Homeಮುಖಪುಟಕೇವಲ 'ಪಾಕಿಸ್ತಾನ್ ಜಿಂದಾಬಾದ್' ಘೋಷಣೆ ರಾಷ್ಟ್ರದ್ರೋಹವಲ್ಲ: ಮಾಜಿ ಸಾಲಿಸಿಟರ್ ಜನರಲ್ ಸೋಲಿ ಸೊರಾಬ್ಜಿ

ಕೇವಲ ‘ಪಾಕಿಸ್ತಾನ್ ಜಿಂದಾಬಾದ್’ ಘೋಷಣೆ ರಾಷ್ಟ್ರದ್ರೋಹವಲ್ಲ: ಮಾಜಿ ಸಾಲಿಸಿಟರ್ ಜನರಲ್ ಸೋಲಿ ಸೊರಾಬ್ಜಿ

- Advertisement -
- Advertisement -

2016ರಲ್ಲಿ ಕನ್ಹಯ್ಯ ಕುಮಾರ್ ವಿಚಾರದ ಕುರಿತು ರಾಹುಲ್ ಕುನ್ವಾಲ್ (ನಿರ್ವಾಹಕ ಸಂಪಾದಕ, ಟೈಮ್ಸ್ ಆಫ್ ಇಂಡಿಯಾ) ನಡೆಸಿದ ಸಂದರ್ಶನ

ಅನುವಾದ: ನಿಖಿಲ್ ಕೋಲ್ಪೆ

ಜವಾಹರಲಾಲ್ ನೆಹರೂ ಯುನಿವರ್ಸಿಟಿ (ಜೆಎನ್‌ಯು)ಲ್ಲಿ ಕೂಗಲಾದ ಕೆಲವು ಘೋಷಣೆಗಳು ‘ಸಮಸ್ಯಾತ್ಮಕ’ವಾಗಿದ್ದರೂ, ಈ ಘಟನೆ ನಡೆಯುವಾಗ ಸ್ಥಳದಲ್ಲಿದ್ದ ಕನ್ನಯ್ಯ ಕುಮಾರ್ ವಿರುದ್ಧ ಹೊರಿಸಲಾದ ರಾಷ್ಟ್ರದ್ರೋಹದ ಆರೋಪಕ್ಕೆ ಸಮವಲ್ಲ ಎಂದು ಹೇಳಿರುವ ಮಾಜಿ ಸಾಲಿಸಿಟರ್ ಜನರಲ್ ಸೋಲಿ ಸೊರಾಬ್ಜಿ ದೇಶದ್ರೋಹದ ಕಾನೂನನ್ನು ಸ್ಪಷ್ಟಪಡಿಸಿದ್ದಾರೆ.

ಪ್ರಶ್ನೆ: ನಿಮ್ಮೆಲ್ಲಾ ಖ್ಯಾತಿ ಮತ್ತು ಅನುಭವದ ಹಿನ್ನೆಲೆಯಲ್ಲಿ ಜೆಎನ್‌ಯು ವಿದ್ಯಾರ್ಥಿ ಸಂಘ (ಜೆಎನ್‌ಯುಎಸ್‌ಯು)ದ ಅಧ್ಯಕ್ಷರಾಗಿದ್ದ ಕನ್ನಯ್ಯ ಕುಮಾರ್ ವಿರುದ್ಧ ರಾಷ್ಟ್ರದ್ರೋಹ ಆರೋಪ ಹೊರಿಸಿದ್ದು ಸರಿಯೋ, ತಪ್ಪೋ ಎಂದು ವಿಶ್ಲೇಷಿಸುವಂತೆ ನಾವು ಕೋರುತ್ತೇವೆ.

