Homeಮುಖಪುಟಮೋದಿ ಬಂದಮೇಲೆ ಭಾರತದ ಸಾಲದ ಪ್ರಮಾಣ ಇಳಿಕೆಯಾಗಿದೆಯೇ? ಈ ವರ್ಷ ಜಿಡಿಪಿ 10% ಗೆ ಏರಲಿದೆಯೇ?...

ಮೋದಿ ಬಂದಮೇಲೆ ಭಾರತದ ಸಾಲದ ಪ್ರಮಾಣ ಇಳಿಕೆಯಾಗಿದೆಯೇ? ಈ ವರ್ಷ ಜಿಡಿಪಿ 10% ಗೆ ಏರಲಿದೆಯೇ? ಸುಳ್ಳು ಹೇಳಿದ ಪೋಸ್ಟ್‌ ಕಾರ್ಡ್‌..

- Advertisement -
- Advertisement -

ಮೋದಿ ಬಂದಮೇಲೆ ಭಾರತದ ಸಾಲದ ಪ್ರಮಾಣ ಇಳಿಕೆಯಾಗಿದೆಯೇ?

2014ರ ಮೊದಲು ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಭಾರತದ ಸಾಲದ ಪ್ರಮಾಣ 52.2% ಇತ್ತು. ಈಗ ಮೋದಿ ಬಂದಮೇಲೆ 48.7% ಇಳಿದಿದೆ ಎಂದು ಫೇಕ್ ನ್ಯೂಸ್ ವೆಬ್‌ಸೈಟ್ ಪೋಸ್ಟ್ ಕಾರ್ಡ್ ಕನ್ನಡ ವರದಿ ಮಾಡಿದೆ.

ಇನ್ನು ಆ ಪೋಸ್ಟರ್‌ನಲ್ಲಿ ಕೆಲವೊಮ್ಮೆ ಮೋದಿ ಸರ್ಕಾರದ ಗ್ರಾಫ್‌ ಕೆಳಕೆ ಇಳಿಯುವುದೂ ಖುಷಿ ತರುತ್ತದೆ ಅಲ್ಲವೇ? ಎಂದು ಮತ್ತೊಂದು ಸಾಲು ಬರೆದಿದ್ದಾರೆ.

ಆದರೆ ಇದು ಸಂಪೂರ್ಣ ಸುಳ್ಳು ಸುದ್ದಿಯಾಗಿದ್ದು 2014ರಲ್ಲಿ 47 ಲಕ್ಷ ಕೋಟಿ ಇದ್ದ ಭಾರತದ ಸಾಲ ಈಗ ಮೋದಿ ಬಂದಮೇಲೆ 84 ಲಕ್ಷ ಕೋಟಿಗೇರಿದೆ. ಈ ಚಿತ್ರ ನೋಡಿ

ಇದು ಇದುವರೆಗಿನ ಲೇಟೆಸ್ಟ್‌ ಭಾರತದ ಒಟ್ಟಾರೆ ಸಾಲದ ಚಿತ್ರಣವನ್ನು ಮುಂದಿಡುತ್ತದೆ. ಅಂದರೆ ಭಾರತದ ಸಾಲದ ಪ್ರಮಾಣ ಮೋದಿ ಬಂದ ಮೇಲೆ ಹೆಚ್ಚುಕಮ್ಮಿ ಡಬಲ್‌ ಆಗಿದೆ. ಆದರೆ ಸದಾ ಸುಳ್ಳು ಹೇಳುತ್ತಾ ಜನರನ್ನು ದಿಕ್ಕತಪ್ಪಿಸುವ ಕೆಲಸ ಮಾಡುವ ಪೋಸ್ಟ್‌ ಕಾರ್ಡ್‌ ಕನ್ನಡ ಸುಳ್ಳು ಹೇಳಿ ಸಿಕ್ಕಿಬಿದ್ದಿದೆ. ಅವರ ಈ ಪೋಸ್ಟ್‌ ಅನ್ನು ಸಾವಿರಾರು ಜನ ಇಷ್ಟಪಟ್ಟರೆ ಅಲ್ಲಿಯೇ ಕೆಲವರು ಸತ್ಯದ ದಾಖಲೆಗಳನ್ನು ಹಾಕಿ ಜಾಡಿಸಿದ್ದಾರೆ.

ಈ ವರ್ಷ ಜಿಡಿಪಿ 10% ಗೆ ಏರಲಿದೆಯೇ? ಅಚ್ಚೇ ದಿನ ಬರಲಿವೆಯೇ?

ಅದೇ ಪೋಸ್ಟ್‌ ಕಾರ್ಡ್‌ ಇನ್ನೊಂದು ಪೋಸ್ಟರ್‌ನಲ್ಲಿ ಈ ವರ್ಷ ಜಿಡಿಪಿ 10% ಗೆ ಏರಲಿದೆ, ಅಚ್ಚೇ ದಿನ ಬರಲಿದೆ ಎಂದು ಹೇಳಿದೆ.

ಇದು ಕೂಡ ಶುದ್ಧ ಸುಳ್ಳು.. ಭಾರತದ ಆರ್ಥಿಕ ಪರಿಸ್ಥಿತಿ ದಿನೇದಿನೇ ಹದಗೆಡುತ್ತಿದೆ. ಲಾಭದಲ್ಲಿದ್ದ ಹಲವಾರು ಸರಕಾರಿ ಕಂಪನಿಗಳನ್ನು ಮಾರಲಾಗುತ್ತಿದೆ.

ಸರ್ಕಾರದ ಪರವಾಗಿರುವ ಆರ್ಥಿಕ ಸಲಹೆಗಾರ ಕೃಷ್ಣಮೂರ್ತಿ ಸುಬ್ರಮಣಿಯನ್ ಸಹ ಶೇ.6 ಜಿಡಿಪಿ ಏರಬಹುದು ಎಂದು ಅಂದಾಜಿಸಿದ್ದಾರೆ. ಆದರೆ ಅಮರ್ತ್ಯ ಸೇನ್, ಅಭಿಜಿತ್ ಬ್ಯಾನರ್ಜಿಯಂತಹ ಸರ್ಕಾರವನ್ನು ವಿರೋಧಿಸುವ ಆರ್ಥಿಕ ತಜ್ಞರು ಶೇ.5ರ ಮೇಲೆರಲು ಸಾಧ್ಯವಿಲ್ಲವೆಂದಿದ್ದಾರೆ.

ಒಟ್ಟಾರೆ ಬಿಜೆಪಿ ಪರವಾಗಿ ಕೆಲಸ ಮಾಡಲು ಈ ಪೋಸ್ಟ್‌ ಕಾರ್ಡ್‌ ತಾನೆಷ್ಟು ಸುಳ್ಳುಗಾರ ಎಂದು ತೋರಿಸಿಕೊಳ್ಳುತ್ತಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ : ರೇವಣ್ಣ, ಪ್ರಜ್ವಲ್‌ಗೆ ಎಸ್‌ಐಟಿ ನೋಟಿಸ್

0
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಗೆ ಹಾಜರಾಗಲು ಆರೋಪಿಗಳಾದ ಹೆಚ್‌.ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣಗೆ ಎಸ್ಐಟಿ ಅಧಿಕಾರಿಗಳು ಇಂದು (ಏ.30) ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹಾಸನದ ಹೊಳೆನರಸೀಪುರ ನಗರ...