Homeಮುಖಪುಟಮೋದಿಯ ಕೊರೋನ "ಪ್ಯಾಕೇಜ್" : ಕಲ್ಲೆದೆ ಮತ್ತು ಅಜ್ಞಾನಗಳ ಮಿಶ್ರಣ - ಪಿ. ಸಾಯಿನಾಥ್

ಮೋದಿಯ ಕೊರೋನ “ಪ್ಯಾಕೇಜ್” : ಕಲ್ಲೆದೆ ಮತ್ತು ಅಜ್ಞಾನಗಳ ಮಿಶ್ರಣ – ಪಿ. ಸಾಯಿನಾಥ್

- Advertisement -
- Advertisement -

ಭಾಗ-1

…..
ಕೋವಿಡ್-19 ಉಂಟುಮಾಡಿರುವ ಮಹಾಬಿಕ್ಕಟ್ಟಿಗೆ ಪ್ರತಿಕ್ರಿಯೆಯಾಗಿ ನರೇಂದ್ರ ಮೋದಿ ಸರಕಾರ ಘೋಷಿಸಿರುವ “ಪ್ಯಾಕೇಜ್” ಎಂಬುದು ಕಲ್ಲೆದೆ ಮತ್ತು ಅಜ್ಞಾನಗಳ ಮಿಶ್ರಣ ಎನ್ನುತ್ತಾರೆ ಮ್ಯಾಗ್ಸೇಸೆ ಪ್ರಶಸ್ತಿ ವಿಜೇತ, ಜಗತ್ಪ್ರಸಿದ್ಧ ಗ್ರಾಮೀಣ ಪತ್ರಕರ್ತ ಪಿ. ಸಾಯಿನಾಥ್. ಅವರು, ಈ ಪ್ಯಾಕೇಜ್ ಕಣ್ಕಟ್ಟನ್ನು ಉದಾಹರಣೆ ಸಹಿತ ಬಯಲಿಗೆಳೆದಿದ್ದಾರೆ.
…..

ಅನುವಾದ: ನಿಖಿಲ್ ಕೋಲ್ಪೆ

ಕೊರೋನ ವೈರಸ್ ಕುರಿತ ತನ್ನ ಮೊದಲ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ, ಜನರು ತಮ್ಮ ಬಟ್ಟಲು, ಜಾಗಟೆ ಬಾರಿಸಿ, ದುಷ್ಟ ಶಕ್ತಿಗಳನ್ನು ಬೆದರಿ ತತ್ತರಿಸುವಂತೆ ಮಾಡಿದರು. ತನ್ನ ಎರಡನೇ ಭಾಷಣದಲ್ಲಿ ನಾವೆಲ್ಲರೂ ಬೆದರಿ ತತ್ತರಿಸುವಂತೆ ಮಾಡಿದ್ದಾರೆ.