ಸೊರಾಬ್ಜಿ: ಅವೆಲ್ಲವೂ ವಾಸ್ತವಾಂಶಗಳ ಮೇಲೆ ಅವಲಂಬಿಸಿವೆ. ಮೊತ್ತಮೊದಲಾಗಿ ರಾಷ್ಟ್ರದ್ರೋಹ ಎಂದರೆ ಏನು ಎಂಬುದನ್ನು ಅರ್ಥ ಮಾಡಿಕೊಳ್ಳೋಣ. ಸರಕಾರದ ಮೇಲಿನ ಯಾವುದೇ ಟೀಕೆ, ಸರಕಾರ ಕೈಗೊಂಡ ಕಾರ್ಯಗಳ ನಿರಾಕರಣೆ- ಅದೆಷ್ಟೇ ಬಲವಾಗಿ ಅಭಿವ್ಯಕ್ತಗೊಳಿಸಿದರೂ ಅದು ರಾಷ್ಟ್ರದ್ರೋಹವಾಗುವುದಿಲ್ಲ. ಕೇದಾರನಾಥ ಪ್ರಕರಣದಲ್ಲಿ ವಿಧಿ 124ಎಯ ಸಿಂಧುತ್ವವನ್ನು ಪರಿಗಣಿಸಿದಾಗ, ಈ ವಿಧಿಯು ಸಾರ್ವಜನಿಕ ಶಿಸ್ತನ್ನು ಭಂಗಗೊಳಿಸುವ ಅಥವಾ ಹಿಂಸೆಯನ್ನು ಪ್ರಚೋದಿಸುವ ಯಾವುದೇ ಮಾತು, ಶಬ್ದಗಳು ಅಥವಾ ಕೃತಿಗೆ ಸೀಮಿತವಾಗಿದೆ.

ಪ್ರಶ್ನೆ: ನಾವು 1962ರ ಕೇದಾರನಾಥ ಪ್ರಕರಣವನ್ನು ಉದಾಹರಣೆಯಾಗಿ ತೆಗೆದುಕೊಂಡು, ಅದೇ ಮಾನದಂಡವನ್ನು ಜೆಎನ್‌ಯು ಪ್ರಕರಣಕ್ಕೆ ಅನ್ವಯಿಸಿದರೆ, ರಾಷ್ಟ್ರದ್ರೋಹದ ಆರೋಪವನ್ನು ತಪ್ಪಾಗಿ ಅನ್ವಯಿಸಲಾಗಿದೆಯೇ?

ಸೊರಾಬ್ಜಿ: ಅದು ಬೇರೆಬೇರೆ ವಿಷಯಗಳ ಮೇಲೆ ಅವಲಂಬಿಸಿದೆ. ಅವರು ಕೇವಲ ‘ ಪಾಕಿಸ್ತಾನ್ ಜಿಂದಾಬಾದ್’ ಎಂದು ಹೇಳಿದ್ದರೆ, ನನ್ನ ಮಟ್ಟಿಗೆ ಅದು ತೀರಾ ಖಂಡನೀಯ. ಆದರೆ, ಅದು ರಾಷ್ಟ್ರದ್ರೋಹವಲ್ಲ. ಆದರೆ, ಅವರು ಈ ಸರಕಾರವೊಂದು ದಬ್ಬಾಳಿಕೆಯ ಸರಕಾರ, ಜನರಿಗೆ ಅವರ ಮೂಲಭೂತ ಹಕ್ಕುಗಳನ್ನು ತಿಳಿಯುವ ಅವಕಾಶವಿಲ್ಲ, ಅದರ ವಿರುದ್ಧ ಪ್ರತಿಭಟಿಸಿ ಪ್ರಯೋಜನವಿಲ್ಲ, ನಾವದನ್ನು ಕಿತ್ತೆಸೆಯಬೇಕು ಎಂದು ಹೇಳಿದ್ದರೆ, ಅದು ಹಿಂಸೆಗೆ ಪ್ರಚೋದನೆಯಾಗುತ್ತದೆ ಮತ್ತು ರಾಷ್ಟ್ರದ್ರೋಹದ ಪ್ರಕರಣವನ್ನು ಆಕರ್ಷಿಸುತ್ತದೆ. ಆದರೆ, ಎಲ್ಲವೂ ವಾಸ್ತವಾಂಶಗಳ ಮೇಲೆ ಅವಲಂಬಿಸಿದೆ.

