ಬಾಂಗ್ಲಾದೇಶಿ ಎಂದು ಸುಳ್ಳು ಆರೋಪ ಹೊರಿಸಿ ಮುಸ್ಲಿಂ ಕಾರ್ಮಿಕನ ಮೇಲೆ ಗುಂಪೊಂದು ಹಲ್ಲೆ ನಡೆಸಿರುವ ಘಟನೆ ಬಿಹಾರದ ಮಧುಬನಿ ಜಿಲ್ಲೆಯಲ್ಲಿ ನಡೆದಿದೆ.
ಬಲಿಪಶು ಖುರ್ಷಿದ್ ಆಲಂ, ಧಾರ್ಮಿಕ ಘೋಷಣೆಗಳನ್ನು ಪಠಿಸಲು ನಿರಾಕರಿಸಿದ ನಂತರ ಸುಮಾರು 50 ಜನರು ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಹೇಳಿದರು. ಹಲ್ಲೆ ಘಟನೆಯನ್ನು ನೆನಪಿಸಿಕೊಂಡ ಖುರ್ಷಿದ್, ತಾನು ಕೆಲಸ ಮಾಡುತ್ತಿದ್ದಾಗ ತೊಂದರೆ ಪ್ರಾರಂಭವಾಯಿತು. ಸ್ವಲ್ಪ ಸಮಯದ ಬಳಿಕ ನಾನು ಹತ್ತಿರದ ಅಂಗಡಿಗೆ ತೆರಳಿದೆ. ಅಲ್ಲಿ ಒರ್ವ ವ್ಯಕ್ತಿ ನನ್ನ ಬಳಿಗೆ ಬಂದು ಜೈ ಶ್ರೀ ರಾಮ್, ಜೈ ಸೀತಾ ರಾಮ್ ಮತ್ತು ಭಾರತ್ ಮಾತಾ ಕಿ ಜೈ ಎಂದು ಕೂಗುವಂತೆ ಹೇಳಿದನು. ನಾನು ಅವನಿಗೆ ಭಾರತ್ ಕಿ ಜೈ ಎಂದು ಹೇಳಬಲ್ಲೆ ಎಂದು ಹೇಳಿದೆ” ಎಂದು ಅವರು ಹೇಳಿದರು.
ಖುರ್ಷಿದ್ ಪ್ರಕಾರ, ಆ ವ್ಯಕ್ತಿ ಮಾತಿನ ವಿನಿಮಯದ ನಂತರ ಹೊರಟುಹೋದನು. ಆದರೆ, ಅವನು ವೀಡಿಯೊವನ್ನು ರೆಕಾರ್ಡ್ ಮಾಡಿ ನಂತರ ಅದನ್ನು ವೈರಲ್ ಮಾಡಿದ. ಸುಮಾರು ಒಂದು ಗಂಟೆಯ ನಂತರ, ಅವನು ಹಿಂತಿರುಗಿ ಬಂದು ನನಗೆ ಬೆದರಿಕೆ ಹಾಕಿದ. ನಾನು ಘೋಷಣೆಗಳನ್ನು ಪಠಿಸದಿದ್ದರೆ ನನ್ನನ್ನು ಕರೆದುಕೊಂಡು ಹೋಗುವುದಾಗಿ ಅವನು ಹೇಳಿದ ಎಂದು ಖುರ್ಷಿದ್ ಆರೋಪಿಸಿದರು.
ವಿಡಿಯೊ ವೈರಲ್ ಆದ ಬಳಿಕ ಕೆಲವು ಜನರು ನನ್ನನ್ನು ಗುರುತಿಸಿ, ಬಾಂಗ್ಲಾದೇಶಿ ಎಂದು ಕರೆದು ಹೊಡೆಯಲು ಪ್ರಾರಂಭಿಸಿದಾಗ ಪರಿಸ್ಥಿತಿ ಉಲ್ಬಣಗೊಂಡಿತು. “ನಾನು ಕೆಲಸಕ್ಕೆ ಹೋಗಿದ್ದಾಗ ಇಬ್ಬರು ಅಥವಾ ಮೂವರು ನನ್ನನ್ನು ನೋಡಿ ಹೊಡೆಯಲು ಪ್ರಾರಂಭಿಸಿದರು. ಅವರು ನನ್ನನ್ನು ಹಿಂದಿನಿಂದ ಹೊಡೆದು ‘ಬಾಂಗ್ಲಾದೇಶಿ’ ಎಂದು ಆರೋಪಿಸಿದರು” ಎಂದು ಅವರು ಹೇಳಿದರು.
ಗುಂಪು ನನ್ನನ್ನು ಹಳ್ಳಿಯ ರಸ್ತೆಗಳಲ್ಲಿ ಓಡಾಡುವಂತೆ ಒತ್ತಾಯಿಸಿತು. ಸುಮಾರು ಎರಡು ಮೂರು ಕಿಲೋಮೀಟರ್‌ಗಳವರೆಗೆ ನಿರಂತರವಾಗಿ ಹಲ್ಲೆ ಮಾಡಿದರು ಎಂದು ಖುರ್ಷಿದ್ ಆರೋಪಿಸಿದರು. “ಅವರು ನನ್ನನ್ನು ಮೆರವಣಿಗೆ ಮಾಡುತ್ತಾ ಹೊಡೆಯುತ್ತಲೇ ಇದ್ದರು. ದಾರಿಯಲ್ಲಿ ಕಾಳಿ ಮಂದಿರವಿದೆ. ಅಲ್ಲಿ ನನ್ನನ್ನು ಬಲಿಕೊಡುವುದಾಗಿ ಅವರು ಹೇಳಿದರು ಎಂದು ವಿವರಿಸಿದ್ದಾರೆ.
“ಅವರು ‘ಹಮ್ ತುಮ್ಕೋ ಕಾತ್ ದೇಂಗೆ’ ಎಂದು ಹೇಳುತ್ತಿದ್ದರು” ಎಂದು ಖುರ್ಷಿದ್ ಹಲ್ಲೆಯ ಸಮಯದಲ್ಲಿ ಅನುಭವಿಸಿದ ಭಯವನ್ನು ವಿವರಿಸುತ್ತಾ ಹೇಳಿದರು.


