Homeಕರ್ನಾಟಕಮಹಿಳೆಯ ತೆಂಗು, ಅಡಿಕೆ ತೋಟ ನಾಶ : ಬಲಾಢ್ಯ ವ್ಯಕ್ತಿಗಳ ಕೈವಾಡದಿಂದ ಕಮರಿದ ಬದುಕು

ಮಹಿಳೆಯ ತೆಂಗು, ಅಡಿಕೆ ತೋಟ ನಾಶ : ಬಲಾಢ್ಯ ವ್ಯಕ್ತಿಗಳ ಕೈವಾಡದಿಂದ ಕಮರಿದ ಬದುಕು

- Advertisement -
- Advertisement -

ಗ್ರಾಮ ಲೆಕ್ಕಿಗ ಮತ್ತು ಕಂದಾಯಾಧಿಕಾರಿ ದ್ವೇಷ ಮತ್ತು ಬಲಾಢ್ಯರ ಕೈವಾಡಕ್ಕೆ ತಿಪ್ಪೂರಿನ ಸಿದ್ದಮ್ಮನ ತೆಂಗು, ಅಡಿಕೆ ಮರಗಳು ಬಲಿಯಾಗಿವೆ. ಬಿಜೆಪಿ ಮತ್ತು ಜೆಡಿಎಸ್ ಮುಖಂಡರು ಶಾಸಕರು ಮತ್ತು ತಹಶೀಲ್ದಾರ್ ಮೇಲೆ ಒತ್ತಡ ತಂದು ನೂರಕ್ಕೂ ಹೆಚ್ಚು ಫಲಭರಿತ ಅಡಿಕೆ ಮತ್ತು 25 ತೆಂಗಿನ ಮರಗಳನ್ನು ಕಡಿದು ಹಾಕಲಾಗಿದೆ.  ತಿಪ್ಪೂರುಪಾಳ್ಯದ ಬಲಾಢ್ಯ ವ್ಯಕ್ತಿಯೇ ಇಡೀ ಘಟನೆಗೆ ಕಾರಣ ಎಂದು ಎಲ್ಲರೂ ಬೊಟ್ಟುಮಾಡುತ್ತಿದ್ದಾರೆ. ಆ ವ್ಯಕ್ತಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದಿಲ್ಲ. ಆದರೆ ಆ ವ್ಯಕ್ತಿಯ ಕೈವಾಡವಿಲ್ಲದೆ ಯಾವುದೂ ನಡೆಯುವುದಿಲ್ಲ. ಹೀಗಾಗಿ ಆ ವ್ಯಕ್ತಿಯ ಹೆಸರನ್ನು ಹೇಳಲು ಎಲ್ಲರಿಂದಲೂ ಹಿಂಜರಿಕೆ ವ್ಯಕ್ತವಾಗಿದೆ.

ಘಟನೆಯ ಹಿನ್ನೆಲೆ

ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕು ತಿಪ್ಪೂರು ಗ್ರಾಮದ ಸರ್ವೇ ನಂಬರ್ 113ರಲ್ಲಿ 5 ಎಕರೆ 11 ಗುಂಟೆ ಜಮೀನು ಇದೆ. ಈ ಕೋಡಿಕೆಂಪಮ್ಮ ದೇವಿಗೆ ನಾಯಕ ಸಮುದಾಯದವರು ಪೂಜಾರರು. ಹಾಗಾಗಿ ಈ ಇನಾಂತಿ ಭೂಮಿಯನ್ನು ಪೂಜಾರಿ ಕುಟುಂಬಗಳೇ ಉಳುಮೆ ಮಾಡಿಕೊಂಡು ಬರುತ್ತಿದ್ದರು. ಹೀಗಿರುವಾಗ ಪೂಜಾರಿ ಕುಟುಂಬದ ಅಣ್ಣತಮ್ಮಂದಿರ ನಡುವೆ ದಾಯಾದಿ ಕಲಹ ನಡೆಯುತ್ತದೆ. ಈ ಪ್ರಕರಣ ಪೊಲೀಸ್ ಮತ್ತು ಕೋರ್ಟ್ ಮೆಟ್ಟಿಲೇರುತ್ತದೆ. ಇದೇ ಕಾರಣಕ್ಕೆ ಕಳೆದ ಮೂರು ದಶಕಗಳಿಂದಲೂ ಕೋಡಿಕೆಂಪಮ್ಮ ದೇವಿಯ ಜಾತ್ರೆಯ ನಡೆದಿರಲಿಲ್ಲ.