ಪ್ರಶ್ನೆ: ವಾಸ್ತವಾಂಶಗಳು. ಜೆಎನ್‌ಯುನಲ್ಲಿ ಕೂಗಲಾದ ಕೆಲವು ಘೋಷಣೆಗಳೆಂದರೆ, ‘ಪಾಕಿಸ್ತಾನ್ ಜಿಂದಾಬಾದ್’, ‘ಭಾರತ್‌ಕೆ ಬರ್ಬಾದಿ ತಕ್ ಜಂಗ್ ರಹೇಗಿ’ (ಭಾರತದ ಸರ್ವನಾಶದ ತನಕ ಯುದ್ಧ), ‘ಕಾಶ್ಮೀರ್ ಕಿ ಆಜಾದಿ ತಕ್ ಜಂಗ್ ರಹೇಗಿ’ (ಕಾಶ್ಮೀರದ ಸ್ವಾತಂತ್ರ್ಯದ ತನಕ ಯುದ್ಧ), ‘ಅಫ್ಜಲ್ ಹಮ್ ಶರ್ಮಿಂದಾ ಹೈ. ತೇರೇ ಕಾತಿಲ್ ಜಿಂದಾ ಹೈ’ ( ಅಫ್ಜಲ್ ನಮಗೆ ನಾಚಿಕೆಯಾಗುತ್ತಿದೆ, ನಿನ್ನ ಹಂತಕರು ಜೀವಂತವಿದ್ದಾರೆ), ‘ತುಮ್ ಕಿತ್ನೇ ಅಫ್ಜಲ್ ಮಾರೋಗೆ, ಹರ್ ಘರ್‌ಮೇ ಅಫ್ಜಲ್ ನಿಕ್ಲೇಗಾ’ ( ನೀನೆಷ್ಟು ಅಫ್ಜಲ್‌ಗಳನ್ನು ಕೊಲ್ಲುವೆ, ಪ್ರತಿ ಮನೆಯಲ್ಲಿ ಅಫ್ಜಲ್ ಹುಟ್ಟುವನು), ‘ಅಫ್ಜಲ್ ತೇರೆ ಖೂನ್ ಸೆ ಇಂಕ್ವಿಲಾಬ್ ಆಯೇಗಾ’ (ಅಫ್ಜಲ್ ನಿನ್ನ ರಕ್ತದಿಂದ ಕ್ರಾಂತಿ ಬರುವುದು)

ಸೊರಾಬ್ಜಿ: ಕೇವಲ ಪಾಕಿಸ್ತಾನ್ ಜಿಂದಾಬಾದ್ ಎಂದು ಹೇಳುವುದು ರಾಷ್ಟ್ರದ್ರೋಹವಲ್ಲ. ಭಾರತ್ ಕೆ ಬರ್ಬಾದಿ… ಇದು ಸಮಸ್ಯಾತ್ಮಕ. ಆದರೆ, ರಾಷ್ಟ್ರದ್ರೋಹವೆಂದು ನಾನು ಹೇಳಲಾರೆ. ಈ ವಿಧಿ ಅತ್ಯಂತ ಗಂಭೀರವಾದ ದಂಡನಾ ವಿಧಿ. ಅದು ಅತ್ಯಂತ ಸುಸ್ಪಷ್ಟ ಪ್ರಕರಣಗಳಿಗೆ ಅನ್ವಯಿಸುತ್ತದೆ. ಉಳಿದವುಗಳು ಪ್ರಚೋದನೆ. ಆದರೆ, ಅದನ್ನು ಸಾಬೀತುಪಡಿಸಬೇಕಾಗುತ್ತದೆ.

ಪ್ರಶ್ನೆ: ಕನ್ನಯ್ಯ ಕುಮಾರ್ ಈ ಘೋಷಣೆ ಕೂಗಿಲ್ಲ. ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಯೂನಿಯನ್ ಎಂಬ ಸಂಘಟನೆಗೆ ಸೇರಿದ ವಿದ್ಯಾರ್ಥಿಗಳ ಗುಂಪೊಂದು ಈ ಘೋಷಣೆಗಳನ್ನು ಕೂಗಿತ್ತು. ಆದರೆ, ಅವರೆಲ್ಲರೂ ಸದ್ಯಕ್ಕೆ ತಲೆತಪ್ಪಿಸಿಕೊಂಡಿದ್ದಾರೆ. ಆದರೆ, ಈ ಘೋಷಣೆಗಳನ್ನು ಕೂಗದವರ ಮೇಲೆ ರಾಷ್ಟ್ರದ್ರೋಹದ ಆರೋಪ ಹೊರಿಸಲಾಗಿದೆ.

