ಇಂಗ್ಲಿಷ್ ಶಿಕ್ಷಣವನ್ನು ನಿರುತ್ಸಾಹಗೊಳಿಸುತ್ತಾ, ವಿದ್ಯಾರ್ಥಿಗಳು ಹಿಂದಿ ಮಾತ್ರ ಕಲಿಯಲು ಪ್ರೋತ್ಸಾಹಿಸುತ್ತಿದ್ದಾರೆ. ಉತ್ತರ ರಾಜ್ಯಗಳ ಈ ನೀತಿಗಳಿಂದ ಉದ್ಯೋಗ ಸಿಗದೆ ದಕ್ಷಿಣದ ರಾಜ್ಯಗಳಿಗೆ ವಲಸೆ ಬರುತ್ತಿದ್ದಾರೆ ಎಂದು ಡಿಎಂಕೆ ಸಂಸದ ದಯಾನಿಧಿ ಮಾರನ್ ಉತ್ತರ ಭಾರತದ ರಾಜ್ಯಗಳನ್ನು ತೀವ್ರವಾಗಿ ಟೀಕಿಸಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಮಾರನ್, ಉತ್ತರದ ಕೆಲವು ರಾಜ್ಯಗಳಲ್ಲಿ ವಿದ್ಯಾರ್ಥಿಗಳು ಶಿಕ್ಷಣವನ್ನು ಮುಂದುವರಿಸುವುದನ್ನು ತಡೆಯಲಾಗುತ್ತದೆ. ಹಿಂದಿಯ ಮೇಲೆ ಮಾತ್ರ ಗಮನಹರಿಸಲು ಹೇಳಲಾಗುತ್ತದೆ ಎಂದು ಆರೋಪಿಸಿದರು.
“ನಿಮ್ಮನ್ನು ಇಂಗ್ಲಿಷ್ ಕಲಿಯಬೇಡಿ ಎಂದು ಒತ್ತಾಯಿಸಲಾಗುತ್ತಿದೆ. ಆ ಮೂಲಕ ನಿಮ್ಮನ್ನು ಗುಲಾಮರನ್ನಾಗಿ ಇರಿಸಲಾಗುತ್ತದೆ” ಎಂದು ಅವರು ಹೇಳಿದರು.
ಉತ್ತರ ರಾಜ್ಯಗಳಿಂದ ದಕ್ಷಿಣಕ್ಕೆ ಜನರ ವಲಸೆಗೆ ಮಾರನ್ ಈ ಶೈಕ್ಷಣಿಕ ಪದ್ಧತಿಗಳೇ ಕಾರಣ ಎಂದು ಹೇಳಿದರು. ತಮಿಳುನಾಡು ಶಿಕ್ಷಣದ ಮೇಲೆ ಒತ್ತು ನೀಡುವುದರಿಂದ ಅದರ ಆರ್ಥಿಕ ಬೆಳವಣಿಗೆಗೆ ಕಾರಣ ಎಂದು ವಾದಿಸಿದರು.
“ಇಂದು, ಎಲ್ಲ ಉನ್ನತ ಜಾಗತಿಕ ಕಂಪನಿಗಳು ವಿದ್ಯಾವಂತ ಜನರ ಕಾರಣದಿಂದಾಗಿ ತಮಿಳುನಾಡಿಗೆ ಬರುತ್ತಿವೆ” ಎಂದು ಅವರು ಹೇಳಿದರು.
ಹಿಂದಿಗೆ ಮಾತ್ರ ಶಿಕ್ಷಣವನ್ನು ಸೀಮಿತಗೊಳಿಸುವುದು ಇತರ ಪ್ರದೇಶಗಳಲ್ಲಿ ನಿರುದ್ಯೋಗಕ್ಕೆ ಕಾರಣವಾಗುತ್ತದೆ. ಆದರೆ, ತಮಿಳುನಾಡಿನ ದ್ರಾವಿಡ ಮಾದರಿಯು ಹುಡುಗಿಯರು ಮತ್ತು ಹುಡುಗರಿಬ್ಬರಿಗೂ ಶಿಕ್ಷಣಕ್ಕೆ ಸಮಾನ ಪ್ರವೇಶವನ್ನು ಉತ್ತೇಜಿಸುತ್ತದೆ” ಎಂದರು.
ಇದು ಹೆಚ್ಚಿನ ಸಾಕ್ಷರತೆ ಮಟ್ಟ ಮತ್ತು ರಾಜ್ಯದಲ್ಲಿ ಮಹಿಳೆಯರಲ್ಲಿ ಹೆಚ್ಚಿನ ಭಾಗವಹಿಸುವಿಕೆಗೆ ಕಾರಣವಾಗಿದೆ ಎಂದು ಅವರು ಹೇಳಿದರು.
ಇಂಗ್ಲಿಷ್ ಶಿಕ್ಷಣವನ್ನು ನಿರುತ್ಸಾಹಗೊಳಿಸುವುದು ವಿದ್ಯಾರ್ಥಿಗಳ ಅವಕಾಶಗಳು ಮತ್ತು ಭವಿಷ್ಯದ ನಿರೀಕ್ಷೆಗಳನ್ನು ಮಿತಿಗೊಳಿಸುತ್ತದೆ. ಭಾಷಾ ಆಧಾರಿತ ನಿರ್ಬಂಧಗಳು ಬೆಳವಣಿಗೆ ಮತ್ತು ಉದ್ಯೋಗಕ್ಕೆ ಅಡೆತಡೆಗಳಾಗಿ ಕಾರ್ಯನಿರ್ವಹಿಸುತ್ತವೆ ಎಂದು ಹೇಳಿದರು.


