Homeಅಂಕಣಗಳುಟ್ರಂಪ್ ಇರಾನ್ ಮೇಲೆ ಬಿದ್ರೆ, ಮೋದಿ ನಮ್ಮ ಮೇಲೆ ಬಿದ್ದವುನೆ

ಟ್ರಂಪ್ ಇರಾನ್ ಮೇಲೆ ಬಿದ್ರೆ, ಮೋದಿ ನಮ್ಮ ಮೇಲೆ ಬಿದ್ದವುನೆ

- Advertisement -
- Advertisement -

ಈ ಶತಮಾನದ ರಾಜಕೀಯ ದ್ರೋಹ ಯಾವುದೆಂದರೆ ಸಭ್ಯ ರಾಜಕಾರಣಿಗಳು ಕೊಡುವ ಉತ್ತರ ಎಸ್ಸೆಂ ಕೃಷ್ಣರ ಪಕ್ಷಾಂತರವಂತಲ್ಲಾ. ಹಾಗಾದರೆ ಕೃಷ್ಣ ಅಂತಹ ದ್ರೋಹ ಮಾಡಿದ್ದಾರೆ ಎಂದರೆ ಅನಿವಾರ್ಯವಾಗಿ ಹೌದು ಎನ್ನಬೇಕಾಗುತ್ತದೆ. ಏಕೆಂದರೆ ಅವರ ರಾಜಕೀಯ ಜೀವನದ ಆರು ದಶಕದಲ್ಲಿ ಪ್ರಧಾನಿ ಸ್ಥಾನ ಬಿಟ್ಟು ಇನ್ನೆಲ್ಲವನ್ನು ಅನುಭವಿಸಿದ್ದು ಕಾಂಗ್ರೆಸ್ಸಿನಲ್ಲಿ. ಆದರೆ ಆ ಪಾರ್ಟಿಯ ಕಷ್ಟಕಾಲದಲ್ಲಿ ತಮ್ಮ ಕಡೆಗಾಲದಲ್ಲಿ, ಭಾರತದ ಸರ್ವನಾಶಕ್ಕೆ ಪಣತೊಟ್ಟಂತಿರುವ ಬಿಜೆಪಿಗೆ ಹೋಗಿ ಕುಳಿತು ಕಾಲ ಹಾಕುತ್ತಿರುವುದು ಅಕ್ಷಮ್ಯ ಅಪರಾಧ. ಅಷ್ಟಕ್ಕೂ ಬಿಜೆಪಿಗೆ ಹೋಗಿ ಕಾಲಹಾಕುವಂತಹ ಕೇಡುಗಾಲ ಕೃಷ್ಣರಿಗೇಕೆ ಬಂತು ಎಂಬುದು ನಿಗೂಢವಾಗುಳಿದಿದೆ. ಮಂಡ್ಯ ಹೈದರ ಪ್ರಕಾರ ಗಳಿಸಿದ್ದನ್ನು ದಕ್ಕಿಸಿಕೊಂಡು ಅಳಿಯನನ್ನು ಉಳಿಸಿಕೊಳ್ಳಲು ಬಿಜೆಪಿಗೆ ಹೋದರಂತೆ. ಆ ಬಿಜೆಪಿಯವರೊ ವೃದ್ಧರಿಗೆ ಗೌರವ ಕೊಡುವುದಿಲ್ಲವಂತೆ. ಆದರೂ ಕೃಷ್ಣ ಆಗಾಗ್ಗೆ ಸದ್ದು ಮಾಡುತ್ತ ಏನೇನೂ ಹೇಳುತ್ತ ಕಡೆಗೆ ತಾನೇನು ಮಹಾ ಪಕ್ಷಾಂತರ ಮಾಡಿಲ್ಲ, ಅಂತಹ ದೇವೇಗೌಡರೇ 80ರ ದಶಕದಲ್ಲಿ ಜನತಾದಳ ತೊರೆದು ಕಾಂಗ್ರೆಸ್ ಸೇರಲು ಬಂದಿದ್ದರು ಎಂದು ದಾಖಲಿಸಿದ್ದಾರಲ್ಲಾ ಥೂತ್ತೇರಿ.

