Homeಮುಖಪುಟಕೊರೊನಾ ಜಯಿಸಿದ ಕರ್ನಾಟಕದ ಮೊದಲ ವ್ಯಕ್ತಿಯ ಮನದ ಮಾತುಗಳು

ಕೊರೊನಾ ಜಯಿಸಿದ ಕರ್ನಾಟಕದ ಮೊದಲ ವ್ಯಕ್ತಿಯ ಮನದ ಮಾತುಗಳು

- Advertisement -
- Advertisement -

ಕೊರೊನಾ ಬಗ್ಗೆ ಇರುವ ಹಾಗೂ ಹರಡುತ್ತಿರುವ ಸುಳ್ಳು ಸುದ್ದಿಗಳಾಚೆಗೆ ಕರ್ನಾಟಕದ ಕೊರೊನಾ ಸೋಂಕಿನಿಂದ ಗುಣಮುಖರಾದ ಮೊದಲ ವ್ಯಕ್ತಿ ವೆಂಕಟ್ ಪಿ.ಕೆ. ಅವರು ತನ್ನ ಮನದ ಮಾತುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹೇಳಿದ್ದಾರೆ. ಜೊತೆಗೆ ಕೊರೊನ ಬಗ್ಗೆ ಇರುವ ತಪ್ಪು ಅಭಿಪ್ರಾಯಗಳ ಬಗ್ಗೆ ಕೂಡಾ ಜಾಗೃತರಾಗುವಂತೆ ಹೇಳಿ ಸೋಂಕು ಬಂದರೂ ಭಯಪಡಬೇಡಿ ಎಂದು ಕಿವಿಮಾತು ಹೇಳಿದ್ದಾರೆ.

ಅವರೇ ಹೇಳಿಕೊಂಡಿರುವಂತೆ ವೆಂಕಟ್ ಪಿ.ಕೆ ಬೆಂಗಳೂರಿನ ರಾಜರಾಜೇಶ್ವರಿ ನಗರದ ನಿವಾಸಿ. ಕೊರೊನಾ ವೈರಸ್ ಸೋಂಕಿದ್ದರಿಂದ ಇವರು ರಾಜಿವ್ ಗಾಂಧಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಅಲ್ಲಿ ಕೆಲವು ದಿನಗಳಿದ್ದ ನಂತರ ಅವರು ಸಂಪೂರ್ಣ ಗುಣಮುಖರಾಗಿದ್ದಾರೆ.

ಹಲವಾರು ಜನ ಇವರೊಂದಿಗೆ, ನಿಮಗೆ ಹೇಗೆ ಕೊರೊನಾ ಬಂತು ಎಂದು ಕೇಳಿದ್ದರಿಂದ ಹಾಗೂ ಸೋಂಕಿನ ಬಗ್ಗೆ ಹಲವಾರು ತಪ್ಪು ಅಭಿಪ್ರಾಯಗಳು ಇರುವುದರಿಂದ ಈ ವಿಡಿಯೊ ಮಾಡುತ್ತಿದ್ದೇನೆ ಎಂದು ವೆಂಕಟ್ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ.

“ನಾನು ಮಾರ್ಚ್ ಮೊದಲ ವಾರದಲ್ಲಿ ಅಮೆರಿಕಾಕ್ಕೆ ಪ್ರಯಾಣ ಬೆಳೆಸಿದ್ದೆ. ನಾನು ಆದಷ್ಟು ಜಾಗರೂಕನಾಗಿದ್ದರೂ ವಿಮಾನ ನಿಲ್ದಾಣದಲ್ಲಿ ಸೋಂಕಿರುವವರು ಬಳಸಿದ ಬಾತ್‌ರೂಮಿನಿಂದ, ಸೆಕ್ಯೂರಿಟಿಗಾಗಿ ಬಳಸುವ ಬೆರಳಚ್ಚು ಸ್ಕಾನ್‌ನಿಂದ ಅಥವಾ ಸೋಂಕಿರುವವರು ಉಸಿರಾಡಿದ ಗಾಳಿ ಕುಡಿದಿದ್ದರಿಂದಲೂ ಇದು ನನಗೆ ಬಂದಿರಬಹುದು” ಎಂದು ವೆಂಕಟ್ ಹೇಳುತ್ತಾರೆ.

