ಮಧುರೈ: ತಮಿಳುನಾಡಿನ ಸುಮಾರು 170 ಎಸ್ಸಿ/ಎಸ್ಟಿ ಶಾಲೆ ಮತ್ತು ಹಾಸ್ಟೆಲ್ ಕಟ್ಟಡಗಳ ದುರಸ್ತಿ ಮತ್ತು ನಿರ್ಮಾಣ ಕಾರ್ಯಗಳಿಗೆ ತಮಿಳುನಾಡು ಆದಿ ದ್ರಾವಿಡರ್ ವಸತಿ ಅಭಿವೃದ್ಧಿ ನಿಗಮ (ಟಿಎಎಚ್ಡಿಸಿಒ) 50 ಕೋಟಿ ರೂ.ಗಳನ್ನು ಖರ್ಚು ಮಾಡುವುದನ್ನು ತಡೆಯುವಂತೆ ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮದ್ರಾಸ್ ಹೈಕೋರ್ಟ್ನ ಮಧುರೈ ಪೀಠ ಇತ್ತೀಚೆಗೆ ವಜಾಗೊಳಿಸಿದೆ.
ಅರ್ಜಿದಾರರಾದ ಸಿ. ಸೆಲ್ವಕುಮಾರ್ ತಮ್ಮ ಅರ್ಜಿಯಲ್ಲಿ, ಎಸ್ಸಿ/ಎಸ್ಟಿ ವಿದ್ಯಾರ್ಥಿಗಳಿಗೆ ಶಾಲಾ ಮತ್ತು ಹಾಸ್ಟೆಲ್ ಕಟ್ಟಡಗಳ ನಿರ್ಮಾಣಕ್ಕಾಗಿ ಕೇಂದ್ರ ಸರ್ಕಾರದ ಯೋಜನೆ ಇದೆ. ಆದ್ದರಿಂದ, ರಾಜ್ಯ ಸರ್ಕಾರವು ಅದೇ ಉದ್ದೇಶಕ್ಕಾಗಿ 50 ಕೋಟಿ ರೂ.ಗಳನ್ನು ನಿಗದಿಪಡಿಸುವುದು ಅನಗತ್ಯವಾಗಿದ್ದು, ಇದು ನಿಧಿಯ ದುರುಪಯೋಗಕ್ಕೆ ಕಾರಣವಾಗುತ್ತದೆ ಎಂದು ಅರ್ಜಿಯಲ್ಲಿ ತಿಳಿಸಿದ್ದರು. ಇದನ್ನು ಗಮನಿಸಿದ ನ್ಯಾಮೂರ್ತಿಗಳಾದ ಜಿ. ಜಯಚಂದ್ರನ್ ಮತ್ತು ಕೆ.ಕೆ ರಾಮಕೃಷ್ಣನ್ ಅವರ ಪೀಠವು ಅರ್ಜಿದಾರರ ವಾದಗಳನ್ನು ತಿರಸ್ಕರಿಸಿತು.
ಸರ್ಕಾರ ಗುರುತಿಸಿರುವ ಮೇಲಿನ 170 ಕಟ್ಟಡಗಳಿಗೆ ನವೀಕರಣ, ಶೌಚಾಲಯ ಸೌಲಭ್ಯಗಳು ಮತ್ತು ಕಾಂಪೌಂಡ್ ಗೋಡೆಗಳ ಅಗತ್ಯವಿದೆ ಎಂದು ಅವರು ಗಮನಿಸಿದ್ದು, ಇದಕ್ಕಾಗಿ ಸರ್ಕಾರ ಹಣವನ್ನು ಹಂಚಿಕೆ ಮಾಡಿದೆ. “ಅಂತಿಮವಾಗಿ, ಇದು ದೀನದಲಿತ ವಿದ್ಯಾರ್ಥಿಗಳಿಗೆ ಪ್ರಯೋಜನವನ್ನು ನೀಡಲಿದೆ ಮತ್ತು ಸಾರ್ವಜನಿಕ ನಿಧಿಯಿಂದ ಈಗಾಗಲೇ ನಿರ್ಮಿಸಲಾದ ಕಟ್ಟಡಗಳರಕ್ಷತೆಯನ್ನು ಬಲಪಡಿಸುತ್ತದೆ” ಎಂದು ತೀರ್ಪು ನೀಡಿದ್ದು, ಅರ್ಜಿಯನ್ನು ತಿರಸ್ಕರಿಸಿದ್ದಾರೆ.