ಹಲವು ಸಂಪುಟಗಳಲ್ಲಿ ತಮ್ಮ ರಾಜಕೀಯ ಜೀವನವನ್ನು ದಾಖಲಿಸಿರುವ ಕೃಷ್ಣ ಯಾರ ಮನಸ್ಸನ್ನು ನೋಯಿಸದ ವ್ಯಕ್ತಿಯಂತಲ್ಲಾ. ಆದ್ದರಿಂದ ರಾಜಕಾರಣದಲ್ಲಿನ ಕೆಲ ಗುಟ್ಟುಗಳನ್ನು ದಾಖಲಿಸುವುದರಲ್ಲಿ ಪ್ರಾಮಾಣಿಕತೆ ಕೊರತೆಯಿದೆ ಎಂಬುದು ದೇವೇಗೌಡರ ವಿಷಯದಲ್ಲಿ ಸಾಬೀತಾಗಿದೆ. ಮಾನ್ಯ ದೇವೇಗೌಡರು ಜನತಾದಳ ಬಿಟ್ಟು ಕಾಂಗ್ರೆಸ್ ಸೇರಲು ಬಂದಿದ್ದು ಎಂಬತ್ತರಲ್ಲಲ್ಲ. 1977ರಂದು ದೇಶದ ಮೇಲೆ ಇಂದಿರಾಗಾಂಧಿ ತುರ್ತುಪರಿಸ್ಥಿತಿ ಹೇರಿದಾಗ ಯಾಕೋ ಜನತಾ ಪಕ್ಷ ನಿರ್ನಾಮವಾಗುತ್ತದೆಂದು ಭಾವಿಸಿ ಕಾಂಗ್ರೆಸ್ ಸೇರಿಬಿಡಲು ತೀರ್ಮಾನಿಸಿದ್ದರು. ವಿರೋಧ ಪಕ್ಷದ ತಮ್ಮ ಸ್ಥಾನವನ್ನು ಹೆಚ್.ಟಿ.ಕೃಷ್ಣಪ್ಪನವರಿಗೆ ವಹಿಸಿ ಜೈಲಿಂದ ಬಂದಕೂಡಲೇ ಕಾಂಗ್ರೆಸ್ ಸೇರೋಣ ಎಂದು ಇಬ್ರಾಹಿಂ ಸಮ್ಮುಖದಲ್ಲಿ ಹೇಳಿದ್ದವರು. ಜೈಲಿನಿಂದ ಬಂದನಂತರ ಮನಸ್ಸು ಬದಲಿಸಿದ್ದರು. ಆಗ ಪ್ರಾಮಾಣಿಕ ರಾಜಕಾರಣದ ದೆಸೆಯಿಂದ ಕಷ್ಟದಲ್ಲಿದ್ದ ಗೌಡರು ಗುಂಡೂರಾಯನ ಓಲೈಕೆಯಿಂದ ಚೇತರಿಸಿಕೊಂಡಿದ್ದರು. ಕಾಂಗೈ ಸೇರಲು ಹಾತೊರೆದ ಗೌಡರನ್ನ ಕಾಂಗ್ರೆಸ್ಸೇ ಪ್ರಧಾನಿ ಮಾಡಿತ್ತು. ಈಚೆಗೆ ಅವರ ಮಗನನ್ನ ಮುಖ್ಯಮಂತ್ರಿ ಮಾಡಿತ್ತಲ್ಲಾ ಥೂತ್ತೇರಿ.

