Homeಮುಖಪುಟಸಾಹಿಲ್‌ ಚೀನಾದಿಂದ ತುಮಕೂರಿಗೆ ಬರುವುದಿಲ್ಲ ಎಂದಿದ್ದು ಏಕೆ? ಆತನ ಮಾತುಗಳಲ್ಲೇ ಕೇಳಿ

ಸಾಹಿಲ್‌ ಚೀನಾದಿಂದ ತುಮಕೂರಿಗೆ ಬರುವುದಿಲ್ಲ ಎಂದಿದ್ದು ಏಕೆ? ಆತನ ಮಾತುಗಳಲ್ಲೇ ಕೇಳಿ

- Advertisement -
- Advertisement -

ದೇಶಭಕ್ತಿ ತೋರಿಕೆಯದಲ್ಲ. ಅದನ್ನು ಬಹಿರಂಗವಾಗಿ ತೋರಿಸಬೇಕಾಗಿಯೂ ಇಲ್ಲ. ದೇಶಭಕ್ತಿ ವ್ಯಾಪಾರದ ಲಾಭಗಳಿಸುವ ಸರಕೂ ಅಲ್ಲ. ಅದು ಹೃದಯದಲ್ಲಿರಬೇಕು. ಸಂದರ್ಭ ಬಂದಾಗ ಅದಾಗಿ ತೆರೆದುಕೊಳ್ಳಬೇಕು. ಆದರೆ ಕೆಲವೊಂದು ವ್ಯಕ್ತಿ-ಸಂಘಟನೆಗಳು ಸಂಕೇತಗಳನ್ನು ಕೈಯಲ್ಲಿಡಿದು ದೇಶಭಕ್ತಿ ಇದೇ ಎಂದು ಕೂಗಿ ಹೇಳುತ್ತಿರುವ ಹೊತ್ತಿನಲ್ಲಿ ನಿಜದ ದೇಶಭಕ್ತಿ ಹೇಗಿರಬೇಕು ಎಂಬುದಕ್ಕೆ ಈತ ಸಾಕ್ಷಿಯಾಗಿದ್ದಾನೆ. ದೇಶವೆಂದರೆ ಗಡಿ ಮಾತ್ರವಲ್ಲ. ಅದರೊಳಗಿರುವ ಜನರಿಗೆ ತನ್ನಿಂದ ತೊಂದರೆಯಾಗುವುದಾದರೆ, ಸಂಕಷ್ಟ ಬರುವುದಾದರೆ ನಾನು ಅಲ್ಲಿಗೆ ಹೋಗಬಾರದು ಎಂಬ ದೃಢವಾದ ತೀರ್ಮಾನ ಕೈಗೊಳ್ಳುವುದು. ದೇಶ ಜನರ ಪರವಾಗಿ ಹೋರಾಡುವುದು ಎಂಬುದನ್ನು ಸಾಹಿಲ್ ಹುಸೇನ್ ಸಾಧಿಸಿ ತೋರಿದ್ದಾರೆ. ಅವರು ತೆಗೆದುಕೊಂಡಿರುವ ಕ್ರಮ ತನ್ನ ಕುಟುಂಬಕ್ಕೆ ನೋವಾದರೂ ದೇಶಕ್ಕೆ ಹಿತಬಯಸುವುದಾಗಿದೆ. ಇದೇ ನಿಜವಾದ ದೇಶಭಕ್ತಿ.