ವೆಂಕಟ್ ಹೇಳುವಂತೆ “ಅಮೆರಿಕಾದ ಕ್ಯಾಲಿಫೋರ್ನಿಯಾದಲ್ಲಿರುವಾಗಲೆ ನನಗೆ ಜ್ವರ ಶುರುವಾಗಿತ್ತು. ನಾನು ಮೊದಲಿಗೆ ಸಾಧಾರಣ ಜ್ವರ ಆಗಿರಬಹುದು ಎಂದು ಭಾವಿಸಿ ಕೆಲವು ಮಾತ್ರೆಗಳನ್ನು ತೆಗೆದುಕೊಂಡೆ. ನಾನು ವಾಪಾಸು ಬಂದು ಏರ್‌ಪೋರ್ಟಿನಲ್ಲಿ ನನ್ನ ಜ್ವರದ ಬಗ್ಗೆ ಹೇಳಿದೆ. ಏರ್‌ಪೋರ್ಟಿನ ಡಾಕ್ಟರುಗಳ ಕೈಯ್ಯಲ್ಲಿ ಸಾಕಷ್ಟು ವೈದ್ಯಕೀಯ ಸಲಕರಣೆಗಳು ಇರಲಿಲ್ಲ, ಯಾಕೆಂದರೆ ಅವರಿನ್ನೂ ಅದರ ತಯಾರಿಯಲ್ಲಿದ್ದರು.” ಎನ್ನುತ್ತಾರೆ.

“ಅಲ್ಲಿಂದ ಕ್ಲಿಯರೆನ್ಸ್ ಪಡೆದು ಮನೆಗೆ ಬಂದೆನಾದರೂ ನನ್ನ ಹೆಂಡತಿಯೊಂದಿಗೆ ನನಗೆ ಏನೋ ಆಗುತ್ತಿದೆ, ನನ್ನಿಂದ ಅಂತರದಲ್ಲಿರುವಂತೆ ಹೇಳಿ ನನ್ನ ಮನೆಯ ಮಹಡಿಗೆ ಹೋದೆ. ನಂತರ ನಾನು ರಾಜೀವ್ ಗಾಂಧಿ ಆಸ್ಪತ್ರೆಗೆ ಹೋಗಿ ಪರೀಕ್ಷೆಗೆ ಒಳಗಾದೆ. ಪರೀಕ್ಷೆಗೊಳಗಾದ ಮರುದಿನ ಮಧ್ಯಾನ್ಹ ನನ್ನಲ್ಲಿ ವೈರಸ್ ಇರುವುದು ದೃಢಪಟ್ಟಿತ್ತು. ಆಸ್ಪತ್ರೆಗೆ ದಾಖಲಾಗುವಂತೆ ಆಸ್ಪತ್ರೆಯಿಂದ ಫೋನ್ ಬಂತು. ನಾನು ತಕ್ಷಣವೇ ಮನೆಯಿಂದ ಹೊರಟು ಆಸ್ಪತ್ರೆಯ ಐಸೋಲೇಷನ್ ವಾರ್ಡಿಗೆ ದಾಖಲಾದೆ” ಎಂದು ವೆಂಕಟ್ ಹೇಳುತ್ತರೆ.

ವಿಡಿಯೋ ನೋಡಿ

ಕೊರೊನಾ ಜಯಿಸಿದ ಕರ್ನಾಟಕದ ಮೊದಲ ವ್ಯಕ್ತಿಯ ಮನದ ಮಾತುಗಳು

ಕೊರೊನಾ ಜಯಿಸಿದ ಕರ್ನಾಟಕದ ಮೊದಲ ವ್ಯಕ್ತಿಯ ಮನದ ಮಾತುಗಳು

Posted by Naanu Gauri on Thursday, April 2, 2020

“ಜ್ವರವು ಮುಂಜಾನೆ 102 ಡಿಗ್ರಿ ಹಾಗೂ ಹಗಲು ಹೊತ್ತು 100 ಡಿಗ್ರಿ ಆಗಿರುತ್ತಿತ್ತು. ನನಗೆ ಮೊದಲಿಗೆ ಅನಿಸಿದ್ದು ನನ್ನ ದೇಶಕ್ಕೆ ಕಟ್ಟಿದ್ದ ತೆರಿಗೆ ಸಾರ್ಥಕ ಆಗಿದೆ ಎಂದು. ಯಾಕೆಂದರೆ ಅಷ್ಟೊಂದು ಸೇವಾ ಮನೋಭಾವದ ವೈದ್ಯರು ಅಲ್ಲಿದ್ದರು. ಸಾಮಾನ್ಯಾಗಿ ಆಂಟಿಬಯಾಟಿಕ್ಸ್ ಕೊಡುತ್ತಿದ್ದರು. ಸುಸ್ತಾದಾಗ ಐವಿ ಕೇಳಿ ಐವಿಯನ್ನು ಹಾಕುತ್ತಿದ್ದೆ. ಎರಡು ವಾರಗಳವರೆಗೂ ಜ್ವರ ಇತ್ತು. ಸಾಮಾನ್ಯವಾಗಿ ನನಗೆ ಇಷ್ಟು ದಿನದ ಜ್ವರದ ಅನುಭವವೇ ಆಗಿರಲಿಲ್ಲ. ಎರಡು ವಾರಗಳ ನಂತರ ನನ್ನ ಜ್ವರ ನಿಂತಿತು. ಜ್ವರ ಬಿಟ್ಟು ಐದು ಪರೀಕ್ಷೆಗಳು ನಡೆಸಿದ ನಂತರ ಕೊರೊನಾ ನೆಗೆಟಿವ್ ಆಗಿರುವುದು ತಿಳಿದು ಬಂತು” ಎಂದು ಅವರು ಹೇಳುತ್ತಾರೆ.

