Homeಮುಖಪುಟಮಹೇಂದ್ರ ಕುಮಾರ್ ನಿಧನದ ಸಂಧಿಕಾಲ ಮತ್ತು ಫಿಡೆಲ್ ಕ್ಯಾಸ್ಟ್ರೊ!

ಮಹೇಂದ್ರ ಕುಮಾರ್ ನಿಧನದ ಸಂಧಿಕಾಲ ಮತ್ತು ಫಿಡೆಲ್ ಕ್ಯಾಸ್ಟ್ರೊ!

ತದ್ವಿರುದ್ಧ ಅನಿಸುವ ವಿಚಾರಗಳ ನಡುವೆಯೂ ನಿಜವಾದ ಪ್ರಾಮಾಣಿಕತೆ ಇದ್ದರೆ ಪರಸ್ಪರ ಗೌರವ ಸಾಧ್ಯ ಮತ್ತು ಅನ್ಯಾಯ, ದಮನಗಳ ವಿರುದ್ಧದ ಹೋರಾಟದಲ್ಲಿ ಸಮನ್ವಯ ಸಾಧ್ಯ.

- Advertisement -
- Advertisement -

ಚಿಂತಕ, ಸಂಘಟಕ ಮಹೇಂದ್ರ ಕುಮಾರ್ ಅವರು ಅಕಾಲಿಕವಾಗಿ ನಿಧನರಾದ ಸುದ್ದಿಯನ್ನು ಇಂದು ಬೆಳಿಗ್ಗೆ ಕೇಳಿದಾಗ ಆಘಾವಾಯಿತು. ಹಿಂದೆ ಅವರ ಮಾತುಗಳನ್ನು ಕೇಳಿದ್ದೆ. ನಿನ್ನೆ ತೀರಾ ತಡರಾತ್ರಿ ಯಾರೋ ಶೇರ್ ಮಾಡಿದ್ದ ಪೋಸ್ಟನ್ನು ಫೇಸ್‌ಬುಕ್ ಗ್ರೂಪೊಂದರಲ್ಲಿ ಅಪ್ರೂವ್ ಮಾಡಿದ್ದೆ. ಇವತ್ತು ಬೆಳಿಗ್ಗೆ ಕೂಡಾ ಅವರ ಸಂದರ್ಶನ ಕೇಳಿದ್ದೆ. ನಂತರ ಸಮಾಜಿಕ ಜಾಲತಾಣಗಳಲ್ಲಿ ಅವರದ್ದೇ ನಿಧನದ ಸುದ್ದಿ ಮತ್ತು ಸಂತಾಪಗಳು. ಕೆಲವು ತುಂಬಾ ಭಾವನಾತ್ಮಕವಾದವುಗಳು ಕೂಡಾ. ಅದು ಅವರ ಜನಪ್ರಿಯತೆಯನ್ನು ತೋರಿಸುತ್ತದೆ. ನನಗ್ಯಾಕೋ ಇದನ್ನು ಬರೆಯಬೇಕು ಅನಿಸಿತು.

ಅವರು ಭಜರಂಗದಳದ ಸಂಸ್ಥಾಪಕರು ಮತ್ತು ಸಂಚಾಲಕರಾಗಿದ್ದ ಕಾರಣದಿಂದಲೋ ಏನೋ ನಾನು ಮೊದಮೊದಲಿಗೆ ಅವರನ್ನು ಸಂಶಯದಿಂದಲೇ ನೋಡುತ್ತಿದ್ದೆ ಮತ್ತು ಸಂಘಪರಿವಾರ ತಂತ್ರಗಳನ್ನು ಹತ್ತಿರದಿಂದ ಬಲ್ಲವರಿಗೆ ಅದು ಸಹಜವೂ ಆಗಿತ್ತು. ಅಲ್ಲದೇ ಚರ್ಚ್ ದಾಳಿ ಪ್ರಕರಣದಲ್ಲಿ ಅವರು ಆರೋಪಿಯಾಗಿದ್ದುದೂ ಒಂದು ಕಾರಣ. ನಂತರದಲ್ಲಿ ಅವರ ಅನೇಕ ಅಭಿಪ್ರಾಯಗಳು ನನಗೆ ಒಪ್ಪಿಗೆಯಾದವು ಮತ್ತು ಕೆಲವು ಮೆಚ್ಚಿಗೆಯೂ ಆದವು. ಅವರು ಅನೇಕ ವಿಷಯಗಳ ಬಗ್ಗೆ ಸ್ಪಷ್ಟ ಮತ್ತು ಖಚಿತ ಅಭಿಪ್ರಾಯ ಹೊಂದಿರುವುದು ಮನವರಿಕೆಯಾಯಿತು. ವಿಚಾರ ಏನೇ ಇರಲಿ, ಅದರಲ್ಲಿ ಪ್ರಾಮಾಣಿಕತೆ ಇದ್ದಾಗ ಅದು ಗೌರವಕ್ಕೆ ಪಾತ್ರವಾಗುತ್ತದೆ. ಅವರ ಮಾತುಗಳಲ್ಲಿ ಅಂತಹ ಪ್ರಾಮಾಣಿಕತೆ ಕಾಣುತ್ತಿತ್ತು.

