- Advertisement -
- Advertisement -
ಭಾರತದ ವನಿತೆಯರು ಇಂದು ನಡೆದ ಕೊನೆಯ ಲೀಗ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ನಾಲ್ಕು ರನ್‌ಗಳಿಂದ ರೋಚಕವಾಗಿ ಸೋಲಿಸುವ ಮೂಲಕ ಐಸಿಸಿ ಮಹಿಳಾ ಟಿ 20 ವಿಶ್ವಕಪ್ 2020 ರಲ್ಲಿ ಸೆಮಿ-ಫೈನಲ್ ತಲುಪಿದೆ. ಎ ಗ್ರೂಪ್‌ನ ಟಾಪ್ ಸ್ಥಾನ ಪಡೆದ ಭಾರತ ಈ ಮೂಲಕ ನೇರ ಸೆಮಿಫೈನಲ್ ಗೆ ತಲುಪಿದ ಮೊದಲ ತಂಡವಾಗಿದೆ.
ಪಂದ್ಯಾಟದಲ್ಲಿ ಭಾರತವು ಒಟ್ಟು 133 ರನ್ ಗಳಿಸಿತು. ಶಫಾಲಿ ವರ್ಮ 34 ಎಸೆತಗಳಲ್ಲಿ 46 ರನ್ ಗಳಿಸಿದರು ಮತ್ತು ತಾನಿಯಾ ಭಾಟಿಯಾ 25 ಎಸೆತಗಳಲ್ಲಿ 23 ರನ್ ಗಳಿಸಿ ಸ್ಪರ್ಧಾತ್ಮಕ ಮೊತ್ತ ದಾಖಲಿಸಲು ನೆರವಾದರು.
ನಂತರ ಬೌಲಿಂಗ್‌ನಲ್ಲಿ ಭಾರತ ಶಿಸ್ತುಬದ್ಧ ಪ್ರದರ್ಶನವನ್ನು ನೀಡಿತು. ನ್ಯೂಜಿಲೆಂಡ್ ಅನ್ನು 129ಕ್ಕೆ ಆರು ವಿಕೆಟ್‌ಗಳಿಗೆ ಕಟ್ಟಿ ಹಾಕುವಲ್ಲಿ ಯಶಸ್ವಿಯಾದ ಭಾರತ ಪಂದ್ಯಾವಳಿಯಲ್ಲಿ ಸತತ ಮೂರನೇ ಜಯವನ್ನು ದಾಖಲಿಸಿತು. ಈ ಹಿಂದೆ ಬಾಂಗ್ಲಾದೇಶ ಮತ್ತು ಆಸ್ಟ್ರೇಲಿಯಾ ಎದುರು ಜಯ ಗಳಿಸಿತ್ತು.


