Homeಮುಖಪುಟಕೇವಲ 5 ಗಂಟೆ ಅವಧಿಯಲ್ಲಿ ದೆಹಲಿ ಪೊಲೀಸರಿಗೆ ಬಂದ 481 ಅಪಾಯದ ಕರೆಗಳು! ಎಲ್ಲವೂ ಬೋಗಸ್‌

ಕೇವಲ 5 ಗಂಟೆ ಅವಧಿಯಲ್ಲಿ ದೆಹಲಿ ಪೊಲೀಸರಿಗೆ ಬಂದ 481 ಅಪಾಯದ ಕರೆಗಳು! ಎಲ್ಲವೂ ಬೋಗಸ್‌

- Advertisement -
- Advertisement -

ಅಮಾನವೀಯ ಹಿಂಸಾಚಾರದ ಬೆನ್ನಲ್ಲೇ ಪಶ್ಚಿಮ ದೆಹಲಿಯಲ್ಲಿ ಸಂಜೆ 7 ರಿಂದ ಮಧ್ಯರಾತ್ರಿಯ ನಡುವೆ ಐದು ಗಂಟೆಗಳ ಅವಧಿಯಲ್ಲಿ ಪೊಲೀಸ್ ನಿಯಂತ್ರಣ ಕೊಠಡಿಗೆ (ಪಿಸಿಆರ್) 481 ಅಪಾಯದ ಕರೆಗಳು ಬಂದಿವೆ..

ಪಶ್ಚಿಮ ದೆಹಲಿಯಲ್ಲಿ 12 ಪೊಲೀಸ್ ಠಾಣೆಗಳಿದ್ದು ಈ ಕರೆಗಳಲ್ಲಿ 148 ಕರೆಗಳು ತಿಲಕ್ ನಗರ ಪ್ರದೇಶದಿಂದ ಬಂದಿದ್ದರೆ, 143 ಕರೆಗಳು ಖಯಾಲ ಪೊಲೀಸ್ ಠಾಣೆಯ ಮಿತಿಯಿಂದ ಬಂದಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ರಾಜೌರಿ ಗಾರ್ಡನ್ (96), ಪಂಜಾಬಿ ಬಾಗ್ (26), ಹರಿ ನಗರ (24), ಮೋತಿ ನಗರ (17) ಮತ್ತು ಜನಕ್ಪುರಿ (11) ಮುಂತಾದ ಪ್ರದೇಶಗಳಿಂದ ಪೊಲೀಸರಿಗೆ ಕರೆಗಳು ಬಂದಿದ್ದು ಎಲ್ಲಾ ಕರೆಗಳು ನಕಲಿ ಕರೆಗಳಾಗಿವೆ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ..

ಕರೆ ಮಾಡಿದವರೆಲ್ಲರೂ ತಮ್ಮ ಪ್ರದೇಶಗಳಲ್ಲಿ ಕೋಮು ಉದ್ವೇಗವಿದೆ ಎಂದು ಹೇಳಿಕೊಂಡಿದ್ದರು. ಈ ಬೋಗಸ್‌ ಕರೆಗಳ ಕುರಿತು ದೆಹಲಿ ಪೊಲೀಸರು ಭಾನುವಾರ ನಡೆದ ಘಟನೆಗಳ ಬಗ್ಗೆ ಕೇಂದ್ರ ಗೃಹ ಸಚಿವಾಲಯಕ್ಕೆ ವರದಿ ಸಲ್ಲಿಸಿದ್ದಾರೆ.

“ಅವೆಲ್ಲವೂ ನಕಲಿ ಕರೆಗಳಾಗಿವೆ, ಆದರೆ ಭೀತಿ ನಗರವನ್ನು ಹಿಡಿದಿಟ್ಟುಕೊಂಡಿದೆ” ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ವದಂತಿಗಳನ್ನು ನಂಬಬೇಡಿ ಎಂದು ಪೊಲೀಸರು ಭಾನುವಾರ ಸಂಜೆ ಜನರಿಗೆ ಮನವಿ ಮಾಡಿದ್ದಾರೆ. ‌ಅಲ್ಲದೇ ವದಂತಿಗಳನ್ನು ಹರಡಿದ್ದಕ್ಕಾಗಿ ಕೆಲವು ಜನರನ್ನು ವಶಕ್ಕೆ ಪಡೆದಿದ್ದಾರೆ ಎಂದು ಹೇಳಲಾಗಿದೆ.

“ಈಗ ಪರಿಸ್ಥಿತಿ ತುಂಬಾ ಸಾಮಾನ್ಯವಾಗಿದೆ. ಇದು ನಿಯಂತ್ರಣದಲ್ಲಿದೆ. ನಮಗೆ ಅನೇಕ ಕರೆಗಳು ಬಂದವು. ಎಲ್ಲಾ ಕರೆಗಳು ನಕಲಿ ಎಂದು ಕಂಡುಬಂದಿದೆ. ನಾವು ಕರೆಗಳನ್ನು ಎಸ್‌ಎಚ್‌ಒಗಳು, ಇನ್ಸ್‌ಪೆಕ್ಟರ್‌ಗಳಿಗೆ ಕಳುಹಿಸಿದ್ದೇವೆ. ನಾವು ಈ ಪ್ರದೇಶದಲ್ಲಿ ಪ್ರಾಬಲ್ಯ ಸಾಧಿಸುತ್ತಿದ್ದೇವೆ ಎಂದು “ಆಗ್ನೇಯ ದೆಹಲಿಯ ಉಪ ಪೊಲೀಸ್ ಆಯುಕ್ತ ಆರ್.ಪಿ. ಮೀನಾ ಎನ್‌ಡಿಟಿವಿಗೆ ತಿಳಿಸಿದ್ದಾರೆ.

