಗಳನ್ನು ಸಂಸ್ಕರಿಸಲಾಗುತ್ತದೆ ಎಂದು ಹಿಂದೂ ವರದಿ ಮಾಡಿದೆ. CTP ಯಲ್ಲಿ, ಚಂದ್ರಿಕಾದ ಸಂಪಾದಕೀಯ ಪುಟದ ಫಲಕಗಳನ್ನು ಆಕಸ್ಮಿಕವಾಗಿ ಜನ್ಮಭೂಮಿಯ ಫಲಕಗಳೊಂದಿಗೆ ಇರಿಸಲಾಯಿತು ಮತ್ತು ಮುದ್ರಕರಿಗೆ ಕಳುಹಿಸಲಾಯಿತು.
ಚಂದ್ರಿಕಾ ಮತ್ತು ಜನ್ಮಭೂಮಿ ಎರಡೂ ಪತ್ರಿಕೆಗಳು ಕಣ್ಣೂರಿನಲ್ಲಿರುವ ಪ್ರತೀಕ್ಷಾ ಪ್ರಿಂಟರ್ಸ್ ಎಂಬ ಕಂಪ್ಯೂಟರ್-ಟು-ಪ್ಲೇಟ್ (ಸಿಟಿಪಿ) ಕೇಂದ್ರದಲ್ಲಿ ತಮ್ಮ ಪ್ರಿಂಟಿಂಗ್ ಪ್ಲೇಟ್‌ಗಳನ್ನು ತಯಾರಿಸಿಕೊಳ್ಳುತ್ತವೆ ಎಂದು ದಿ ಹಿಂದೂ ಪತ್ರಿಕೆ ವರದಿ ಮಾಡಿದೆ. ಸಿಟಿಪಿ ಕೇಂದ್ರದಲ್ಲಿ, ಚಂದ್ರಿಕಾ ಪತ್ರಿಕೆಯ ಸಂಪಾದಕೀಯ ಪುಟದ ಪ್ಲೇಟ್‌ಗಳು ತಪ್ಪಾಗಿ ಜನ್ಮಭೂಮಿ ಪತ್ರಿಕೆಯ ಪ್ಲೇಟ್‌ಗಳೊಂದಿಗೆ ಬೆರೆತುಹೋಗಿ, ಪ್ರಿಂಟಿಂಗ್ ಯೂನಿಟ್‌ಗೆ ಹೋಗಿವೆ. ಇದರಿಂದಾಗಿ, ಒಂದು ಪತ್ರಿಕೆಯ ಸಂಪಾದಕೀಯ ಇನ್ನೊಂದು ಪತ್ರಿಕೆಯಲ್ಲಿ ತಪ್ಪಾಗಿ ಮುದ್ರಿತವಾಗಿದೆ ಎಂದು ದಿ ಹಿಂದೂ ವರದಿ ಮಾಡಿದೆ.
ಮಾಧ್ಯಮಂ, ಸುಪ್ರಭಾತಂ ಮತ್ತು ವೀಕ್ಷಣಂನಂತಹ ಇತರ ಸ್ಥಳೀಯ ಪತ್ರಿಕೆಗಳನ್ನೂ ಪ್ರತೀಕ್ಷಾ ಪ್ರಿಂಟರ್ಸ್‌ನಲ್ಲಿ ಮುದ್ರಿಸಲಾಗುತ್ತದೆ.
ಜನ್ಮಭೂಮಿ ಪತ್ರಿಕೆಯ ಪುಟ 4ರಲ್ಲಿ ಚಂದ್ರಿಕಾ ಪತ್ರಿಕೆಯ ಮುಖ್ಯ ಶೀರ್ಷಿಕೆ ಹಾಗೂ ಐಯುಎಂಎಲ್ ರಾಜ್ಯಾಧ್ಯಕ್ಷ ಸೈಯದ್ ಸಾದಿಕಲಿ ಶಿಹಾಬ್ ತಂಙಳ್, ಎಂ.ಕೆ. ಮುನೀರ್ ಮತ್ತು ಮೊಹಮ್ಮದ್ ಶಾ ಅವರ ಮೂರು ಅಭಿಪ್ರಾಯಗಳನ್ನು ಪ್ರಕಟಿಸಲಾಗಿದೆ. ಜನ್ಮಭೂಮಿಯ ‘ಅದೃಷ್ಟವ ಎಂಬಂತೆ, ಗೊಂದಲ ಉಂಟಾದ ದಿನ ಚಂದ್ರಿಕಾದ ಸಂಪಾದಕೀಯ ಪುಟದಲ್ಲಿ ಬಿಜೆಪಿಯನ್ನು ನೇರವಾಗಿ ಗುರಿಯಾಗಿಸಿಕೊಂಡ ಯಾವುದೇ ಲೇಖನ ಇರಲಿಲ್ಲ ಎಂದು ಕಾಸರಗೋಡಿನ ಬಿಜೆಪಿ ಕಾರ್ಯಕರ್ತರೊಬ್ಬರು ಹೇಳಿರುವುದಾಗಿ ದಿ ಹಿಂದೂ ವಿವರಿಸಿದೆ.