ಬಲಪಂಥೀಯರು ಎನಿಸಿಕೊಂಡಿದ್ದ ಮಹೇಂದ್ರ ಕುಮಾರ್ ಅವರು ನಿಧಾನವಾಗಿ ಎಡಪಂಥದ ಕಡೆಗೆ ನಡಿಗೆ ಆರಂಭಿಸಿದುದರಲ್ಲಿ ನನಗೆ ಅಚ್ಚರಿಯೇನೂ ಕಾಣಿಸಿರುವುದಿಲ್ಲ. ಇಂದು ಚಿಂತಕರಾಗಿ ಹೆಸರಾಗಿರುವ ಒಂದು ತಲೆಮಾರಿನ ಬಾಲಕರನೇಕರು ಆರೆಸ್ಸೆಸ್ ವಿಷಪಾಠ ನುಂಗಿ, ನಂತರ ನಿಜ ತಿಳಿದು ಅದನ್ನು ಉಗುಳಿ ಬಂದವರು ಮತ್ತು ಇಂದು ಅದು ಪ್ರತಿಪಾದಿಸುವ ಮೇಲ್ಜಾತಿಯ ಸರ್ವಾಧಿಪತ್ಯ, ಮೇಲ್ಜಾತಿ- ವರ್ಗಗಳ ಗುಲಾಮಿ, ಅಲ್ಪಸಂಖ್ಯಾತರ ವಿರುದ್ಧ ದ್ವೇಷ, ಕುತಂತ್ರ, ಇಬ್ಬಗೆ ನೀತಿ ಇತ್ಯಾದಿ ಎಲ್ಲವನ್ನೂ ಸಕ್ರಿಯವಾಗಿ ವಿರೋಧಿಸುತ್ತಿರುವವರು. ಇದಕ್ಕೆ ಕಾರಣವೆಂದರೆ ಸಂಘದ ಶಾಖೆಗಳಲ್ಲಿ ಆಕರ್ಷಕ ಮತ್ತು ಪ್ರಿಯವಾದ ದೇಶಪ್ರೇಮದ ಹೆಸರಿನಲ್ಲಿ ಅಮಾಯಕ ಬಾಲಕರನ್ನು ಸಂಘಟನೆಗೆ ಸೇರಿಸಿಕೊಳ್ಳಲಾಗುತ್ತದೆ ಮತ್ತು ಚೆನ್ನಾಗಿ ಯೋಜಿಸಲಾದ ಆಟಗಳು ಮತ್ತು ತಿರುಚಿದ ಕಟ್ಟುಕತೆಗಳಿಂದ ಮುಗ್ಧ ಮನಸ್ಸುಗಳನ್ನು ತೊಳೆದು ದ್ವೇಷದ ವಿಷ ಮತ್ತು ಗುಲಾಮಿಯ ಕೊಳಕನ್ನು ತುಂಬಿಸಿ, ಸ್ವತಂತ್ರ ಚಿಂತನೆಯನ್ನು ಕೊಂದುಬಿಡಲಾಗುತ್ತದೆ.

