ನಗರಗಳು ಮತ್ತು ಪಟ್ಟಣಗಳನ್ನು ಬಿಡಲು ಅನುಮತಿ ಪಡೆದು ತಮ್ಮ ಗ್ರಾಮಗಳಿಗೆ ಹಿಂದಿರುಗುವ ಮಾರ್ಗವನ್ನು ಕಂಡುಕೊಳ್ಳುತ್ತಿರುವ ವಲಸೆ ಕಾರ್ಮಿಕರ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಏನು ಮಾಡುತ್ತಿವೆ ಎಂದು ಕಾಂಗ್ರೆಸ್ ನಾಯಕ ಪಿ. ಚಿದಂಬರಂ ಪ್ರಶ್ನಿಸಿದ್ದಾರೆ.
ರಾಷ್ಟ್ರವ್ಯಾಪಿ 21 ದಿನಗಳ ಕೊರೊನ ಲಾಕ್‌ಡೌನ್‌ನಿಂದಾಗಿ ನಿರುದ್ಯೋಗಿಗಳಾಗಿರುವ ಜನರು ತಮ್ಮ ಮನೆಗಳಿಗೆ ಸಾವಿರಾರು ಕಿಲೋಮೀಟರ್ ದೂರಕ್ಕೆ ಕಾಲ್ನಡಿಗೆಯಿಂದ ಹೊರಟಿರುವುದು ದೇಶದಾದ್ಯಂತ ವರದಿಯಾಗಿದೆ.
ಜನಸಂದಣಿಯ ಬಸ್‌ಗಳಲ್ಲಿ ಅಥವಾ ಕಾಲ್ನಡಿಗೆಯಲ್ಲಿ ಹಳ್ಳಿಗಳಿಗೆ ಹಿಂತಿರುಗಿದ ಜನರು ಲಾಕ್‌ಡೌನ್ ಉದ್ದೇಶವನ್ನೇ ಹಾಳು ಮಾಡಿದ್ದಾರೆ. ಇದು ಸರ್ಕಾರಗಳ ಪೂರ್ವಸಿದ್ಧತೆಯಿಲ್ಲದ ಮತ್ತೊಂದು ವಿಷಾದಕರ ಉದಾಹರಣೆಯಾಗಿದೆ ಎಂದು ಚಿದಂಬರಂ ಹೇಳಿದ್ದಾರೆ.
What are the central and state governments doing about the migrant workers who were allowed to leave the cities and towns and who are finding their way back to their villages?
— P. Chidambaram (@PChidambaram_IN) March 28, 2020
ಇಲ್ಲಿಯವರೆಗೆ, ಭಾರತವು ಕಳೆದ 24 ಗಂಟೆಗಳಲ್ಲಿ 149 ಹೊಸ ಕೊರೊನ ಪ್ರಕರಣಗಳೊಂದಿಗೆ ಅತಿ ಹೆಚ್ಚು ಏರಿಕೆಯನ್ನು ದಾಖಲಿಸಿದ ನಂತರ 873 ಕೊರೊನ ವೈರಸ್ ಪ್ರಕರಣಗಳನ್ನು ವರದಿಯಾದೆ. ಕನಿಷ್ಠ 19 ಜನರು ಸಾವನ್ನಪ್ಪಿದ್ದಾರೆ.