ಹೌದು, ತುಮಕೂರಿನ ಶಿಕ್ಷಕ ರಿಜ್ಞಾನ್ ಪಾಷಾ ಮತ್ತು ಸಮೀನಾ ಖಾನಂ ದಂಪತಿಯ ಎರಡನೇ ಪುತ್ರ ಸಾಹಿಲ್ ಹುಸೇನ್ ತಾನು ತೆಗೆದುಕೊಂಡು ನಿರ್ಧಾರದಿಂದ ನಕಲಿ ದೇಶಭಕ್ತರಿಗೆ ಮಾದರಿಯಾಗಿದ್ದಾರೆ. ದೇಶಭಕ್ತಿ ಕೂಗುವುದಲ್ಲ, ಸಂದರ್ಭ ಬಂದಾಗ ಮೆರೆಯುವುದು ಎಂಬುದನ್ನು ಸಾಬೀತುಪಡಿಸಿದ್ದಾರೆ. ತಾನಿರುವ ಸ್ಥಳದಿಂದ ತನ್ನ ದೇಶಕ್ಕೆ ಬಂದರೆ ಜನರು ಬಾಧಿತರಾಗುತ್ತಾರೆಂಬ ಸಾಹಿಲ್ ಹುಸೇನ್ ತಿಳುವಳಿಕೆ ಮೆಚ್ಚುವಂತಹದ್ದು. ಚಿಕ್ಕ ವಯಸ್ಸಿಗೆ ಇಂತಹ ತೀರ್ಮಾನ ಕೈಗೊಂಡಿರುವುದು ಆತನ ತಂದೆ-ತಾಯಿಗಳಲ್ಲಿ ಮಗನ ಬಗ್ಗೆ ಅಭಿಮಾನ ಉಕ್ಕಿ ಬಂದಿದೆ.

ಎಂಬಿಬಿಎಸ್ ವ್ಯಾಸಂಗ ಮಾಡಲೆಂದು ಕರ್ನಾಟಕದಿಂದ ಚೀನಾದ ವಾಸ್ಲಿ ಡಿಸ್ಟ್ರಿಕ್ ನಾನ್ ಚೆಂಗ್ ಪ್ರಾವಿನ್ಸ್ ಗೆ 5 ಮಂದಿ ಸ್ನೇಹಿತರು ತೆರಳುತ್ತಾರೆ. ಈ ಐವರಲ್ಲಿ ಇಬ್ಬರು ಯುವತಿಯರು ಮತ್ತು ಮೂವರು ಯುವಕರು ಸೇರಿರುತ್ತಾರೆ. ನಾಬ್ ಆಫ್ರಿನ್, ಅರುಣ್ ಕುಮಾರ್, ಲೋಕೇಶ್ ಮತ್ತು ತುಮಕೂರಿನಿಂದ ಸಾಹಿಲ್ ಹುಸೇನ್ ಜಿಯಾಂಗ್ ಯೂನಿವರ್ ಸಿಟಿ ಆಫ್ ಚೈನೀಸ್ ಟ್ರೆಡಿಷನ್ಸ್ ಮೆಡಿಸನ್ ವಿವಿಗೆ ಎಂಬಿಬಿಎಸ್ ಓದಲು ಹೋಗುತ್ತಾರೆ. ಈಗ ಅವರೆಲ್ಲರೂ 6ನೇ ಸೆಮಿಸ್ಟರ್ ಓದುತ್ತಿದ್ದಾರೆ. ಆದರೆ ಚೀನಾದಲ್ಲಿ ಕರೋನಾ ವೈರಸ್ ದಾಳಿ ಇಡುತ್ತಿದ್ದಂತೆಯೇ ವಿವಿಗೆ ರಜೆ ಘೋಷಿಸಲಾಗುತ್ತದೆ. ತನ್ನ ತವರು ದೇಶಗಳಿಗೆ ತೆರಳುವಂತೆ ಸೂಚಿಸಲಾಗುತ್ತದೆ.