ಮುಂಬರುವ ವಾರಗಳಲ್ಲಿ ಜನರು, ಅದರಲ್ಲೂ ಮುಖ್ಯವಾಗಿ ಬಡವರು, ಆಹಾರ ಮತ್ತು ಇತರ ಅತ್ಯಗತ್ಯ ವಸ್ತುಗಳನ್ನು ಹೇಗೆ ಪಡೆಯಬೇಕು ಎಂಬ ಕುರಿತು ಒಂದೇ ಒಂದು ಶಬ್ದವನ್ನು ಆಡದೇ ಇರುವ ಮೂಲಕ, ಆಗಲೇ ಸ್ಫೋಟಿಸಲು ಕಾಯುತ್ತಿದ್ದ ದಿಗಿಲಿಗೆ ಕಿಡಿಹಚ್ಚಿದರು. ಮಧ್ಯಮ ವರ್ಗದವರು ಖರೀದಿಗಾಗಿ ಅಂಗಡಿಗಳು ಮತ್ತು ಮಾರುಕಟ್ಟೆಗಳಲ್ಲಿ ಗುಂಪುಗುಂಪಾಗಿ ನುಗ್ಗಿದರು- ಇದು ಬಡವರಿಗೆ ಸುಲಭವಲ್ಲ. ದೊಡ್ಡ ವ್ಯಾಪಾರಿಗಳಿಂದ ಖರೀದಿಸಿ ಮಾರುವ ಸಣ್ಣಪುಟ್ಟ ವ್ಯಾಪಾರಿಗಳು, ಮನೆಗೆಲಸದವರು, ಕೂಲಿ ಕಾರ್ಮಿಕರು, ಕೃಷಿ ಕಾರ್ಮಿಕರಿಗೆ ಇದು ಸುಲಭವಲ್ಲ. ರಾಬಿ ಫಸಲಿನ ಕೊಯ್ಲಿಗೆ ಕಾಯುತ್ತಿರುವ ಅಥವಾ ಕೊಯ್ಲು ಮುಗಿಸಿದರೂ ಫಸಲನ್ನು ಮಾರಲಾಗದ ರೈತರಿಗೂ ಇದು ಸುಲಭವಲ್ಲ. ಕಡೆಗಣಿಸಲ್ಪಟ್ಟ ಕೋಟ್ಯಂತರ ಭಾರತೀಯರಿಗಂತೂ ಇದು ಸಾಧ್ಯವೇ ಇಲ್ಲ.

ಹಣಕಾಸು ಮಂತ್ರಿ ಘೋಷಿಸಿದ ಪ್ಯಾಕೇಜ್‌ನಲ್ಲಿ ಒಂದೇ ಒಂದು ಒಳ್ಳೆಯ ಅಂಶವಿದೆ. ಸಾರ್ವಜನಿಕ ವಿತರಣಾ ವ್ಯವಸ್ಥೆಯಲ್ಲಿ ಕೊಡಲಾಗುತ್ತಿರುವ ಪ್ರತೀ ವ್ಯಕ್ತಿಗೆ ಐದು ಕೆಜಿ ಅಕ್ಕಿ ಅಥವಾ ಗೋಧಿಗೆ ಹೆಚ್ಚುವರಿಯಾಗಿ, ಮೂರು ತಿಂಗಳುಗಳ ಕಾಲ ಐದು ಕೆಜಿ ಉಚಿತ. ಅಲ್ಲಿಯೂ, ಹಿಂದೆ ಇದ್ದ ಐದು ಕೆಜಿ ಕೂಡಾ ಉಚಿತವೇ ಅಥವಾ ಅದಕ್ಕೆ ಪಾವತಿ ಮಾಡಬೇಕೇ ಎಂಬುದು ಸ್ಪಷ್ಟವೇ ಆಗಿಲ್ಲ. ಅದಕ್ಕೂ ಪಾವತಿ ಮಾಡಬೇಕೆಂದಾದರೆ, ಅದು ಪ್ರಯೋಜನವಿಲ್ಲ.