“ಕೆಲವು ಸಮಾಜ ವಿರೋಧಿಗಳು ವದಂತಿಗಳನ್ನು ಹರಡಿದ್ದಾರೆ. ನಮಗೆ ಅನೇಕ ಪಿಸಿಆರ್ ಕರೆಗಳು ಬಂದಿವೆ. ಪರಿಸ್ಥಿತಿ ಸಂಪೂರ್ಣವಾಗಿ ಸಾಮಾನ್ಯವಾಗಿದೆ. ಎಲ್ಲೆಡೆ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ವದಂತಿಗಳಿಗೆ ಗಮನ ಕೊಡಬೇಡಿ ಮತ್ತು ಈ ಬಗ್ಗೆ ಪೊಲೀಸರಿಗೆ ತಿಳಿಸಿ” ಎಂದು ದೆಹಲಿ ಪೊಲೀಸ್ ಸಾರ್ವಜನಿಕ ಸಂಪರ್ಕ ಅಧಿಕಾರಿ ಎಂ.ಎಸ್. ಸುದ್ದಿ ಸಂಸ್ಥೆ ಎಎನ್‌ಐಗೆ ತಿಳಿಸಿದರು.

“ಜನಸಾಮಾನ್ಯರಲ್ಲಿ ಭೀತಿ ಉಂಟುಮಾಡಲು ಮತ್ತು ಮಾಧ್ಯಮಗಳಿಂದ ಸಹಾನುಭೂತಿ ಮತ್ತು ಗಮನವನ್ನು ಸೆಳೆಯಲು ಈ ಕಾರ್ಯವಿಧಾನವನ್ನು ಕೆಲವು ಕಿಡಿಗೇಡಿಗಳು ಅಳವಡಿಸಿಕೊಂಡಿದ್ದಾರೆ” ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅವರ ಪ್ರಕಾರ, ಪ್ಯಾನಿಕ್ ಕರೆಗಳು ಮಾತ್ರವಲ್ಲದೆ ವಾಟ್ಸಾಪ್ ಸಂದೇಶಗಳು ಸಹ ಪ್ರಸಾರವಾಗುತ್ತಿರುವುದು ಗೊಂದಲವನ್ನು ಹೆಚ್ಚಿಸಿದೆ.

“ಅಂತರ್ಜಾಲದಲ್ಲಿ ಇಂತಹ ಚಟುವಟಿಕೆಗಳು ಸಾಕ್ಷಿಗಳಾಗುತ್ತವೆ ಎಂಬುದನ್ನು ದಯವಿಟ್ಟು ನೆನಪಿಡಿ. ಗಲಭೆಯನ್ನು ಪ್ರಚೋದಿಸುವುದು ತೀವ್ರ ಪರಿಣಾಮಗಳನ್ನು ಉಂಟುಮಾಡುತ್ತದೆ … ಮತ್ತು ತೀವ್ರವಾದ ಅಪರಾಧ ಹೊಣೆಗಾರಿಕೆಯನ್ನು ಅನುಭವಿಸಬೇಕಾಗುತ್ತದೆ. ದಯವಿಟ್ಟು ಜವಾಬ್ದಾರಿಯುತ ನಾಗರಿಕರಾಗಿರಿ. ಯಾವುದೇ ಸಂದೇಶವನ್ನು ರವಾನಿಸುವ ಮೊದಲು ವಿಶ್ವಾಸಾರ್ಹ ಮೂಲಗಳಿಂದ ಪರಿಶೀಲಿಸಿ …” ಎಂದು ದೆಹಲಿ ಪೊಲೀಸರು ಟ್ವೀಟ್ ಮಾಡಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮತದಾನ ನಡೆದ 48 ಗಂಟೆಗಳಲ್ಲಿ ಅಂಕಿಅಂಶಗಳ ಬಿಡುಗಡೆ: ಚು.ಆಯೋಗದಿಂದ ಪ್ರತಿಕ್ರಿಯೆ ಕೇಳಿದ ಸುಪ್ರೀಂಕೋರ್ಟ್‌

0
ಮತದಾನ ಮುಗಿದ 48 ಗಂಟೆಗಳ ಒಳಗೆ ಮತದಾನ ಕೇಂದ್ರವಾರು ಮತದಾರರ ಅಂಕಿಅಂಶಗಳನ್ನು ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲು ನಿರ್ದೇಶನ ನೀಡುವಂತೆ ಕೋರಿ ಎನ್‌ಜಿಒ ಎಡಿಆರ್ ಸಲ್ಲಿಸಿದ ಮನವಿಗೆ ಸುಪ್ರೀಂಕೋರ್ಟ್ ಶುಕ್ರವಾರ ಒಂದು ವಾರದೊಳಗೆ ಭಾರತೀಯ...