ಆ ನಂತರ 2005ರ ಸುಮಾರಿನಲ್ಲಿ ಗ್ರಾಮಸ್ಥರು ಮಧ್ಯಸ್ಥಿಕೆ ವಹಿಸಿ ಕೋಡಿಕೆಂಪಮ್ಮ ದೇವಿ ಜಾತ್ರೆ ನಡೆಸಲು ಪೂಜಾರಿ ಕುಟುಂಬಗಳ ನಡುವೆ ಸಂಧಾನ ಮಾಡಿದರು. ಸಂಧಾನ ಯಶಸ್ವಿಯಾಗಿ ಆಗಿನಿಂದ ವರ್ಷವರ್ಷ ಜಾತ್ರೆ ನಡೆಸಿಕೊಂಡು ಬರಲಾಗುತ್ತಿದೆ. ಕೆಂಪಮ್ಮದೇವಿಗೆ ಸೇರಿದ ಭೂಮಿಯನ್ನು ಸಾಗುವಳಿ ಮಾಡುತ್ತ ಬರುತ್ತಿದ್ದು ಕಾಲ ಕಳೆದಂತೆ 5 ಎಕರೆ 11 ಗುಂಟೆಯಲ್ಲೂ 16 ಕುಟುಂಬಗಳು ಅಡಿಕೆ ಮತ್ತು ತೆಂಗಿನ ತೋಟ ಬೆಳೆಸಿದರು. ಫಲವತ್ತಾದ ಭೂಮಿಯಾದ್ದರಿಂದ ತೆಂಗು ಮತ್ತು ಅಡಿಕೆ ಫಸಲು ಹುಲುಸಾಗಿ ಬೆಳೆಯಿತು.

ಈ ಮಧ್ಯೆ ಜಮೀನು ಯಾರಿಗೆ ಸೇರಬೇಕು ಎನ್ನುವ ವಿವಾದದ ಕುರಿತು ಗುಬ್ಬಿಯ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಯಿತು. ಪ್ರಕರಣದ ವಿಚಾರಣೆ ನಡೆಯುತ್ತಿದ್ದು ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ತಾಲೂಕು ಆಡಳಿತಕ್ಕೆ ಸೂಚಿಸಿತು. ತಹಶೀಲ್ದಾರ್ ಕೋರ್ಟ್ ಆದೇಶವನ್ನು ಉಲ್ಲಂಘಿಸಿ ಗ್ರಾಮ ಲೆಕ್ಕಿಗ ಮತ್ತು ಕಂದಾಯ ಅಧಿಕಾರಿಗಳಿಗೆ ಕೋಡಿಕೆಂಪಮ್ಮ ದೇವಾಲಯದ ಬಳಿ ಇರುವ ತೆಂಗು ಮತ್ತು ಅಡಿಕೆ ಗಿಡಗಳನ್ನು ಕಡಿಸುವಂತೆ ಸೂಚನೆ ನೀಡಿರುವುದು ಈ ಎಲ್ಲಾ ಅವಾಂತರಗಳಿಗೆ ಕಾರಣ ಎಂದು ತಿಳಿದುಬಂದಿದೆ.

ಗುಬ್ಬಿ ಮೇಲೆ ಬ್ರಹ್ಮಾಸ್ತ್ರ

ಗ್ರಾಮ ಲೆಕ್ಕಿಗ, ಕಂದಾಯಾಧಿಕಾರಿ ಮಾಡಿದ ತಪ್ಪಿಗೆ ಅಮಾಯಕ ಮಹಿಳೆಯ ತೋಟ ನಾಶ ಮಾಡಿದ ತಹಶಿಲ್ದಾರ್‌: ಗುಬ್ಬಿಯಲ್ಲೊಂದು ಮನಕಲಕುವ ಕರಾಳ ಘಟನೆ.. ವಿಡಿಯೋ ನೋಡಿ.