ಈ ಪ್ಯಾಕೇಜ್‌ನಲ್ಲಿರುವ ಅಂಶಗಳಿಗೆ ಒದಗಿಸಲಾಗಿರುವ ಮೊತ್ತವು ಈಗಾಗಲೇ ಅಸ್ತಿತ್ವದಲ್ಲಿರುವ ಯೋಜನೆಗಳಿಗೆ ನಿಗದಿಪಡಿಸಿದ್ದಾಗಿದೆ. ಉದ್ಯೋಗ ಖಾತರಿ ಯೋಜನೆ (ಮಹಾತ್ಮಾ ಗಾಂಧಿ ಎನ್‌ಆರ್‌ಇಜಿಎ)ಯ ಕೂಲಿಯನ್ನು 20 ರೂ. ಹೆಚ್ಚು ಮಾಡಲಾಗಿದ್ದು, ಅದು ಇಲ್ಲದಿದ್ದರೂ ವಾರ್ಷಿಕವಾಗಿ ಆಗಲೇಬೇಕಾದುದು. ಕೆಲಸಗಳ ದಿನಗಳನ್ನೇನಾದರೂ ಹೆಚ್ಚು ಮಾಡಲಾಗಿದೆಯೇ? (ಇಲ್ಲ!). ತಕ್ಷಣಕ್ಕೆ ಅವರು ಯಾವ ಕೆಲಸ ಮಾಡಿಸುತ್ತಾರೆ? ಯಾವ ರೀತಿಯ ಕೆಲಸ ಮಾಡಿಸುತ್ತಾರೆ? ಸಾಮಾಜಿಕ ಅಂತರ ಕಾಯ್ದುಕೊಳ್ಳುವ (social distancing) ನಿಯಮಗಳನ್ನು ಹೇಗೆ ಪಾಲಿಸುತ್ತಾರೆ? (ಸಂಪೂರ್ಣ ಲಾಕ್‌ಡೌನ್ ಸಂದರ್ಭದಲ್ಲಿ). ಇದಕ್ಕಾಗಿ ಬೇಕಾದ ಪ್ರಮಾಣದಲ್ಲಿ ಕೆಲಸಗಳನ್ನು ರೂಪಿಸಲು ಬೇಕಾಗಿರುವ ಹಲವಾರು ವಾರಗಳ ತನಕ ಜನರು ಏನು ಮಾಡಬೇಕು? ಹೇಗೆ ಬದುಕಬೇಕು? ಅವರ ಆರೋಗ್ಯ ಕೆಲಸಕ್ಕೆ ತಕ್ಕುದಾಗಿ ಇರುವುದೆ? ಕೆಲಸವಿರಲಿ, ಇಲ್ಲದೆಯೇ ಇರಲಿ, ನಾವು ಉದ್ಯೋಗ ಖಾತರಿ ಯೋಜನೆಯ ಕೂಲಿಯನ್ನು ಪ್ರತಿಯೊಬ್ಬ ಕಾರ್ಮಿಕ ಮತ್ತು ರೈತರಿಗೆ ಈ ಬಿಕ್ಕಟ್ಟು ಮುಂದುವರಿಯುವ ವರೆಗೆ ಕೊಡಬೇಕಾಗಿದೆ.

ಪ್ಯಾಕೇಜಿನಲ್ಲಿ ಪ್ರಸ್ತಾಪಿಸಲಾಗಿರುವ ಪ್ರಧಾನಮಂತ್ರಿ-ಕಿಸಾನ್ ಯೋಜನೆಯ ಅಡಿಯಲ್ಲಿ 2,000 ರೂ. ಈಗಾಗಲೇ ಇದ್ದು, ವಿತರಿಸುವ ಸಮಯ ಬಂದಿದೆ- ಹೀಗಿರುವಾಗ ಹೆಚ್ಚುವರಿಯಾಗಿರುವುದು ಏನು? ಪ್ರತೀ ನಾಲ್ಕನೇ ತಿಂಗಳಲ್ಲಿ ಕೊಡಬೇಕಾದನ್ನು ಸ್ವಲ್ಪ ಬೇಗ- ಮೊದಲ ತಿಂಗಳಿಗೆ ಹಿಂದೂಡಲಾಗಿದೆ ಅಷ್ಟೇ. ಹಣಕಾಸು ಸಚಿವರು ಎಲ್ಲಿಯೂ ಈ 1.7 ಲಕ್ಷ ಕೋಟಿ ರೂ. ಪ್ಯಾಕೇಜಿನ ವಿಷಯವಾರು ವಿವರಗಳನ್ನು ಈ ಪಿಡುಗು ಮತ್ತು ಲಾಕ್‌ಡೌನ್‌ಗೆ ಸಂಬಂಧಿಸಿದಂತೆ ನೀಡಿಲ್ಲ. ಹೀಗಿರುವಾಗ ಇದರಲ್ಲಿರುವ ಹೊಸ ಅಂಶಗಳೇನು? ಪ್ಯಾಕೇಜ್ ಮೊತ್ತದ ಎಷ್ಟು ಮೊತ್ತವನ್ನು ಹಳೆಯ ಮತ್ತು ಈಗಿರುವ ಯೋಜನೆಗಳನ್ನು ಹೊಲಿಗೆ ಹಾಕುವ ಮೂಲಕ ಅಂಕಿಅಂಶಗಳ ಕಸರತ್ತು ಮಾಡಲಾಗಿದೆ? ಇವು ಖಂಡಿತವಾಗಿಯೂ ತುರ್ತು ಪರಿಹಾರ ಕ್ರಮಗಳೆಂದು ಕರೆಸಿಕೊಳ್ಳಲು ಅರ್ಹವಲ್ಲ!