ನಿಜವಾಗಿಯೂ ದೇಶವನ್ನು- ಅಂದರೆ, ಅದರಲ್ಲಿರುವ ಎಲ್ಲಾ ಜನರನ್ನು ಪ್ರೀತಿಸುವವರು, ಅವರ ಈ ಸಂಘಟನೆಯ ನಿಜ ಉದ್ದೇಶವನ್ನು ಬೇಗನೇ ತಿಳಿದುಕೊಂಡು ಅದರ ಕಟ್ಟಾ ವಿರೋಧಿಗಳಾಗುತ್ತಾರೆ. ಅಂತವರು ಎಡಪಂಥೀಯ ವಿಚಾರಗಳತ್ತ ಸರಿಯುತ್ತಾರೆ. (ವೈಯಕ್ತಿಕವಾಗಿ ನಾನೂ ಹೈಸ್ಕೂಲು ಬಾಲಕನಾಗಿದ್ದಾಗ ಕಲ್ಲಡ್ಕ ಪ್ರಭಾವಕ್ಕೆ ಬಿದ್ದು ಅವರ ಅಚ್ಚು ಮೆಚ್ಚಾಗಿದ್ದೆ. ಆದರೆ, ಅವರ ಬೇಗಡೆ ದೇಶಪ್ರೇಮ ಮತ್ತು ಕ್ರೂರ ದ್ವೇಷ ಮನೋಭಾವ, ಅಪ್ರಾಮಾಣಿಕ ಠಕ್ಕುತನಗಳನ್ನು ಬೇಗನೇ ತಿಳಿದು ಹೊರಬಂದು ಎಡಪಂಥೀಯನಾದೆ.)

ಮಹೇಂದ್ರ ಕುಮಾರ್ ಅವರ ಮಾತುಗಳನ್ನು ಕೇಳಿದಾಗ, ಅವುಗಳಲ್ಲಿ ಕಾಣುವುದು ಜನಪ್ರೀತಿ. ಭಾರತದ ಬಹುತೇಕ ಜನರು ಬೇರೆಬೇರೆ ಪ್ರಮಾಣಗಳಲ್ಲಿ ಧರ್ಮ ಮತ್ತು ದೈವನಿಷ್ಟರು. ಈ ನಂಬಿಕೆಗಳನ್ನು ಬಳಸಿಕೊಂಡು ಜನರನ್ನು ವಂಚಿಸಲೂ ಸಾಧ್ಯ ಮತ್ತು ಅವರ ಕರ್ತೃತ್ವ ಶಕ್ತಿಯನ್ನು ಬಡಿದೆಬ್ಬಿಸಲೂ ಸಾಧ್ಯ. ಈ ಎರಡನೆಯ ಸಾಧ್ಯತೆ ಮಹೇಂದ್ರ ಕುಮಾರ್ ಅವರಿಗೆ ಚೆನ್ನಾಗಿ ತಿಳಿದಿತ್ತು. ಸಾರಸಗಟಾಗಿ ಧರ್ಮ ದೇವರುಗಳನ್ನು ತಿರಸ್ಕರಿಸಿ, ನಿಂದಿಸಿದರೆ, ಜನರು ದೂರವಾಗುತ್ತಾರೆ ಎಂಬುದು ಸತ್ಯ.

ಮಹೇಂದ್ರ ಕುಮಾರ್ ಅವರು ತಮ್ಮ ನಿಧನದ ಹೊತ್ತಿನಲ್ಲಿ ಇಂತಹಾ ಸಮನ್ವಯರ ಸಂಧಿಕಾಲದಲ್ಲಿದ್ದರೆ?. ನನಗೆ ಅವರ ನೇರ ಪರಿಚಯ ಇರಲಿಲ್ಲವಾದರೂ, ಅವರ ನಿಧನದ ಸುದ್ದಿ ಕೇಳಿ, ಅವರ ವ್ಯಕ್ತಿತ್ವದ ಚಿತ್ರ ನನ್ನ ಕಣ್ಣಮುಂದೆ ಸುಳಿದಾಗ ನನಗೆ ತಕ್ಷಣ ನೆನಪಾದುದು ಫ್ರೀಯ್ ಬ್ರಿಟ್ಟೋ ಎಂಬ ಡೊಮಿನಿಕನ್ ಪಾದ್ರಿ ನಡೆಸಿದ ಕ್ಯೂಬಾದ ಕ್ರಾಂತಿಕಾರಿ ನಾಯಕ ಫಿಡೆಲ್ ಕ್ಯಾಸ್ಟ್ರೊ ಅವರ ದೀರ್ಘ ಸಂದರ್ಶನದ ಪುಸ್ತಕ- “ಫಿಡೆಲ್ ಎಂಡ್ ರಿಲೀಜನ್”.  ನಾನಿದನ್ನು ಮೂರು ದಶಕಗಳ ಹಿಂದೆ ಓದಿದ್ದು, ನನ್ನ ಮೇಲೆ ಭಾರೀ ಪ್ರಭಾವ ಬೀರಿತ್ತು. ಇದು ನಿಜವಾದ ಧಾರ್ಮಿಕ ಪ್ರಜ್ಞೆ ಮತ್ತು ಸಮಾಜವಾದಿ ಮಾನವೀಯ ಪ್ರಜ್ಞೆಯ ಮುಖಾಮುಖಿಯಾಗಿತ್ತು. ಮಹೇಂದ್ರ ಕುಮಾರ್ ಅವರಿಗೂ ಫಿಡೆಲ್‌ಗೆ ಸಂಬಂಧಿಸಿದ ವಿಚಾರಗಳಿಗೂ ಏನು ಸಂಬಂಧ ಎಂದು ನಿಮಗೆ ಅಚ್ಚರಿಯಾಗಬಹಃದು. ನೀವೇ ಇದನ್ನಿಲ್ಲಿ ನೋಡಬಹುದು.

