ಅಸ್ಸಾಂ ರಾಜ್ಯ ಸರ್ಕಾರ ಒಲಂಪಿಕ್ಸ್ ಪದಕ ವಿಜೇತೆ ಹಿಮಾ ದಾಸ್ ಅವರನ್ನು ಉಪ ಪೊಲೀಸ್ ವರಿಷ್ಠಾಧಿಕಾರಿಯಾಗಿ ನೇಮಕ ಮಾಡಲು ನಿರ್ಧರಿಸಿದೆ ಎಂದು ಅಸ್ಸಾಂ ಹಣಕಾಸು ಸಚಿವ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ. 2020-21ರ ಹಣಕಾಸು ವರ್ಷದ ರಾಜ್ಯ ಬಜೆಟ್ ಅನ್ನು ಶುಕ್ರವಾರ ಮಂಡಿಸುವಾಗ ಈ ಘೋಷಣೆ ಮಾಡಿದ್ದಾರೆ.
“ಒಲಂಪಿಕ್ಸ್, ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಪದಕಗಳನ್ನು ಗೆದ್ದ ಕ್ರೀಡಾಪಟುಗಳಿಗೆ ಡಿಎಸ್ಪಿ ಅಥವಾ ಮ್ಯಾಜಿಸ್ಟ್ರೇಟ್ ನಂತಹ ಗ್ರೇಡ್ -1 ಅಧಿಕಾರಿಗಳ ಶ್ರೇಣಿಯನ್ನು ನೀಡಲಾಗುವುದು ಎಂದು ಅಸ್ಸಾಂ ಸರ್ಕಾರ ಘೋಷಿಸಿದೆ. ಇದು ಜನರನ್ನು ಕ್ರೀಡೆಯಲ್ಲಿ ತೊಡಗಿಸಿಕೊಳ್ಳಲು ಪ್ರೋತ್ಸಾಹಿಸುತ್ತದೆ” ಎಂದು ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ.
“ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ ಸೋನೊವಾಲ್ ಮತ್ತು ಹಿಮಂತ ಬಿಸ್ವಾ ಶರ್ಮಾ ಅವರಿಗೆ ಡಿಎಸ್ಪಿ ಹುದ್ದೆಯನ್ನು ನೀಡಿದ್ದಕ್ಕಾಗಿ ಧನ್ಯವಾದ” ಎಂದು ಟ್ವಿಟ್ಟರಿನಲ್ಲಿ ಹಿಮಾ ದಾಸ್ ಪ್ರತಿಕ್ರಿಯಿಸಿದ್ದಾರೆ.
I express my heartfelt gratitude to the Honourable Chief Minister @sarbanandsonwal sir and the Honourable Finance Minister of Assam @himantabiswa sir for having offering me the post of Deputy Superintendent of Police in recognition of my achievements – Continued-
— Hima MON JAI (@HimaDas8) March 6, 2020
“ನನ್ನ ಸಾಧನೆಗಳನ್ನು ಗುರುತಿಸಿ, ನನ್ನನ್ನು ಹಾಗೂ ಅಸಂಖ್ಯಾತ ಉದಯೋನ್ಮುಖ ಕ್ರೀಡಾಪಟುಗಳನ್ನು ಶ್ರಮಿಸಲು ಪ್ರೇರೇಪಿಸಿದ್ದಕ್ಕಾಗಿ ಗೌರವಾನ್ವಿತ ಮುಖ್ಯಮಂತ್ರಿ ಸರ್ಬಾನಂದ್ಸನ್ವಾಲ್ ಸರ್ ಮತ್ತು ಅಸ್ಸಾಂನ ಗೌರವಾನ್ವಿತ ಹಣಕಾಸು ಸಚಿವ ಹಿಮಾಂತಬಿಸ್ವಾ ಸರ್ ಅವರಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆಯನ್ನು ಅರ್ಪಿಸುತ್ತೇನೆ” ಹಿಮಾ ದಾಸ್ ಸರಣಿ ಟ್ವೀಟ್‌ಗಳಲ್ಲಿ ಹೇಳಿದ್ದಾರೆ.