ಅದಲ್ಲದೇ ಪಿಂಚಣಿದಾರರು, ವಿಧವೆಯರು, ಅಂಗವಿಕಲರು ಒಂದು ಸಲ ಮಾತ್ರ ನೀಡಲಾಗುವ 1,000 ರೂ.ಗಳನ್ನು ಮುಂದಿನ ಮೂರು ತಿಂಗಳುಗಳಲ್ಲಿ ಎರಡು ಕಂತುಗಳಲ್ಲಿ ಪಡೆಯಲಿದ್ದಾರೆ. ಜನ ಧನ ಯೋಜನೆಯಲ್ಲಿ ಖಾತೆ ಹೊಂದಿರುವ 20 ಕೋಟಿ ಮಹಿಳೆಯರಿಗೆ ಮೂರು ತಿಂಗಳುಗಳಲ್ಲಿ ತಲಾ ಕೇವಲ 500 ರೂ. ಸಿಗಲಿದೆ. ಇದು ನೌಟಂಕಿಗಿಂತಲೂ ಕೆಳಮಟ್ಟದ್ದು ಮತ್ತು ನಾಚಿಕೆಗೇಡಿನದ್ದು.

ಈಗ ನಿಗದಿಪಡಿಸಲಾಗಿರುವ ಸಾಲವನ್ನು ಪಡೆಯುವುದೇ ಒಂದು ದುಃಸ್ವಪ್ನವಾಗಿರುವಾಗ, ಸಾಲದ ಮಿತಿಯನ್ನು ಬರೇ ಏರಿಸುವುದರಿಂದ ಸ್ವಸಹಾಯ ಗುಂಪುಗಳಿಗೆ ಹೇಗೆ ನೆರವಾಗುತ್ತದೆ? ದೂರದೂರದ ಊರುಗಳಲ್ಲಿ ಸಿಕ್ಕಿಬಿದ್ದು, ತಮ್ಮ ಗ್ರಾಮಗಳಿಗೆ ಮರಳಲು ಯತ್ನಿಸುತ್ತಿರುವ ಲೆಕ್ಕವಿಲ್ಲದಷ್ಟು ವಲಸೆ ಕಾರ್ಮಿಕರಿಗೆ ಈ ಪ್ಯಾಕೇಜ್ ನಿರ್ದಿಷ್ಟವಾಗಿ ಹೇಗೆ ನೆರವಾಗಲಿದೆ? ಇದು ವಲಸೆ ಕಾರ್ಮಿಕರಿಗೆ ನೆರವಾಗಲಿದೆ ಎಂಬ ಬಾಯ್ಮಾತಿನ ದಾವೆಗೆ ಆಧಾರಗಳೇ ಇಲ್ಲ. ಒಂದು ಗಂಭೀರವಾದ ತುರ್ತು ಕ್ರಮಗಳ ಸರಣಿಯನ್ನು ನೀಡಲು ಈ ಪ್ಯಾಕೇಜಿನ ವೈಫಲ್ಯವು ದಿಗಿಲು ಹುಟ್ಟಿಸುವಂತಿದ್ದರೆ, ಈ ಪ್ಯಾಕೇಜನ್ನು ನೀಡಿದವರ ಮನೋಸ್ಥಿತಿ ಭಯಂಕರವಾಗಿದೆ. ನೆಲಮಟ್ಟದ ಪರಿಸ್ಥಿತಿಯ ಕುರಿತು ಅವರಿಗೆ ಯಾವುದೇ ತಿಳುವಳಿಕೆ ಇದ್ದಂತೆ ಕಾಣುವುದಿಲ್ಲ.

