Homeಅಂಕಣಗಳುಸಮಾಜ ಬದಲಾವಣೆಯಲ್ಲಿ ಯುವಜನರ ಪಾತ್ರ

ಸಮಾಜ ಬದಲಾವಣೆಯಲ್ಲಿ ಯುವಜನರ ಪಾತ್ರ

- Advertisement -
ನಮ್ಮ  ಸಮಾಜ ನಿಂತ ನೀರಿನಂತೆ ಗಬ್ಬು ಹೊಡೆಯುತ್ತಿದೆ. ವಿಷಪೂರಿತವಾಗಿದೆ. ಅನೇಕ ಸಾಮಾಜಿಕ ಕಾಯಿಲೆಗಳ ಆವಾಸಸ್ಥಾನವಾಗಿದೆ. ಸ್ವಾತಂತ್ರ್ಯ ಬಂದು 70ವರ್ಷಗಳೇ ಆದರೂ ಬಡವರು ಬಡವರಾಗಿಯೇ ಉಳಿದಿದ್ದಾರೆ. ಕೆಲವೇ ಶ್ರೀಮಂತರು ಸಹಸ್ರಾರು ಕೋಟಿಗಳ ಒಡೆಯರಾಗುತ್ತಿದ್ದಾರೆ. ಪಕ್ಷ ರಾಜಕೀಯ ಹೊಲಸಾಗಿದೆ. ವಿದ್ಯೆ ಮಾರಾಟದ ವಸ್ತುವಾಗಿದೆ. ಶಾಸಕರು, ಮಂತ್ರಿಗಳಿಂದ ಮೊದಲುಗೊಂಡು ಪಂಚಾಯ್ತಿ ಸದಸ್ಯರವರೆಗೆ ದುರ್ಲಾಭಕ್ಕೋಸ್ಕರ ವಿದ್ಯಾಸಂಸ್ಥೆಗಳನ್ನು ನಡೆಸುತ್ತಿದ್ದಾರೆ. ಮಠಾಧಿಪತಿಗಳೂ ಈ ಸ್ಪರ್ಧೆಯಲ್ಲಿದ್ದಾರೆ.
ಇದನ್ನೆಲ್ಲ ಮೂಕಪ್ರೇಕ್ಷಕರಂತೆ ನಮ್ಮ ಯುವಕರು ನೋಡಿಕೊಂಡು ಕುಳಿತಿದ್ದಾರೆ. ನಮ್ಮದು ಪ್ರಜಾರಾಜ್ಯ, ಪ್ರಜೆಗಳೇ ನಮ್ಮ ದೇಶದ ಪ್ರಭುಗಳು ಎಂದು ನಮ್ಮ ರಾಜ್ಯಾಂಗ ಹೇಳುತ್ತದೆ. ಆದರೆ ನಾವು ಮಾತ್ರ ಆಡಳಿತಕ್ಕೂ ನಮಗೂ ಸಂಬಂಧವಿಲ್ಲವೇನೋ ಎಂಬಂತೆ ಹೊಣೆಗೇಡಿಗಳಾಗಿ ನಡೆದುಕೊಳ್ಳುತ್ತಿದ್ದೇವೆ. ಇಂಥಾ ಮನೋಭಾವ ಯುವಕರಿಗೆ ತರವಲ್ಲ. ಗಾಢನಿದ್ರೆಯಲ್ಲಿರುವ ಯುವಕರು ಮೈಕೊಡವಿಕೊಂಡು ಏಳಬೇಕು. ದೇಶದ ಸಮಸ್ಯೆಗಳನ್ನೆಲ್ಲ ಒಂದೊಂದಾಗಿ ಬಗೆಹರಿಸಬೇಕು. ಅದಕ್ಕೆ ಮೊದಲು ನಾವು ದೇಶದ ಇಂದಿನ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಬೇಕು. ಸಮಸ್ಯೆಗೆ ಪರಿಹಾರ ಕಂಡುಕೊಂಡು ಬದಲಾವಣೆಗೆ ಸಂಘಟಿತರಾಗಿ ಹೋರಾಡಬೇಕು. ಯುವಕರು ನಮ್ಮ ಆಶಾಕಿರಣ, ನಮ್ಮ ಮುಂದೆ ಇರುವ ಪ್ರಮುಖ ಸಮಸ್ಯೆಗಳಿವು :-
