Homeಮುಖಪುಟ2025ರಲ್ಲಿ ಭಾರತದಲ್ಲಿ 1,318 ದ್ವೇಷ ಭಾಷಣ ಪ್ರಕರಣಗಳು ವರದಿಯಾಗಿದ್ದು, ಅವುಗಳಲ್ಲಿ ಶೇ. 98 ಮುಸ್ಲಿಮರನ್ನು ಗುರಿಯಾಗಿಸಿಕೊಂಡಿವೆ;...

2025ರಲ್ಲಿ ಭಾರತದಲ್ಲಿ 1,318 ದ್ವೇಷ ಭಾಷಣ ಪ್ರಕರಣಗಳು ವರದಿಯಾಗಿದ್ದು, ಅವುಗಳಲ್ಲಿ ಶೇ. 98 ಮುಸ್ಲಿಮರನ್ನು ಗುರಿಯಾಗಿಸಿಕೊಂಡಿವೆ; ವರದಿ

- Advertisement -
- Advertisement -

2025ರಲ್ಲಿ ಭಾರತವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಧಾರ್ಮಿಕ ಅಲ್ಪಸಂಖ್ಯಾತರನ್ನು, ವಿಶೇಷವಾಗಿ ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರನ್ನು ಗುರಿಯಾಗಿಸಿಕೊಂಡ ಕನಿಷ್ಠ 1,318 ದ್ವೇಷ ಭಾಷಣ ಘಟನೆಗಳಿಗೆ ಸಾಕ್ಷಿಯಾಗಿದೆ. ದಿನಕ್ಕೆ ಸರಾಸರಿ ನಾಲ್ಕು ದ್ವೇಷ ಭಾಷಣ ಘಟನೆಗಳು ಸಂಭವಿಸಿವೆ ಎಂದು ಇಂಡಿಯಾ ಹೇಟ್ ಲ್ಯಾಬ್ ವರದಿ ಹೇಳಿದೆ.

2024ಕ್ಕೆ ಹೋಲಿಸಿದರೆ ದ್ವೇಷ ಭಾಷಣ ಘಟನೆಗಳು ಶೇಕಡ 13ರಷ್ಟು ಹೆಚ್ಚಳವಾಗಿದೆ ಮತ್ತು 2023ಕ್ಕೆ ಹೋಲಿಸಿದರೆ ಶೇಕಡ 97ರಷ್ಟು ಹೆಚ್ಚಳವಾಗಿದೆ. 2023ರಲ್ಲಿ ಕೇವಲ 668 ಇಂತಹ ಘಟನೆಗಳು ದಾಖಲಾಗಿದ್ದವು ಎಂದು ವರದಿ ತಿಳಿಸಿದೆ.

ಇಂಡಿಯಾ ಹೇಟ್ ಲ್ಯಾಬ್ ತನ್ನ 100 ಪುಟಗಳ ವರದಿಯಲ್ಲಿ, ಒಟ್ಟು 1,289 ಭಾಷಣಗಳು ಅಥವಾ ಶೇ. 98ರಷ್ಟು ಭಾಷಣಗಳು ಮುಸ್ಲಿಮರನ್ನು ಹೇಗೆ ಗುರಿಯಾಗಿಸಿಕೊಂಡಿವೆ ಎಂಬುವುದನ್ನು ವಿವರಿಸಿದೆ. 1,156 ಪ್ರಕರಣಗಳಲ್ಲಿ ನೇರವಾಗಿ ಮುಸ್ಲಿಮರ ವಿರುದ್ದ ದ್ವೇಷ ಕಾರಿದ್ದರೆ, 133 ಪ್ರಕರಣಗಳಲ್ಲಿ ಕ್ರಿಶ್ಚಿಯನ್ನರ ಜೊತೆಗೆ ಮುಸ್ಲಿಮರನ್ನೂ ಗುರಿಯಾಗಿಸಿಕೊಂಡಿದ್ದಾರೆ. ಇದು 2024ರಲ್ಲಿ ದಾಖಲಾದ 1,147 ಪ್ರಕರಣಗಳಿಗಿಂತ ಸುಮಾರು ಶೇಕಡ 12ರಷ್ಟು ಹೆಚ್ಚು ಎಂದು ವರದಿ ಹೇಳಿದೆ.

162 ಪ್ರಕರಣಗಳಲ್ಲಿ, ದ್ವೇಷ ಭಾಷಣವು ಕ್ರಿಶ್ಚಿಯನ್ನರನ್ನು ಗುರಿಯಾಗಿಸಿಕೊಂಡಿದ್ದು, ಇದರ ಪ್ರಮಾಣ ಒಟ್ಟು ಪ್ರಕರಣಗಳ ಶೇಕಡ 12ರಷ್ಟಿದೆ, ಸ್ಪಷ್ಟವಾಗಿ 29 ಪ್ರಕರಣಗಳಲ್ಲಿ ಅಥವಾ 133 ಪ್ರಕರಣಗಳಲ್ಲಿ ಮುಸ್ಲಿಮರ ಜೊತೆಗೆ ಕ್ರಿಶ್ಚಿಯನ್ನರನ್ನು ಗುರಿಯಾಗಿಸಲಾಗಿದೆ.

2024ರಲ್ಲಿ ದಾಖಲಾದ 115 ಕ್ರಿಶ್ಚಿಯನ್ ವಿರೋಧಿ ದ್ವೇಷ ಭಾಷಣ ಘಟನೆಗಳಿಗೆ ಹೋಲಿಸಿದರೆ, ಈ ಬಾರಿ ಸುಮಾರು 41 ಶೇಕಡ ಹೆಚ್ಚಳವಾಗಿದ್ದು, ಆತಂಕಕಾರಿ ಬದಲಾವಣೆಯನ್ನು ಸೂಚಿಸುತ್ತದೆ.

