21 ದಿನಗಳ ರಾಷ್ಟ್ರವ್ಯಾಪಿ ಲಾಕ್ ಡೌನ್ ಅನ್ನು ವಿಸ್ತರಿಸುವ ಯೋಜನೆ ಸರ್ಕಾರಕ್ಕೆ ಇಲ್ಲ ಎಂದು ಕ್ಯಾಬಿನೆಟ್ ಕಾರ್ಯದರ್ಶಿ ರಾಜೀವ್ ಗೌಬಾ ಸ್ಪಷ್ಟಪಡಿಸಿದ್ದಾರೆ.
ಹಲವಾರು ಮಾಧ್ಯಮಗಳಲ್ಲಿ ಈ ಕುರಿತು ವದಂತಿಗಳು ಹರಡುತ್ತಿವೆ. ಲಾಕ್‌ಡೌನ್‌ನ 21 ದಿನದ ಅವಧಿ ಮುಗಿದಾಗ ಅದನ್ನು ವಿಸ್ತರಿಸಲಾಗುತ್ತದೆ ಎಂದು ಹೇಳುತ್ತಿದ್ದಾರೆ. ಕ್ಯಾಬಿನೆಟ್ ಕಾರ್ಯದರ್ಶಿ ಈ ವರದಿಗಳನ್ನು ನಿರಾಕರಿಸಿದ್ದಾರೆ ಮತ್ತು ಅವು ಆಧಾರರಹಿತವಾಗಿವೆ ಎಂದು ತಿಳಿಸಿದ್ದಾರೆ ಎಂದು ಪ್ರೆಸ್ ಇನ್ಪರ್‌ಮೆಶನ್ ಬ್ಯೂರೋ ವರದಿ ಮಾಡಿದೆ.
Alert : There are rumours & media reports, claiming that the Government will extend the #Lockdown21 when it expires. The Cabinet Secretary has denied these reports, and stated that they are baseless#PIBFactCheck#lockdownindia #coronaupdatesindia #IndiaFightsCorona
— PIB India ?? #StayHome #StaySafe (@PIB_India) March 30, 2020
ಕೊರೊನಾ ವೈರಸ್ ಸಾಂಕ್ರಾಮಿಕವು ಪ್ರಪಂಚದಾದ್ಯಂತ 7ಲಕ್ಷಕ್ಕೂ ಹೆಚ್ಚು ಮಂದಿಗೆ ಹರಡಿದೆ. ಜಾಗತಿಕವಾಗಿ 30,000 ಕ್ಕೂ ಹೆಚ್ಚು ಸಾವುಗಳಿಗೆ ಕಾರಣವಾಗಿದೆ. 1,40,000 ಸಂಖ್ಯೆ ದಾಟುವುದರೊಂದಿಗೆ ಅಮೆರಿಕವು ಅತಿಹೆಚ್ಚು ಪ್ರಕರಣ ಹೊಂದಿರುವ ರಾಷ್ಟ್ರವಾಗಿದೆ. ಗರಿಷ್ಠ ಸಾವಿನ ಪ್ರಮಾಣವು ಎರಡು ವಾರಗಳಲ್ಲಿ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾನುವಾರ ಹೇಳಿದ್ದಾರೆ. ಅವರು ಏಪ್ರಿಲ್ 30 ರವರೆಗೆ ಸರ್ಕಾರದ “ಸಾಮಾಜಿಕ ದೂರ” ಮಾರ್ಗಸೂಚಿಗಳನ್ನು ವಿಸ್ತರಿಸಿದ್ದಾರೆ.
ಭಾರತದಲ್ಲಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಂಕಿಅಂಶಗಳ ಪ್ರಕಾರ ಕೋವಿಡ್ -19 ಪ್ರಕರಣಗಳ ಸಂಖ್ಯೆ ಭಾನುವಾರ 1,000 ದಾಟಿದೆ. ನೋಯ್ಡಾ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳದಲ್ಲಿ ಹೊಸ ಪ್ರಕರಣಗಳು ವರದಿಯಾಗಿವೆ.


