HomeಮುಖಪುಟJNU ನಲ್ಲಿ ಎಡಪಂಥೀಯ ವಿದ್ಯಾರ್ಥಿಗಳು ದಾಳಿ ಮಾಡಿದ್ದಾರೆ ಎಂದು ಫ್ಲೆಕ್ಸ್ ಹಾಕಿದ ABVP : ಇಲ್ಲ...

JNU ನಲ್ಲಿ ಎಡಪಂಥೀಯ ವಿದ್ಯಾರ್ಥಿಗಳು ದಾಳಿ ಮಾಡಿದ್ದಾರೆ ಎಂದು ಫ್ಲೆಕ್ಸ್ ಹಾಕಿದ ABVP : ಇಲ್ಲ ಎಂದ ಸಂತ್ರಸ್ತ..

- Advertisement -
- Advertisement -

ಜನವರಿ 5 ರಂದು ದೆಹಲಿಯ ಜೆಎನ್‌ಯು ವಿವಿಗೆ ಮುಸುಕುಧಾರಿ ಗೂಂಡಾಗಳು ನುಗ್ಗಿ ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡಿದ್ದರು. ಇದಾದನಂತರ ಹಲ್ಲೆ ಮಾಡಿದವರು ಎಡಪಂಥೀಯ ವಿದ್ಯಾರ್ಥಿಗಳು ಎಂದು ಆರೋಪಿಸಿ ABVP, ಸಂತ್ರಸ್ತರ ಫೋಟೊಗಳ ಫ್ಲೆಕ್ಸ್ ಹಾಕಿ ಪ್ರಚಾರ ಮಾಡಿತ್ತು. ಅದರಲ್ಲಿ ಕಮಲೇಶ್ ಮಂಡ್ರಿಯ ಎಂಬ ವ್ಯಕ್ತಿಗೆ ತಲೆಗೆ ಆದ ಗಾಯಗಳಿರುವ ಹಲವು ಫೋಟೊಗಳನ್ನು ಎಬಿವಿಪಿ ಬಳಸಿಕೊಂಡು ಲೆಫ್ಟ್ ಅಟ್ಯಾಕ್ ಜೆಎನ್‌ಯು ಎಂಬ ಹ್ಯಾಷ್ ಟ್ಯಾಗ್ ಬಳಸಿತ್ತು.

ಕರ್ನಾಟಕದ ಎಬಿವಿಪಿ ಟ್ವಿಟ್ಟರ್ ಅಕೌಂಟ್‌ನಿಂದ ಸಹ “ಹಿಂಸಾಚಾರ ಮಾತ್ರ ಎಡಪಂಥೀಯರನ್ನು ವಿವರಿಸುತ್ತದೆ ಎಂದು ಮತ್ತೊಮ್ಮೆ ಸಾಬೀತಾಗಿದೆ. ಎಡ ಗೂಂಡಾಗಳು ವಿನಾಶಕ್ಕೆ ಹೋಗಲು ಜೆಎನ್‌ಯು ನೆಲವಾಗಿರಲು ಸಾಧ್ಯವಿಲ್ಲ. ಇದು ಈಗ ಸೈದ್ಧಾಂತಿಕ ಯುದ್ಧವಲ್ಲ. ಸಾಕು ಸಾಕು! ಎಬಿವಿಪಿ ಅವರು ಅರ್ಥಮಾಡಿಕೊಳ್ಳುವ ಭಾಷೆಯಲ್ಲಿ ಉತ್ತರಿಸುತ್ತಾರೆ” ಎಂದು ಬರೆದುಕೊಂಡಿತ್ತು. ಇದನ್ನು ಸೂಕ್ಷö್ಮವಾಗಿ ಗಮನಿಸಿದರೆ ಬೇರೆ ಭಾಷೆಯಿಂದ ಗೂಗಲ್ ಅನುವಾದ ಮಾಡಿದಂತೆ ಕಾಣುತ್ತದೆ.