ಇತ್ತೀಚೆಗೆ, ಯುಎಸ್ ಹೋಲೋಕಾಸ್ಟ್ ಮ್ಯೂಸಿಯಂ ಪ್ರಕಟಿಸಿದ ವಾರ್ಷಿಕ ಜಾಗತಿಕ ಅಧ್ಯಯನವು, ಸಂಶೋಧಕರು ದೇಶದೊಳಗೆ ಸಾಮೂಹಿಕ ಹತ್ಯೆಗಳು ಎಂದು ಕರೆಯುವ ಸಾಧ್ಯತೆಗಾಗಿ ಮೌಲ್ಯಮಾಪನ ಮಾಡಿದ 168 ರಾಷ್ಟ್ರಗಳಲ್ಲಿ ಭಾರತಕ್ಕೆ ನಾಲ್ಕನೇ ಸ್ಥಾನ ನೀಡಿದೆ. ಹೆಚ್ಚು ಗಮನಾರ್ಹವಾಗಿ, ಈಗಾಗಲೇ ದೊಡ್ಡ ಪ್ರಮಾಣದ ಹಿಂಸಾಚಾರವನ್ನು ಅನುಭವಿಸದ ಅಂತಹ ಅಪಾಯವನ್ನು ಎದುರಿಸುತ್ತಿರುವ ದೇಶಗಳ ಪಟ್ಟಿಯಲ್ಲಿ ಭಾರತ ಅಗ್ರಸ್ಥಾನದಲ್ಲಿದೆ.

ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಹೆಚ್ಚು ದ್ವೇಷ ಭಾಷಣಗಳು ದಾಖಲು

2025ರಲ್ಲಿ ಅತಿ ಹೆಚ್ಚು ದ್ವೇಷ ಭಾಷಣಗಳು ವರದಿಯಾದ ರಾಜ್ಯಗಳ ಪೈಕಿ ಉತ್ತರ ಪ್ರದೇಶ ಅಗ್ರಸ್ಥಾನದಲ್ಲಿದೆ, ಅಲ್ಲಿ 266 ಪ್ರಕರಣಗಳು ದಾಖಲಾಗಿವೆ. ನಂತರದ ಸ್ಥಾನದಲ್ಲಿ ಮಹಾರಾಷ್ಟ್ರವಿದ್ದು, 193 ಪ್ರಕರಣಗಳು ದಾಖಲಾಗಿವೆ. ಮಧ್ಯಪ್ರದೇಶ, 172 ಪ್ರಕರಣಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದು, ಉತ್ತರಾಖಂಡ 155 ಪ್ರಕರಣಗಳೊಂದಿಗೆ ನಾಲ್ಕನೆ ಸ್ಥಾನ ಪಡೆದಿದೆ. ಐದನೇ ಸ್ಥಾನದಲ್ಲಿರುವ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 76 ಇಂತಹ ಘಟನೆಗಳು ದಾಖಲಾಗಿವೆ.

ಹೋಳಿ ಹಬ್ಬದ ಮುನ್ನ ಉತ್ತರ ಪ್ರದೇಶದಲ್ಲಿ, ಆ ರಾಜ್ಯದ ಬಿಜೆಪಿ ನಾಯಕ ರಘುರಾಜ್ ಸಿಂಗ್ ಹೋಳಿ ಆಚರಣೆಯ ಸಮಯದಲ್ಲಿ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳಲು ಮುಸ್ಲಿಂ ಪುರುಷರು ‘ತಾರ್ಪಲ್‌ನ ಹಿಜಾಬ್ ಅನ್ನು ತಮಗಾಗಿ ತಯಾರಿಸಿಕೊಳ್ಳಬೇಕು’ ಎಂದು ಹೇಳಿದ್ದರು.

ಇಂಡಿಯಾ ಹೇಟ್ ಲ್ಯಾಬ್ ವರದಿಯ ಪ್ರಕಾರ, 23 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ವಿಶ್ಲೇಷಿಸಲಾದ 1,164 ದ್ವೇಷ ಭಾಷಣ ಘಟನೆಗಳಲ್ಲಿ ಶೇಕಡ 88ರಷ್ಟು ಘಟನೆಗಳು ಭಾರತೀಯ ಜನತಾ ಪಕ್ಷ (ಬಿಜೆಪಿ) ಆಡಳಿತವಿರುವ ರಾಜ್ಯಗಳಲ್ಲಿ ಸಂಭವಿಸಿವೆ. ಅಲ್ಲಿ ಅದು ನೇರವಾಗಿ ಅಥವಾ ಒಕ್ಕೂಟದ ಭಾಗವಾಗಿ ಅಧಿಕಾರವನ್ನು ಹೊಂದಿತ್ತು, ಜೊತೆಗೆ ಬಿಜೆಪಿ ಆಡಳಿತದ ಕೇಂದ್ರಾಡಳಿತ ಪ್ರದೇಶಗಳಲ್ಲೂ ಸಹ ಈ ಘಟನೆಗಳು ಸಂಭವಿಸಿವೆ.

2024ರಲ್ಲಿ ದಾಖಲಾದ 931 ಘಟನೆಗಳಿಗೆ ಹೋಲಿಸಿದರೆ ಇದು ಶೇಕಡ 25ರಷ್ಟು ಹೆಚ್ಚು.

ವರದಿಯ ಪ್ರಕಾರ, ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ 71 ಭಾಷಣಗಳೊಂದಿಗೆ 2025ರಲ್ಲಿ ಅತ್ಯಂತ ಹೆಚ್ಚು ದ್ವೇಷ ಭಾಷಣ ಮಾಡಿದ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ. ಅಂತಾರಾಷ್ಟ್ರೀಯ ಹಿಂದೂ ಪರಿಷತ್ ಮುಖ್ಯಸ್ಥ ಪ್ರವೀಣ್ ತೊಗಾಡಿಯಾ 46 ಮತ್ತು ಬಿಜೆಪಿ ನಾಯಕಿ ಅಶ್ವಿನಿ ಉಪಾಧ್ಯಾಯ 35 ದ್ವೇಷ ಭಾಷಣಗಳೊಂದಿಗೆ ನಂತರದ ಸ್ಥಾನಗಳಲ್ಲಿದ್ದಾರೆ.