Posted by Naanu Gauri on Sunday, March 8, 2020

ತಿಪ್ಪೂರುಪಾಳ್ಯದ  ಆ ಬಲಾಢ್ಯ ವ್ಯಕ್ತಿ ತೆರೆಮರೆಯಲ್ಲಿ ಇದೆಲ್ಲವನ್ನೂ ನಿಯಂತ್ರಿಸುತ್ತಿದ್ದು ಜೆಡಿಎಸ್ ಮತ್ತು ಬಿಜೆಪಿಯ ಸಹಾಯದಿಂದ ತಹಶೀಲ್ದಾರ್ ಮೇಲೆ ಒತ್ತಡ ಹಾಕಿಸಿದ್ದಾರೆ. ಶಾಸಕ ಎಸ್.ಆರ್.ಶ್ರೀನಿವಾಸ್ ಮತ್ತು ಬಿಜೆಪಿ ಮುಖಂಡರು ಈ ಪ್ರಕರಣದ ಹಿಂದೆ ಬಲವಾಗಿ ನಿಂತುಕೊಂಡಿದ್ದಾರೆ ಎಂಬ ಆರೋಪವಿದೆ. ಬಲಾಢ್ಯ ಜಾತಿಗಳು ನಡೆಸಿರುವ ಕೂಟಕ್ಕೆ ಸಿದ್ದಮ್ಮ ಅವರ ಬದುಕು ಕಳಾಹೀನವಾಗಿದೆ. ಹೋದ ಮರಗಳನ್ನು ತಂದು ಕೊಡಲು ಯಾರಿಂದಲೂ ಸಾಧ್ಯವಿಲ್ಲ. ನಾಯಕ ಸಮುದಾಯಕ್ಕೆ ಸೇರಿರುವ ಸಿದ್ದಮ್ಮ ಬಲಾಢ್ಯರು ಹೆಣೆದ ಜಾಲಕ್ಕೆ ಬಿದ್ದಿದ್ಧಾರೆ.

ಕೋಡಿ ಕೆಂಪಮ್ಮ ದೇವಿಗೆ ಬಹುತೇಕ ಲಿಂಗಾಯತರು ನಡೆದುಕೊಳ್ಳುತ್ತಾರೆ. ಒಕ್ಕಲಿಗರು, ತಿಗಳರು ಮತ್ತು ದಲಿತ ಸಮುದಾಯವೂ ನಡೆದುಕೊಳ್ಳುತ್ತದೆ. ಈ ಚಿತಾವಣೆಯನ್ನು ನೋಡಿದರೆ ಬಲಾಢ್ಯ ಜಾತಿಗಳು ಇಡೀ ದೇವಾಲಯದ ಉಸ್ತುವಾರಿಯನ್ನು ತಮ್ಮ ತೆಕ್ಕೆಗೆ ತೆದುಕೊಂಡು ಫಲವತ್ತಾದ ಭೂಮಿಯನ್ನು ತಮ್ಮ ವಶಕ್ಕೆ ಪಡೆಯುವ ಹುನ್ನಾರ ನಡೆಸಿವೆ ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ತಿಪ್ಪೂರುಪಾಳ್ಯದ ಆ ಬಲಾಢ್ಯ ವ್ಯಕ್ತಿ ದೇವಾಲಯದ ಆಡಳಿತವನ್ನು ಹಿಡಿಯವ ಭಾಗದ ಸಂಚು ಇದಾಗಿದೆ.