1. ಪ್ರಜಾಪ್ರಭುತ್ವಕ್ಕೆ ಕುತ್ತು ಬಂದಿದೆ.
2. ನಮ್ಮ ಮೂಲಭೂತ ಸಮಸ್ಯೆಗಳಾದ ಬಡತನ, ನಿರುದ್ಯೋಗ, ಭ್ರಷ್ಟಾಚಾರ, ಆಡಳಿತದ ದುರ್ಬಳಕೆ ಇವುಗಳಿಗೆ ಪರಿಹಾರ ಕಂಡುಹಿಡಿದುಕೊಳ್ಳಬೇಕಿದೆ.
3. ಲೋಕಸಭೆ, ಶಾಸನಸಭೆಗಳು ಜನರ ಸಮಸ್ಯೆಗಳನ್ನು ಚರ್ಚಿಸಿ ಬಗೆಹರಿಸುವುದುದನ್ನು ಬಿಟ್ಟು ಜಗಳ, ಗದ್ದಲ, ವಾಕ್‍ಔಟ್, ದೊಂಬಿ, ಗಲಾಟೆ ಇವುಗಳಲ್ಲೇ ಕಾಲಕಳೆದು, ಚರ್ಚೆಯಿಲ್ಲದೆ ಮಸೂದೆಗಳು ಪಾಸಾಗುತ್ತಿವೆ.
4. ಹಣ, ಜಾತಿ, ಧರ್ಮ, ತೋಳ್ಬಲ ಇರುವವರು ನಮ್ಮ ಪ್ರತಿನಿಧಿಗಳಾಗಿ ಆಯ್ಕೆಯಾಗುತ್ತಿದ್ದಾರೆ.
ಇಂತಹ ಅನೇಕ ಸಮಸ್ಯೆಗಳು ನಮ್ಮನ್ನು ಕಾಡುತ್ತಿವೆ. ಮೊದಲು ಈ ಸಮಸ್ಯೆಗಳನ್ನು ಬಗೆ ಹರಿಸಲು ಯುವಕರು ತೊಡಗಬೇಕು.
ನಮ್ಮ ಸಮಾಜವನ್ನು ನಾವು ಸತ್ಯ ಮತ್ತು ಅಹಿಂಸೆಯ ಆಧಾರದ ಮೇಲೆ ಕಟ್ಟಬೇಕು. ಯುವಕರಿಗೆ ಕೋಪತಾಪಗಳಿರಬಾರದು. ಹೋರಾಟ ಮಾಡುವಾಗ ಯುವಕರು ಥರ್ಮಾಮೀಟರ್‍ನಂತೆ ಇರಬೇಕು. ಥರ್ಮಾಮೀಟರ್‍ಗೆ ಜ್ವರ ಬರಬಾರದು. ಅದಕ್ಕೆ ಜ್ವರ ಬಂದರೆ ಅದು ಇತರರ ಜ್ವರವನ್ನು ಕಂಡುಹಿಡಿಯುವುದಾದರೂ ಹೇಗೆ? ಶ್ರೀ ಕೃಷ್ಣ ಭಗವದ್ಗೀತೆಯಲ್ಲಿ ಹೇಳುತ್ತಾನೆ, ಯುದ್ಧಸ್ಯವಿಗತ ಜ್ವರ: ಎಂದು ತಲೆ ಬಿಸಿಮಾಡಿಕೊಳ್ಳದೆ, ಶಾಂತಿಚಿತ್ತದಿಂದ ಯುದ್ಧದಲ್ಲಿ ತೊಡಗಿಕೊ ಎಂಬುದು ಇದರರ್ಥ.