“ಲವ್ ಜಿಹಾದ್”, “ಲ್ಯಾಂಡ್ ಜಿಹಾದ್” ಮತ್ತು “ಥೂಕ್ ಜಿಹಾದ್” ನಂತಹ ಪಿತೂರಿ ಸಿದ್ಧಾಂತಗಳನ್ನು ಮುಖ್ಯವಾಹಿನಿಗೆ ತರುವ ಮೂಲಕ ಧಾಮಿ ಸುದ್ದಿಯಾಗಿದ್ದಾರೆ. ಅವರ ಆಡಳಿತದಡಿಯಲ್ಲಿ, ಉತ್ತರಾಖಂಡವು “ಅಕ್ರಮ ಅತಿಕ್ರಮಣಗಳನ್ನು” ತೆಗೆದುಹಾಕುವ ನೆಪದಲ್ಲಿ ಮುಸ್ಲಿಂ ಒಡೆತನದ ಆಸ್ತಿಗಳ ದಂಡನಾತ್ಮಕ ಧ್ವಂಸವನ್ನು ನಿರಂತರವಾಗಿ ಕಂಡಿದೆ, ಜೊತೆಗೆ ರಾಜ್ಯ ಹಿಂಸಾಚಾರ ಮತ್ತು ತಾರತಮ್ಯದ ಆಡಳಿತದ ವ್ಯಾಪಕ ಮಾದರಿಗಳನ್ನು ಹೊಂದಿದೆ ಎಂದು ವರದಿ ಹೇಳಿದೆ.

ಮಹಾರಾಷ್ಟ್ರದ ಸಚಿವ ಮತ್ತು ಬಿಜೆಪಿ ನಾಯಕ ನಿತೇಶ್ ರಾಣೆ ಕೂಡ ಹಿಂಸಾಚಾರಕ್ಕೆ ಕರೆ ನೀಡುವ ಐದು ಪ್ರಮುಖ ವ್ಯಕ್ತಿಗಳಲ್ಲಿ ಸ್ಥಾನ ಪಡೆದಿದ್ದಾರೆ. ಒಂದು ಸಂದರ್ಭದಲ್ಲಿ, ಅವರು ಹಿಂದೂಗಳನ್ನು “ಗಬ್ಬರ್” ಎಂದು ಹೇಳಿಕೊಂಡಿದ್ದು, ಮುಸ್ಲಿಮರ ವಿರುದ್ಧ ಅವಹೇಳನಕಾರಿ ಭಾಷೆಯನ್ನು ಬಳಸಿದ್ದಾರೆ. ಇನ್ನೊಂದು ಸಂದರ್ಭದಲ್ಲಿ, ಅವರು ಮುಸ್ಲಿಮರನ್ನು “ಜಿಹಾದಿಗಳು” ಮತ್ತು “ಹಸಿರು ಹಾವುಗಳು” ಎಂದು ಕರೆದಿದ್ದು, ಇಲ್ಲಿ “ಹಿಂದೂಗಳಿಗೆ ಮೊದಲ ಪ್ರಾಶಸ್ತ್ಯವಿದೆ” ಏಕೆಂದರೆ “ಹಿಂದೂ ರಾಷ್ಟ್ರ”ದಲ್ಲಿ ಎಲ್ಲಾ ಧರ್ಮಗಳು ಸಮಾನವಾಗಿಲ್ಲ ಎಂದು ಹೇಳಿದ್ದಾರೆ ಎಂದು ವರದಿ ಉಲ್ಲೇಖಿಸಿದೆ.

ವಿರೋಧ ಪಕ್ಷದ ಆಳ್ವಿಕೆಯ ಏಳು ರಾಜ್ಯಗಳಲ್ಲಿ, 2025ರಲ್ಲಿ 154 ದ್ವೇಷ ಭಾಷಣ ಘಟನೆಗಳು ದಾಖಲಾಗಿವೆ, ಕಾಂಗ್ರೆಸ್ ಆಡಳಿತದ ಕರ್ನಾಟಕ ಕೂಡ ಟಾಪ್ 10 ಶ್ರೇಯಾಂಕದಲ್ಲಿ ಸ್ಥಾನ ಪಡೆದಿದ್ದು, ಅಂತಹ 40 ಪ್ರಕರಣಗಳು ದಾಖಲಾಗಿವೆ.

ಮತ್ತೊಂದೆಡೆ, ಪಶ್ಚಿಮ ಬಂಗಾಳದಲ್ಲಿ, ಬಿಜೆಪಿ 2026ರ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಮತದಾರರನ್ನು ಸೆಳೆಯಲು ದ್ವೇಷ ಭಾಷಣವನ್ನು ಹೆಚ್ಚಾಗಿ ಬಳಸುತ್ತಿದೆ. ಕಳೆದ ವರ್ಷ ಮಾರ್ಚ್‌ನಲ್ಲಿ, ರಾಜ್ಯದ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ, ರಾಜ್ಯದಲ್ಲಿ ಪಕ್ಷವು “ಮುಂದಿನ ಸರ್ಕಾರವನ್ನು ರಚಿಸಿದ ನಂತರ” “ಭೌತಿಕವಾಗಿ ಮುಸ್ಲಿಂ ಶಾಸಕರನ್ನು ವಿಧಾನಸಭೆಯಿಂದ ಹೊರಹಾಕುತ್ತೇನೆ” ಎಂದು ಹೇಳಿದ್ದರು.

ಆದಾಗ್ಯೂ, ಒಟ್ಟಾರೆಯಾಗಿ, 2024ರಲ್ಲಿ ವಿರೋಧ ಪಕ್ಷಗಳ ರಾಜ್ಯಗಳಲ್ಲಿ ದಾಖಲಾಗಿರುವ 234 ಇಂತಹ ಘಟನೆಗಳಿಗೆ ಹೋಲಿಸಿದರೆ, ಇದು ಶೇಕಡ 34ರಷ್ಟು ಇಳಿಕೆಯಾಗಿದೆ.

656 ದ್ವೇಷ ಭಾಷಣಗಳು (ಸುಮಾರು 50 ಶೇಕಡ) “ಲವ್ ಜಿಹಾದ್,” “ಲ್ಯಾಂಡ್ ಜಿಹಾದ್,” “ಜನಸಂಖ್ಯಾ ಜಿಹಾದ್,” “ಉಗುಳುವ ಜಿಹಾದ್”, “ಶಿಕ್ಷಣದ ಜಿಹಾದ್,” “ಡ್ರಗ್ ಜಿಹಾದ್” ಮತ್ತು “ವೋಟ್ ಜಿಹಾದ್” ಸೇರಿದಂತೆ ಪಿತೂರಿ ಸಿದ್ಧಾಂತಗಳನ್ನು ಉಲ್ಲೇಖಿಸಿವೆ. ಇದು ಹಿಂದಿನ ವರ್ಷಕ್ಕಿಂತ ಶೇಕಡ 13ರಷ್ಟು ಹೆಚ್ಚಳವಾಗಿದೆ.