ಈ ಹಿನ್ನೆಲೆಯಲ್ಲಿ ಕರ್ನಾಟಕದಿಂದ ಎಂಬಿಬಿಎಸ್ ವ್ಯಾಸಂಗಕ್ಕೆ ಹೋಗಿದ್ದ ನಾಲ್ವರು ವಿದ್ಯಾರ್ಥಿಗಳನ್ನು ಅವರ ಪೋಷಕರು ಕೂಡಲೇ ಸ್ವದೇಶಕ್ಕೆ ವಾಪಸ್ ಕರೆಸಿಕೊಳ್ಳುತ್ತಾರೆ. ಕೊರೋನ ವೈರಸ್ ಇಡೀ ಚೀನಾವನ್ನೇ ಬಾಧಿಸುತ್ತಿರುವಾಗ ಸಾಹಿಲ್ ಹುಸೇನ್ ತನ್ನ ತವರಿಗೆ ಹೋಗದೇ ಇರಲು ತೀರ್ಮಾನಿಸುತ್ತಾರೆ. ಎಲ್ಲಾ ಪೋಷಕರಂತೆ ರಿಜ್ವನ್ ಪಾಷಾ ಅವರು ಕೂಡ ತನ್ನ ಮಗನಿಗೆ ಪೋನ್ ಮಾಡಿ ತುಮಕೂರಿಗೆ ವಾಪಸ್ ಆಗುವಂತೆ ಕೇಳಿಕೊಳ್ಳುತ್ತಾರೆ. ಆಗ ಸಾಹಿಲ್ ತನ್ನ ನಿರ್ಧಾರವನ್ನು ತಿಳಿಸುತ್ತಾರೆ. ಇದರಿಂದ ರಿಜ್ವನ್ ಪಾಷ ಅವರು ಅದಕ್ಕೆ ತಲೆದೂಗುತ್ತಾರೆ.

ತಂದೆ ರಿಜ್ವಾನ್ ಪಾಷ ಅವರಿಗೆ ಮಗ ಸಾಹಿಲ್ ಕಳಿಸಿರುವ ವಿಡಿಯೋದಲ್ಲಿ ಹೇಳಿರುವಂತೆ “ನಾನು ಇಲ್ಲಿ ಚನ್ನಾಗಿಯೇ ಇದ್ದೇನೆ. ಚೀನಾ ಸರ್ಕಾರ ಉತ್ತಮ ಕ್ರಮ ಕೈಗೊಂಡಿದೆ. ವಿಶ್ವವಿದ್ಯಾಲಯವೂ ನಮಗೆ ಬೆಂಬಲಕ್ಕೆ ನಿಂತಿದೆ. ನೀವು ಹೆದರಬೇಡಿ. ನಾನು ದೇಶಕ್ಕೆ ಬರಬೇಕಾದರೆ ಮೂರು ವಿಮಾನಗಳನ್ನು ಬದಲಿಸಿ ಬರಬೇಕು. ಇದರಿಂದ ನಾನು ಭಾರತಕ್ಕೆ ಬಂದರೆ ಅಲ್ಲಿಗೂ ಕೊರೋನ ವೈರಸ್ ಹರಡುತ್ತದೆ. ಹಾಗಾಗಿ ನಾನು ಬರುವುದಿಲ್ಲ. ನೀವು ಭಯಬೀಳಬೇಡಿ”  ಎಂದು ಮನವಿ ಮಾಡಿದ್ದಾರೆ.