ಯಾವುದೇ ಗಂಭೀರವಾದ ಸಾಮಾಜಿಕ ಬೆಂಬಲ ಅಥವಾ ಯೋಜನೆ ಇಲ್ಲದಿರುವಾಗ- ನಾವು ಅನುಭವಿಸುತ್ತಿರುವ ಲಾಕ್‌ಡೌನ್‌ಗಳು ಹಿಮ್ಮುಖ ವಲಸೆ (reverse migrations, ಅಂದರೆ, ನಗರದಿಂದ ಹಳ್ಳಿಗೆ)ಗಳಿಗೆ ಕಾರಣವಾಗಬಹುದು ಅಥವಾ ಈಗಾಗಲೇ ಕಾರಣವಾಗಿದೆ. ನಿರ್ದಿಷ್ಟವಾಗಿ ಈ ವಲಸೆಗಳ ಪ್ರಮಾಣ ಮತ್ತು ತೀವ್ರತೆಗಳ ಸ್ಪಷ್ಟ ಚಿತ್ರಣವನ್ನು ಪಡೆಯುವುದು ಅಸಾಧ್ಯ. ತಾವು ಕೆಲಸಮಾಡುವ ನಗರ ಪಟ್ಟಣಗಳು ಸಂಪೂರ್ಣ ಲಾಕ್‌ಡೌನ್‌ಗೆ ಒಳಗಾಗುತ್ತಿರುವಂತೆ, ದೊಡ್ಡ ಸಂಖ್ಯೆಯ ಜನರು ತಮ್ಮತಮ್ಮ ಹಳ್ಳಿಗಳಿಗೆ ಮರಳುತ್ತಿದ್ದಾರೆ ಎಂದು ಹಲವಾರು ರಾಜ್ಯಗಳಿಂದ ಬರುತ್ತಿರುವ ವರದಿಗಳು ಸೂಚಿಸುತ್ತಿವೆ.

ಸಾವಿರಾರು ಜನರು ಈಗ ತಮಗೆ ಲಭ್ಯವಿರುವ ಏಕೈಕ ಸಾರಿಗೆಯನ್ನು ಬಳಸುತ್ತಿದ್ದಾರೆ- ಅದೆಂದರೆ, ತಮ್ಮ ಸ್ವಂತ ಕಾಲುಗಳು. ಕೆಲವರು ಸೈಕಲ್‌ಗಳಲ್ಲಿ ಮನೆಗೆ ಹೊರಟಿದ್ದಾರೆ. ರೈಲು, ಬಸ್ಸು, ವ್ಯಾನ್‌ಗಳು ಏಕಾಏಕಿ ನಿಂತುದರಿಂದ ಸಾವಿರಾರು ಜನರು ಅರ್ಧ ದಾರಿಯಲ್ಲಿಯೇ ಸಿಕ್ಕಿಬಿದ್ದಿದ್ದಾರೆ. ಇದು ಭಯ ಹುಟ್ಟಿಸುವಂತದ್ದು. ಈ ಬಿಕ್ಕಟ್ಟು ತೀವ್ರಗೊಂಡರೆ, ನರಕವೇ ತಲೆಯ ಮೇಲೆ ಕಳಚಿ ಬೀಳಬಹುದು.