ಕಾಂಗೈ ಸಪೋರ್ಟ್‍ನಿಂದ ಮಗ ಮುಖ್ಯಮಂತ್ರಿಯಾದ ಸಂದರ್ಭ ನೋಡಬೇಕಿತ್ತು. ಮಂಡ್ಯದ ಗೌಡರು ಸಾಲಸೂಲ ಮಾಡಿ ಮಗನ ಮದುವೆ ಮಾಡಿದಂತಿತ್ತು. ಅವರಿವರ ಸಹಾಯದಲ್ಲಿ ನಡೆಯುವ ಗೌಡರು, ಆ ದಿನ ಯಾರ ಸಹಾಯವೂ ಇಲ್ಲದೆ ಮದುವೆ ಮಂಟಪದಲ್ಲಿ ತುಟಿಬಿರಿದು ಅಡ್ಡಾಡುತ್ತಿದ್ದರು. ಅವರ ಮಗನ ಜೊತೆ ಹಸೆ ಏರಲು ಬಂದ ಕಾಂಗೈ ಹೆಣ್ಣು ಬಲಾಢ್ಯಳಾಗಿದ್ದಳು. ಸಾಕಷ್ಟು ಶ್ರೀಮಂತಿಕೆಯಿಂದಿದ್ದ ಆಕೆ ಕುಮಾರಣ್ಣನೊಡನೆ ದಾಂಪತ್ಯದಲ್ಲಿ ಇನ್ನಷ್ಟು ಬಲಾಢ್ಯಳಾಗುವ ಹವಣಿಕೆಯಲ್ಲಿದ್ದಳು. ಅವಳಪ್ಪ ಯಾಕೋ ಡಲ್ಲಾಗಿ ಎಲ್ಲೂ ಕಾಣಿಸಿಕೊಳ್ಳದೆ ಮೂಲೆಯಲ್ಲಿದ್ದ ಇತ್ತ ಭಾರತ ಕಂಡ ಅಪರೂಪದ ಈ ಮದುವೆಗೆ ಸೋನಿಯಾ, ರಾಹುಲ್, ಮಾಯಾವತಿ, ಮಮತಾ ಬ್ಯಾನರ್ಜಿ…., ಯಾದವ ಕುಲತಿಲಕರೆಲ್ಲಾ ನೆರೆದಿದ್ದರು. ಅದ್ದೂರಿ ಮದುವೆ ಜರುಗಿಹೋಯ್ತು. ಆದರೇನು ಕಾಂಗೈ ಕನ್ಯೆಯನ್ನ ನಿಭಾಯಿಸುವ ಶಕ್ತಿ ಗೌಡರ ಮಗನಿಗಿರಲಿಲ್ಲ. ಹಾಗೆ ನೋಡಿದರೆ ಅದು ಸರಿಯಾದ ಜೋಡಿಯಲ್ಲವೆಂದು ಜನರೇ ಹೇಳುತ್ತಿದ್ದರು. ನಿರೀಕ್ಷೆಯಂತೆ ಹದಿನಾಲ್ಕು ತಿಂಗಳಲ್ಲೇ ಡೈವೋರ್ಸು ನಡೆದುಹೋಯ್ತು. ಇದಕ್ಕೆ ಕಾರಣ ಮೋದಿ ಶಾ ಎಂಬ ಮನೆ ಮುರುಕರು. ಕಾಂಗೈ ಕನ್ಯೆಗೆ ಹೇಳಿದ್ದ ಚಾಡಿ ಮಾತುಗಳು ತಾವೇ ಮೇಲೆ ಬಿದ್ದು ಬಂದು ತಾವೇ ಡೈವೋರ್ಸ್ ಕೊಟ್ಟ ಕಾಂಗೈಯನ್ನ ಅಪ್ಪಮಕ್ಕಳು ಆಜನ್ಮವೈರಿಯಾಗಿ ಪರಿಗಣಿಸಿದ್ದಾರಂತಲ್ಲಾ ಥೂತ್ತೇರಿ.