ನಾನುಗೌರಿ.ಕಾಂ ಜೊತೆ ಮಾತನಾಡಿದ ಶಿಕ್ಷಕ ರಿಜ್ವಾನ್ ಪಾಷ, ನಾನು ಮಗನಿಗೆ ಪೋನ್ ಮಾಡಿದೆ. ಬೇಗ ಚೀನಾ ಬಿಟ್ಟುಬರುವಂತೆ ಹೇಳಿದೆ. ಆದರೆ ಮಗ ಬರುವುದಿಲ್ಲ ಹೇಳಿದ. ನಾನು ಇರುವ ಜಾಗದಿಂದ ಬ್ಯಾಂಕಾಕ್‌ಗೆ ಬರಬೇಕು. ಅಲ್ಲಿಂದ ದೆಹಲಿ ಅಥವಾ ಮುಂಬೈಗೆ ಬರಬೇಕು. ನಾನು ದೇಶಕ್ಕೆ ಬಂದರೆ ತೊಂದರೆಯಾಗಬಹುದು. ಹಾಗಾಗಿ ನಾನು ಬರುತ್ತಿಲ್ಲ. ಇಲ್ಲಿ ನಾನು ಚೆನ್ನಾಗಿಯೇ ಇದ್ದೇನೆ. ನೀವು ಆರಾಮವಾಗಿರಿ ಎಂದು ಹೇಳಿದ. ನನಗೆ ಮಗನ ಬಗ್ಗೆ ಅಭಿಮಾನ ಉಕ್ಕಿಬಂತು. ಸಣ್ಣ ವಯಸ್ಸಿನಲ್ಲಿ ಇಷ್ಟೊಂದು ತಿಳುವಳಿಕೆ ಇದೆ. ದೇಶದ ಬಗ್ಗೆ ಆತನಿಗಿರುವ ಅಭಿಮಾನ ಕಂಡು ನನ್ನ ಕಣ್ಣು ನೀರಾಡಿತು. ಒಳ್ಳೆಯ ಮಗನನ್ನು ಪಡೆದಿದ್ದೇನೆ. ಆಯ್ತು ಚನ್ನಾಗಿರು ಎಂದು ಹೇಳಿದೆ ಎಂದು ತಿಳಿಸಿದರು.

ಈಗ ಚೀನಾದಲ್ಲಿ ಆರೋಗ್ಯಕರ ವಾತಾವರಣ ಇಲ್ಲ. ಸಾವಿರಾರು ಮಂದಿ ಕೊರೋನ ವೈರಸ್ ಗೆ ಬಲಿಯಾಗಿದ್ದಾರೆ. ಲಕ್ಷಾಂತರ ಮಂದಿ ಸೋಂಕಿನಿಂದ ನರಳುತ್ತಿದ್ದಾರೆ. ಕೊರೋನ ಸೋಂಕು ಇಡೀ ವಿಶ್ವಕ್ಕೆ ಹಬ್ಬುತ್ತಿದೆ. ಭಾರತದಲ್ಲೂ ಸುಮಾರು 80ಕ್ಕೂ ಹೆಚ್ಚು ಕೊರೋನ ವೈರಸ್ ಸೋಂಕಿನ ಪ್ರಕರಣಗಳು ಪತ್ತೆ ಆಗಿವೆ. ಜನರು ಭಯಭೀತರಾಗಿದ್ದಾರೆ. ಇಂತಹ ಸಂದರ್ಭದಲ್ಲೂ ತಾನು ಚೀನಾದಲ್ಲಿಯೇ ಇರುತ್ತೇನೆ. ಭಾರತಕ್ಕೆ ಬಂದರೆ ಕೋರೋನಾ ವೈರಸ್ ಹರಡಿದರೆ ನನ್ನ ಜನರು ಸಂಕಟ, ನೋವು ಅನುಭವಿಸುತ್ತಾರೆಂದು ತೀರ್ಮಾನಿಸಿರುವುದು ನಿಜವಾಗಿಯೇ ಆತನ ದೇಶಪ್ರೇಮಕ್ಕೆ ಬೆಲೆ ಕಟ್ಟುವಂತಿಲ್ಲ. ತಾನು ಎಷ್ಟೇ ಕಷ್ಟ ಎದುರಿಸಿದರೂ ನನ್ನ ಜನರಿಗೆ ನೋವಾಗದಿರಲಿ ಎಂಬ ಅಚಲ ನಿಲುವಿಗೆ ಹ್ಯಾಟ್ಸಪ್ ಹೇಳಲೇಬೇಕು. ನಿಜಕ್ಕೂ ರಿಜ್ವಾನ್ ಪಾಷ ಮತ್ತು ಸಮೀನಾ ಖಾನಂ ದಂಪತಿಗೆ ಅಭಿನಂದನೆ ಸಲ್ಲಬೇಕು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