ಗುಜರಾತಿನ ನಗರಗಳಿಂದ ರಾಜಸ್ತಾನದ ಗ್ರಾಮಗಳಿಗೆ; ಹೈದರಾಬಾದಿನಿಂದ ತೆಲಂಗಾಣ ಮತ್ತು ಆಂಧ್ರಪ್ರದೇಶಗಳ ದೂರದೂರದ ಹಳ್ಳಿಗಳಿಗೆ; ದಿಲ್ಲಿಯಿಂದ ಉತ್ತರ ಪ್ರದೇಶ ಮಾತ್ರವಲ್ಲ, ಬಿಹಾರಕ್ಕೂ; ಮುಂಬಯಿಯಿಂದ… ಯಾರಿಗೂ ಗೊತ್ತಿಲ್ಲ ಎಲ್ಲೆಲ್ಲಿಗೆಂದು- ದೊಡ್ಡದೊಡ್ಡ ಗುಂಪುಗಳು ನಡೆದು ಹೋಗುತ್ತಿರುವುದನ್ನು ಊಹಿಸಿ ನೋಡಿ. ಅವರಿಗೆ ನೆರವು, ಆಹಾರ, ನೀರು ಸಿಗದೇ ಹೋದಲ್ಲಿ ಮಹಾದುರಂತವೇ ಸಂಭವಿಸಬಹುದು. ಅವರ ಶೌಚದ ಮಹಾಸಮಸ್ಯೆಯನ್ನೂ ಊಹಿಸಿನೋಡಿ. ಅವರು ಅತಿಸಾರ (diarrhoea), ಕಾಲರಾ (cholera) ಮುಂತಾದ ಹಳೆಕಾಲದ ರೋಗಗಳಿಗೇ ಬಲಿಯಾಗಬಹುದು; ಕೊರೋನವೇ ಆಗಬೇಕೆಂದಿಲ್ಲ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರ ಬಜೆಟ್ 2026: ‘ಇದು ನನ್ನ ರಾಜಕೀಯ ಜೀವನದ ಅತ್ಯಂತ ನಿರಾಶಾದಾಯಕ ಬಜೆಟ್’: ಸಿಎಂ ಸಿದ್ದರಾಮಯ್ಯ

‘ಮೋದಿ ಸರ್ಕಾರ ಆರ್ಥಿಕ ದೂರದೃಷ್ಟಿಕೋನಗಳಿಲ್ಲದೆ, ದೇಶವನ್ನು ಯಾವ ದಿಕ್ಕಿನತ್ತ ಮುನ್ನಡೆಸಬೇಕು ಎನ್ನುವುದರ ಬಗ್ಗೆ ಸ್ಪಷ್ಟತೆ ಇಲ್ಲದೆ ದಣಿದಿದೆ ಎಂಬುದರ ಸಂಕೇತ ಈ 2026 ಬಜೆಟ್’ ಎಂದು ಸಿಎಂ ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ.  ಕಲಬುರಗಿ ವಿಮಾನ...

ಕೇಂದ್ರ ಬಜೆಟ್ 2026: ಅಪರೂಪದ ಭೂಮಿಯ ಕಾರಿಡಾರ್‌ನಿಂದ ಹೈಸ್ಪೀಡ್ ರೈಲಿನವರೆಗೆ: ಚುನಾವಣೆ ನಡೆಯಲಿರುವ ರಾಜ್ಯಗಳಿಗೆ ಕೇಂದ್ರ ಬಜೆಟ್ ನಲ್ಲಿ ಸಿಕ್ಕಿದ್ದೇನು?

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭಾನುವಾರ ಲೋಕಸಭೆಯಲ್ಲಿ ತಮ್ಮ ಸತತ 9 ನೇ ಬಜೆಟ್ ಅನ್ನು ಮಂಡಿಸಿದ್ದಾರೆ. ಈ ಬಜೆಟ್ ನಲ್ಲಿ ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ ಮತ್ತು ಅಸ್ಸಾಂನಂತಹ ಚುನಾವಣೆ...