ಸೊರಾಬ್ಜಿ: ನೀವು ಹೇಳುವುದು ಸರಿಯಾಗಿದ್ದಲ್ಲಿ ಖಂಡಿತವಾಗಿಯೂ ಸಂಪೂರ್ಣ ತಪ್ಪಾಗಿ ರಾಷ್ಟ್ರದ್ರೋಹವನ್ನು ಅನ್ವಯಿಸಲಾಗಿದೆ. ಒಂದು ಸಭೆಯಲ್ಲಿ ಕೇವಲ ಹಾಜರಿರುವುದು ರಾಷ್ಟ್ರದ್ರೋಹವಾಗುವುದಿಲ್ಲ. ಆತ ಸಕ್ರಿಯವಾಗಿ ಅವರನ್ನು ಪ್ರಚೋದಿಸದೇ ಇದ್ದರೆ, (ಆತ ಈ ಘೋಷಣೆಗಳನ್ನು ಕೂಗಿಲ್ಲ ಎಂದು ಪೊಲೀಸರು ಒಪ್ಪಿಕೊಂಡಿದ್ದರೆ) ಹೇಗೆ ಆತನ ಮೇಲೆ ರಾಷ್ಟ್ರದ್ರೋಹದ ಆರೋಪ ಹೊರಿಸಲು ಸಾಧ್ಯ? ಅದು ಸಂಪೂರ್ಣ ಅನ್ಯಾಯ. ನೀವು ಹೇಳಿದ ವಾಸ್ತವಾಂಶಗಳು ನಿಜವಾಗಿದ್ದರೆ, ಆ ನಿರ್ಧಾರ ಒಂದು ಗಂಭೀರವಾದ ಪ್ರಮಾದ. ಇದನ್ನೆಲ್ಲಾ ಒಟ್ಟಿನಲ್ಲಿ ನೋಡೋಣ. ವಿದ್ಯಾರ್ಥಿಗಳಿಗೆ ಒಂದು ದೃಷ್ಟಿಕೋನವಿದೆ. ಅವರದನ್ನು ಅಭಿವ್ಯಕ್ತಗೊಳಿಸಲು ಬಯಸುತ್ತಾರೆ. ಹಿಂದೂಸ್ತಾನ್ ಕಿ ಬರ್ಬಾದಿ…ಸೇರಿದಂತೆ ಅವರು ಹಾಗೆ ಮಾಡುವಾಗ ಎಲ್ಲೆ ಮೀರಿ ಅಭಿವ್ಯಕ್ತಗೊಳಿಸಿರಬಹುದು. ಇದು ಬಹುವಾಗಿ ಅಭಿವ್ಯಕ್ತಿ ಸ್ವಾತಂತ್ರ್ಯದ ಪ್ರಶ್ನೆಯಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಶ್ರೀಲಂಕಾ | 2019ರ ಈಸ್ಟರ್ ಬಾಂಬ್ ಸ್ಫೋಟ ಪ್ರಕರಣ: ಇಬ್ಬರು ಮಾಜಿ ಅಧಿಕಾರಿಗಳಿಗೆ ಮರಣದಂಡನೆ ವಿಧಿಸಿದ ಕೋರ್ಟ್

ಬರೋಬ್ಬರಿ 260ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾಗಿದ್ದ 2019ರ ಶ್ರೀಲಂಕಾದ 'ಈಸ್ಟರ್ ಸಂಡೇ' ಬಾಂಬ್ ಸ್ಫೋಟ ಪ್ರಕರಣದಲ್ಲಿ ಕ್ರಿಮಿನಲ್ ನಿರ್ಲಕ್ಷ್ಯ ಆರೋಪ ಸಾಬೀತಾದ ಹಿನ್ನೆಲೆ, ಪೊಲೀಸ್ ಮಾಜಿ ಮುಖ್ಯಸ್ಥ ಮತ್ತು ರಕ್ಷಣಾ ಸಚಿವಾಲಯದ...

ಅಮೆರಿಕ ಓದಿಗೆ ಎಲ್ಲಿಂದ ಬಂತು ಹಣ? CJP ಸ್ಥಾಪಕ ಅಭಿಜೀತ್ ದೀಪ್ಕೆ ತಂದೆಯ ಆಸ್ತಿ ತನಿಖೆಗೆ RTI ಕಾರ್ಯಕರ್ತ ಆಗ್ರಹ

ಕಾಕ್ರೋಚ್ ಜನತಾ ಪಾರ್ಟಿ (CJP) ಸ್ಥಾಪಕ ಅಭಿಜೀತ್ ದೀಪ್ಕೆ ಅವರ ತಂದೆ, ಮಹಾರಾಷ್ಟ್ರ ಸರ್ಕಾರದ ನಿವೃತ್ತ ಉದ್ಯೋಗಿ ಭಗವಾನ್‌ರಾವ್ ದೀಪ್ಕೆ ಅವರ ಆದಾಯ ಮತ್ತು ಅಕ್ರಮ ಆಸ್ತಿ ಗಳಿಕೆ ಕುರಿತು ಸಮಗ್ರ ತನಿಖೆ...