​ಚನ್ನರಾಯಪಟ್ಟಣ ರೈತರಿಗೆ ಅಂತಿಮ ವಿಜಯ; ​ಬೆಂಬಲಕ್ಕೆ ನಿಂತವರಿಗೆ ಧನ್ಯವಾದ ತಿಳಿಸಿದ ‘ಹೋರಾಟ ಸಮಿತಿ’

​ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಹೋಬಳಿಯ 13 ಹಳ್ಳಿಗಳ ರೈತರ ಭೂ ಹೋರಾಟ ಕೊನೆಗೂ ಸುಖಾಂತ್ಯವಾಗಿದೆ. ಚನ್ನರಾಯಪಟ್ಟಣ ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ ಜೊತೆಗೆ ರಾಜ್ಯದ ಹತ್ತಾರು ಜನಪರ ಸಂಘಟನೆಗಳು ನಡೆಸಿದ ಸುದೀರ್ಘ ಹೋರಾಟ...

ಸಚಿವ ಸಂಪುಟ ಸಭೆಯಲ್ಲಿ ಅಲೆಮಾರಿಗಳ ಬಗ್ಗೆ ತುಟಿ ಬಿಚ್ಚದ ಸರ್ಕಾರ; ‘ಬೆಳಗಾವಿ ಚಲೋ’ ಹೋರಾಟಕ್ಕೆ ಕರೆ

ಗುರುವಾರ (ಡಿ.4) ನಡೆದ ಸಚಿವ ಸಂಪುಟ ಸಭೆಯಲ್ಲಿ ಅಲೆಮಾರಿಗಳ ಮೀಸಲಾತಿ ಬಗ್ಗೆ ತುಟಿ ಬಿಚ್ಚದ ರಾಜ್ಯ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತವಾಗಿದ್ದು, 'ಕರ್ನಾಟಕ ಅಸ್ಪೃಶ್ಯ ಅಲೆಮಾರಿ ಸಮುದಾಯಗಳ ಮಹಾ ಒಕ್ಕೂಟ' 'ಬೆಳಗಾವಿ ಚಲೋ'...

ಅಖಂಡ ಕರ್ನಾಟಕದ ಪ್ರದೇಶಗಳನ್ನು ಸಾಂಸ್ಕೃತಿಕವಾಗಿ ವಿಲೀನಗೊಳಿಸಲು ಇದು ಸಕಾಲ: ಡಾ.ಪುರುಷೋತ್ತಮ ಬಿಳಿಮಲೆ

ಕರ್ನಾಟಕ ಮತ್ತು ನೆರೆ ರಾಜ್ಯಗಳ ಅಚ್ಚ ಕನ್ನಡ ಪ್ರದೇಶಗಳ ನಡುವಿನ ಭೌತಿಕ ಗಡಿಗಳು ಇದ್ದಂತೆ ಇದ್ದರೂ ಸಾಂಸ್ಕೃತಿಕವಾಗಿ ಹೇರಲಾಗುತ್ತಿರುವ ಗಡಿಗಳನ್ನು ಅಪ್ರಸ್ತುತವಾಗಿಸುವುದು ಸಾಧ್ಯವಿದೆ. ಇಂತಹ ಪ್ರದೇಶಗಳೊಂದಿಗೆ ಕರ್ನಾಟಕದ ಭಾವನಾತ್ಮಕ ಸಂಬಂಧದ ವಿಸ್ತರಣೆಗೆ ಇದು...

