ಯತ್ನಾಳ್ ಏನು ಹೇಳಿದ್ದಾರೋ ಗೊತ್ತಿಲ್ಲ. ಆದರೆ ದೊರೆಸ್ವಾಮಿಯವರು ಸಹ ತಮ್ಮ ನಾಲಿಗೆ ಬಿಗಿಹಿಡಿದು ಮಾತನಾಡಬೇಕು. ಭಾಷೆ ತನ್ನತನವನ್ನು ಎತ್ತಿ ತೋರಿಸುತ್ತದೆ ಎಂದು ಹೇಳುವ ಮೂಲಕ ವಸತಿ ಸಚಿವ ವಿ.ಸೋಮಣ್ಣ ದೊರೆಸ್ವಾಮಿಯವರನ್ನು ಟೀಕಿಸಿದ್ದಾರೆ.
ಕೊಪ್ಪಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೊರೆಸ್ವಾಮಿಯವರು ನಮ್ಮ ತಾಲ್ಲೂಕಿನವರು, ನಮ್ಮ ಊರಿನವರು. ಆದರೆ ನೂರು ವರ್ಷ ವಯಸ್ಸಾಗಿದೆ. ಇಷ್ಟು ದಿನ ದೇವರು ಇಷ್ಟು ದಿನ ಇರೋಕೆ ಬಿಟ್ಟಿದ್ದಾನೆ. ನಾನು ಈ ದೇಶದಲ್ಲಿ ಇರೋದು. ಈ ಕರ್ಮಭೂಮಿಯಲ್ಲಿ ಒಂದು ದೊಡ್ಡ ಇತಿಹಾಸವಿದೆ ಎಂಬುದನ್ನು ಅವರು ಅರ್ಥ ಮಾಡಿಕೊಳ್ಳವೇ ಬೇಡವೋ ನೀವೆ ಹೇಳಿ ಎಂದು ಅವರು ಪ್ರಶ್ನಿಸಿದ್ದಾರೆ.
ದೊರೆಸ್ವಾಮಿಯವರು ನಾಲಿಗೆ ಬಿಗಿಹಿಡಿದು ಮಾತಾಡಲಿ. ಯತ್ನಾಳ್ ಹೇಳಿಕೆ ಸಮರ್ಥಿಸಿಕೊಂಡ ವಸತಿ ಸಚಿವ ವಿ.ಸೋಮಣ್ಣ
Posted by Naanu Gauri on Wednesday, February 26, 2020
ನಮಗೂ ಮಾತನಾಡಲ್ಲಿಕ್ಕೆ ಬರುತ್ತದೆ. ಯತ್ನಾಳ್ ಭಾವಾವೇಶದಲ್ಲಿ ಮಾತನಾಡಿರಬಹುದು. ಆದರೆ ಅದಕ್ಕೆ ಅವಕಾಶ ಮಾಡಿಕೊಟ್ಟವರು ಯಾರು? ನಾನು ಯಾವುದು ಸರಿ ಯಾವುದು ತಪ್ಪು ಎಂದು ನಾನು ಹೇಳುವುದಿಲ್ಲ. ನನಗೆ ಎಷ್ಟು ಮೈ ಉರಿಯುತ್ತದೆಯೆಂದರೆ, ಒಳ್ಳೇ ಕೆಲಸ ಮಾಡುತ್ತಿರುವವರು ನೂರಾರು ಜನ ಇದ್ದಾರೆ ಅಲ್ಲವೇ? ಎಂದು ಪರೋಕ್ಷವಾಗಿ ದೊರೆಸ್ವಾಮಿ ವಿರುದ್ಧ ಕಿಡಿಕಾರಿದ್ದಾರೆ.
ದೇಶದ್ರೋಹದ ಘೋಷಣೆ ಕೂಗಿದರೆ ಇನ್ನು ಮುಂದೆ ಪೊಲೀಸರು ಬೇಕಿಲ್ಲ. ಜನರೇ ಕೈಗೆ ಬಡಿಗೆಗಳನ್ನು ತೆಗೆದುಕೊಳ್ಳುತ್ತಾರೆ ಎಂದು ಪ್ರಚೋದನೆ ಸಹ ನೀಡಿದ್ದಾರೆ.
ಇನ್ನೊಂದೆಡೆ ವಿಜಯಪುರದಲ್ಲಿ ಇಂದು ಮತ್ತೆ ವಿವಾದಾತ್ಮಕ ಹೇಳಿಕೆ ನೀಡಿರುವ ಬಸನಗೌಡ ಯತ್ನಾಳ್, ಯಾವುದೇ ಕಾರಣಕ್ಕೂ ಕ್ಷಮೆ ಕೇಳುವುದಿಲ್ಲ, ದೇಶ ವಿರೋಧಿಗಳಿಗೆ ಬಿರಿಯಾನಿ ತಿನ್ನಿಸುವ ಕಾಲ ಮುಗೀತು. ಇನ್ನೇನಿದ್ದರೂ ಕಂಡಲ್ಲಿ ಗುಂಡು ಹೊಡೆಯುತ್ತೇವೆ ಎಂದಿದ್ದಾರೆ.
ಕಾಂಗ್ರೆಸ್ ನನ್ನ ವಿರುದ್ಧ ಮಾತನಾಡುವ ನೈತಿಕತೆ ಹೊಂದಿಲ್ಲ. ದೇಶದ್ರೋಹಿಗಳ ವಿರುದ್ಧ ಬೇಕಾದರೆ ಹೋರಾಟ ಮಾಡಲಿ ಎಂದು ಯತ್ನಾಳ್ ಹೇಳಿದ್ದಾರೆ.