ನಾಯಕ ಸಮುದಾಯಕ್ಕ ಸೇರಿದ 16 ಕುಟುಂಬಗಳು ಈ 5 ಎಕರೆ 11 ಗುಂಟೆ ಜಮೀನನ್ನು ಮೊದಲಿಂದಲೂ ಮಾಡಿಕೊಂಡು ಬರುತ್ತಿವೆ. ಆರಂಭದಲ್ಲಿ ಸದರಿ ಭೂಮಿಯಲ್ಲಿ ಮರಾವಳಿ ಬೆಳೆಸಬಾರದು ಎಂದು ನಿರ್ಧಾರ ಆಗಿದ್ದರೂ, ಕಾಲಕಳೆದಂತೆ ತೆಂಗು ಮತ್ತು ಅಡಿಕೆ ಸಸಿಗಳನ್ನು ಇಟ್ಟು ಬೆಳೆಸಿದರು. ಹಲವು ಬಾರಿ ಫಸಲನ್ನು ಕೊಯ್ದುಕೊಂಡರು. ದೇವಾಲಯದ  ಸಮೀಪವೇ ಇರುವ ಜಮೀನಿನಲ್ಲಿ ತೋಟವಿದ್ದರೂ ಜನರೂ ಕೂಡ ಕಳೆದ 15 ವರ್ಷಗಳಿಂದ ಜಾತ್ರೆಯನ್ನು ಮಾಡಿಕೊಂಡು ಬಂದಿದ್ದಾರೆ.

ಆದರೆ ಈಗ ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್ ಮತ್ತು ಬಿಜೆಪಿ ಮುಖಂಡರ ಒತ್ತಡಕ್ಕೆ ಒಳಗಾಗಿರುವ ತಹಶೀಲ್ದಾರ್ ಮಮತ ಏಕಾಏಕಿ ಆದೇಶ ಹೊರಡಿಸಿ ತೆಂಗು, ಅಡಿಕೆ ಮರಗಳಿಗೆ ಕೊಡಲಿಪಟ್ಟು ಬಿದ್ದಿದೆ. ಹೆಚ್ಚು ಜನರು ಜಾತ್ರೆಗೆ ಸೇರುವ (ಲಿಂಗಾಯತ, ಒಕ್ಕಲಿಗರು) ಹಿನ್ನೆಲೆಯಲ್ಲಿ ಅಲ್ಲಿಗೆ ಹೆಚ್ಚು ವಾಹನಗಳು ಬರುತ್ತವೆ. ಹಾಗಾಗಿ ವಿಶಾಲ ಜಾಗ ಬೇಕು ಎಂಬ ನೆಪ ಒಡ್ಡಿ ತೋಟ ಕಡಿದಿದ್ದಾರೆ. ತೋಟವನ್ನು ಕಡಿಯುವುದಾದರೆ 5 ಎಕರೆ 11 ಗುಂಟೆಯಲ್ಲಿರುವ ಎಲ್ಲವನ್ನೂ ಕತ್ತರಿಸಿ ಹಾಕಲಿ. ಮಳೆಗಾಲದಲ್ಲಿ ಬೇಕಾದರೆ ಆ ಕುಟುಂಬಗಳು ಆ ಭೂಮಿಯಲ್ಲಿ ಮಾಡಿಕೊಂಡು ತಿನ್ನಲಿ ಎನ್ನುತ್ತಾರೆ ಕೆಲವರು.

ಇಡೀ ಪ್ರಕರಣವನ್ನು ಗಮನಿಸಿದರೆ ಬಲಾಢ್ಯ ಜಾತಿಗಳು ಕೋಡಿಕೆಂಪಮ್ಮ ದೇವಾಲಯ ಮತ್ತು ಇನಾಂತಿ ಜಮೀನಿನ ಮೇಲೆ ಕಣ್ಣಿಟ್ಟಿವೆ. ದೇವಾಲಯವನ್ನು ಅಭಿವೃದ್ಧಿಪಡಿಸಿ ರಿಯಲ್ ಎಸ್ಟೇಟ್ ದಂಧೆ ಮಾಡುವ ಹುನ್ನಾರಗಳು ನಡೆಯುತ್ತಿರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ. ನಾಯಕ ಸಮುದಾಯ ತೋಟಗಾರಿಕೆ ಬೆಳೆಯಲ್ಲಿ ಲಾಭ ಮಾಡಿಕೊಂಡು ಆರ್ಥಿಕವಾಗಿ ಸಬಲರಾದರೆ ತಮ್ಮ ಹಿಡಿತ ತಪ್ಪಿಹೋಗುತ್ತದೆ ಎಂಬ ಕಾರಣಕ್ಕೆ ಪಿತೂರಿ ನಡೆಸಲಾಗುತ್ತಿದೆ ಎಂದು ಹೆಸರು ಹೇಳಲು ಇಚ್ಚಿಸದೆ ಕೆಲವರು ತಿಳಿಸಿದ್ದಾರೆ.