ಒಟ್ಟು 308 ಭಾಷಣಗಳಲ್ಲಿ (ಶೇಕಡ 23) ಹಿಂಸಾಚಾರಕ್ಕೆ ಸ್ಪಷ್ಟ ಕರೆಗಳನ್ನು ನೀಡಿದ್ದರೆ, 136 ಭಾಷಣಗಳಲ್ಲಿ ಶಸ್ತ್ರಾಸ್ತ್ರಗಳಿಗೆ ನೇರ ಕರೆಗಳನ್ನು ನೀಡಲಾಗಿದೆ. ಹಿಂಸಾಚಾರಕ್ಕೆ ಕರೆ ನೀಡಿದ ಪ್ರಕರಣಗಳು ಶೇಕಡ 19ರಷ್ಟು ಹೆಚ್ಚಾಗಿದೆ. ಸಾಮಾಜಿಕ ಅಥವಾ ಆರ್ಥಿಕ ಬಹಿಷ್ಕಾರದ ಕರೆಗಳು 2024 ರಿಂದ ಶೇಕಡ 8ರಷ್ಟು ಹೆಚ್ಚಾಗಿದೆ.

ಆತಂಕಕಾರಿ ಬೆಳವಣಿಗೆ

2024ರಲ್ಲಿ ದ್ವೇಷ ಭಾಷಣಗಳು ಭಾರೀ ಏರಿಕೆ ಕಂಡುಬಂದ ನಂತರ, 2025ರಲ್ಲಿ ದ್ವೇಷ ಭಾಷಣ ಘಟನೆಗಳ ಒಟ್ಟು ಪ್ರಮಾಣವು ಮತ್ತಷ್ಟು ಏರಿಕೆಯಾಗಿದೆ. ಇದು ವರ್ಗೀಯ/ಧಾರ್ಮಿಕ ದ್ವೇಷದ ಮಾತುಗಳು ಭಾರತದ ರಾಜಕೀಯ ಮತ್ತು ಸಾಮಾಜಿಕ ಜೀವನದಲ್ಲಿ ಸಾಮಾನ್ಯವಾದ, ದೈನಂದಿನ ವಿಷಯವಾಗಿ ಆಳವಾಗಿ ಬೇರೂರಿಕೊಂಡಿವೆ ಎಂಬುವುದನ್ನು ಸೂಚಿಸುತ್ತದೆ ಎಂದು ಇಂಡಿಯಾ ಹೇಟ್‌ ಲ್ಯಾಬ್ ವರದಿ ಹೇಳಿದೆ.

ಹಿಂದೆ ದ್ವೇಷ ಭಾಷಣವು ಚುನಾವಣೆಯ ಸಮಯದಲ್ಲಿ ಮಾತ್ರ ಜನರನ್ನು ಒಗ್ಗೂಡಿಸಲು ಬಳಸುತ್ತಿದ್ದರು. ಆದರೆ ಈಗ ಅದು ಸದಾ-ಬಳಕೆಯ ರಾಜಕೀಯ ಆಯುಧವಾಗಿ ಮಾರ್ಪಟ್ಟಿದೆ. ಇದು ರಾಜಕಾರಣದಲ್ಲಿ ಮಾತ್ರವಲ್ಲ, ದೈನಂದಿನ ಆಡಳಿತ ಮತ್ತು ಸಮಾಜದಲ್ಲಿ ಸಹ ಸಾಮಾನ್ಯವಾಗಿ ಮುಂದುವರೆಯುತ್ತಿದೆ ಎಂದು ವರದಿಯು ಎಚ್ಚರಿಕೆ ನೀಡುತ್ತದೆ. ಇದರಿಂದ ಹಿಂದೂ ತೀವ್ರವಾದಿ ಗುಂಪುಗಳು ಜನರನ್ನು ನಿರಂತರವಾಗಿ ಉತ್ತೇಜಿಸುತ್ತಾ, ಸಂಘಟನೆ ಮಾಡುತ್ತಿವೆ ಎಂದಿದೆ.

ವಿಶ್ವ ಹಿಂದೂ ಪರಿಷತ್ (ವಿಹೆಚ್‌ಪಿ) ಮತ್ತು ಅದರ ಯುವ ಘಟಕ ಬಜರಂಗದಳ, ಎರಡೂ ಹಿಂದೂ ರಾಷ್ಟ್ರವಾದಿ ಸಂಘಟನೆಗಳು 2023 ಮತ್ತು 2024ರಲ್ಲಿ ದ್ವೇಷ ಭಾಷಣಗಳನ್ನು ಸಂಘಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದವು. ಈಗ 2025ರಲ್ಲಿ ಇವು ಅತ್ಯಧಿಕ ಸಂಖ್ಯೆಯ ದ್ವೇಷ ಭಾಷಣ ಘಟನೆಗಳನ್ನು ನೇರವಾಗಿ ಪ್ರಾಯೋಜಿಸಿವೆ ಅಥವಾ ಸೌಲಭ್ಯ ಮಾಡಿಕೊಟ್ಟಿವೆ. ಒಟ್ಟು 289 ಜಾಗಗಳಲ್ಲಿ/ಸಭೆಗಳಲ್ಲಿ ಇವುಗಳ ಪಾಲು ಇತ್ತು. ಇದು ದಾಖಲಾದ ಒಟ್ಟು ಘಟನೆಗಳ ಶೇಕಡ 22 ಆಗುತ್ತದೆ.

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ದೀರ್ಘಕಾಲದಿಂದಲೂ ವಿಹೆಚ್‌ಪಿ, ಬಜರಂಗದಳ ಮತ್ತು ಸಂಘ ಪರಿವಾರದ ಇತರ ಸಂಬಂಧಿತ ಸಂಘಟನೆಗಳನ್ನು ಅವಲಂಬಿಸಿಕೊಂಡಿವೆ. ಈ ಸಂಘಟನೆಗಳು ಅಲ್ಪಸಂಖ್ಯಾತರ ವಿರುದ್ಧದ ದ್ವೇಷ ಮತ್ತು ಹಿಂಸೆಯನ್ನು ಮುಂಚೂಣಿಯಲ್ಲಿ ಸಂಘಟಿಸುವವುಗಳಾಗಿ ಕಾರ್ಯನಿರ್ವಹಿಸಿವೆ. ಅಂದರೆ, ಇವುಗಳು ತಳ ಮಟ್ಟದಲ್ಲಿ ಜನರನ್ನು ಒಗ್ಗೂಡಿಸಿ, ದ್ವೇಷವನ್ನು ಹರಡಿ, ಕ್ರಿಯೆಗೆ ತರುವ ಮುಖ್ಯ ಪಾತ್ರವಹಿಸಿವೆ. ಇವುಗಳು ಆಲೋಚನಾತ್ಮಕ/ತಾತ್ವಿಕ ಕಥನಗಳನ್ನು (ಹಿಂದೂ ರಾಷ್ಟ್ರವಾದಿ ವಿಚಾರಧಾರೆಗಳು, ಹಿಂದೂಗಳು ಅಪಾಯದಲ್ಲಿದ್ದಾರೆ ಎಂಬ ಕಥೆಗಳು ಇತ್ಯಾದಿ) ತಳ ಮಟ್ಟದ ವಾಸ್ತವ ಕ್ರಿಯೆಗಳಾಗಿ ಪರಿವರ್ತಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿವೆ ಎಂದು ವರದಿ ಹೇಳುತ್ತದೆ.

ವರದಿಯ ಪ್ರಕಾರ, ಏಪ್ರಿಲ್‌ನಲ್ಲಿ ಅತಿ ಹೆಚ್ಚು ಮಾಸಿಕ ಏರಿಕೆ ದಾಖಲಾಗಿದ್ದು, ರಾಮನವಮಿ ಮೆರವಣಿಗೆಗಳೊಂದಿಗೆ 158 ದ್ವೇಷ ಭಾಷಣ ಘಟನೆಗಳು ನಡೆದಿವೆ. ಕಳೆದ ಕೆಲವು ವರ್ಷಗಳಿಂದ, ರಾಮನವಮಿಯ ಸುತ್ತ ಕೋಮು ಉದ್ವಿಗ್ನತೆಯ ಪ್ರವೃತ್ತಿ ಹೆಚ್ಚುತ್ತಿದೆ, ಹಿಂದೂ ಮೆರವಣಿಗೆಗಳನ್ನು ಹೆಚ್ಚಾಗಿ ಮುಸ್ಲಿಂ ಪ್ರದೇಶಗಳ ಮೂಲಕ ಉದ್ದೇಶಪೂರ್ವಕವಾಗಿ ನಡೆಸಲಾಗುತ್ತಿದೆ.

ಇದರ ಜೊತೆಗೆ, ಏಪ್ರಿಲ್ 2025ರಲ್ಲಿ, ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತಿಕ್ರಿಯೆಯಾಗಿ ದ್ವೇಷ ರ‍್ಯಾಲಿಗಳನ್ನು ಆಯೋಜಿಸಲಾಯಿತು.

ಪಹಲ್ಗಾಮ್ ದಾಳಿ ಮತ್ತು ಭಾರತ- ಪಾಕಿಸ್ತಾನ ನಡುವಿನ ಸಂಘರ್ಷದ ನಂತರ ಏಪ್ರಿಲ್ 22 ರಿಂದ ಮೇ 7 ರವರೆಗಿನ 16 ದಿನಗಳ ಅವಧಿಯಲ್ಲಿ, 98 ವೈಯಕ್ತಿಕ ದ್ವೇಷ ಭಾಷಣ ಘಟನೆಗಳು ದಾಖಲಾಗಿವೆ. ಇದು ತ್ವರಿತ ಮತ್ತು ರಾಷ್ಟ್ರವ್ಯಾಪಿ ಮುಸ್ಲಿಂ ವಿರೋಧಿ ಕ್ರೋಢೀಕರಣವನ್ನು ಸೂಚಿಸುತ್ತದೆ ಎಂದು ವರದಿ ಉಲ್ಲೇಖಿಸಿದೆ.

ವರ್ಷವಿಡೀ, ಅಲ್ಪಸಂಖ್ಯಾತರನ್ನು “ಗೆದ್ದಲುಗಳು,” “ಪರಾವಲಂಬಿಗಳು,” “ಕೀಟಗಳು,” “ಹಂದಿಗಳು,” “ಹುಚ್ಚು ನಾಯಿಗಳು,” “ಸ್ನೇಕ್ಲಿಂಗ್‌ಗಳು,” “ಹಸಿರು ಹಾವುಗಳು,” ಮತ್ತು “ರಕ್ತಪಿಪಾಸು ಸೋಮಾರಿಗಳು” ಮುಂತಾದ ಪದಗಳನ್ನು ಬಳಸಿ ವಿವರಿಸಲಾಗಿದೆ . ಅವುಗಳಲ್ಲಿ ಹೆಚ್ಚಿನವು ಮುಸ್ಲಿಮರ ವಿರುದ್ಧ ಬಳಸಲ್ಪಟ್ಟಿವೆ.

ಇಂಡಿಯಾ ಹೇಟ್ ಲ್ಯಾಬ್ ವರದಿಯು “ಬಾಂಗ್ಲಾದೇಶದ ನುಸುಳುಕೋರರು” ಎಂಬ ಪದವನ್ನು ಪ್ರಚೋದಿಸುವ 192 ಭಾಷಣಗಳನ್ನು ದಾಖಲಿಸಿದೆ. ಇದರ ಜೊತೆಗೆ, 69 ದ್ವೇಷ ಭಾಷಣ ಘಟನೆಗಳು ರೋಹಿಂಗ್ಯಾ ನಿರಾಶ್ರಿತರನ್ನು ಗುರಿಯಾಗಿಸಿಕೊಂಡಿವೆ. ಈ ನಿದರ್ಶನಗಳು ದೆಹಲಿ ಮತ್ತು ಬಿಹಾರದಲ್ಲಿ ಹಾಗೂ ಅಸ್ಸಾಂ ಮತ್ತು ಪಶ್ಚಿಮ ಬಂಗಾಳದಲ್ಲಿ ಹೆಚ್ಚು ಕಂಡುಬಂದಿವೆ.