ಸ್ವತಃ ವೆಂಕಟ್ ಕೊರೊನವನ್ನು ತಡೆಯಬಹುದಾಗಿದೆ ಎಂದು ಧೈರ್ಯ ತುಂಬುತ್ತಾರೆ. “ಸೋಂಕಿನ ಬಗ್ಗೆ ಹಲವಾರು ಸುಳ್ಳು ಸುದ್ದಿಗಳು ಹರಡುತ್ತಿವೆ. ಇದನ್ನು ಮೂರು ದಾರಿಯಲ್ಲಿ ತಡೆಗಟ್ಟಬಹುದಾಗಿದೆ. ಮೊದಲನೆಯದಾಗಿ ಮುಖಕ್ಕೆ ಮಾಸ್ಕ್ ಹಾಕುವುದರ ಮೂಲಕ ಇನ್ನೊಬ್ಬರಿಗೆ ರೋಗ ಹರಡದಿರುವಂತೆ ಮಾಡಬಹುದು. ಎರಡನೆಯದಾಗಿ ನಿಮ್ಮ ಕೈಗಳನ್ನು ತೊಳೆಯುತ್ತಿರಿ ಹಾಗೂ ನಿಮ್ಮ ಮುಖವನ್ನು ಕೈ ತೊಳೆಯದೆ ಮುಟ್ಟದಿರಿ. ಮೂರನೆಯದಾಗಿ ನಿಮ್ಮ ವಸ್ತುಗಳನ್ನು ಪ್ರತ್ಯೇಕವಾಗಿ ಇಟ್ಟು ಬಿಡಿ” ಎಂದು ವೆಂಕಟ್ ಹೇಳುತ್ತಾರೆ.

ಈ ರೋಗವು ತಡೆಗಟ್ಟುವಂತದ್ದಾಗಿದೆ ಎನ್ನುವ ವೆಂಕಟ್, “ನೀವು ಅದರಿಂದ ಹೊರಗೆ ಬರಬಹುದಾಗಿದೆ. ಸೋಂಕಿತರಿಗೆ ನನ್ನ ಶುಭ ಹಾರೈಕೆ ಇರುತ್ತದೆ. ಭಯದಿಂದ ದೂರವಿರಿ, ಇದು ನಿಮಗೆ ಬರದೇ ಇರಲಿ, ಒಂದು ವೇಳೆ ಬಂದರೂ ಅದನ್ನು ತಡೆಗಟ್ಟಬಹುದಾಗಿದೆ” ಎಂದು ಅವರ ತನ್ನ ವಿಡಿಯೊದಲ್ಲಿ ಧೈರ್ಯ ಹೇಳುತ್ತಾರೆ.

ವೆಂಕಟ್‌ರವರು ತಮ್ಮ ಫೇಸ್‌ಬುಕ್‌ ವಾಲ್‌ನಲ್ಲಿ ಹಾಕಿಕೊಂಡಿರುವ ವಿಡಿಯೋ ವೈರಲ್‌ ಆಗಿದ್ದು ಬಹಳಷ್ಟು ಜನ ಷೇರ್‌ ಮಾಡಿದ್ದಾರೆ. ಹಾಗೆಯೇ ಶುಭ ಹಾರೈಕೆಗಳನ್ನು ತಿಳಿಸಿದ್ದಾರೆ.


ಇದನ್ನೂ ಓದಿ: ಕೊರೊನ ಸಾಂಕ್ರಾಮಿಕ ಬಿಕ್ಕಟ್ಟಿನ ಬೆಂಕಿಗೆ ಪುಳ್ಳೆಯಿಟ್ಟ ವೈಜ್ಞಾನಿಕ ಮನೋಭಾವದ ಅಭಾವ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಇಂದೋರ್‌ ಕಾಂಗ್ರೆಸ್‌ ಅಭ್ಯರ್ಥಿ ನಾಮಪತ್ರ ಹಿಂಪಡೆಯಲು ಬೆದರಿಕೆ, ಚಿತ್ರಹಿಂಸೆ ಕಾರಣ?

0
ಮಧ್ಯಪ್ರದೇಶದ ಇಂದೋರ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಕ್ಷಯ್ ಕಾಂತಿ ಬಾಮ್ ಅವರು ಸೋಮವಾರ ತಮ್ಮ ನಾಮಪತ್ರವನ್ನು ಹಿಂಪಡೆದಿದ್ದು, ಅವರನ್ನು ಬೆದರಿಸಿ ಚಿತ್ರಹಿಂಸೆ ನೀಡಿ ನಾಮಪತ್ರ ಹಿಂಪಡೆಯುವಂತೆ ಮಾಡಲಾಗಿದೆ ಎಂದು ಮಧ್ಯಪ್ರದೇಶದ ವಿರೋಧ...