ಅರುಂಧತಿ ರಾಯ್ ಅವರ ಪುಸ್ತಕದ ಮುಖಪುಟ ವಿರೋಧಿಸಿದ್ದ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್

ಖ್ಯಾತ ಲೇಖಕಿ ಅರುಂಧತಿ ರಾಯ್ ಅವರ 'ಮದರ್ ಮೇರಿ ಕಮ್ಸ್ ಟು ಮಿ' ಪುಸ್ತಕದ ಮುಖಪುಟ ಚಿತ್ರದ ಪ್ರಸಾರದ ವಿರುದ್ಧ ಸಲ್ಲಿಸಲಾದ ಅರ್ಜಿಯನ್ನು ಸುಪ್ರಿಂ ಕೋರ್ಟ್‌ ಶುಕ್ರವಾರ ತಿರಸ್ಕರಿಸಿದೆ. ಏಕೆಂದರೆ, ಲೇಖಕರು ಧೂಮಪಾನವನ್ನು...

ರೋಹಿಂಗ್ಯಾ ಕುರಿತು ಆಕ್ಷೇಪಾರ್ಹ ಹೇಳಿಕೆ: ಸಿಐಜೆ ಸೂರ್ಯಕಾಂತ್ ಅವರಿಗೆ ಮಾಜಿ ನ್ಯಾಯಾದೀಶರು, ವಕೀಲರು, ಶಿಕ್ಷಣ ತಜ್ಞರಿಂದ ಮುಕ್ತ ಪತ್ರ

ರೋಹಿಂಗ್ಯಾಗಳ ವಿರುದ್ಧ ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರು ನೀಡಿದ್ದ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿ ಮಾಜಿ ನ್ಯಾಯಾಧೀಶರು, ವಕೀಲರು ಮತ್ತು ಶಿಕ್ಷಣ ತಜ್ಞರು ಸೂರ್ಯಕಾಂತ್ ಅವರಿಗೆ ಮುಕ್ತ ಪತ್ರ ಬರೆದಿದ್ದಾರೆ.  ಕಿರುಕುಳದಿಂದ ಪಲಾಯನ ಮಾಡಿದ...

ಛತ್ತೀಸ್‌ಗಢ: ‘ಎಸ್‌ಇಸಿಎಲ್‌ ಅಮೇರಾ’ ಕಲ್ಲಿದ್ದಲು ಗಣಿ ವಿಸ್ತರಣೆ ವಿರೋಧಿಸಿ ಪರ್ಸೋಡಿ ಕಲಾನ್ ಗ್ರಾಮದಲ್ಲಿ ಪ್ರತಿಭಟನೆ

ಛತ್ತೀಸ್‌ಗಢದ ಸೌತ್ ಈಸ್ಟರ್ನ್ ಕೋಲ್‌ಫೀಲ್ಡ್ಸ್ ಲಿಮಿಟೆಡ್‌ನ (ಎಸ್‌ಇಸಿಎಲ್‌) ಅಮೇರಾ ಕಲ್ಲಿದ್ದಲು ಗಣಿಗಾರಿಕೆ ವಿಸ್ತರಣೆ ವಿರೋಧಿಸಿ ಡಿ.3 ರಂದು ಅಂಬಿಕಾಪುರದ ಪರ್ಸೋಡಿ ಕಲಾನ್ ಗ್ರಾಮದಲ್ಲಿ ಪ್ರತಿಭಟನೆ ಭುಗಿಲೆದ್ದಿದೆ. ಪ್ರತಿಭಟನೆ ಸಂದರ್ಭದಲ್ಲಿ ಪೊಲೀಸರ ಮೇಲೆ ಗ್ರಾಮಸ್ಥರು...