ಕಾವೇರಿ ವಿಚಾರದಲ್ಲಿ ರಾಜಕೀಯ ಪಕ್ಕಕ್ಕಿಟ್ಟು ರಾಜ್ಯದ ಹಿತ ಕಾಯೋಣ: ಸರ್ವಪಕ್ಷ ಸಭೆಯಲ್ಲಿ ಸಿಎಂ ಡಿ.ಕೆ. ಶಿವಕುಮಾರ್ ಕರೆ

ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ಪರಿಸ್ಥಿತಿ ಸುಧಾರಿಸುವ ಲಕ್ಷಣಗಳು ಕಂಡುಬರುತ್ತಿದ್ದು, ನದಿ ನೀರಿನ ಹಂಚಿಕೆಯಲ್ಲಿ ಸೌಹಾರ್ದಯುತವಾಗಿ ಸಮಸ್ಯೆ ನಿವಾರಿಸುವುದೇ ಸರ್ಕಾರದ ಮೊದಲ ಆದ್ಯತೆಯಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಕಾವೇರಿ...

ಉತ್ತರ ಪ್ರದೇಶ : 33 ವರ್ಷಗಳ ಬಳಿಕ ದೇಶದ್ರೋಹ ಪ್ರಕರಣದಿಂದ ಮುಸ್ಲಿಂ ವ್ಯಕ್ತಿ ಖುಲಾಸೆ

ಪ್ರಾಸಿಕ್ಯೂಷನ್ ಆರೋಪಗಳನ್ನು ಸಾಂದರ್ಭಿಕ ಪುರಾವೆಗಳೊಂದಿಗೆ ಸಾಬೀತುಪಡಿಸಲು ವಿಫಲವಾಗಿದೆ ಮತ್ತು ಆರೋಪಿಯನ್ನು ಕೃತ್ಯಕ್ಕೆ ಲಿಂಕ್ ಮಾಡುವ ಪ್ರಮುಖ ಪುರಾವೆಗಳು ಕಾಣೆಯಾಗಿವೆ ಎಂದು ಅಭಿಪ್ರಾಯಪಟ್ಟ ಲಕ್ನೋದ ವಿಶೇಷ ರಾಷ್ಟ್ರೀಯ ತನಿಖಾ ದಳ (ಎನ್ಐಎ) ನ್ಯಾಯಾಲಯ, ದೇಶದ್ರೋಹ...

‘ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರು’ ಎಂಬಂತೆ NTA ಯಿಂದ ₹7.5 ಕೋಟಿಯ ಬೃಹತ್ ಸೆಕ್ಯೂರಿಟಿ ಟೆಂಡರ್

ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯಾಗಿ, ಅಮಾಯಕ ವಿದ್ಯಾರ್ಥಿಗಳ ಜೀವ-ಭವಿಷ್ಯ ಹಾಳಾದ ಮೇಲೆ, ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರು ಎಂಬಂತೆ ಈಗ ಎನ್‌ಟಿಎ (NTA) ₹7.5 ಕೋಟಿ ವೆಚ್ಚದ ಭದ್ರತಾ ಟೆಂಡರ್...

SIR: ನಮೂನೆಯೂ ಇಲ್ಲ, ನೋಟಿಸ್‌ ಇಲ್ಲ ಸ್ವಂತ ಮನೆಯಲ್ಲಿದ್ದವರ ಹೆಸರನ್ನೇ ಅಳಿಸಿಹಾಕಿದ ಚುನಾವಣಾ ಆಯೋಗ

ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಒಂದಾದ ಮೇಲೊಂದರಂತೆ ಆತಂಕಕಾರಿ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಮನೆಮನೆಗೆ ತೆರಳಿ ಎನ್ಯುಮರೇಷನ್ ನಮೂನೆ ವಿತರಿಸುವ ಮೊದಲ ಹಂತದ ಪ್ರಕ್ರಿಯೆ...

ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಅಮಾನತುಗೊಂಡಿದ್ದ ಯುಪಿ ಪೊಲೀಸ್ ಕಾನ್‌ಸ್ಟೇಬಲ್; ಮರುನೇಮಕದ ಬೆನ್ನಲ್ಲೇ ಬಾಲಕಿಯ ಅತ್ಯಾಚಾರ, ಕೊಲೆ!

ಹತ್ತು ವರ್ಷದ ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ, ಆಕೆಯ ಸಾವಿಗೆ ಕಾರಣನಾದ ಆರೋಪದ ಮೇಲೆ ಬಂಧಿತನಾದ ಉತ್ತರ ಪ್ರದೇಶದ ಪೊಲೀಸ್ ಕಾನ್‌ಸ್ಟೇಬಲ್ ಅಭಿಷೇಕ್ ಯಾದವ್‌ನನ್ನು ವೈದ್ಯಕೀಯ ತಪಾಸಣೆಗಾಗಿ ಗೋರಖ್‌ಪುರದ ಜಿಲ್ಲಾಸ್ಪತ್ರೆಗೆ ಕರೆತಂದಾಗ, ಅಲ್ಲಿನ...

BJP ವಿರುದ್ಧದ ಆಕ್ರೋಶವೇ Gen-Z ಹೋರಾಟದ ಮೂಲ: ವಿಪಕ್ಷಗಳಿಗೆ ಇದು ದೊಡ್ಡ ಪಾಠ

ಜಂತರ್ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿಗಳ ಹೋರಾಟವನ್ನು ನಿಮ್ಮ ರಾಜಕೀಯ ದೃಷ್ಟಿಕೋನಕ್ಕೆ ತಕ್ಕಂತೆ ನೀವು ಕ್ರಾಂತಿ ಎಂದಾದರೂ ನೋಡಬಹುದು, ಅಥವಾ ಕ್ಷಣಿಕವಾಗಿ ಎದ್ದ ಬಿರುಗಾಳಿ ಎಂದಾದರೂ ಭಾವಿಸಬಹುದು. ಆದರೆ ಇಲ್ಲಿ ನಿಜವಾಗಿಯೂ ಆಗಿದ್ದೇನು ಮತ್ತು...

ಇನ್‌ಸ್ಟಾಗ್ರಾಮ್‌ನಲ್ಲಿ ಕ್ಷಮಿಸಿದರೆ ಸಾಲದು, ವಿದ್ಯಾರ್ಥಿಗಳ ಮೇಲಿನ ಕೇಸ್ ವಾಪಸ್ ಪಡೆಯಿರಿ: ಪ್ರಧಾನಿಗೆ ದೀಪ್ಕೆ ನೇರ ಪ್ರಶ್ನೆ

ಪ್ರಧಾನಿ ನರೇಂದ್ರ ಮೋದಿ ಅವರು ಇನ್‌ಸ್ಟಾಗ್ರಾಮ್ ವಿಡಿಯೋವೊಂದರಲ್ಲಿ ತಮ್ಮ ವಿರುದ್ಧ ನಿಂದನಾತ್ಮಕ ಪದ ಬಳಸಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಕ್ಷಮಿಸಿದ್ದೇನೆ ಎಂದು ಹೇಳಿರುವುದಕ್ಕೆ ಸಿಜೆಪಿ ಸಂಸ್ಥಾಪಕ ಅಭಿಜೀತ್...

ಪ್ರತಿಭಟನೆ ಭೀತಿ : ಸಿಜೆಐ ಸೂರ್ಯಕಾಂತ್ ಭಾಗವಹಿಸಬೇಕಿದ್ದ ಘಟಿಕೋತ್ಸವ ದಿಢೀರ್ ಮುಂದೂಡಿದ TISS

ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ (ಟಿಐಎಸ್‌ಎಸ್‌) ಸಂಸ್ಥೆಯು ಆಗಸ್ಟ್ 2ರಂದು ನಡೆಸಲು ನಿಗದಿಪಡಿಸಿದ್ದ ತನ್ನ 86ನೇ ವಾರ್ಷಿಕ ಘಟಿಕೋತ್ಸವವನ್ನು ದಿಢೀರ್ ಮುಂದೂಡಿದೆ. ಕ್ಯಾಂಪಸ್ ಭದ್ರತೆಯ ಬಗೆಗಿನ ಕಳವಳಗಳು ಮತ್ತು ವಿದ್ಯಾರ್ಥಿಗಳ...