ಮಹಾತ್ಮ ಗಾಂಧಿಜಿಯವರ ಶಬರಮತಿ ಆಶ್ರಮದ ಭೇಟಿ ನೀಡಿದವರ ಪುಸ್ತಕದಲ್ಲಿ ಟ್ರಂಪ್ “ಈ ಅದ್ಭುತ ಭೇಟಿಗಾಗಿ, ನನ್ನ ಮಹಾ ಸ್ನೇಹಿತ ಮೋದಿಗೆ ಧನ್ಯವಾದಗಳು” ಎಂದು ಬರೆದಿದ್ದಾರೆ.
ಅಹಮದಾಬಾದ್‌ನಲ್ಲಿರುವ ಮಹಾತ್ಮ ಗಾಂಧಿಯವರ ಶಬರಮತಿ ಆಶ್ರಮದಲ್ಲಿ ಭೇಟಿ ನೀಡಿದ ಪುಸ್ತಕದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಹಿ ಮಾಡಿದ ಸಂದೇಶದಲ್ಲಿ ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ನಾಯಕತ್ವ ನೀಡಿದ ಮಹಾತ್ಮಗಾಂಧೀಜಿಯ ಬಗ್ಗೆ ಯಾವುದೇ ಉಲ್ಲೇಖವಿಲ್ಲದೆ ಇರುವುದು ಎದ್ದು ಕಾಣುತ್ತಿದೆ.

2010 ರಲ್ಲಿ ಬರಾಕ್ ಒಬಾಮರವರು “ಗಾಂಧಿಯವರು ಭಾರತಕ್ಕಷ್ಡೆ ನಾಯಕರಲ್ಲ , ವಿಶ್ವಕ್ಕೇ ನಾಯಕರು. ನಾನು ಇದನ್ನು ನೋಡುವ ಅವಕಾಶ ಪಡೆದುದ್ದಕ್ಕೆ ಧನ್ಯವಾದ”ಎಂದು ಬರೆದಿದ್ದರು.
ಪ್ರಧಾನಿ ನರೇಂದ್ರ ಮೋದಿ ಡೊನಾಲ್ಡ್ ಟ್ರಂಪ್ ಮತ್ತು ಮೆಲಾನಿಯಾ ಟ್ರಂಪ್ ಅವರಿಗೆ ಶಬರಮತಿ ಆಶ್ರಮವನ್ನು ತೋರಿಸುತ್ತಾ ಚರಕಾವನ್ನು ತೋರಿಸಿ ಅದರ ಬಗ್ಗೆ ವಿವರಿಸಿದರು. ಅಲ್ಲದೇ ಟ್ರಂಪ್ ದಂಪತಿಗಳು ಚರಕಾವನ್ನು ತಿರುಗಿಸಲು ಪ್ರಯತ್ನಿಸಿದರು.
ಟ್ರಂಪ್ ಭಾರತಕ್ಕೆ ಅಧಿಕೃತವಾಗಿ ಇದೇ ಮೊದಲ ಭಾರಿ ಆಗಮಿಸಿದ್ದಾರೆ. ಟ್ರಂಪ್ ಭಾರತದಲ್ಲಿ ಎರಡು ದಿನ ಇರಲಿದ್ದಾರೆ.


