Homeಮುಖಪುಟದೇಶವು ನಿರ್ಣಾಯಕ ಕಾಲಘಟ್ಟದಲ್ಲಿ ಸಾಗುತ್ತಿದೆ : ಸಿಎಎ ಪರ ಅರ್ಜಿಗಳು ಸಹಾಯಕ್ಕೆ ಬರುವುದಿಲ್ಲ: ಸಿಜೆಐ...

ದೇಶವು ನಿರ್ಣಾಯಕ ಕಾಲಘಟ್ಟದಲ್ಲಿ ಸಾಗುತ್ತಿದೆ : ಸಿಎಎ ಪರ ಅರ್ಜಿಗಳು ಸಹಾಯಕ್ಕೆ ಬರುವುದಿಲ್ಲ: ಸಿಜೆಐ ಎಸ್.ಎ.ಬಾಬ್ಡೆ..

- Advertisement -
- Advertisement -

ಪೌರತ್ವ ಕಾನೂನನ್ನು “ಸಾಂವಿಧಾನಿಕ” ಎಂದು ಘೋಷಿಸಬೇಕೆಂದು ಸಲ್ಲಿಸಿರುವ ಅರ್ಜಿಯ ಕುರಿತು ಮಾತನಾಡಿದ ಭಾರತದ ಮುಖ್ಯ ನ್ಯಾಯಮೂರ್ತಿ ಎಸ್.ಎ.ಬಾಬ್ಡೆ, ದೇಶವು ನಿರ್ಣಾಯಕ ಕಾಲದಲ್ಲಿ ಸಾಗುತ್ತಿದೆ ಮತ್ತು ಇಂತಹ ಅರ್ಜಿಗಳು ಸಹಾಯ ಮಾಡುವುದಿಲ್ಲ ಎಂದು ಹೇಳಿದ್ದಾರೆ.

ಜೊತೆಗೆ ಹಿಂಸಾಚಾರ ನಿಲ್ಲಿಸಿದ ನಂತರವೇ ಪೌರತ್ವ ತಿದ್ದುಪಡಿ ಕಾಯ್ದೆಯ ಸಿಂಧುತ್ವವನ್ನು ಪ್ರಶ್ನಿಸುವ ಅರ್ಜಿಗಳನ್ನು ಆಲಿಸುವುದಾಗಿ ಸುಪ್ರೀಂ ಕೋರ್ಟ್ ಹೇಳಿದೆ.

ಅರ್ಜಿದಾರ ವಕೀಲರಾದ ವಿನೀತ್ ಧಂಡಾ, ಸುಪ್ರೀಂ ಕೋರ್ಟ್ ಸಿಎಎಯನ್ನು “ಸಾಂವಿಧಾನಿಕ” ಎಂದು ಘೋಷಿಸಬೇಕು ಮತ್ತು “ಕಾರ್ಯಕರ್ತರು, ವಿದ್ಯಾರ್ಥಿಗಳು, ಸುಳ್ಳು ವದಂತಿಗಳನ್ನು ಹರಡುವ ಮಾಧ್ಯಮ ಸಂಸ್ಥೆಗಳ” ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಪಿಐಎಲ್‌ ಸಲ್ಲಿಸಿದ್ದರು.

“ಸಂಸತ್ತು ಅಂಗೀಕರಿಸಿದ ಕಾಯಿದೆ ಸಾಂವಿಧಾನಿಕ ಎಂದು ನಾವು ಹೇಗೆ ಘೋಷಿಸಬಹುದು? ಯಾವಾಗಲೂ ಸಾಂವಿಧಾನಿಕತೆಯ ಊಹೆಯಿದೆ. ನೀವು ಕೆಲವು ಸಮಯದಲ್ಲಿ ಕಾನೂನು ವಿದ್ಯಾರ್ಥಿಯಾಗಿದ್ದರೆ, ನೀವು ಇದನ್ನು ತಿಳಿದುಕೊಳ್ಳಬೇಕು” ಎಂದು ಮುಖ್ಯ ನ್ಯಾಯಮೂರ್ತಿ ಪ್ರತಿಕ್ರಿಯಿಸಿದ್ದಾರೆ.

“ದೇಶವು ನಿರ್ಣಾಯಕ ಕಾಲದಲ್ಲಿ ಸಾಗುತ್ತಿದೆ. ಪ್ರಯತ್ನವು ಶಾಂತಿಗಾಗಿರಬೇಕು. ಅಂತಹ ಅರ್ಜಿಗಳು ಸಹಾಯ ಮಾಡುವುದಿಲ್ಲ” ಎಂದು ಮುಖ್ಯ ನ್ಯಾಯಮೂರ್ತಿ ಬಾಬ್ಡೆ ಪ್ರತಿಪಾದಿಸಿದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...