ಕೆಲವರಿಗೆ ಆಶ್ಚರ್ಯ ಆಗಬಹುದು- ಚರ್ಚ್ ಮತ್ತು ನಾಸ್ತಿಕ ಕ್ರಾಂತಿಕಾರಿಗಳು ಸಶಸ್ತ್ರ ಹೋರಾಟ ನಡೆಸಿದ ದೊಡ್ಡ ಪರಂಪರೆಯೇ ಲ್ಯಾಟಿನ್ ಅಮೇರಿಕಾದಲ್ಲಿದೆ. ಫ್ರೀಯ್ ಬ್ರಿಟ್ಟೋ ಧಾರ್ಮಿಕ ವ್ಯಕ್ತಿ; ನಾಸ್ತಿಕನಲ್ಲ. ಕ್ಯಾಸ್ಟ್ರೊ ಘೋಷಿತ ನಾಸ್ತಿಕ. ಆದರೆ, ಇಬ್ಬರೂ ಕರ್ಮಠರಲ್ಲ. ಇಬ್ಬರೂ ಸಮಾಜವಾದಿ ವಿಚಾರಗಳ ಎಡಪಂಥೀಯರು.

ಈ ಪುಸ್ತಕದಲ್ಲಿ ಒಂದು ಕಡೆ ಕ್ರಿಸ್ತನ ಪವಾಡಗಳ ಬಗ್ಗೆ ಫಿಡೆಲ್ ಅವರು ಮಾತನಾಡುತ್ತಾರೆ. ನನಗೆ ನೆನಪಿರುವಂತೆ ಅವರು ಹೇಳಿದ್ದು ಹೀಗೆ- “ಏಸು ಕ್ರಿಸ್ತ ಪವಾಡಗಳನ್ನು ಮಾಡಿದ. ಬ್ರೆಡ್ ಮತ್ತು ವೈನನ್ನು ದ್ವಿಗುಣಗೊಳಿಸಿದ, ಹೆಚ್ಚಿಸಿದ! -ಹಸಿದವರಿಗಾಗಿ. ನಾವು ಕಮ್ಯುನಿಸ್ಟರು ಕ್ರಾಂತಿಯಿಂದ ಏನು ಮಾಡುತ್ತಿದ್ದೇವೆ? ಹಸಿದವರಿಗೆ ಅಹಾರೋತ್ಪನ್ನ ಹೆಚ್ಚಿಸುವುದು, ಆಸ್ಪತ್ರೆಗಳನ್ನು ಹೆಚ್ಚಿಸುವುದು,

ಮಕ್ಕಳಿಗೆ ಶಾಲೆಗಳನ್ನು ಹೆಚ್ಚಿಸುವುದು, ದುಡಿಯುವ ಕೈಗಳಿಗೆ ಉದ್ಯೋಗ ಹೆಚ್ಚಿಸುವುದು… ಜನರ ಜೀವನ ಮಟ್ಟ ಹೆಚ್ಚಿಸುವುದು!.. ಕ್ರಿಸ್ತ ಮಾಡಿದ್ದಕ್ಕೂ, ನಾವು ಮಾಡುತ್ತಿರುವುದಕ್ಕೂ ಏನು ವ್ಯತ್ಯಾಸವಿದೆ?”