ಒಟ್ಟು 120 ದ್ವೇಷ ಭಾಷಣಗಳು ಅಲ್ಪಸಂಖ್ಯಾತ ಸಮುದಾಯಗಳು, ಮುಖ್ಯವಾಗಿ ಮುಸ್ಲಿಮರನ್ನು ಸಾಮಾಜಿಕ ಅಥವಾ ಆರ್ಥಿಕವಾಗಿ ಬಹಿಷ್ಕರಿಸುವಂತೆ ಸ್ಪಷ್ಟವಾಗಿ ಕರೆ ನೀಡಿದ್ದರೆ, 276 ಭಾಷಣಗಳು ಮಸೀದಿಗಳು, ದೇವಾಲಯಗಳು ಮತ್ತು ಚರ್ಚ್‌ಗಳು ಸೇರಿದಂತೆ ಪೂಜಾ ಸ್ಥಳಗಳನ್ನು ತೆಗೆದುಹಾಕುವುದು ಅಥವಾ ನಾಶಪಡಿಸುವಂತೆ ಕರೆ ನೀಡಿವೆ.

ವರದಿಯ ಪ್ರಕಾರ, 2025ರಲ್ಲಿ ಉತ್ತರ ಪ್ರದೇಶದ ಜ್ಞಾನವಾಪಿ ಮಸೀದಿ ಮತ್ತು ಶಾಹಿ ಈದ್ಗಾ ಮಸೀದಿಗಳು ಹೆಚ್ಚಾಗಿ ದಾಳಿಗೆ ಗುರಿಯಾದ ಸ್ಥಳಗಳಾಗಿವೆ.

ಕ್ರಿಸ್‌ಮಸ್ ಅವಧಿಯಲ್ಲಿ ಹಿಂಸಾಚಾರ ಮತ್ತಷ್ಟು ಹೆಚ್ಚಾಯಿತು, ಕ್ರಿಶ್ಚಿಯನ್ನರ ಮೇಲಿನ ವ್ಯಾಪಕ ಕಿರುಕುಳ ಮತ್ತು ಪ್ರಾರ್ಥನೆಗೆ ಅಡ್ಡಿಯು ಮುಸ್ಲಿಮರನ್ನು ಐತಿಹಾಸಿಕವಾಗಿ ಗುರಿಯಾಗಿಸಿಕೊಂಡಿರುವ ಅದೇ ಅಪಾಯಕಾರಿ ದ್ವೇಷ-ಭಾಷಣ ಪರಿಸರ ವ್ಯವಸ್ಥೆಯೊಳಗೆ ಹೆಚ್ಚುತ್ತಿರುವ ಕ್ರಿಶ್ಚಿಯನ್ ವಿರೋಧಿ ಭಾವನೆಯನ್ನು ತೋರಿಸುತ್ತದೆ.

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಹೆಚ್ಚುತ್ತಿರುವ ಕೋಮು ವಿಭಜನೆ ಅಥವಾ ದ್ವೇಷ ಭಾಷಣಗಳ ಉಲ್ಬಣದ ವಿಷಯವನ್ನು ಮತ್ತೊಮ್ಮೆ ಹೆಚ್ಚಾಗಿ ತಪ್ಪಿಸಿಕೊಂಡಿದೆ.

ಲೋಕಸಭೆಯಲ್ಲಿ ರಾಜಕಾರಣಿಗಳಿಂದ ದ್ವೇಷ ಭಾಷಣ ಹೆಚ್ಚುತ್ತಿರುವ ಬಗ್ಗೆ ಮತ್ತು ಹೊಸ ಕಾನೂನುಗಳ ಅಗತ್ಯತೆಯ ಬಗ್ಗೆ ಕೇಳಲಾದ ಪ್ರಶ್ನೆಗೆ, ಕಳೆದ ವರ್ಷ ಜುಲೈನಲ್ಲಿ ಕೇಂದ್ರ ಸಚಿವ ಕಿರಣ್ ರಿಜಿಜು ಯಾವುದೇ ಡೇಟಾವನ್ನು ನೀಡಲು ನಿರಾಕರಿಸಿದರು, ‘ಸಾರ್ವಜನಿಕ ಸುವ್ಯವಸ್ಥೆ’ ಮತ್ತು ‘ಪೊಲೀಸ್’ ರಾಜ್ಯ ವಿಷಯಗಳು ಎಂದು ಉಲ್ಲೇಖಿಸಿ ರಾಜ್ಯ ಸರ್ಕಾರಗಳಿಗೆ ಎಲ್ಲಾ ಹೊಣೆಗಾರಿಕೆಯನ್ನು ಕಾರ್ಯತಂತ್ರವಾಗಿ ಮುಂದೂಡಿದರು.

ಈ ಹಿಂದೆ ನ್ಯಾಯಾಂಗ ಕ್ರಿಯಾಶೀಲತೆಯನ್ನು ಪ್ರದರ್ಶಿಸಿದ್ದ ಸುಪ್ರೀಂ ಕೋರ್ಟ್, 2025 ರಲ್ಲಿ ಗಮನಾರ್ಹ ಸಂಯಮವನ್ನು ಪ್ರದರ್ಶಿಸಿತು. ನವೆಂಬರ್‌ನಲ್ಲಿ, ಉನ್ನತ ನ್ಯಾಯಾಲಯದ ಪೀಠವು ದೇಶದಾದ್ಯಂತ “ದ್ವೇಷ ಭಾಷಣದ ಪ್ರತಿಯೊಂದು ಘಟನೆಯನ್ನು ಮೇಲ್ವಿಚಾರಣೆ ಮಾಡಲು ಒಲವು ಹೊಂದಿಲ್ಲ” ಎಂದು ಹೇಳಿ, ಅರ್ಜಿದಾರರಿಗೆ ಹೈಕೋರ್ಟ್‌ಗಳು ಮತ್ತು ಸ್ಥಳೀಯ ಪೊಲೀಸರ ಮೊರೆ ಹೋಗುವಂತೆ ನಿರ್ದೇಶಿಸಿತ್ತು.

ಮೇ ತಿಂಗಳಲ್ಲಿ ಮತ್ತೊಂದು ಸುಪ್ರೀಂ ಕೋರ್ಟ್ ಪೀಠ ಕೆಲವು ಕಾಮಿಡಿಯನ್‌ಗಳಿಗೆ ಸೂಚನೆಗಳನ್ನು ನೀಡುತ್ತಾ, ಅವರು ಸೂಕ್ಷ್ಮತೆಯ ಕೊರತೆಯಿಂದ ಜೋಕ್‌ಗಳನ್ನು ಮಾಡಿದ್ದಾರೆ ಎಂದು ಹೇಳಿತ್ತು. ಅದೇ ಸಂದರ್ಭದಲ್ಲಿ ಕೋರ್ಟ್ ಸ್ಪಷ್ಟವಾಗಿ ‘ದ್ವೇಷ ಭಾಷಣವನ್ನು ಮೂಲಭೂತ ಹಕ್ಕು’ ಎಂದು ತಪ್ಪಾಗಿ ಗ್ರಹಿಸಬಾರದು ಎಂದಿತ್ತು.