ಆದರೆ ಸತ್ಯ ಏನೆಂದರೆ, ಯಾರ ಫೋಟೊವನ್ನು ಎಬಿವಿಪಿ ಬಳಸಿಕೊಂಡಿತ್ತೋ ಅದೇ ಕಮಲೇಶ್ ಮಂಡ್ರಿಯ ಎಂಬ ವ್ಯಕ್ತಿ, “ನನ್ನ ಮೇಲೆ ಹಲ್ಲೆಯಾಗಿದ್ದು ನಿಜ. ದಾಳಿ ಮಾಡಿದವರು ಎಡಪಂಥೀಯ ವಿದ್ಯಾರ್ಥಿಗಳಲ್ಲ ಬದಲಿಗೆ ಎಬಿವಿಪಿ ಸದಸ್ಯರು ಎಂದು ಸ್ಪಷ್ಟಪಡಿಸಲು ಬಯಸುತ್ತೇನೆ, “ನಾನು ಜೆಎನ್‌ಯುನಲ್ಲಿ ಯಾವುದೇ ರಾಜಕೀಯ ಗುಂಪಿನ ಭಾಗವಲ್ಲ. ಆದರೂ ಜನವರಿ 4 ರಂದು ನಡೆದ ಹಿಂಸಾಚಾರದ ವಿರುದ್ಧ ನಾನು ಜೆಎನ್‌ಯು ಶಿಕ್ಷಕರ ಸಂಘ (ಜೆಎನ್‌ಯುಟಿಎ) ಜೊತೆಗೆ ಒಗ್ಗಟ್ಟಿನ ಮೆರವಣಿಗೆಯ ಭಾಗವಾಗಿದ್ದೆ.” ಎಂದು ಸಂದರ್ಶನದಲ್ಲಿ ಹೇಳಿದ್ದಾರೆ. ಈ ಕುರಿತು ಟ್ವೀಟ್ ಸಹ ಮಾಡಿದ್ದಾರೆ.

ಅಲ್ಲಿಗೆ ಎಬಿವಿಪಿ ಹೆಣೆದಿದ್ದು ಸುಳ್ಳು, ಹಾಕಿದ್ದ ಫ್ಲೆಕ್ಸ್ ಎಲ್ಲಾ ಸುಳ್ಳು ಎಂಬುದು ಜಗಜ್ಜಾಹೀರಾಗಿದೆ. ಅಲ್ಲದೇ ಎಬಿವಿಪಿಯವರೇ ದಾಳಿಕೋರರು ಎಂದು ಆತ ಹೇಳಿದ್ದಾನೆ. ಸಿಎನ್‌ಎನ್‌18 ನ ಜೆಬ ವಾರ್ಸಿ ಎಂಬುವವರೊಂದಿಗೆ ನಡೆಸಿದ ಸಂದರ್ಶನ ಇಲ್ಲಿದೆ ನೋಡಿ..

ಕೃಪೆ: ಆಲ್ಟ್‌ನ್ಯೂಸ್‌

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಧಾನಿ ಮೋದಿ ವಿರುದ್ಧ ಕ್ರಮ ಕೈಗೊಳ್ಳುವಂತೆ ನಾಗರಿಕ ಸಂಸ್ಥೆಗಳು, ಕಾಳಜಿಯುಳ್ಳ ನಾಗರಿಕರಿಂದ ಚುನಾವಣಾ ಆಯೋಗಕ್ಕೆ...

0
ರಾಜಸ್ಥಾನದಲ್ಲಿ ಭಾನುವಾರ (ಏ.21) ನಡೆದ ಚುನಾವಣಾ ರ‍್ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಸುಳ್ಳು ಸುದ್ದಿ ಮತ್ತು ದ್ವೇಷ ಹರಡಿದ್ದಾರೆ. ಈ ಹಿನ್ನೆಲೆ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ನಾಗರಿಕ ಸಂಸ್ಥೆಗಳು...