ಅಮೇರಿಕಾದ ಫ್ರುಟ್ ಇಂಡಸ್ಟ್ರಿಯ ಅಡಿಯಾಳಾಗಿದ್ದ ಬ್ಯಾಟಿಸ್ಟಾ ಎಂಬ ಸರ್ವಾಧಿಕಾರಿಯ ಹುಟ್ಟಡಗಿಸಿದ್ದ ಫಿಡೆಲ್, ಚೆ, ರೌಲ್, ಕ್ಯಾಮಿಲಿಯೊರಂತಹ ಬೆರಳೆಣಿಕೆಯ ಮತ್ತು ಆ ಕಾಲದಲ್ಲಿ ಅರೆಬೆಂದಿದ್ದ ಯುವ ಕಮ್ಯುನಿಸ್ಟರು,  ಸೈದ್ಧಾಂತಿಕತೆಯನ್ನೇ ಮುಂದುಮಾಡಿಕೊಂಡು ನಿಷ್ಕ್ರಿಯವಾಗಿದ್ದ ಕ್ಯೂಬನ್  ಕಮ್ಯುನಿಸ್ಟ್ ಪಾರ್ಟಿಯ ಕಣ್ಣೆದುರೇ ಕ್ರಾಂತಿ ಮಾಡಿದರಲ್ಲ. ಎಲ್ಲಾ ಟೀಕೆ, ವಿರೋಧಗಳ ನಡುವೆ ದೇಶ ಕಟ್ಟಿದರಲ್ಲ! ಅದು ಹೇಗೆ ಸಾಧ್ಯವಾಯಿತು? ಇಂತಹಾ ವಿಷಯಗಳಲ್ಲೇ ಮಹೇಂದ್ರ ಕುಮಾರ್ ಅಂತವರ ಸಂಘಟನಾ ಶಕ್ತಿಯ ಮಹತ್ವವಿರುವುದು.

ಅಜ್ಞಾನ, ಬಡತನ, ನಮ್ಮ ಹಿಂದೂತ್ವವಾದದಂತೆ ಇದ್ದ ಸ್ಪಾನಿಷ್ ಬ್ರಾಂಡಿನ- “ಕ್ರಿಸ್ತನನ್ನು ಮರೆತ ಕ್ರೂರ ಗುಲಾಮಿ ಕ್ರಿಶ್ಚಿಯಾನಿಟಿ”ಯ ಅಡಿಯಾಳುಗಳಾಗಿದ್ದ ಬಡಜನರಿಗೆ ನೀವು ಮೂರ್ಖರು, ಏಸುವಿನ ಪವಾಡ ಸುಳ್ಳು ಇತ್ಯಾದಿ ನಾಸ್ತಿಕ ಪ್ರವಚನ ಉದುರಿಸುತ್ತಿದ್ದರೆ, ಆ ಜನರು ಈ ಕ್ರಾಂತಿಕಾರಿಗಳನ್ನು- ಅವರ ಉದ್ದೇಶ ಎಷ್ಟೇ ಚೆನ್ನಾಗಿರಲಿ ಒದ್ದೋಡಿಸುತ್ತಿದ್ದರು. ಗ್ರ್ಯಾನ್ಮಾ ಎಂಬ ತಗಡು ಹಡಗಿನಲ್ಲಿ ಸ್ವಾತಂತ್ರ್ಯದ ಕನಸು ಹೊತ್ತು ಬಂದ ನೂರು ಚಿಲ್ಲರೆ ಯುವಕರಲ್ಲಿ ಮೊದಲ ದಾಳಿಯಲ್ಲಿ ಬದುಕುಳಿದ ಒಂದು ಡಜನ್ ಜನರು, ಒಂದು ವರ್ಷದೊಳಗೆ ಜನಸಾಗರವಾಗಿ, ಅಧಿಕಾರ ಹಿಡಿಯುತ್ತಿರಲಿಲ್ಲ.

