Homeಮುಖಪುಟಶಹೀನ್ ಬಾಗ್ ಶೂಟರ್ ಎಎಪಿ ಕಾರ್ಯಕರ್ತನಾಗಿದ್ದರೆ, ಆತನಿಗೆ ಡಬಲ್‌ ಶಿಕ್ಷೆ ನೀಡಿ : ಕೇಜ್ರಿವಾಲ್

ಶಹೀನ್ ಬಾಗ್ ಶೂಟರ್ ಎಎಪಿ ಕಾರ್ಯಕರ್ತನಾಗಿದ್ದರೆ, ಆತನಿಗೆ ಡಬಲ್‌ ಶಿಕ್ಷೆ ನೀಡಿ : ಕೇಜ್ರಿವಾಲ್

- Advertisement -
- Advertisement -

ಶಹೀನ್ ಬಾಗ್ ಶೂಟರ್ ಎಎಪಿ ಕಾರ್ಯಕರ್ತನಾಗಿದ್ದರೆ, ಆತನಿಗೆ ಡಬಲ್‌ ಶಿಕ್ಷೆ ನೀಡಿ ಎಂದು ಎಎಪಿ ಮುಖ್ಯಸ್ಥ ಮತ್ತು ದೆಹಲಿ ಸಿಎಂ ಅರವಿಂದ್‌ ಕೇಜ್ರಿವಾಲ್ ಹೇಳಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಭದ್ರತೆಯ ವಿಷಯದಲ್ಲಿ ಯಾವುದೇ ರಾಜಿ ಮಾಡಿಕೊಳ್ಳಬಾರದು ಮತ್ತು ಕಾನೂನು ಸುವ್ಯವಸ್ಥೆಗೆ ಅಡ್ಡಿಪಡಿಸುವವರಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ನವದೆಹಲಿಯ ಶಹೀನ್ ಬಾಗ್‌ನಲ್ಲಿ ಸಿಎಎ ವಿರೋಧಿ ಪ್ರತಿಭಟನಾ ಸ್ಥಳದಲ್ಲಿ ಕಪಿಲ್‌ ಗುಜ್ಜರ್‌ ಎಂಬ ನೋಯ್ಡಾ ಮೂಲದ ವ್ಯಕ್ತಿ ಗುಂಡು ಹಾರಿಸಿದ್ದ. ಆತನನ್ನು ಬಿಜೆಪಿ ಪಕ್ಷದ ಕಾರ್ಯಕರ್ತನೆಂದು ಕೆಲವರು ಮತ್ತೆ ಕೆಲವರು ಆಪ್‌ ಪಕ್ಷದ ಕಾರ್ಯಕರ್ತನೆಂದು ಆರೋಪಿಸಿದ್ದರು. ಆತನ ತಂದೆ ಅವನು ಯಾವುದೇ ಪಕ್ಷಕ್ಕೆ ಸೇರಿಲ್ಲ ಎಂದು ಸ್ಪಷ್ಪಪಟಿಸಿದ್ದರು. ಆದರೂ ಬಿಜೆಪಿ ಅದನ್ನು ಆಪ್‌ ಮೇಲೆ ಹೊರಿಸುತ್ತಿದ್ದರಿಂದ ಕೇಜ್ರಿವಾಲ್‌ ಆತನಿಗೆ ಡಬಲ್‌ ಶಿಕ್ಷೆ ನೀಡಿ ಎಂದಿದ್ದಾರೆ.

“ರಾಷ್ಟ್ರೀಯ ಭದ್ರತೆಯೊಂದಿಗೆ ರಾಜಿ ಮಾಡಿಕೊಳ್ಳದಂತೆ ನಾನು ಅಮಿತ್ ಷಾ ಅವರನ್ನು ಒತ್ತಾಯಿಸಲು ಬಯಸುತ್ತೇನೆ” ಕಾನೂನು ಸುವ್ಯವಸ್ಥೆ ಹದಗೆಡಲು ಯಾರು ಹೊಣೆಗಾರರಾಗಿದ್ದಾರೋ, ಅವರೇ ಆತನಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ : ರೇವಣ್ಣ, ಪ್ರಜ್ವಲ್‌ಗೆ ಎಸ್‌ಐಟಿ ನೋಟಿಸ್

0
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಗೆ ಹಾಜರಾಗಲು ಆರೋಪಿಗಳಾದ ಹೆಚ್‌.ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣಗೆ ಎಸ್ಐಟಿ ಅಧಿಕಾರಿಗಳು ಇಂದು (ಏ.30) ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹಾಸನದ ಹೊಳೆನರಸೀಪುರ ನಗರ...