ಬಲೂಚಿಸ್ತಾನ: ಭದ್ರತಾ ಕಾರ್ಯಾಚರಣೆಯಲ್ಲಿ 15 ಪಾಕ್ ಸೈನಿಕರು, 92 ಭಯೋತ್ಪಾದಕರು ಸಾವು

ಬಲೂಚಿಸ್ತಾನ ಪ್ರಾಂತ್ಯದ ಸುಮಾರು 12 ಸ್ಥಳಗಳಲ್ಲಿ ನಡೆದ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗಳಲ್ಲಿ ಕನಿಷ್ಠ 15 ಪಾಕಿಸ್ತಾನಿ ಸೈನಿಕರು ಮತ್ತು 92 ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ ಎಂದು ಪಾಕಿಸ್ತಾನಿ ಸೇನೆ ತಿಳಿಸಿರುವುದಾಗಿ ಪಿಟಿಐ ವರದಿ...

ಕೇಂದ್ರ ಬಜೆಟ್ 2026 | ಯಾವುದು ಅಗ್ಗ ಮತ್ತು ಯಾವುದು ದುಬಾರಿ..? 

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭಾನುವಾರ (ಫೆಬ್ರವರಿ 1, 2026) ತಮ್ಮ ಒಂಬತ್ತನೇ ಬಜೆಟ್ ಮಂಡಿಸಿದ್ದಾರೆ. ಈ ವರ್ಷದ (2026-27 ಹಣಕಾಸು) ಬಜೆಟ್ ತೀವ್ರಗೊಳ್ಳುತ್ತಿರುವ ಜಾಗತಿಕ ವ್ಯಾಪಾರ ಉದ್ವಿಗ್ನತೆ, ರೂಪಾಯಿ ಮೌಲ್ಯದಲ್ಲಿ...

ಕೇಂದ್ರ ಬಜೆಟ್ 2026| ರಕ್ಷಣಾ ಇಲಾಖೆಗೆ 7.85 ಲಕ್ಷ ಕೋಟಿ ರೂ. ಮೀಸಲು

ಕೇಂದ್ರ ಸರ್ಕಾರದ ಬಜೆಟ್ 2026 ರಲ್ಲಿ ರಕ್ಷಣಾ ವೆಚ್ಚವನ್ನು ಗಣನೀಯವಾಗಿ ಹೆಚ್ಚಿಸಲಾಗಿದೆ. ಈ ವಲಯಕ್ಕೆ 7.85 ಲಕ್ಷ ಕೋಟಿ ರೂ.ಗಳನ್ನು ಮೀಸಲಿಟ್ಟಿದೆ. ಇದು ಕಳೆದ ವರ್ಷದ 6.81 ಲಕ್ಷ ಕೋಟಿ ರೂ.ಗಳಿಗಿಂತ ಗಮನಾರ್ಹ...

‘ಭಾರತ ವೆನೆಜುವೆಲಾದ ತೈಲ ಖರೀದಿಸಲಿದೆ’ ಎಂದ ಟ್ರಂಪ್: ಮೋದಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಕಾಂಗ್ರೆಸ್

ನವದೆಹಲಿ: ಭಾರತ ಇರಾನ್ ಬದಲು ವೆನೆಜುವೆಲಾದಿಂದ ತೈಲ ಖರೀದಿಸಲಿದೆ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಭಾನುವಾರ ಮೋದಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಅಮೆರಿಕದ ನಾಯಕ "ನಮ್ಮ...

