Homeಮುಖಪುಟನಿಲ್ಲದ ಪಿಎಂಸಿ ಬ್ಯಾಂಕ್ ಗೋಳಾಟ: ಒತ್ತಡಕ್ಕೆ ಒಂದೇ ದಿನ ಮೂವರು ಗ್ರಾಹಕರ ಸಾವು

ನಿಲ್ಲದ ಪಿಎಂಸಿ ಬ್ಯಾಂಕ್ ಗೋಳಾಟ: ಒತ್ತಡಕ್ಕೆ ಒಂದೇ ದಿನ ಮೂವರು ಗ್ರಾಹಕರ ಸಾವು

- Advertisement -
- Advertisement -

ಪಂಜಾಬ್ ಮತ್ತು ಮಹಾರಾಷ್ಟ್ರ ಕೋ-ಆಪರೇಟಿವ್ ಬ್ಯಾಂಕ್ (ಪಿಎಂಸಿ) ನಲ್ಲಿ ನಡೆಸಿದ ಅಕ್ರಮ ಮತ್ತು ಭ್ರಷ್ಟಾಚಾರ ಹಿನ್ನೆಲೆಯಲ್ಲಿ ಬ್ಯಾಂಕಿನ ಮೇಲೆ ಆರ್.ಬಿ.ಐ  ಹಲವು ನಿರ್ಭಂದದ ಕ್ರಮ ಕೈಗೊಳ್ಳಲಾಗಿತ್ತು. ಹಣ ಪಡೆಯಲು ತೀವ್ರ ಮಿತಿಯನ್ನು ಹೇರಲಾಗಿತ್ತು. ಇದರಿಂದ ಹಣ ತೆಗೆಯಲು ಸಾಧ್ಯವಾಗದೇ, ಹಣ ವಾಪಸ್‌ ಬರುತ್ತದೆಯೋ, ಇಲ್ಲವೋ ಎಂಬ ಒತ್ತಡಕ್ಕೆ ಒಳಗಾಗಿ ಮುಂಬೈನಲ್ಲಿ ಮೂವರು ಖಾತೆದಾರರು ಮೃತಪಟ್ಟಿರುವ ದುರ್ಘಟನೆ ಜರುಗಿದೆ.

ಮೃತರಲ್ಲಿ ಒಬ್ಬರು ಜೆಟ್ ಏರ್ ವೇಸ್ ನೌಕರರಾಗಿದ್ದು ಇತ್ತೀಚೆಗೆ ತಮ್ಮ ಉದ್ಯೋಗ ಕಳೆದುಕೊಂಡಿದ್ದರು. ಇದೇ ಸಂದರ್ಭದಲ್ಲಿ ಬ್ಯಾಂಕಿನಲ್ಲಾದ ಘಟನೆಗಳು ಅವರಲ್ಲಿ ಆತಂಕ ಉಂಟುಮಾಡಿದ್ದು ಸಾವಿಗೆ ಕಾರಣವಾಗಿದೆ ಎನ್ನಲಾಗುತ್ತಿದೆ. ಜೆಟ್ ಏರ್ ವೇಸ್ ನಲ್ಲಿ ಮಾಜಿ ಹಿರಿಯ ಟೆಕ್ನಿಷಿಯನ್ ಆಗಿದ್ದ ಸಂಜಯ್ ಗುಲಾಟಿಯವರು ಊಟ ಸೇವಿಸಿದ ನಂತರ ಮನೆಯಲ್ಲೇ ಮೃತಪಟ್ಟಿದ್ದಾರೆ ಎಂದು ಅವರ ಪತ್ನಿ ತಿಳಿಸಿದ್ದಾರೆ.