ನಾವು ಹೋರಾಡಬೇಕಾಗಿರುವುದು ಸರ್ವರಿಗೂ ಸುಖ ಸಂತೋಷ ಸಿಗಲೆಂದು. ಅಂದರೆ ಜನರಲ್ಲಿ ಹಸಿವು, ಬಡತನ, ಅಜ್ಞಾನ, ಅಸಮಾನತೆ ಇವು ಇರಬಾರದು. ಅಹಿಂಸಾ ಹೋರಾಟದ ಮೂಲಕ ಈ ಬದಲಾವಣೆಯನ್ನು ಸಮಾಜದಲ್ಲಿ ತರಬೇಕು. ಈಗ ಯಾವ ರಾಜಕೀಯ ಪಕ್ಷಕ್ಕೂ ಸಿದ್ಧಾಂತಗಳೇ ಇಲ್ಲ. ಇಂಥಾ ಸನ್ನಿವೇಶದ ದುರ್ಲಾಭ ಮಾಡಿಕೊಳ್ಳಲು ಭಾರತೀಯ ಜನತಾ ಪಕ್ಷ ‘ಹಿಂದೂರಾಷ್ಟ್ರ ನಿರ್ಮಾಣ’ ಎಂಬ ಡೋಂಗಿ ರಾಷ್ಟ್ರವಾದವೊಂದನ್ನು ಮುಂದೆ ತರುತ್ತಿದೆ. ಅದು ಅತ್ಯಂತ ಅಪಾಯಕಾರಿ. ಸಮಾಜದಲ್ಲಿ ಮೌಲ್ಯಗಳ ಅಧಃಪತನವೇ ಇಂದಿನ ನಮ್ಮ ಈ ಅಧೋಗತಿಗೆ ಕಾರಣ. ಮಾನವೀಯ ಮೌಲ್ಯಗಳಾದ ಸೋದರತ್ವ, ಸಮಾನತೆಗಳ ಆಧಾರದ ಮೇಲೆ ನಮ್ಮ ಸಮಾಜ ರೂಪಿತವಾಗಬೇಕು. ಜಾತಿ, ಧರ್ಮಗಳನ್ನು ರಾಜಕೀಯಕ್ಕೆ ಬೆರೆಸಬಾರದು. ಆದರೆ ಈಗ ಕ್ರಿಮಿನಲ್‍ಗಳು ಎಲ್ಲಾ ರಾಜಕೀಯ ಪಕ್ಷಗಳಿಂದಲೂ ಆರಿಸಿ ಬರುತ್ತಿದ್ದಾರೆ. ಈ ಸಾರಿ ಚುನಾವಣೆಯಲ್ಲಿ ಬಿಜೆಪಿಯಿಂದ 27, ಜನತಾದಳದಿಂದ 23, ಕಾಂಗ್ರೆಸ್ಸಿನಿಂದ 15 ಕ್ರಿಮಿನಲ್ ಹಿನ್ನೆಲೆಯವರು ಆರಿಸಿ ಬಂದಿದ್ದಾರೆ. ಮತದಾರರಿಗೆ ಇಂತಹವರನ್ನು ಆಯ್ಕೆ ಮಾಡಬೇಡಿ, ಇಂಥವರಿಗೆ ಮತ ಹಾಕಬೇಡಿ ಎಂದು ಗಟ್ಟಿದನಿಯಲ್ಲಿ ಹೇಳುವವರು ಬೇಕಾಗಿದ್ದಾರೆ.
ಯುವಕರ ಇತ್ತೀಚಿನ ಸಾಧನೆ ಕುರಿತು ಎರಡು ನಿದರ್ಶನಗಳನ್ನು ಕೊಡುತ್ತೇನೆ. ಅಸ್ಸಾಂನಲ್ಲಿ ವಿದ್ಯಾರ್ಥಿಗಳು ಸಂಘಟನೆ ಮಾಡಿಕೊಂಡರು. ಆಗ ಅಸ್ಸಾಂನಲ್ಲಿ ಅಧಿಕಾರಿಗಳಾಗಿದ್ದವರೆಲ್ಲ ಬಂಗಾಳಿಗಳು. ‘ಅಸ್ಸಾಂ ಅಸ್ಸಾಮಿಯರಿಗೆ’ ಎಂಬ ಚಳವಳಿ ಆರಂಭಿಸಿದರು. ಅಸ್ಸಾಂ ಗಣತಂತ್ರ ಪರಿಷತ್ ಎಂಬ ಸಂಸ್ಥೆ ಸ್ಥಾಪಿಸಿದರು. ಹೋರಾಟದಲ್ಲಿ ಭಾಗವಹಿಸಿದ್ದಕ್ಕಾಗಿ ಲಾಠಿಚಾರ್ಜ್ ನಡೆದವು, ಅರೆಸ್ಟು, ಜೈಲುವಾಸಗಳಾದವು. ಆದರೆ ವಿದ್ಯಾರ್ಥಿ ಹೋರಾಟಗಾರರು ಶಾಂತಿಯುತವಾಗಿ ಚಳವಳಿ ಮುಂದುವರೆಸಿದರು. ಚಳುವಳಿಯ ನಾಯಕರು ಬಂದ್ ಘೋಷಣೆ ಮಾಡಿದರು. ಬಂದ್ ಯಶಸ್ವಿಯಾಯಿತು. ಪೊಲೀಸ್ ಕಫ್ರ್ಯೂ ಹಾಕಿದರು. ಜನರು ಯಾರೂ ಮನೆಬಿಟ್ಟು ಹೊರಬರಲೇ ಇಲ್ಲ. ಸರ್ಕಾರಿ ಕೆಲಸವೆಲ್ಲ ಸ್ಥಗಿತವಾಯಿತು. ಮುಂದೆ ವಿಧಾನಸಭೆಗೆ ಚುನಾವಣೆ ಘೋಷಣೆಯಾಯಿತು. ಚುನಾವಣೆ ನಡೆಸುವ ಅಧಿಕಾರಿಗಳನ್ನು ಇಂದಿರಾಗಾಂಧಿ ದೆಹಲಿಯಿಂದಲೇ ಕಳುಹಿಸಿದರು. ವಿದಾರ್ಥಿ ನಾಯಕರು ಚುನಾವಣೆಯನ್ನು ಬಹಿಷ್ಕರಿಸಲು ಅಸ್ಸಾಮಿಯರಿಗೆ ಕರೆಕೊಟ್ಟರು. ಚುನಾವಣೆ ನಡೆದೇ ನಡೆಯಿತು. ಶೇ.10ರಷ್ಟು ಮತದಾನ ಆಯಿತು. ಆದರೂ ಎಣಿಕೆ ನಡೆಯಿತು. ಕಾಂಗ್ರೆಸ್‍ಗೆ ಬಹುಮತ ಬಂತು ಎಂದು ಚುನಾವಣಾ ಆಯೋಗ ಘೋಷಣೆ ಮಾಡಿತು. ಆದರೆ ಆ ಸರ್ಕಾರ ಬಹಳ ಕಾಲ ನಡೆಯಲಿಲ್ಲ. ಮತ್ತೆ ಚುನಾವಣೆ ಘೋಷಣೆಯಾಯಿತು. ‘ಅಸ್ಸಾಂ ಗಣ ಪರಿಷತ್’ ಪರವಾಗಿ ಅಭ್ಯರ್ಥಿಗಳನ್ನು ನಿಲ್ಲಿಸಲಾಯಿತು. ಅವರು ಬಹುಮತ ಗಳಿಸಿದರು. ಅಧಿಕಾರ ಅವರ ಕೈಗೆ ಹೋಯಿತು. ಯುವಕರು ಸಂಘಟಿತರಾಗಿ ಜನತೆಯ ಹಿತಕ್ಕಾಗಿ ದುಡಿದರೆ, ಅವರೂ ಅಧಿಕಾರಕ್ಕೆ ಬರಬಹುದು ಎಂಬುದಕ್ಕೆ ಇದು ಒಂದು ಉದಾಹರಣೆ.
ಬಿಹಾರದಲ್ಲಿ ಜಯಪ್ರಕಾಶ್ ನಾರಾಯಣ್‍ರವರ ನೇತೃತ್ವದಲ್ಲಿ ಸರ್ಕಾರದ ಭ್ರಷ್ಟಾಚಾರದ ವಿರುದ್ಧವಾಗಿ ದೀರ್ಘಕಾಲದ ಚಳುವಳಿ ನಡೆಯಿತು. ಸರ್ಕಾರ ನಡೆಸುವವರು ಭ್ರಷ್ಟರಾಗಿರುವುದರಿಂದ ರಾಜೀನಾಮೆ ಕೊಟ್ಟು ಹೋಗಬೇಕು ಎಂದು ಘೋಷಿಸುತ್ತಾ ಒಂದು ಲಕ್ಷ ಸಹಿಮಾಡಿದ ಸಹಿಸಂಗ್ರಹದ ಕಡತಗಳನ್ನು ಲಾರಿಯಲ್ಲಿಟ್ಟುಕೊಂಡು ವಿದ್ಯಾರ್ಥಿಗಳು ಮೆರವಣಿಗೆ ಹೊರಟರು. ಜಯಪ್ರಕಾಶರ ತಲೆಗೇ ಪೊಲೀಸರು ಲಾಠಿಯಿಂದ ಹೊಡೆದರು. ವಿದ್ಯಾರ್ಥಿಗಳ ದಸ್ತಗಿರಿ ಆಯಿತು. ಮುಂದಿನ ಚುನಾವಣೆಯಲ್ಲಿ ಮುಖ್ಯಮಂತ್ರಿಗಳು ಸೋತರು.