ಗಂಟೆಗಟ್ಟಲೆ ಇಂಡಿಗೋ ವಿಮಾನ ವಿಳಂಬ: ‘ನನ್ನ ಮಗಳಿಗೆ ಸ್ಯಾನಿಟರಿ ಪ್ಯಾಡ್‌ ಕೊಡಿ..’ ಎಂದು ಬೇಡಿಕೊಂಡ ತಂದೆ

ದೇಶಾದ್ಯಂತ ಇಂಡಿಗೋ ಪ್ರಯಾಣಿಕರು ಭಾರಿ ಅನಾನುಕೂಲತೆಯನ್ನು ಎದುರಿಸುತ್ತಿದ್ದಾರೆ. ಏಕೆಂದರೆ, ವಿಮಾನಯಾನ ಸಂಸ್ಥೆಯ ವಿಳಂಬ ಮತ್ತು ರದ್ದತಿ ನಿರ್ಧಾರವು ಸತತ ನಾಲ್ಕನೇ ದಿನವೂ (ಡಿ. 5) ಮುಂದುವರೆದಿದೆ. ಅವ್ಯವಸ್ಥೆಯ ನಡುವೆಯೇ, ವಿಮಾನ ನಿಲ್ದಾಣದಿಂದ ಬಂದ...

ರಷ್ಯಾ-ಉಕ್ರೇನ್ ಯುದ್ಧ ವಿಚಾರದಲ್ಲಿ ಭಾರತ ತಟಸ್ಥವಾಗಿಲ್ಲ, ಶಾಂತಿಯ ಪರವಾಗಿದೆ: ಪುಟಿನ್‌ ಜೊತೆಗಿನ ದ್ವಿಪಕ್ಷೀಯ ಮಾತುಕತೆ ವೇಳೆ ಮೋದಿ ಹೇಳಿಕೆ

ನವದೆಹಲಿ: ರಷ್ಯಾ-ಉಕ್ರೇನ್ ಯುದ್ಧ ವಿಚಾರದಲ್ಲಿ ಭಾರತ ತಟಸ್ಥವಾಗಿಲ್ಲ. ಶಾಂತಿಯ ಪರವಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಶುಕ್ರವಾರ ಹೇಳಿದ್ದಾರೆ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಎರಡು ದಿನಗಳ ಭೇಟಿಗೆಂದು ಭಾರತಕ್ಕೆ ಆಗಮಿಸಿದ್ದು,...

ಮನೆ ಕಟ್ಟಲು, ವಾಹನ ಖರೀದಿಸಲು ಇದು ಸುಸಮಯ: ರೆಪೊ ದರ ಕಡಿತಗೊಳಿಸಿದ ಆರ್.ಬಿ.ಐ

ಡಿಸೆಂಬರ್ 05, ಶುಕ್ರವಾರದಂದು ನಡೆದ ಹಣಕಾಸು ನೀತಿ ಸಭೆಯಲ್ಲಿ (MPC) ಭಾರತೀಯ ರಿಸರ್ವ್ ಬ್ಯಾಂಕ್ (RBI) ರೆಪೊ ದರವನ್ನು 25 ಬೇಸಿಸ್ ಪಾಯಿಂಟ್‌ಗಳಷ್ಟು ಕಡಿತಗೊಳಿಸಿದೆ. ಇಂದಿನ ಕಡಿತದ ನಂತರ, ಕೇಂದ್ರ ಬ್ಯಾಂಕ್ ಈ...

ಉತ್ತರ ಪ್ರದೇಶ| ದಲಿತ ಯುವಕನ ಮೇಲೆ ಹಲ್ಲೆ; ಬಂದೂಕು ತೋರಿಸಿ ವಿವಸ್ತ್ರಗೊಳಿಸಿದ ಗುಂಪು

ಸಿಗರೇಟ್ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ಗುಂಪೊಂದು ದಲಿತ ಯುವಕನ ಮೇಲೆ ಹಲ್ಲೆ ನಡೆಸಿರುವ ಘಟನೆ ಉತ್ತರ ಪ್ರದೇಶದ ಝಾನ್ಸಿಯಲ್ಲಿ ವರದಿಯಾಗಿದೆ. ಗುಂಪು ದಲಿತ ಯುವಕನನ್ನು ಚಪ್ಪಲಿಯಿಂದ ಹೊಡೆದು, ಮುಷ್ಟಿ, ಕಾಲು ಮತ್ತು...