ಕೇಂದ್ರ ಬಜೆಟ್ 2026: ಕ್ಯಾನ್ಸರ್ ಸೇರಿದಂತೆ ಇತರ 7 ಕಾಯಿಲೆಗಳ ಔಷಧಿ ಬೆಲೆಯಲ್ಲಿ ಇಳಿಕೆ

ಗಂಭೀರ ಖಾಯಿಲೆಗಳಿಂದ ಬಳುತ್ತಿರುವ ರೋಗಿಗಳಿಗೆ ಗಮನಾರ್ಹ ಪರಿಹಾರವಾಗಿ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2026 ರ ಬಜೆಟ್‌ನಲ್ಲಿ 17 ವಿಧದ ಕ್ಯಾನ್ಸರ್ ಮತ್ತು ಇತರ ಏಳು ಗಂಭೀರ ಕಾಯಿಲೆಗಳ ಚಿಕಿತ್ಸೆಗೆ ಬಳಸುವ ಔಷಧಿಗಳನ್ನು...

ಕೇಂದ್ರ ಬಜೆಟ್ 2026: ಹೊಸ ಆದಾಯ ತೆರಿಗೆ ಕಾಯ್ದೆ ಜಾರಿಗೆ; ವಿದೇಶಿ ಪ್ರವಾಸದ ಟಿಸಿಎಸ್ ದರ ಶೇ.2ಕ್ಕೆ ಇಳಿಕೆ

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭಾನುವಾರ ಕೇಂದ್ರ ಬಜೆಟ್ 2026 ಅನ್ನು ಮಂಡಿಸಿದರು. "2025ರ ಏಪ್ರಿಲ್ 1 ರಿಂದ ಹೊಸ ಆದಾಯ ತೆರಿಗೆ ಕಾಯ್ದೆ ಜಾರಿಗೆ ಬರಲಿದೆ, ಪ್ರಸ್ತುತ ಶೇ.5 ಮತ್ತು ಶೇ.20...

ಗಾಜಾದಲ್ಲಿ ಇಸ್ರೇಲ್ ನಡೆಸಿದ ಹೊಸ ಕದನ ವಿರಾಮ ಉಲ್ಲಂಘನೆಯಲ್ಲಿ ಮಕ್ಕಳು ಸೇರಿದಂತೆ 31 ಮಂದಿ ಸಾವು

ಮೇ 2024ರ ನಂತರ ಇಸ್ರೇಲ್ ಮೊದಲ ಬಾರಿಗೆ ಈಜಿಪ್ಟ್‌ನೊಂದಿಗೆ ರಫಾ ಕ್ರಾಸಿಂಗ್ ಅನ್ನು ಮತ್ತೆ ತೆರೆಯಲು ಸಜ್ಜಾಗುತ್ತಿರುವ ಒಂದು ದಿನ ಮೊದಲು, ಅಲ್ ಜಜೀರಾ ಜೊತೆ ಮಾತನಾಡಿದ ವೈದ್ಯಕೀಯ ಮೂಲಗಳು, ಬೆಳಗಿನ ಜಾವದಿಂದ...

ಶಬರಿಮಲೆ ಚಿನ್ನ ಕಳವು ಪ್ರಕರಣ: ಎರಡನೇ ಪ್ರಕರಣದಲ್ಲೂ ಜಾಮೀನು ಕೋರಿ ಅರ್ಜಿ ಸಲ್ಲಿಸಿದ ಪ್ರಮುಖ ಆರೋಪಿ ಉನ್ನಿಕೃಷ್ಣನ್ ಪೊಟ್ಟಿ

ಕೊಲ್ಲಂ (ಕೇರಳ): ಶಬರಿಮಲೆ ಚಿನ್ನ ಕಳವು ಪ್ರಕರಣದ ಪ್ರಮುಖ ಆರೋಪಿ ಉನ್ನಿಕೃಷ್ಣನ್ ಪೊಟ್ಟಿ, ತಮ್ಮ ವಿರುದ್ಧ ದಾಖಲಾಗಿರುವ ಎರಡನೇ ಪ್ರಕರಣದಲ್ಲಿ ಶಾಸನಬದ್ಧ ಜಾಮೀನು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ದ್ವಾರಪಾಲಕ (ರಕ್ಷಕ ದೇವತೆ) ವಿಗ್ರಹ...