ಯುವಕರು ಮನಸ್ಸು ಮಾಡಿದರೆ ಭ್ರಷ್ಟಾಚಾರ ತಪ್ಪಿಸಬಹುದು. ಆಡಳಿತ ನಡೆಸುವ ಭ್ರಷ್ಟ ಸರ್ಕಾರವನ್ನು ಕಿತ್ತೆಸೆಯಬಹುದು ಎಂಬುದಕ್ಕೆ ಯುವಕರ ಈ ಎರಡು ಹೋರಾಟಗಳು ಉದಾಹರಣೆ.
ಸಮಾಜ ಪೂರ್ತಿ ಕೆಟ್ಟುಹೋಗಿದೆ. ಸರ್ಕಾರ ನಡೆಸುವವರು ಭ್ರಷ್ಟರಾಗಿದ್ದಾರೆ, ಸರ್ಕಾರಿ ಅಧಿಕಾರಿಗಳು ಲಂಚಕೋರರು; ಇವನ್ನೆಲ್ಲ ನೋಡಿಕೊಂಡು ಮೂಕಪ್ರೇಕ್ಷರಂತೆ ಕುಳಿತಿದ್ದಾರೆ ಯುವಜನತೆ. ಈ ಮನೋಭಾವ ತ್ಯಜಿಸಿ ಕ್ರಾಂತಿಯನ್ನು ತರಬೇಕೆಂದು ಯುವಕರು ಮನಸ್ಸು ಮಾಡಬೇಕು. ಕ್ರಾಂತಿ ಎಂದರೆ ರಕ್ತಕ್ರಾಂತಿ ಎಂದು ಯುವಕರು ಭಾವಿಸುತ್ತಾರೆ. ಕ್ರಾಂತಿ ಎಂದರೆ ಸಮಾಜದ ಸಂಪೂರ್ಣ ಬದಲಾವಣೆ. ಈ ಕ್ರಾಂತಿಯನ್ನು ಯುವಕರು ಜನರ ತಲೆಯಲ್ಲಿ ಕ್ರಾಂತಿಯ ಬೀಜಗಳನ್ನು ಬಿತ್ತುವ ಮೂಲಕ ಸಾಧಿಸಬೇಕು. ಕ್ರಾಂತಿಯ ಬೀಜ ಎಲ್ಲರ ತಲೆಯಲ್ಲಿ ಸ್ಫೋಟವಾಗಬೇಕು. ಇದನ್ನು ವಿಚಾರಕ್ರಾಂತಿ ಎಂದು ಹೇಳುತ್ತಾರೆ. ಅಂತಹ ವಿಚಾರಕ್ರಾಂತಿ ಯುವಕರ ಮನಸ್ಸಿನಲ್ಲಿ ಮೂಡಬೇಕು. ಯುವಕರು ಕ್ರಾಂತಿವಾಹಕರಾಗಿ ಜನಜಾಗೃತಿಯ ಕೆಲಸದಲ್ಲಿ ತೊಡಗಿಸಿಕೊಂಡಲ್ಲಿ ಜನಜಾಗೃತಿಯ ಮೂಲಕ ಸಾಮಾಜಿಕ ಕ್ರಾಂತಿ ಸಾಧಿಸಬಹುದು; ಹೊಸ ಮೌಲ್ಯಗಳಿರುವ ನವಸಮಾಜವನ್ನು ಸೃಷ್ಟಿ ಮಾಡಬಹುದು.
                             – ಹೆಚ್.ಎಸ್.ದೊರೆಸ್ವಾಮಿ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕರೂರ್ ಕಾಲ್ತುಳಿತ : ಸಿಬಿಐ ಮುಂದೆ ವಿಚಾರಣೆಗೆ ಹಾಜರಾದ ನಟ ವಿಜಯ್

