Homeಮುಖಪುಟತುಮಕೂರು: ಇನ್ನೂ ಬರಬೇಕಿದೆ 33 ಮಂದಿ ಶಂಕಿತ ಕೊರೊನಾ ಸೋಂಕಿತರ ವರದಿ

ತುಮಕೂರು: ಇನ್ನೂ ಬರಬೇಕಿದೆ 33 ಮಂದಿ ಶಂಕಿತ ಕೊರೊನಾ ಸೋಂಕಿತರ ವರದಿ

- Advertisement -
- Advertisement -

ತುಮಕೂರಿನಲ್ಲಿ ಕೊರೊನಾ ಪೀಡಿತರೊಬ್ಬರು ಸಾವನ್ನಪ್ಪಿರುವ ನಡುವೆಯೇ 33 ಮಂದಿ ಶಂಕಿತ ಕೊರೊನ ಸೋಂಕಿತರ ವರದಿ ಇನ್ನೂ ಬರಬೇಕಾಗಿದೆ. ಮಾರ್ಚ್ 27ರಂದು ಬಿಡುಗಡೆ ಮಾಡಿರುವ ಪಟ್ಟಿಯಂತೆ ಒಟ್ಟು 339 ಜನರನ್ನು ನಗರದಲ್ಲಿ ಗೃಹಬಂಧನದಲ್ಲಿಡಲಾಗಿದೆ.

62 ಶಂಕಿತ ಕೊರೊನಾ ಸೋಂಕಿತರ ರಕ್ತ ಮತ್ತು ಗಂಟಲ ಲೋಳೆಯನ್ನು ಬೆಂಗಳೂರಿನ ರಾಷ್ಟ್ರೀಯ ವೈರಾಲಜಿ ವಿಭಾಗಕ್ಕೆ ಕಳಿಸಿಕೊಡಲಾಗಿದೆ. ಅದರಲ್ಲಿ 29 ಮಂದಿ ನೆಗೆಟೀವ್ ವರದಿ ಬಂದಿದೆ. ಉಳಿದ 33 ಮಂದಿ ಶಂಕಿತ ಸೋಂಕಿತರ ಫಲಿತಾಂಶದ ವರದಿ ಬರಬೇಕಾಗಿದೆ.

62 ಮಂದಿಯ ರಕ್ತ ಮತ್ತ ಗಂಟಲ ಲೋಳೆಯನ್ನು ಒಂದೇ ದಿನ ಕಳಿಸಲಾಗಿದ್ದರೂ 33 ಮಂದಿಯ ವರದಿಯನ್ನು ಏಕೆ ಬಿಡುಗಡೆ ಮಾಡಿಲ್ಲ ಎಂಬ ಪ್ರಶ್ನೆಗಳು ಎದುರಾಗಿವೆ. ಯಾವುದೇ ಸೋಂಕು ಇಲ್ಲ ಎಂದು ಹೇಳುತ್ತಿದ್ದ ಜಿಲ್ಲಾಡಳಿತ ವ್ಯಕ್ತಿ ಸಾವನ್ನಪ್ಪಿದ ಹಲವು ಗಂಟೆಗಳ ತರುವಾಯ ಆತನಿಗೆ ಕೊರೊನ ವೈರಸ್ ಇರುವುದನ್ನು ದೃಢೀಕರಿಸಿದೆ.

ಶಿರಾ ತಾಲೂಕು ಭೂವನಹಳ್ಳಿಯಲ್ಲಿ ಕೊರೊನ ವೈರಸ್‌ಗೆ ವ್ಯಕ್ತಿಯೊಬ್ಬರು ಮೃತಪಟ್ಟ ನಂತರ ಸಿರಾ ಪಟ್ಟಣದಲ್ಲಿ ಸಂಪೂರ್ಣ ಲಾಕ್ ಡೌನ್ ಆಗಿದೆ. ಜನರು ಹೊರಗೆ ಬರದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಸಿದ್ದರಾಮಯ್ಯ ಸರ್ಕಾರ ಮುಸ್ಲಿಮರನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದು ನಿಜಾನಾ?

0
ಕರ್ನಾಟಕದಲ್ಲಿ ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಮೂಲಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ 36 ಜಾತಿಗಳಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಸಿದ್ದರಾಮಯ್ಯ ಸರ್ಕಾರ ಹಿಂದುಳಿದ ವರ್ಗಗಳಿಗೆ...