Homeಮುಖಪುಟತಡವಾಗಿ ಲ್ಯಾಂಡ್ ಆಗುವ ಮೂಲಕ ಆತಂಕ ಸೃಷ್ಟಿಸಿದ್ದ ವಿಮಾನ; ಈ ವಿಮಾನದಲ್ಲಿ ಯಾರಿದ್ದರು ಗೊತ್ತಾ?

ತಡವಾಗಿ ಲ್ಯಾಂಡ್ ಆಗುವ ಮೂಲಕ ಆತಂಕ ಸೃಷ್ಟಿಸಿದ್ದ ವಿಮಾನ; ಈ ವಿಮಾನದಲ್ಲಿ ಯಾರಿದ್ದರು ಗೊತ್ತಾ?

ರಜನಿಕಾಂತ್ ಇಂದು ಬೆಳಗ್ಗೆ 6.50ಕ್ಕೆ ಚೆನ್ನೈನಿಂದ ಮೈಸೂರಿಗೆ ಖಾಸಗಿ ವಿಮಾನದ ಮೂಲಕ ಹೊರಟಿದ್ದರು. ನಿರೀಕ್ಷೆಯಂತೆ ಬೆಳಗ್ಗೆ 8.15ಕ್ಕೆ ವಿಮಾನ ಮೈಸೂರು ತಲುಪಬೇಕಿತ್ತು. ಆದರೆ, ಮೈಸೂರು ವಿಮಾನ ನಿಲ್ದಾಣದಲ್ಲಿ ದಟ್ಟ ಮಂಜು ಆವರಿಸಿದ್ದ ಕಾರಣ ಮುಜಾಂಗ್ರತಾ ಕ್ರಮವಾಗಿ ವಿಮಾನದ ಲ್ಯಾಂಡಿಂಗ್ ವಿಳಂಬ ಮಾಡಲು ಸೂಚನೆ ನೀಡಲಾಗಿದೆ.

- Advertisement -
- Advertisement -

ಮೈಸೂರು (ಜನವರಿ 27); ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜಿನಿಕಾಂತ್ ಇಂದು ಮೈಸೂರಿಗೆ ಆಗಮಿಸಿದ್ದಾರೆ. ಆದರೆ, ಅವರು ಪ್ರಯಾಣಿಸಿದ ವಿಮಾನ ದಟ್ಟ ಮಂಜಿನ ಸಿಲುಕಿಕೊಂಡ ಕಾರಣ ವಿಮಾನವನ್ನು ಲ್ಯಾಂಡಿಂಗ್ ಮಾಡಲು 1 ಗಂಟೆ ವಿಳಂಭವಾಗಿದೆ. ಪರಿಣಾಮ ವಿಮಾನ ನಿಲ್ದಾಣದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ರಜನಿಕಾಂತ್ ಇಂದು ಬೆಳಗ್ಗೆ 6.50ಕ್ಕೆ ಚೆನ್ನೈನಿಂದ ಮೈಸೂರಿಗೆ ಖಾಸಗಿ ವಿಮಾನದ ಮೂಲಕ ಹೊರಟಿದ್ದರು. ನಿರೀಕ್ಷೆಯಂತೆ ಬೆಳಗ್ಗೆ 8.15ಕ್ಕೆ ವಿಮಾನ ಮೈಸೂರು ತಲುಪಬೇಕಿತ್ತು. ಆದರೆ, ಮೈಸೂರು ವಿಮಾನ ನಿಲ್ದಾಣದಲ್ಲಿ ದಟ್ಟ ಮಂಜು ಆವರಿಸಿದ್ದ ಕಾರಣ ಮುಜಾಂಗ್ರತಾ ಕ್ರಮವಾಗಿ ವಿಮಾನದ ಲ್ಯಾಂಡಿಂಗ್ ವಿಳಂಬ ಮಾಡಲು ಸೂಚನೆ ನೀಡಲಾಗಿದೆ.

ಈ ಹಿನ್ನೆಲೆಯಲ್ಲಿ ನಟ ರಜನಿಕಾಂತ್ ಸಹ ಪ್ರಯಾಣಿಕರ ಜೊತೆ ವಿಮಾನದಲ್ಲೇ ಒಂದೂವರೆ ಗಂಟೆ ಕಾಲಕಳೆದಿದ್ದಾರೆ. ಈ ವಿಮಾನದಲ್ಲಿ 42 ಪ್ರಯಾಣಿಕರು ರಜಿನಿ ಜೊತೆ ಪ್ರಯಾಣ ಮಾಡಿದ್ದರು. ಕೊನೆಗೂ ವಿಮಾನ ನಿಲ್ದಾಣದ ತಾಂತ್ರಿಕ ಸಿಬ್ಬಂದಿಗಳ ಸೂಚನೆಯ ನಂತರ 9.30 ರ ಸುಮಾರಿಗೆ ವಿಮಾನವನ್ನು ಲ್ಯಾಂಡಿಂಗ್ ಮಾಡಲಾಗಿದೆ.

ರಜನಿಕಾಂತ್ ಮೈಸೂರಿನಿಂದ ನೇರವಾಗಿ ಬಂಡೀಪುರಕ್ಕೆ ಪ್ರಯಾಣ ಬೆಳೆಸಿದ್ದಾರೆ. ಇನ್ನೂ ಎರಡು ದಿನ ಅಲ್ಲೇ ಇರಲಿದ್ದಾರೆ ಎಂಬ ಮಾಹಿತಿಗಳು ಲಭ್ಯವಾಗಿವೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ನಿಧನ: ಇಂದು ಭಾರತದಲ್ಲಿ ಶೋಕಾಚರಣೆ

0
ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟ ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಅವರಿಗೆ ಗೌರವಾರ್ಥವಾಗಿ ಮಂಗಳವಾರ ಭಾರತದಾದ್ಯಂತ ಒಂದು ದಿನದ ಶೋಕಾಚರಣೆಯನ್ನು ಆಚರಿಸಲಾಗುವುದು ಎಂದು ಕೇಂದ್ರ ಗೃಹ ಸಚಿವಾಲಯ ಪ್ರಕಟಿಸಿದೆ. ಭಾರತದಾದ್ಯಂತ ನಿಯಮಿತವಾಗಿ ಹಾರಿಸುವ ಎಲ್ಲಾ ಕಟ್ಟಡಗಳ...