ಜನರೇನಿದ್ದಾರೋ, ಅದೇ ಆಗಿದ್ದಾರೆ! ನಿಮ್ಮ ತತ್ತ್ವಕ್ಕಾಗಿ ಜನರಿಲ್ಲ. ಜನರಿಗಾಗಿ ನಿಮ್ಮ ತತ್ತ್ವವಿದೆ. ಸೈದ್ಧಾಂತಿಕ ಶುದ್ಧತೆ ಇರಲಿ ಬಿಡಿ, ಅಹಿಂದರು ಕೇಳುತ್ತಿರುವ ಸಮಾನತೆ ಏನು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಇಲ್ಲವೇ ಯುವಕರು ಅವರ ದಾರಿ ಹಿಡಿಯುತ್ತಾರೆ. ಬಹುಶಃ ಮಹೇಂದ್ರ ಕುಮಾರ್ ಇಂತದ್ದೇ ಚಿಂತನೆ ಹೊಂದಿದ್ದರು.

ನನಗೆ ಅವರ ಸಂದರ್ಭದಲ್ಲಿ ಇದೇ ವಿಷಯ ನೆನಪಿಗೆ ಬರಲು ಕಾರಣವೆಂದರೆ, ಕೆಲವು ದಿನಗಳ ಕಾಲ ನಡೆದ ಈ ದೀರ್ಘ ಸಂದರ್ಶನದ ಬಳಿಕ ನಂತರದ ದಿನಗಳಲ್ಲಿ ಬ್ರಿಟ್ಟೋ ಮತ್ತು ಕ್ಯಾಸ್ಟ್ರೊ ಹೇಳಿದ ಮಾತುಗಳು.

“ಒಂದು ದಿನ ಯಾರಾದರೂ ನನ್ನನ್ನು ನಾಸ್ತಿಕ ಕಮ್ಯುನಿಸ್ಟ್ ಆಗಿ ಮಾಡಲು ಸಾಧ್ಯವಿದ್ದರೆ, ಅದು ಫಿಡೆಲ್ ಕ್ಯಾಸ್ಟ್ರೊರಿಂದ ಮಾತ್ರ ಸಾಧ್ಯ” ಎಂದು ಫ್ರೀಯ್ ಬ್ರಿಟ್ಟೋ ಹೇಳಿದರೆ, ಫಿಡೆಲ್ ಕ್ಯಾಸ್ಟ್ರೊ ಹೇಳಿದ್ದು ಹೀಗೆ: “ಯಾರಾದರೂ ಒಂದು ದಿನ ನನ್ನನ್ನು ಆಸ್ತಿಕನಾಗಿ ಪರಿವರ್ತಿಸಿದರೆ, ಅದು ಆ ಪಾದ್ರಿ ಫ್ರೀಯ್ ಬ್ರಿಟ್ಟೋ”.

ತದ್ವಿರುದ್ಧ ಅನಿಸುವ ವಿಚಾರಗಳ ನಡುವೆಯೂ ನಿಜವಾದ ಪ್ರಾಮಾಣಿಕತೆ ಇದ್ದರೆ ಪರಸ್ಪರ ಗೌರವ ಸಾಧ್ಯ ಮತ್ತು ಅನ್ಯಾಯ, ದಮನಗಳ ವಿರುದ್ಧದ ಹೋರಾಟದಲ್ಲಿ ಸಮನ್ವಯ ಸಾಧ್ಯ. ತೀರಾ ಅನಿರೀಕ್ಷಿತ ಮತ್ತು ಅಕಾಲಿಕ ಅಗಲುವಿಕೆಯ ಈ ಸಂದರ್ಭದಲ್ಲಿ ಮಹೇಂದ್ರ ಕುಮಾರ್ ಇಂತಹಾ ಚಿಂತನೆಯ ಸಂಧಿಕಾಲದಲ್ಲಿದ್ದರು ಎಂದು ನನಗನಿಸುತ್ತದೆ.


ಇದನ್ನೂ ಓದಿ: ಪ್ರಗತಿಪರ ಚಿಂತಕ, ನಮ್ಮಧ್ವನಿ ಬಳಗದ ಮಹೇಂದ್ರ ಕುಮಾರ್‌ ಇನ್ನಿಲ್ಲ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

LEAVE A REPLY

Please enter your comment!
Please enter your name here

- Advertisment -

ಬಿಹಾರ: ಪತಿಯನ್ನು ಹತ್ಯೆ ಮಾಡಿದ ಗುಂಪಿನಿಂದ ಬೆದರಿಕೆ; ಇಬ್ಬರು ಮಕ್ಕಳೊಂದಿಗೆ ವಿಷ ಸೇವಿಸಿದ ಮುಸ್ಲಿಂ ಮಹಿಳೆ ಸಾವು, ಮಕ್ಕಳ ಸ್ಥಿತಿ ಗಂಭೀರ

