CAA, NRC, NPR ಕುರಿತು ಗೃಹ ಸಚಿವ ಅಮಿತ್ ಶಾರವರು ಚರ್ಚೆಗೆ ಆಹ್ವಾನಿಸಿದ್ದರ ಕುರಿತು ಪತ್ರ ಬರೆದಿದ್ದ ಮಾಜಿ ಐಎಎಸ್ ಅಧಿಕಾರಿ ಕಣ್ಣನ್ ಗೋಪಿನಾಥನ್, ಭೇಟಿಗೆ ಸಮಯ ನೀಡಬೇಕೆಂದು ಆಗ್ರಹಿಸಿದ್ದರು.
ಫೆಬ್ರವರಿ 13, ಗುರುವಾರ: ಸಿಎಎ ಯಿಂದ ದೇಶಕ್ಕೆ ಯಾವುದೇ ಅಪಾಯಗಳಿಲ್ಲ. ಈ ಕುರಿತು ಯಾರಾದರೂ ನನ್ನೊಡನೆ ಬಹಿರಂಗ ಚರ್ಚೆಗೆ ಬರಬಹುದು. ನಿಮ್ಮ ತಪ್ಪು ಕಲ್ಪನೆಗಳನ್ನು ತೆಗೆದುಹಾಕುತ್ತೇವೆ. ಮೂರು ದಿನ ಸಮಯ ಕೊಡುತ್ತೇವೆ ನಮ್ಮ ಕಚೇರಿಯಲ್ಲಿಯೇ ಚರ್ಚಿಸಬಹುದು ಎಂದು ಗೃಹ ಸಚಿವ ಅಮಿತ್ ಶಾ ಈ ಹಿಂದೆ ಘೋಷಿಸಿದ್ದರು.
As per his invite, have sought appointment with @AmitShah to discuss CAA-NRC-NPR. Looking forward. #notocaa_nrc_npr https://t.co/SxCbCFDwev pic.twitter.com/M5JNUBn7sO
— Kannan Gopinathan (@naukarshah) February 14, 2020
ಫೆಬ್ರವರಿ 14, ಶುಕ್ರವಾರ: ಈ ಕುರಿತು ಅವರಿಗೆ ಇಮೇಲ್ ಮೂಲಕ ಪತ್ರ ಬರೆದಿರುವ ಗೋಪಿನಾಥನ್, ಚರ್ಚೆಗೆ ಬರುತ್ತೇನೆ, ಸಮಯ ತಿಳಿಸಿ ಎಂದು ಮನವಿ ಮಾಡಿದ್ದರು.
ಫೆಬ್ರವರಿ 17, ಸೋಮವಾರ: “ಮೂರು ದಿನಗಳ ಗಡುವು ಮುಗಿದಿದೆ ಆದರೆ ಸಚಿವರು ನನ್ನ ಮೇಲ್‌ಗೆ ಇನ್ನೂ ಪ್ರತಿಕ್ರಿಯಿಸಿಲ್ಲ” ಎಂದು ಗೋಪಿನಾಥನ್ ತಿಳಿಸಿದ್ದಾರೆ.
ಸಿಎಎ ಬಗ್ಗೆ ಚರ್ಚಿಸಲು ‘ಮೂರು ದಿನಗಳಲ್ಲಿ’ ಯಾರಿಗಾದರೂ ಸಮಯ ನೀಡುತ್ತೇನೆ ಎಂದು ಅಮಿತ್ ಶಾ ಹೇಳಿದ್ದರು. ಈಗ ಐದು ದಿನಗಳು ಕಳೆದಿವೆ ಮತ್ತು ಅಮಿತ್ ಶಾ ಇನ್ನೂ ತಮ್ಮ ಭರವಸೆಯನ್ನು ಉಳಿಸಿಕೊಂಡಿಲ್ಲ ಎಂದು ಗೋಪಿನಾಥನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Amit Shah claimed that he would meet anyone 'within three days' to talk about CAA. It has been five days now and Amit Shah has yet to keep his promise.https://t.co/qqdPbrnZz9
— The Telegraph (@ttindia) February 18, 2020
ಷಾ ಅವರ ಕಚೇರಿಯಿಂದ ಯಾವುದೇ ಪ್ರತಿಕ್ರಿಯೆ ಸಿಗದ ನಂತರ, ಗೋಪಿನಾಥನ್ ಸೋಮವಾರ ಟ್ವೀಟ್ ಮಾಡಿ “ಮೂರು ದಿನಗಳು ಮುಗಿದಿವೆ. ಯಾವುದೇ ಪ್ರತಿಕ್ರಿಯೆ ಇಲ್ಲ. ಅಮಿತ್‌ಶಾ ಅವರ ಮಾತುಗಳಿಗೆ ಯಾವುದೇ ಬೆಲೆ ನೀಡಬಾರದು. ಅವರನ್ನು ಬ್ಲಫ್ ಎಂದು ಕರೆಯಬೇಕಾಗುತ್ತದೆ. ಒಂದು ಜವಾಬ್ದಾರಿಯುತ ಸ್ಥಾನವನ್ನು ಅಲಂಕರಿಸಿರುವಾಗ ಟಿವಿಯಲ್ಲಿ ಕೂತು ಬಾಯಿಗೆ ಬಂದಹಾಗೆ ಮಾತನಾಡಬಾರದು. ನಾನು ಮತ್ತೆ ನಿಮಗೆ ನೆನಪಿಸಿ ತೊಂದರೆ ಕೊಡುವುದಿಲ್ಲ ಚಿಂತಿಸಬೇಡಿ. ಆದರೆ ದಯವಿಟ್ಟು ಇದನ್ನು ಪ್ರಜಾಪ್ರಭುತ್ವದ ಪಾಠ ಎಂದು ತೆಗೆದುಕೊಳ್ಳಿ” ಎಂದು ಹೇಳಿದ್ದರು.