ಬೆಂಗಳೂರಲ್ಲೊಂದು ಚಿತ್ರಕಲಾ ಸಂತೆ ಮೂಲೆಮೂಲೆಯಲ್ಲಿದ್ದ ಕುಂಚದ ಕಲಾವಿದರು. ತಾವು ರಚಿಸಿತಂದ ಕಲಾಕೃತಿಗಳನ್ನು ಗಾಂಧಿಭವನದ ಪಕ್ಕ ಹರಡಿಕೊಂಡು ನಿಂತಿದ್ದರು. ಸುಮಾರು ನಾಲ್ಕು ಲಕ್ಷ ಜನರು ವೀಕ್ಷಿಸಿದರು. ಈ ಚಿತ್ರಕಲಾ ಸಂತೆಯನ್ನು ಎಡೂರಪ್ಪ ರೈತರಿಗೆ ಅರ್ಪಿಸಿದರು. ಅಸಂಬದ್ಧ ಮತ್ತು ಅಧಿವೇಶನ ತೀರ್ಮಾನವೆಂದರೆ ಇದೆ. ಹಾಗೆ ನೋಡಿದರೆ ಬಿಜೆಪಿಗಳೇ ಅಸಂಬದ್ಧ ಚಿತ್ರಕಲೆಗೂ ರೈತರ ಬವಣೆಗೂ ಏನು ಸಂಬಂಧ ಕಳೆದ ಸರಕಾರ ರೈತರಿಗೆ ಕೊರೆಸಿಕೊಟ್ಟ ಬೋರ್‍ವೆಲ್‍ಗಳಿಗೆ ಪೈಪ್ ಕೊಡಲು ದುಡ್ಡಿಲ್ಲ ಎನ್ನುವ ಎಡೂರಪ್ಪ ಚಿತ್ರಕಲಾ ಸಂತೆಯನ್ನ ರೈತರಿಗೆ ಅರ್ಪಿಸಿದ್ದಾರೆ. ಈ ಅರ್ಪಣೆಯ ಹಿಂದೆ ಯಾವ ಘನ ಉದ್ದೇಶವೂ ಇಲ್ಲ. ರೈತರ ಕಣ್ಣಿಗೆ ಮಣ್ಣೆರಚಿ ಮುಂದೆ ಹೋಗುವುದಷ್ಟೇ ಕೆಲಸ. ಈ ಚಿತ್ರ ಸಂತೆಯಲ್ಲಿ ಯಾವನೋ ಚೆಡ್ಡಿಯೂ ಕಲಾವಿದನಾಗಿ ಮೋದಿ, ನಿರ್ಮಲಾ ಸೀತಾರಾಂ ಮತ್ತು ತೇಜಸ್ವಿ ಸೂರ್ಯನ ಚಿತ್ರಗಳನ್ನ ತಂದು ಮಡಗಿತ್ತು. ಚಿತ್ರಕಲೆಗೂ ಚೆಡ್ಡಿಗಳು ನುಗ್ಗಿದರೆ ಮುಂದೇನಾಗಬಹುದು ಎಂಬುದರ ಸೂಚನೆಯಿದು. ಜನ ಮಾತ್ರ ಚಿತ್ರಗಳ ತಂಟೆಗೆ ಹೋಗದೆ ಆಲೂಗಡ್ಡೆ ಚಿಪ್ಸು, ಪಾನಿ ಪೂರಿ, ಗೋಬಿ ಮಂಚೂರಿ, ಚುರುಮುರಿ ಕೊಂಡು ಹೇಗೆ ತಿನ್ನುತ್ತಿದ್ದರೆಂದರೆ ಅವನ್ನ ಕಂಡೇ ಇಲ್ಲವೇನೊ ಎನ್ನುವಂತೆ ಮುಕ್ಕುತ್ತಿದ್ದರಲ್ಲಾ ಥೂತ್ತೇರಿ.