ಬಿಹಾರದ ರೋಹ್ತಾಸ್ ಜಿಲ್ಲೆಯ ಮುಸ್ಲಿಂ ಮಹಿಳೆಯೊಬ್ಬರು ಮಂಗಳವಾರ ತನ್ನ ಇಬ್ಬರು ಅಪ್ರಾಪ್ತ ಮಕ್ಕಳೊಂದಿಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.  ಪತಿಯನ್ನು ಅಮಾನುಷವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಿದ್ದ ಆರೋಪಿಗಳಿಂದ ಬೆದರಿಕೆಗಳನ್ನು ತಾಳಲಾರದೆ...

ಅತ್ಯಾಚಾರ ಆರೋಪ: ಅಶೋಕ್ ಖರತ್ ಅವರ ಪುತ್ರನನ್ನು ವಿಚಾರಣೆಗಾಗಿ ವಶಕ್ಕೆ ಪಡೆದ ಎಸ್ಐಟಿ; ಪತ್ನಿಗಾಗಿ ಹುಡುಕಾಟ 

ನಾಸಿಕ್: ಅತ್ಯಾಚಾರ ಆರೋಪಿ ಸ್ವಯಂ ಘೋಷಿತ ದೇವಮಾನವ ಅಶೋಕ್ ಖರತ್ ವಿರುದ್ಧ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ), ನಾಸಿಕ್ ನಗರದಲ್ಲಿ ಆತನ ಮಗನನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದು, ಆತನ ಪತ್ನಿಗಾಗಿಯೂ...

ಇರಾಕ್‌ : ಬಗ್ದಾದ್‌ನಲ್ಲಿ ಯುಎಸ್‌ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅಪಹರಣ

ಇರಾಕ್‌ ರಾಜಧಾನಿ ಬಗ್ದಾದ್‌ ನಗರದ ಅಲ್-ಸಾದೂನ್ ಬೀದಿಯಲ್ಲಿರುವ ಬಗ್ದಾದ್ ಹೋಟೆಲ್ ಬಳಿ ಅಮೆರಿಕದ ಪ್ರಶಸ್ತಿ ವಿಜೇತ ಸ್ವತಂತ್ರ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅವರನ್ನು ಮಂಗಳವಾರ (ಮಾ.31, 2026) ಅಪಹರಿಸಲಾಗಿದೆ ಎಂದು ವರದಿಯಾಗಿದೆ. ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ,...

ವಾಣಿಜ್ಯ ಎಲ್‌ಪಿಜಿ ದರ 195.50 ರೂ. ಏರಿಕೆ : ಜನ ಸಾಮಾನ್ಯರಿಗೆ ಗಾಯದ ಮೇಲೆ ಬರೆ

ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಜಾಗತಿಕ ತೈಲ ಬೆಲೆಗಳು ಏರುತ್ತಿರುವ ನಡುವೆ, ವಾಣಿಜ್ಯ ಎಲ್‌ಪಿಜಿ ದರವನ್ನು ಬುಧವಾರ (ಏ.1) 195.50 ರೂ. ಹೆಚ್ಚಿಸಲಾಗಿದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳ ಪ್ರಕಾರ, ಬೆಲೆ ಏರಿಕೆ ಬಳಿಕ...

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿಯಿದೆ : ಅಖಿಲೇಶ್ ಯಾದವ್ ವ್ಯಂಗ್ಯ

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ವ್ಯಂಗ್ಯವಾಡಿದ್ದಾರೆ. ಬಿಜೆಪಿ ನಾಯಕರು ಹಾಗೂ ಅವರ ಸಹವರ್ತಿಗಳ ಭ್ರಷ್ಟಾಚಾರ ಮತ್ತು ದುರ್ನಡತೆಯ ಪ್ರಕರಣಗಳು...