ಈಗ ಸಿದ್ದಮ್ಮ ತನಗೆ ನ್ಯಾಯಬೇಕು ಎಂದು ಧರಣಿ ಕೂತಿದ್ದಾಳೆ: ಹತ್ತಾರು ಜನ ಆಕೆಯ ಬೆಂಬಲಕ್ಕೆ ನಿಂತಿದ್ದಾರೆ. ಹೋರಾಟವನ್ನು ತುಮಕೂರಿನವರೆಗೂ ಒಯ್ಯುವುದಾಗಿ ಆಕೆ ಶಪಥ ಮಾಡಿದ್ದಾಳೆ. ಇದು ಎಲ್ಲಿಗೆ ಹೋಗಿ ನಿಲ್ಲುತ್ತದೆ ಕಾದು ನೋಡಬೇಕಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

31 ವರ್ಷಗಳ ಹಳೇ ಸಾಲ ತೀರಿಸಲು 1200 ಕಿ.ಮೀ ಪ್ರಯಾಣಿಸಿದ ಕೇರಳದ ಇಸ್ಮಾಯಿಲ್

"ನನ್ನ ಕಣ್ಣುಗಳಿಂದ ಆನಂದಬಾಷ್ಪಗಳು ಉದುರಿದವು. ನನ್ನ ಮನಸ್ಸಿಗೆ ಅದೆಷ್ಟು ನೆಮ್ಮದಿ ಸಿಕ್ಕಿತೆಂದರೆ, ಅದನ್ನು ವಿವರಿಸಲು ಪದಗಳೇ ಸಾಲದು. ಆತನಿಗೂ ಅಷ್ಟೇ ದೊಡ್ಡ ಸಮಾಧಾನ." ಹೀಗೆ ಭಾವುಕರಾಗಿ ನುಡಿಯುತ್ತಾರೆ ಮೊಹಮ್ಮದ್ ಇಸ್ಮಾಯಿಲ್. 1995ರಲ್ಲಿ ಸೌದಿ...

ಬಂಡಾಯದ ಬಳಿಕ ಟಿಎಂಸಿಗೆ ಮತ್ತೊಂದು ಸವಾಲು : ಪಕ್ಷದ ಬ್ಯಾಂಕ್ ಖಾತೆಗಳು ಫ್ರೀಝ್

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಮೂರು ಬ್ಯಾಂಕ್ ಖಾತೆಗಳಲ್ಲಿರುವ 440 ಕೋಟಿ ರೂಪಾಯಿ ಹಣವನ್ನು ಭಾಗಶಃ ಬಳಸಲು ಕಲ್ಕತ್ತಾ ಹೈಕೋರ್ಟ್ ಅನುಮತಿ ನೀಡಿದ ಮರುದಿನವೇ, ಪಶ್ಚಿಮ ಬಂಗಾಳ ಪೊಲೀಸರು...

ಮಂದಿರ ನಿರ್ಮಾಣದ ಕ್ರೆಡಿಟ್‌ಗೆ ಇದ್ದ ಯಜಮಾನಿಕೆ, ಕೊಳ್ಳೆ ಹೊಡೆದಾಗ ಯಾಕಿಲ್ಲ ಸೇವಕರೇ?