ಜಗತ್ತಿನ ಸಮಸ್ಯೆಯಂತೆ ಒಡಮೂಡಿರುವ ಟ್ರಂಪ್ ಎಂಬ ಅಮೆರಿಕದ ಅಧ್ಯಕ್ಷ ಕಡೆಗೂ ಒಂದು ಅನಾಹುತವನ್ನು ಮಾಡೇಬಿಟ್ಟನಲ್ಲಾ. ಆತನೇನೂ ಇರಾನ್ ಸಾಬರ ಮೇಲೆ ಬಿದ್ದಿದ್ದಾನೆ. ಆದರೆ ಭಾರತದ ಟ್ರಂಪು ಭಾರತೀಯರ ಮೇಲೆ ಬಿದ್ದುಬಿಟ್ಟಿದ್ದಾನಲ್ಲಾ ಇದಕ್ಕೇನು ಹೇಳುವುದು. ಹಾಗೆ ನೋಡಿದರೆ ಬುದ್ಧಿಮಾಂದ್ಯ ಮೂರ್ಖರು ಏನಾದರೂ ಅನಾಹುತ ಮಾಡಿಯೇ ಮಾಡುತ್ತಾರೆ. ಎಂಬುದಕ್ಕೆ ಈ ಟ್ರಂಪ್‍ದ್ವಯರು ಭಯಂಕರ ಉದಾಹರಣೆ ಇರಾನ್‍ನ ಖಾಸಿಂ ಸುಲೇಮಾನ್ ಮೇಲೆ ದಾಳಿಮಾಡಿ ಸಾಯಿಸಿದ ಟ್ರಂಪ್ ಈ ಕೃತ್ಯಕ್ಕೆ ಭಾರತವನ್ನ ಎಳೆಯಲು ಆತ ಡೆಲ್ಲಿ ಉಡಾಯಿಸಲು ಸ್ಕೆಚ್ ಹಾಕಿದ್ದ. ಬ್ಲೂ ಪ್ರಿಂಟ್ ನನ್ನ ಬಳಿ ಇದೆ ಎಂದಿದ್ದಾನೆ. ಇತ್ತ ಅಧಿಕಾರಕ್ಕೆ ಬಂದಾಗಿನಿಂದಲೂ ಮೋದಿ ಮಾಡುತ್ತಿರುವುದು ಇಂತ ಅನಾಹುತಗಳನ್ನೆ. ಗುಜರಾತ್ ಚುನಾವಣೆಯಲ್ಲಿ ನಮ್ಮನ್ನ ಸೋಲಿಸಲು ಪಾಕಿಸ್ತಾನದಲ್ಲಿ ಸಂಚು ನಡೆದಿದೆ ಎನ್ನುತ್ತಾನೆ. ಅದಷ್ಟೇ ಅಲ್ಲ, ಸಂಸತ್ತಿನಲ್ಲಾಡುವ ಮಾತನ್ನ ಬೀದಿಯಲ್ಲಾಡುತ್ತಾನೆ. ಬೀದಿ ಮಾತನ್ನ ಸಂಸತ್ತಿನಲ್ಲಾಡುತ್ತಾನೆ. ಕರ್ನಾಟಕದಲ್ಲಾಡುವ ಮಾತನ್ನ ಜಾರ್ಖಂಡ್‍ನಲ್ಲಿ, ಡೆಲ್ಲಿಯಲ್ಲಾಡುವ ಮಾತನ್ನ ನ್ಯೂಯಾರ್ಕಿನಲ್ಲಿ ಹೀಗೆ ಎಲ್ಲೆಂದರಲ್ಲಿ ಬಾಯಿಗೆ ಬಂದದ್ದು ವದರುವ ಮೋದಿ, ಸಿದ್ದಗಂಗೆಯ ಎಳೆ ಮಕ್ಕಳ ಎದುರು ಪಾಕಿಸ್ತಾನದ ವಿಷಯ ಹೇಳಿ ಮುಗ್ಧ ಮಕ್ಕಳೇ ದಂಗಾಗುವಂತೆ ಮಾಡಿದ್ದಾನಲ್ಲಾ ಥೂತ್ತೇರಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...