ಭರವಸೆಯ ಚಿಗುರು

ಸ್ವಾಗತಾರ್ಹ ಬದಲಾವಣೆಯಲ್ಲಿ, ಕರ್ನಾಟಕ ಸರ್ಕಾರವು ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳು (ತಡೆಗಟ್ಟುವಿಕೆ) ಮಸೂದೆ, 2025 ಅನ್ನು ಅಂಗೀಕರಿಸಿದೆ. ಇದು ದ್ವೇಷ ಭಾಷಣವನ್ನು ವ್ಯವಸ್ಥಿತವಾಗಿ ವ್ಯಾಖ್ಯಾನಿಸುವ ಮತ್ತು ಶಿಕ್ಷಿಸುವ ಭಾರತದ ಮೊದಲ ಸಮಗ್ರ ಸರ್ಕಾರದ ಮಟ್ಟದ ಪ್ರಯತ್ನವಾಗಿದೆ.

Courtesy : thewire.in

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

1962ರ ಯುದ್ಧದಲ್ಲಿ ಸೈನ್ಯಕ್ಕೆ 600 ಕೆಜಿ ಚಿನ್ನ ದಾನ ಮಾಡಿದ್ದ ದರ್ಭಂಗಾದ ಕೊನೆಯ ಮಹಾರಾಣಿ ಕಾಮಸುಂದರಿ ದೇವಿ ನಿಧನ

ದರ್ಭಾಂಗ ರಾಜಮನೆತನದ ಕೊನೆಯ ಮಹಾರಾಣಿ ಕಾಮಸುಂದರಿ ದೇವಿ 2025 ಜನವರಿ 12 ರಂದು ನಿಧನರಾಗಿದ್ದಾರೆ.  ಅನಾರೋಗ್ಯದಿಂದ ಬಳಲುತ್ತಿದ್ದ ಮಹಾರಾಣಿ ಕಾಮಸುಂದರಿ ಅವರು, ಬಿಹಾರದ ದರ್ಭಾಂಗದಲ್ಲಿರುವ ತಮ್ಮ ಐತಿಹಾಸಿಕ ನಿವಾಸ 'ಕಲ್ಯಾಣಿ'ಯಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರ ನಿಧನದೊಂದಿಗೆ...

ವಿಧಾನಸಭೆ ಸೇರಿದಂತೆ ಎಲ್ಲಾ ಚುನಾವಣೆಗಳಲ್ಲಿ ಬಿಎಸ್‌ಪಿ ಏಕಾಂಗಿ ಸ್ಪರ್ಧೆ: ಮಾಯಾವತಿ

2027 ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ಸೇರಿದಂತೆ ದೇಶಾದ್ಯಂತ ಎಲ್ಲಾ ಚುನಾವಣೆಗಳಲ್ಲಿ ತಮ್ಮ ಪಕ್ಷವು ಏಕಾಂಗಿಯಾಗಿ ಸ್ಪರ್ಧಿಸಲಿದೆ. ರಾಜ್ಯದಲ್ಲಿ ಪೂರ್ಣ ಬಹುಮತದೊಂದಿಗೆ ಸರ್ಕಾರ ರಚಿಸಲಿದೆ ಎಂದು ಬಹುಜನ ಸಮಾಜ ಪಕ್ಷ (ಬಿಎಸ್‌ಪಿ)...

ಐ-ಪ್ಯಾಕ್ ದಾಳಿ | ಇಡಿ ಅಧಿಕಾರಿಗಳ ವಿರುದ್ಧದ ಎಫ್‌ಐಆರ್‌ಗೆ ಸುಪ್ರೀಂ ಕೋರ್ಟ್ ತಡೆ : ಮಮತಾ ಬ್ಯಾನರ್ಜಿ, ಪ.ಬಂಗಾಳ ಸರ್ಕಾರಕ್ಕೆ ನೋಟಿಸ್

ಐ-ಪ್ಯಾಕ್ ಕಚೇರಿ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ ಕಳ್ಳತನ ಮಾಡಿದ್ದಾರೆ ಎಂದು ಆರೋಪಿಸಿ ಇಡಿ ಅಧಿಕಾರಿಗಳ ವಿರುದ್ದ ಕೋಲ್ಕತ್ತಾ ಪೊಲೀಸರು ದಾಖಲಿಸಿದ್ದ ಎಫ್‌ಐಆರ್‌ಗೆ ಸುಪ್ರೀಂ ಕೋರ್ಟ್ ಗುರುವಾರ (ಜ.15) ತಡೆ ನೀಡಿದೆ. ಇದರಿಂದ...

ಕಾಶ್ಮೀರ: ಭಯೋತ್ಪಾದನಾ ಪ್ರಕರಣದಲ್ಲಿ ಆಸಿಯಾ ಅಂದ್ರಾಬಿ ಮತ್ತು ಅವರ ಇಬ್ಬರು ಸಹಚರರು ದೋಷಿಗಳು ಎಂದು ತೀರ್ಪು ನೀಡಿದ ದೆಹಲಿ ನ್ಯಾಯಾಲಯ 

ದೆಹಲಿಯ ಎನ್ಐಎ ನ್ಯಾಯಾಲಯದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಚಂದರ್ ಜಿತ್ ಸಿಂಗ್ ಬುಧವಾರ ನಿಷೇಧಿತ ಕಾಶ್ಮೀರಿ ಸಂಘಟನೆ ದುಖ್ತರನ್-ಎ-ಮಿಲ್ಲತ್ (ಡಿಇಎಂ) ಮುಖ್ಯಸ್ಥೆ ಆಸಿಯಾ ಅಂದ್ರಾಬಿ ಮತ್ತು ಆಕೆಯ ಇಬ್ಬರು ಸಹಚರರಾದ ಸೋಫಿ ಫೆಹ್ಮಿದಾ...

ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಅಕ್ರಮಗಳು ನಡೆದಿವೆ: ಉದ್ಧವ್ ಠಾಕ್ರೆ ಆರೋಪ

ಮಹಾರಾಷ್ಟ್ರದ ನಾಗರಿಕ ಚುನಾವಣೆಯಲ್ಲಿ ಅಕ್ರಮಗಳು ನಡೆದಿವೆ ಎಂದು ಶಿವಸೇನೆ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಗುರುವಾರ ಆರೋಪಿಸಿದ್ದು, ಇದು ಪ್ರಜಾಪ್ರಭುತ್ವವನ್ನು ಕೊಲೆ ಮಾಡುವ ಪ್ರಯತ್ನ ಎಂದು ಹೇಳಿದ್ದಾರೆ. ನಗರಸಭೆ ಚುನಾವಣೆಯಲ್ಲಿ ಅಕ್ರಮಗಳು ನಡೆದಿವೆ ಎಂಬ...

ಪಶ್ಚಿಮ ಬಂಗಾಳ ಎಸ್‌ಐಆರ್ ಪ್ರತಿಭಟನೆ; ಉತ್ತರ ದಿನಾಜ್‌ಪುರದ ಸರ್ಕಾರಿ ಕಚೇರಿ ಧ್ವಂಸ

ಪಶ್ಚಿಮ ಬಂಗಾಳದ ಉತ್ತರ ದಿನಾಜ್‌ಪುರ ಜಿಲ್ಲೆಯಲ್ಲಿ ಗುರುವಾರ ನಡೆದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ವಿರುದ್ಧದ ಪ್ರತಿಭಟನೆಯ ಸಂದರ್ಭದಲ್ಲಿ ಸರ್ಕಾರಿ ಕಚೇರಿಯನ್ನು ಧ್ವಂಸಗೊಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮುಂಜಾನೆಯಿಂದಲೇ, ಚಾಕುಲಿಯಾದಲ್ಲಿನ ಕಹಾಟಾ...

ಕೇರಳದ ಭಾರತೀಯ ಕ್ರೀಡಾ ಪ್ರಾಧಿಕಾರದ ಹಾಸ್ಟೆಲ್‌ನಲ್ಲಿ ಇಬ್ಬರು ಬಾಲಕಿಯರ ಶವಗಳು ಪತ್ತೆ

ಕೇರಳದ ಕೊಲ್ಲಂನಲ್ಲಿರುವ ಭಾರತೀಯ ಕ್ರೀಡಾ ಪ್ರಾಧಿಕಾರ (SAI) ಹಾಸ್ಟೆಲ್‌ನಲ್ಲಿ ತಂಗಿದ್ದ ಇಬ್ಬರು ಹುಡುಗಿಯರು ಗುರುವಾರ ಬೆಳಿಗ್ಗೆ ತಮ್ಮ ಕೋಣೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತರನ್ನು ಕೋಝಿಕ್ಕೋಡ್ ಜಿಲ್ಲೆಯ ಸಾಂಡ್ರಾ (17) ಮತ್ತು...

ಪಿಎಚ್‌ಡಿ ಪ್ರವೇಶ ನಿರಾಕರಿಸಿದ ಜಾಮಿಯಾ ಯೂನಿವರ್ಸಿಟಿ; ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ ವಿದ್ಯಾರ್ಥಿ

2025–26 ಶೈಕ್ಷಣಿಕ ಅವಧಿಗೆ ಅಧಿಕೃತ ಪ್ರವೇಶ ಪ್ರಕ್ರಿಯೆಯ ಮೂಲಕ ಆಯ್ಕೆಯಾದ ತನ್ನನ್ನು ಜಾಮಿಯಾ ಮಿಲಿಯಾ ಇಸ್ಲಾಮಿಯಾ (ಜೆಎಂಐ) ವಿನಾಕಾರಣ ಪ್ರವೇಶ ನಿರಾಕರಿಸಿದೆ ಎಂದು ಆರೋಪಿಸಿ ವಿದ್ಯಾರ್ಥಿಯೊಬ್ಬರು ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಯುಜಿಸಿ-ನೆಟ್ ವಿನಾಯಿತಿ...

ಮದ್ರಸಾ ನಿರ್ಮಾಣದ ವದಂತಿ : ಖಾಸಗಿ ಶಾಲಾ ಕಟ್ಟಡ ಕೆಡವಿದ ಅಧಿಕಾರಿಗಳು

ಅನಧಿಕೃತವಾಗಿ ಮದ್ರಸಾ ನಿರ್ಮಿಸಲಾಗುತ್ತಿದೆ ಎಂಬ ವದಂತಿ ಹರಡಿದ ಹಿನ್ನೆಲೆ ನಿರ್ಮಾಣ ಹಂತದಲ್ಲಿದ್ದ ಶಾಲಾ ಕಟ್ಟಡವನ್ನು ಅಧಿಕಾರಿಗಳು ಬುಲ್ಡೋಝರ್ ಬಳಸಿ ಕೆಡವಿದ ಘಟನೆ ಮಧ್ಯಪ್ರದೇಶದ ಬೇತುಲ್ ಜಿಲ್ಲೆಯಲ್ಲಿ ನಡೆದಿದೆ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್...

ಭೋಪಾಲ್‌| ಪುರಸಭೆಯ ಕಸಾಯಿಖಾನೆಯಲ್ಲಿ ಗೋಮಾಂಸ ಪತ್ತೆ; ಕಾಂಗ್ರೆಸ್‌-ಬಿಜೆಪಿ ಪ್ರತಿಭಟನೆ

ಪುರಸಭೆಯ ಕಸಾಯಿಖಾನೆಯಲ್ಲಿ ಗೋಹತ್ಯೆ ನಡೆದಿದೆ ಎಂಬುದನ್ನು ಅಧಿಕಾರಿಗಳು ಮತ್ತೆಹಚ್ಚಿದ ನಂತರ ದೊಡ್ಡ ವಿವಾದ ಭುಗಿಲೆದ್ದಿರುವ ಘಟನೆ ಮಧ್ಯಪ್ರದೇಶದ ಭೋಪಾಲ್‌ನಲ್ಲಿ ನಡೆದಿದೆ. ಹಿಂದೂ ಬಲಪಂಥೀಯ ಸಂಘಟನೆಗಳು ಮತ್ತು ವಿರೋಧ ಪಕ್ಷದ ಕಾಂಗ್ರೆಸ್ ಕಾರ್ಯಕರ್ತರಿಂದ...