ಕರೂರ್ ಕಾಲ್ತುಳಿತ ಘಟನೆಗೆ ಸಂಬಂಧಪಟ್ಟಂತೆ ನಟ ಹಾಗೂ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಮುಖ್ಯಸ್ಥ ವಿಜಯ್ ಸೋಮವಾರ (ಜ.12) ದೆಹಲಿಯ ಕೇಂದ್ರ ತನಿಖಾ ದಳ (ಸಿಬಿಐ) ಕಚೇರಿಗೆ ವಿಚಾರಣೆಗೆ ಹಾಜರಾಗಿದ್ದಾರೆ. ಚಾರ್ಟರ್ಡ್ ವಿಮಾನದಲ್ಲಿ...

ಜೂನ್‌ ಅಂತ್ಯದೊಳಗೆ ಜಿಬಿಎ ವ್ಯಾಪ್ತಿಯ ಪಾಲಿಕೆಗಳಿಗೆ ಚುನಾವಣೆ : ಗಡುವು ವಿಧಿಸಿದ ಸುಪ್ರೀಂ ಕೋರ್ಟ್

ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ಐದು ನಗರ ಪಾಲಿಕೆಗಳಿಗೆ ಜೂನ್ ಅಂತ್ಯದೊಳಗೆ ಚುನಾವಣೆ ನಡೆಸುವಂತೆ ರಾಜ್ಯ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೋಮವಾರ (ಜ.12) ನಿರ್ದೇಶನ ನೀಡಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು...

ಐ-ಪ್ಯಾಕ್ ಮೇಲೆ ಇಡಿ ದಾಳಿ: ಸುಪ್ರೀಂ ಕೋರ್ಟ್ ನಲ್ಲಿ ಮಮತಾ ವಿರುದ್ಧ ಎಫ್‌ಐಆರ್ ದಾಖಲಿಸಲು ನಿರ್ದೇಶನ ಕೋರಿ ಅರ್ಜಿ ಸಲ್ಲಿಸಿದ ಇಡಿ

ನವದೆಹಲಿ: ಐ-ಪಿಎಸಿ ವಿರುದ್ಧದ ಬಹು-ರಾಜ್ಯ ಹಣ ವರ್ಗಾವಣೆ ಪ್ರಕರಣದಲ್ಲಿ ತನಿಖೆಗೆ ಅಡ್ಡಿಪಡಿಸಿದ, ಸಾಕ್ಷ್ಯಗಳನ್ನು ತಿರುಚಿದ ಮತ್ತು ನಾಶಪಡಿಸಿದ ಆರೋಪದ ಮೇಲೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಡಿಜಿಪಿ ಮತ್ತು ಕೋಲ್ಕತ್ತಾ ಪೊಲೀಸ್...