ಬಾಲರಾಮನ ಪ್ರಾಣಪ್ರತಿಷ್ಠಾಪನೆಗೆ ಮುನ್ನ ಪ್ರಧಾನಿಯವರು 11 ದಿನಗಳ ಕಾಲ ಕಠಿಣ ಉಪವಾಸ ವ್ರತ ಆಚರಿಸಿದ್ದರು, ಕೇವಲ ಎಳನೀರು ಕುಡಿದರು, ನೆಲದ ಮೇಲೆ ಮಲಗಿದರು ಎಂದು ಇಡೀ ದೇಶಕ್ಕೆ ಸಾರಲಾಗಿತ್ತು. ಅಯೋಧ್ಯೆಯಿಂದ ಹೊಸ ಕಾಲದ...

‘ಫ್ರೀ ಪ್ಯಾಲೆಸ್ತೀನ್’ ಘೋಷಣೆಯನ್ನು ತಮಾಷೆ ಮಾಡಿದ ಸೈಫ್ ಅಲಿ ಖಾನ್ – ನಿರೂಪಕಿ ಅನುಪಮಾ ಚೋಪ್ರಾ

ಸ್ಪ್ಯಾನಿಷ್ ನಟ ಜೇವಿಯರ್ ಬಾರ್ಡೆಮ್ ಅವರ "ಫ್ರೀ ಪ್ಯಾಲೆಸ್ತೀನ್" ಹೇಳಿಕೆ ಕುರಿತು ಸೈಫ್ ಅಲಿ ಖಾನ್ ಮತ್ತು ಚಲನಚಿತ್ರ ಪತ್ರಕರ್ತೆ ಅನುಪಮಾ ಚೋಪ್ರಾ ನಗುತ್ತಿರುವ ಕ್ಲಿಪ್ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ನಟನ ಅಸೂಕ್ಷ್ಮ...

ತೆಲಂಗಾಣ : ಪೋಕ್ಸೋ ಪ್ರಕರಣದ ಆರೋಪಿಯಿಂದ ಸಂತ್ರಸ್ತೆ ಸೇರಿ 6 ಜನರ ಹತ್ಯೆ

ಪೋಕ್ಸೋ ಪ್ರಕರಣದ ಆರೋಪಿಯೊಬ್ಬ ಸಂತ್ರಸ್ತೆ ಸೇರಿದಂತೆ ಒಟ್ಟು ಆರು ಜನರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಾಬಾದ್ ಮಂಡಲದಲ್ಲಿ ಶುಕ್ರವಾರ (ಜು.10) ರಾತ್ರಿ ನಡೆದಿದೆ. 28 ವರ್ಷ ವಯಸ್ಸಿನ...

‘ನನ್ನನ್ನು ಮೌನಗೊಳಿಸಲು, ನೀವು ನನ್ನನ್ನು ಕೊಲ್ಲಬೇಕಾಗುತ್ತದೆ’: ಟಿಎಂಸಿ ಬಿಕ್ಕಟ್ಟಿನ ನಡುವೆ ಬಿಜೆಪಿ ವಿರುದ್ಧ ಮಮತಾ ಬ್ಯಾನರ್ಜಿ ಆಕ್ರೋಶ  

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ಪಕ್ಷದಲ್ಲಿ ಆಂತರಿಕ ಬಿಕ್ಕಟ್ಟು ತಾರಕಕ್ಕೇರಿರುವ ಬೆನ್ನಲ್ಲೇ, ಪಕ್ಷದ ಸುಪ್ರೀಮೋ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇತ್ತೀಚಿನ ತಿಂಗಳುಗಳಲ್ಲೇ ಅತ್ಯಂತ ಪ್ರಬಲವಾದ ರಾಜಕೀಯ...

