ಜನತಾದಳ ಯುನೈಟೆಡ್ (ಜೆಡಿಯು) ನಾಯಕ ವಿನೋದ್ ಚೌಧರಿ ಅವರ ಪುತ್ರಿ ಪುಷ್ಪಮ್ ಪ್ರಿಯಾ ಚೌಧರಿ “ತನ್ನನ್ನು ತಾನೇ ಬಿಹಾರ 2020ರ ವಿಧಾನಸಭಾ ಚುನಾವಣೆಯ ಮುಖ್ಯಮಂತ್ರಿ ಅಭ್ಯರ್ಥಿ” ಎಂದು ಘೋಷಿಸಿಕೊಂಡಿದ್ದಾರೆ. ಆ ಮೂಲಕ ಬಿಹಾರ ರಾಜಕಾರಣದಲ್ಲಿ ಮತ್ತಷ್ಟು ವಿವಾದ ಹುಟ್ಟಿಸಿದ್ದಾರೆ.

ಫ್ಲುರಲ್ಸ್ (ಬಹುತ್ವ) ಎಂಬ ರಾಜಕೀಯ ಪಕ್ಷವನ್ನು ಹುಟ್ಟುಹಾಕಿರುವ ಅವರು “ಬಿಹಾರಕ್ಕೆ ವೇಗ ಬೇಕು, ಬಿಹಾರಕ್ಕೆ ರೆಕ್ಕೆಗಳು ಬೇಕು, ಬಿಹಾರಕ್ಕೆ ಬದಲಾವಣೆ ಬೇಕು. ಏಕೆಂದರೆ ಇದೆಲ್ಲಕ್ಕೂ ಬಿಹಾರ ಅರ್ಹವಾಗಿದೆ. ಬುಲ್ಶಿಟ್ ರಾಜಕೀಯವನ್ನು ತಿರಸ್ಕರಿಸಿ, 2020 ರಲ್ಲಿ ಬಿಹಾರವನ್ನು ಆಳಲು ಫ್ಲುರಲ್ಸ್ ಸೇರಿಕೊಳ್ಳಿ ಎಂದು ಆಕೆ ಕರೆ ನೀಡಿರುವ ಹೋರ್ಡಿಂಗ್‌ಗಳು ಪಾಟ್ನಾದಲ್ಲಿ ರಾರಾಜಿಸುತ್ತಿವೆ.
As Lasswell said, politics is who gets what, when and how. Following this, Bihar needs a blueprint and Plurals has a concrete roadmap for 2025 and 2030. Stay tuned for updates. #ProgressiveBihar2020 #PositivePolitics pic.twitter.com/qR93Czquqa
— Pushpam Priya Choudhary (@pushpampc13) March 8, 2020
ಲಾಸ್ವೆಲ್ ಹೇಳಿದಂತೆ, ರಾಜಕೀಯವು ಯಾರು, ಏನನ್ನು, ಯಾವಾಗ ಮತ್ತು ಹೇಗೆ ಪಡೆಯುತ್ತದೆ ಎಂಬುದಾಗಿದೆ. ಇದನ್ನು ಅನುಸರಿಸಿ, ಬಿಹಾರಕ್ಕೆ ನೀಲನಕ್ಷೆ ಬೇಕು. ಅದಕ್ಕಾಗಿ ಫ್ಲುರಲ್ಸ್ 2025 ಮತ್ತು 2030 ಕ್ಕೆ ಬಿಹಾರಕ್ಕೆ ನಿರ್ದಿಷ್ಟ ಮಾರ್ಗಸೂಚಿಯನ್ನು ಹೊಂದಿವೆ ಎಂದು ಪುಷ್ಪಮ್ ಪ್ರಿಯಾ ಚೌಧರಿ ಟ್ವೀಟ್ ಮಾಡಿದ್ದಾರೆ.
ಈ ಕುರಿತು ಆಕೆಯ ತಂದೆ ಮತ್ತು ಜೆಡಿಯು ನಾಯಕ ವಿನೋದ್ ಚೌಧರಿ “ಅವಳೂ ವಯಸ್ಕಳು ಮತ್ತು ವಿದ್ಯಾವಂತಳು, ಇದು ಅವಳ ನಿರ್ಧಾರ. ಅವಳು ಪಕ್ಷದ ಉನ್ನತ ನಾಯಕರಿಗೆ ಸವಾಲು ಹಾಕುತ್ತಿದ್ದರೆ ಪಕ್ಷ ಅದನ್ನು ಬೆಂಬಲಿಸುವುದಿಲ್ಲ” ಎಂದು ಪ್ರತಿಕ್ರಿಯಿಸಿದ್ದಾರೆ.