ಬ್ಯಾಂಕ್ ವಿರುದ್ಧ ನಡೆದ ಪ್ರತಿಭಟನೆಯಲ್ಲಿಯೂ ಸಹ ಸಂಜಯ್ ಗುಲಾಟಿ ಭಾಗಿಯಾಗಿದ್ದರು. ಗುಲಾಟಿ ಕೇವಲ ಪಿ.ಎಂ.ಸಿ ಬ್ಯಾಂಕ್‌ನಲ್ಲಿ ಮಾತ್ರ ಖಾತೆ ಹೊಂದಿದ್ದರು, ಎಲ್ಲಾ ಹಣ ಅದೇ ಬ್ಯಾಂಕ್‌ನಲ್ಲಿತ್ತು. ಗುಲಾಟಿ ಉದ್ಯಮದಲ್ಲಿ ನಷ್ಟ ಅನುಭವಿಸಿದ್ದರು ಜೊತೆಗೆ ದೀಪಾವಳಿ ಹತ್ತಿರ ಬರುತ್ತಿದ್ದಂತೆ ತಮ್ಮ ವ್ಯವಹಾರವನ್ನು ತಹಬದಿಗೆ ತರಲು ಸಾಕಷ್ಟು ಹಣದ ಅಗತ್ಯತೆ ಇತ್ತು. ಆದರೆ ಹಣವನ್ನು ಪಿಎಂಸಿ ಬ್ಯಾಂಕಿನಿಂದ ತೆಗೆಯಲಾರದೇ, ಇತ್ತ ವ್ಯವಹಾರವನ್ನು ಸರಿದಾರಿಗೆ ತರಲಾರದೆ ಒತ್ತಡಕ್ಕೆ ಒಳಗಾಗಿ ಸಾವನಪ್ಪಿದ್ದಾರೆ ಎಂದು ಗುಲಾಟಿಯವರ ತಂದೆ ಹೇಳಿದ್ದಾರೆ.

ಪಿಎಂಸಿ ಬ್ಯಾಂಕಿನ ಮತ್ತೊಬ್ಬ ಖಾತೆದಾರರಾದ ಫತ್ತೋಮಲ್ ಪಂಜಾಬಿ ಎಂಬುವವರು, ಮುಲಂಡ್‌ನ ಸಿಂಧಿ ಕಾಲೋನಿಯಲ್ಲಿರುವ ಎಲೆಕ್ಟ್ರಾನಿಕ್ಸ್ ಅಂಗಡಿಯಲ್ಲಿ ಕುಸಿದು ಬಿದ್ದಿದ್ದು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

39 ವರ್ಷದ ವೈದ್ಯೆ ಡಾ.ಯೋಗಿತಾ ಬಿಜ್ಲಾನಿ ಎಂಬುವವರು ಸಹ ಇದೇ ಬ್ಯಾಂಕಿನಲ್ಲಿ ಖಾತೆ ಹೊಂದಿದ್ದರು. ಕಳೆದ ವರ್ಷ ಅಮೆರಿಕದಿಂದ ಮುಂಬೈಗೆ ಬಂದಿದ್ದ ಅವರು ಇಲ್ಲಿಯೇ ತಂಗಿದ್ದರು. ಬ್ಯಾಂಕಿನಲ್ಲಾದ ಬೆಳವಣಿಗೆಗಳು ಅವರನ್ನು ಕಂಗೆಡಿಸಿದ್ದವು. ಹಾಗಾಗಿ ಅವರು ತೀವ್ರ ಮತ್ತು ಬರುವ ನಿದ್ದೆ ಮಾತ್ರೆ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಯೋಗಿತಾ ಖಿನ್ನತೆಯಿಂದ ಬಳಲುತ್ತಿದ್ದರು ಎಂದು ಕುಟುಂಬಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಈ ನಡುವೆ ಪಿಎಂಸಿ ಬ್ಯಾಂಕಿನ ಗ್ರಾಹಕರು ತಮ್ಮ ಹಣ ವಾಪಸ್‌ ಕೊಡಿ ಎಂದು ಮೋದಿ ಸರ್ಕಾರವನ್ನು ಅಂಗಲಾಚುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ದಿನನಿತ್ಯ ಹರಿದಾಡುತ್ತಿವೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ‘ರೋಹಿತ್ ವೇಮುಲಾ ಕಾಯ್ದೆ’ ಜಾರಿ: ಕೆ.ಸಿ ವೇಣುಗೋಪಾಲ್

0
ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಶಿಕ್ಷಣ ಸಂಸ್ಥೆಗಳಲ್ಲಿನ ಜಾತಿ ಮತ್ತು ಕೋಮು ದೌರ್ಜನ್ಯ ತಡೆಯಲು 'ರೋಹಿತ್ ವೇಮುಲಾ ಕಾಯ್ದೆ ಜಾರಿಗೊಳಿಸಲಾಗುವುದು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ಭರವಸೆ ನೀಡಿದ್ದಾರೆ. ಸಾಮಾಜಿಕ ಮತ್ತು...