ಸುಪ್ರೀಂ ಕೋರ್ಟ್‌ನಲ್ಲಿ ಜಡ್ಜ್‌ಗಳನ್ನೇ ‘ನ್ಯಾಯಾಂಗ ಸೇವಕರು’ ಎಂದ ಅರ್ಜಿದರ

ಸುಪ್ರೀಂ ಕೋರ್ಟ್‌ನಲ್ಲಿ ಶುಕ್ರವಾರ ಅತ್ಯಂತ ನಾಟಕೀಯ ಹಾಗೂ ಆಘಾತಕಾರಿ ದೃಶ್ಯವೊಂದು ತೆರೆದುಕೊಂಡಿದೆ. ಪ್ರಕರಣವೊಂದರ ವಿಚಾರಣೆ ವೇಳೆ ಖುದ್ದಾಗಿ ಹಾಜರಾಗಿದ್ದ ಅರ್ಜಿದಾರನೊಬ್ಬ, ಲಕ್ನೋದ ಪೊಲೀಸ್ ಅಧಿಕಾರಿಯೊಬ್ಬರ ವಿರುದ್ಧ ಎಫ್‌ಐಆರ್ (FIR) ದಾಖಲಿಸಲು ನಾನು ನ್ಯಾಯಪೀಠಕ್ಕೆ...

ಮದ್ಯದ ಅಮಲಿನಲ್ಲಿ ಸಾರಿಗೆ ಬಸ್‌ ಅಪಹರಿಸಿದ ವ್ಯಕ್ತಿ; 21 ಕಿ.ಮೀ. ಪ್ರಯಾಣದ ನಂತರ ಅಪಘಾತ

ತೆಲಂಗಾಣದ ಜನಗಾಂವ್ ಬಸ್ ನಿಲ್ದಾಣದಲ್ಲಿ ನಿಂತಿದ್ದ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮದ (ಟಿಜಿಎಸ್‌ಆರ್‌ಟಿಸಿ) ಬಸ್‌ ಅನ್ನು ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಕದ್ದಿದ್ದಾನೆ. ನಂತರ ಅದನ್ನು ಸುಮಾರು 21 ಕಿ.ಮೀ. ದೂರ ಓಡಿಸಿ,...

ಬೆಂಗಳೂರಿನಲ್ಲಿ: ರಸ್ತೆ ಬದಿ ವಾರಗಟ್ಟಲೆ ವಾಹನ ನಿಲ್ಲಿಸಿದರೆ ಜಪ್ತಿ ಮಾಡಿ ‘ಹರಾಜು’ ಹಾಕಲಿದೆ ಸರ್ಕಾರ!

ಸಿಲಿಕಾನ್ ಸಿಟಿಯ ಟ್ರಾಫಿಕ್ ದಟ್ಟಣೆಗೆ ಮುಕ್ತಿ ಹಾಡಲು ಮತ್ತು ಪಾದಚಾರಿಗಳ ಹಕ್ಕನ್ನು ರಕ್ಷಿಸಲು ರಾಜ್ಯ ಸರ್ಕಾರ ಈಗ ಅತ್ಯಂತ ಕಠಿಣ ಹೆಜ್ಜೆಯನ್ನಿಟ್ಟಿದೆ. ನಗರದ ರಸ್ತೆ ಬದಿ ಹಾಗೂ ಫುಟ್‌ಪಾತ್‌ಗಳಲ್ಲಿ ತಿಂಗಳುಗಟ್ಟಲೆ ಧೂಳು ತಿನ್ನುತ್ತಾ...

ಸರ್ಕಾರಿ ಶಾಲೆಗಳಲ್ಲಿ 86 ಲಕ್ಷ ವಿದ್ಯಾರ್ಥಿಗಳ ಕುಸಿತ, ಖಾಸಗಿ ಶಾಲೆಗಳತ್ತ ಮುಖ ಮಾಡಿದ 88 ಲಕ್ಷ ಮಕ್ಕಳು: ಕಳವಳಕಾರಿ ವರದಿ

ನವದೆಹಲಿ: ದೇಶದ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆಗಳು ಕಂಡುಬರುತ್ತಿದ್ದು, ಸರ್ಕಾರಿ ಶಾಲೆಗಳ ದಾಖಲಾತಿಯಲ್ಲಿ ಭಾರಿ ಕುಸಿತ ಉಂಟಾಗಿದೆ. 2023–24 ಮತ್ತು 2025–26ರ ಶೈಕ್ಷಣಿಕ ವರ್ಷಗಳ ನಡುವಿನ ಅವಧಿಯಲ್ಲಿ ದೇಶಾದ್ಯಂತ ಸರ್ಕಾರಿ ಶಾಲೆಗಳಲ್ಲಿ...