ಕೋವಿಡ್-19 ಸೋಂಕು ವಿಶ್ವವ್ಯಾಪಿ ಹರಡಿರುವುದರಿಂದ ಪ್ರತಿವರ್ಷವೂ ಕೊಡಮಾಡುವ ಪುಲ್ಟಿಜರ್ ಪ್ರಶಸ್ತಿಗೆ ಗಣ್ಯರ ಹೆಸರು ಪ್ರಕಟಿಸುವುದನ್ನು ಮುಂದೂಡಲಾಗಿದೆ. ಈ ಸಂಬಂಧ ಸೋಮವಾರವೇ ತೀರ್ಮಾನಿಸಲಾಗಿದ್ದು ಇಂದು ಪ್ರಶಸ್ತಿ ಆಯ್ಕೆ ಮುಂದೂಡಿರುವುದನ್ನು ಪುಲ್ಟಿಜರ್ ಪ್ರಶಸ್ತಿ ಮಂಡಳಿ ತಿಳಿಸಿದೆ.
ಪುಲ್ಟಿಜರ್ ಪ್ರಶಸ್ತಿ ಸ್ಥಾಪಿಸಿ ಒಂದು ಶತಮಾನ ಕಳೆದಿದ್ದು 2020ರ ಪುಲ್ಟಿಜರ್ ಪ್ರಶಸ್ತಿ ಪ್ರಕಟಿಸುವುದನ್ನು ಏಪ್ರಿಲ್ 20ಕ್ಕೆ ನಿಗದಿಪಡಿಸಲಾಗಿತ್ತು. ಆದರೆ ವಿಶ್ವದಾದ್ಯಂತ ಕೋರೊನ ಸೋಂಕು ಹರಡಿ ಜನರನ್ನುಬಾಧಿಸಿರುವ ಸಂದರ್ಭದಲ್ಲಿ ಪ್ರಶಸ್ತಿ ಪ್ರಕಟಿಸುವುದನ್ನು ಮೇ 4ಕ್ಕೆ ಮುಂದೂಡಲಾಗಿದೆ ಎಂದು ಮಂಡಳಿತ ಹೇಳಿದೆ.
ಪತ್ರಿಕೋದ್ಯಮ, ಪುಸ್ತಕ, ನಾಟಕ ಮತ್ತು ಸಂಗೀತ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿರುವವರನ್ನು ಗುರುತಿಸಿ ಪುಲ್ಟಿಜರ್ ಪ್ರಶಸ್ತಿಯನ್ನು ಪ್ರದಾನ ಮಾಡಿಕೊಂಡು ಬರಲಾಗುತ್ತಿತ್ತು. ಪುಲ್ಟಿಜರ್ ಪ್ರಶಸ್ತಿ ಪಡೆಯುವವರ ಸ್ಪರ್ಧೆಯಲ್ಲಿ ಉನ್ನತಮಟ್ಟದ ಪತ್ರಕರ್ತರು ಮುಂದಿದ್ದಾರೆ ಎಂದು ವರದಿಗಳು ತಿಳಿಸಿವೆ.
1917 ರಲ್ಲಿ ಪುಲ್ಟಿಜರ್ ಪ್ರಶಸ್ತಿಯನ್ನು ಸ್ಥಾಪಿಸಲಾಯಿತು ಪ್ರಮುಖವಾಗಿ ಸಾಹಿತ್ಯ, ಪತ್ರಿಕೋದ್ಯಮ, ನಾಟಕ ಹೀಗೆ 21 ಪ್ರಕಾರಗಳಲ್ಲಿ ಸಾಧನೆ ಮಾಡಿರುವವರಿಗೆ ಪ್ರಶಸ್ತಿ ನೀಡಲಾಗುತ್ತಿದೆ. 15 ಸಾವಿರ ಡಾಲರ್ ನಗದು ಮತ್ತು ಪ್ರಶಸ್ತಿಪತ್ರ ಒಳಗೊಂಡಿದೆ ಎಂದು ಪುಲ್ಟಿಜರ್ ಪ್ರಶಸ್ತಿ ಆಡಳಿತಾಧಿಕಾರಿ ಕೆನೆಡಿ ಹೇಳಿದ್ದಾರೆ..