ಪತ್ರಿಕೆಯಲ್ಲಿ ಬಂಕಿಮ್ ಚಂದ್ರ ಚಟರ್ಜಿಯವರ ಕೃತಿಗಳ ಕುರಿತಾದ ಲೇಖನ ಮತ್ತು ಯಲಹಂಕ ತೆರವು ಕಾರ್ಯಾಚರಣೆ ಕುರಿತಾದ ಒಂದು ಲೇಖನವೂ ತಪ್ಪಾಗಿ ಪ್ರಕಟಗೊಂಡಿದೆ ಎಂದು ವರದಿ ಹೇಳಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಸಾದಿಕಲಿ ಶಿಹಾಬ್ ತಂಙಳ್, “ಹೆಚ್ಚಿನ ಓದುಗರನ್ನು ತಲುಪುವುದಕ್ಕಿಂತ, ವಿಭಿನ್ನ ವರ್ಗದ ಓದುಗರನ್ನು ತಲುಪಲು ಸಾಧ್ಯವಾಗಿದ್ದಕ್ಕೆ ನನಗೆ ಸಂತೋಷವಾಗಿದೆ. ಇದು ನಿಜವಾಗಿಯೂ ಹೊಸ ವರ್ಷದ ಅಚ್ಚರಿಯಾಗಿತ್ತು. ಮುಂದಿನ ವರ್ಷ ನಾನು ಇದನ್ನು ಖಂಡಿತವಾಗಿಯೂ ನೆನಪಿಸಿಕೊಳ್ಳುತ್ತೇನೆ” ಎಂದು ಹೇಳಿದ್ದಾರೆ.
“ಹೊಸ ವರ್ಷದ ದಿನ ನಮ್ಮ ಸಂಪಾದಕೀಯ ಹೆಚ್ಚಿನ ಓದುಗರನ್ನು ಪಡೆದಿರುವುದು ಒಳ್ಳೆಯ ಸೂಚನೆ. ಇದು ಮುಂದಿನ ದಿನಗಳು ಉಜ್ವಲವಾಗಿವೆ ಎಂಬುದನ್ನು ತೋರಿಸುತ್ತದೆ” ಎಂದು ಚಂದ್ರಿಕಾ ಪತ್ರಿಕೆಯ ಸಂಪಾದಕ ಕಮಲ್ ವರದೂರ್ ಹೇಳಿದ್ದಾರೆ.
ನ್ಯೂಸ್ ಮಿನಿಟ್‌ನ ಪತ್ರಕರ್ತೆ ಧನ್ಯಾ ರಾಜೇಂದ್ರನ್ ವಿರುದ್ಧದ ಅವಹೇಳನಕಾರಿ ವಿಷಯವನ್ನು ತೆಗೆದುಹಾಕುವಂತೆ ದೆಹಲಿ ಹೈಕೋರ್ಟ್ ಈ ಹಿಂದೆ ಕೇರಳ ಮೂಲದ ಸುದ್ದಿ ವಾಹಿನಿಗಳಾದ ದಿ ಕರ್ಮ ನ್ಯೂಸ್ ಮತ್ತು ಜನಮ್ ಟಿವಿಯೊಂದಿಗೆ ಜನ್ಮಭೂಮಿಗೂ ಆದೇಶಿಸಿತ್ತು. ಆಗ ಬಿಜೆಪಿ ಮುಖವಾಣಿ ಸುದ್ದಿಯಾಗಿತ್ತು. ಈಗ ಸಂಪಾದಕೀಯದ ಮೂಲಕ ಮತ್ತೊಮ್ಮೆ ಸುದ್ದಿಯಾಗಿದೆ.