ಭಾರತಕ್ಕಿಂತ ಯಾವುದೇ ಪಾಲುದಾರ ದೇಶ ಮುಖ್ಯವಲ್ಲ, ವ್ಯಾಪಾರ ಮಾತುಕತೆ ಪುನರಾರಂಭ: ಅಮೆರಿಕ ರಾಯಭಾರಿ ಸೆರ್ಗಿಯೊ ಗೋರ್

"ವಾಷಿಂಗ್ಟನ್‌ಗೆ ಭಾರತಕ್ಕಿಂತ ಅಗತ್ಯವಾದ ದೇಶ ಇನ್ನೊಂದಿಲ್ಲ ಮತ್ತು ಎರಡೂ ಕಡೆಯವರು ವ್ಯಾಪಾರ ಒಪ್ಪಂದವನ್ನು ದೃಢೀಕರಿಸುವಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ" ಎಂದು ಅಮೆರಿಕದ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್ ಸೋಮವಾರ ಹೇಳಿದ್ದಾರೆ. ಅಮೆರಿಕ ರಾಯಭಾರ ಕಚೇರಿಯ ನೌಕರರು...

ಬಿಷಪ್ ಫ್ರಾಂಕೊ ಮುಲಕ್ಕಲ್ ಅತ್ಯಾಚಾರ ಪ್ರಕರಣ : ಒಂಬತ್ತು ವರ್ಷಗಳ ಬಳಿಕ ಮೌನ ಮುರಿದ ಸಂತ್ರಸ್ತೆ, ಕಾನೂನು ಹೋರಾಟ ಮುಂದುವರಿಸುವುದಾಗಿ ಹೇಳಿಕೆ

ಬಿಷಪ್ ಫ್ರಾಂಕೊ ಮುಲಕ್ಕಲ್ ವಿರುದ್ದದ ಅತ್ಯಾಚಾರ ಪ್ರಕರಣದ ಸಂತ್ರಸ್ತೆ ಕ್ರೈಸ್ತ ಸನ್ಯಾಸಿನಿ ಒಂಬತ್ತು ವರ್ಷಗಳ ನಂತರ ಮೊದಲ ಬಾರಿಗೆ ಸಾರ್ವಜನಿಕವಾಗಿ ಮಾತನಾಡಿದ್ದು, ಫ್ರಾಂಕೊ ಮುಲಕ್ಕಲ್ ಅವರನ್ನು ನ್ಯಾಯಾಲಯ ಖುಲಾಸೆಗೊಳಿಸಿದ್ದಕ್ಕೆ ನಾನು ದಂಗಾಗಿದ್ದೇನೆ. ನ್ಯಾಯಕ್ಕಾಗಿ...

‘ವೆನೆಜುವೆಲಾದ ಹಂಗಾಮಿ ಅಧ್ಯಕ್ಷ’ ಎಂದು ಘೋಷಿಸಿಕೊಂಡ ಡೊನಾಲ್ಡ್ ಟ್ರಂಪ್ 

ಸೋಮವಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟ್ರುತ್ ಸೋಶಿಯಲ್‌ನಲ್ಲಿ ತಮ್ಮದೇ ಆದ ವಿಕಿಪೀಡಿಯಾ ಪುಟದ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ, ಅದರಲ್ಲಿ "ವೆನೆಜುವೆಲಾದ ಹಂಗಾಮಿ ಅಧ್ಯಕ್ಷ" ಎಂಬ ಹುದ್ದೆಯನ್ನು ಹೊಂದಿರುವ ಅವರ ಚಿತ್ರವಿದೆ. ಪೋಸ್ಟ್‌ನಲ್ಲಿ ಟ್ರಂಪ್...

ಪೊಲೀಸ್ ತುರ್ತು ವಾಹನದ ಚಾಲಕ ಸೇರಿ ಐವರಿಂದ ಯುವತಿ ಮೇಲೆ ಅತ್ಯಾಚಾರ!

ಪೊಲೀಸ್ ತುರ್ತು ಸೇವೆ (112) ವಾಹನದ ಚಾಲಕ ಸೇರಿದಂತೆ ಐವರು ಪುರುಷರು 19 ವರ್ಷದ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಛತ್ತೀಸ್‌ಗಢದ ಕೋರ್ಬಾ ಜಿಲ್ಲೆಯ ಬಂಕಿಮೊಂಗ್ರ ಪ್ರದೇಶದಲ್ಲಿ ನಡೆದಿದೆ. ಜನವರಿ...

ತ್ರಿಪುರಾದಲ್ಲಿ ಕೋಮು ಹಿಂಸಾಚಾರ : ಮಸೀದಿ, ಮನೆಗಳಿಗೆ ಹಾನಿ ; ನಿಷೇಧಾಜ್ಞೆ ಜಾರಿ

ಸ್ಥಳೀಯ ದೇವಾಲಯೊಂದಕ್ಕೆ ಚಂದಾ ಸಂಗ್ರಹಿಸುವ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದು ಕನಿಷ್ಠ ಐದರಿಂದ ಆರು ಜನರು ಗಾಯಗೊಂಡು ಮನೆಗಳು, ಮರದ ಅಂಗಡಿ ಮತ್ತು ಮಸೀದಿಗೆ ಹಾನಿಯಾದ ನಂತರ, ಜನವರಿ 10ರ...

ಭದ್ರತಾ ಕಾರಣ ನೀಡಿ ಸ್ಮಾರ್ಟ್‌ಫೋನ್ ತಯಾರಕರು ಮೂಲ ಕೋಡ್ ನೀಡುವಂತೆ ಒತ್ತಾಯಿಸಲು ಕೇಂದ್ರದ ಪ್ರಸ್ತಾಪ

ನವದೆಹಲಿ: ಸ್ಮಾರ್ಟ್‌ಫೋನ್ ತಯಾರಕರು ಸರ್ಕಾರದೊಂದಿಗೆ ಮೂಲ ಕೋಡ್ ಹಂಚಿಕೊಳ್ಳುವುದು ಮತ್ತು ಭದ್ರತಾ ಕ್ರಮಗಳ ಭಾಗವಾಗಿ ಹಲವಾರು ಸಾಫ್ಟ್‌ವೇರ್ ಬದಲಾವಣೆಗಳನ್ನು ಮಾಡುವುದು ಕಡ್ಡಾಯಗೊಳಿಸಲು ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪ್ರಸ್ತಾಪಿಸಿದೆ, ಇದು ಆಪಲ್ ಮತ್ತು...

ದಾಳಿ ನಡೆಸಿದರೆ ನಮ್ಮ ನೇರ ಗುರಿಯಾಗುತ್ತೀರಿ : ಅಮೆರಿಕ, ಇಸ್ರೇಲ್‌ಗೆ ಎಚ್ಚರಿಕೆ ನೀಡಿದ ಇರಾನ್

ಇರಾನ್‌ನಲ್ಲಿ ನಡೆಯುತ್ತಿರುವ ಆಡಳಿತ ವಿರೋಧಿ ದಂಗೆಯಲ್ಲಿ ಸಾವುಗಳು ಹೆಚ್ಚಾದರೆ ಅಮೆರಿಕ ಮಧ್ಯಪ್ರವೇಶಿಸಲಿದೆ ಎಂದಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಇರಾನ್‌ ತಿರುಗೇಟು ನೀಡಿದೆ. ಇರಾನ್‌ನ ಸಂಸತ್ತಿನ ಅಧ್ಯಕ್ಷ ಮೊಹಮ್ಮದ್ ಬಾಗರ್ ಖಲೀಬಾಫ್ "ಅಮೆರಿಕ ಇರಾನ್ ಮೇಲೆ...