ಅಂತರ್ಧರ್ಮೀಯ ‘ಲಿವ್-ಇನ್’ ಸಂಬಂಧ ಅಪರಾಧವಲ್ಲ: ಅಲಹಾಬಾದ್ ಹೈಕೋರ್ಟ್

ಅಂತರ್ಧರ್ಮೀಯ ಲಿವ್-ಇನ್ ಸಂಬಂಧವನ್ನು ನಿಷೇಧಿಸಲಾಗಿಲ್ಲ ಅಥವಾ ಯಾವುದೇ ಕಾನೂನಿನ ಅಡಿಯಲ್ಲಿ ಅಪರಾಧವಲ್ಲಎಂದು ತೀರ್ಪು ನೀಡಿರುವ ಅಲಹಾಬಾದ್ ಹೈಕೋರ್ಟ್, ಮಹಿಳೆಯ ಕುಟುಂಬದಿಂದ ಬೆದರಿಕೆ ಎದುರಿಸುತ್ತಿರುವ ದಂಪತಿಗಳಿಗೆ ರಕ್ಷಣೆ ನೀಡಿದೆ. ಸೋನ್‌ಭದ್ರಾದ ಕಾಜಲ್ ಪ್ರಜಾಪತಿ ಮತ್ತು ಅವರ...

‘ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧಗೊಳಿಸಬೇಕು’; ರಾಜ್ಯಸಭೆಯಲ್ಲಿ ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯ

ಭಾರತದಲ್ಲಿ ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧ ಹಕ್ಕನ್ನಾಗಿ ಮಾಡಲು, ಹಂಚಿಕೆಯ ಆರೈಕೆ ಜವಾಬ್ದಾರಿಗಳನ್ನು ಒತ್ತಿಹೇಳಲು ಕಾನೂನನ್ನು ಜಾರಿಗೆ ತರಬೇಕೆಂದು ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯಿಸಿದ್ದಾರೆ. ರಾಜ್ಯಸಭೆಯಲ್ಲಿ ಮಾತನಾಡಿದ ಅವರು, ತಂದೆ ಉದ್ಯೋಗ...

ಬಿಜೆಪಿ ಇತರ ರಾಜ್ಯಗಳ ಅಕ್ರಮ ಮತದಾರರನ್ನು ಸೇರಿಸುತ್ತಿದೆ : ಮಮತಾ ಬ್ಯಾನರ್ಜಿ ಆರೋಪ

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಂಗಳವಾರ (ಮಾ.31) ಬಿಜೆಪಿ ಬಿಹಾರ, ರಾಜಸ್ಥಾನ, ಹರಿಯಾಣ ಮತ್ತು ಉತ್ತರ ಪ್ರದೇಶದ ಅಕ್ರಮ ಮತದಾರರನ್ನು ರಾಜ್ಯದ ಮತದಾರರ ಪಟ್ಟಿಯಲ್ಲಿ ಸೇರಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು. ಪಶ್ಚಿಮ...

ಬಿಹಾರ: ವಿವಾಹಿತ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರಕ್ಕೆ ಯತ್ನ; ಹಲ್ಲೆ ಮಾಡಿ ವಿಡಿಯೋ ಹರಿಬಿಟ್ಟ ದುಷ್ಟರು: ಇಬ್ಬರ ಬಂಧನ 

ಬಿಹಾರದ ನಳಂದ ಜಿಲ್ಲೆಯಲ್ಲಿ ನಾಚಿಕೆಗೇಡಿನ ಮತ್ತು ಆತಂಕಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ನೂರ್ಸರಾಯ್ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ಮೂವರು ಪುರುಷರು ವಿವಾಹಿತ ಮಹಿಳೆಯ ಮೇಲೆ ಸಾರ್ವಜನಿಕವಾಗಿ ಸಾಮೂಹಿಕ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ದೌರ್ಜನ್ಯ ವಿರೋಧಿಸಿ...

‘ಹಿಂದುತ್ವ ಉಗ್ರವಾದವನ್ನು ಏಕೆ ನಿರ್ಲಕ್ಷಿಸಬೇಕು..?’; ಸಂಸತ್ತಿನಲ್ಲಿ ಪ್ರಶ್ನಿಸಿದ ರುಹುಲ್ಲಾ ಮೆಹದಿ

"ದೇಶದಲ್ಲಿ ಹೆಚ್ಚುತ್ತಿರುವ ಬಲಪಂಥೀಯ ಉಗ್ರವಾದವನ್ನು ನಿರ್ಲಕ್ಷಿಸಿ ಎಡಪಂಥೀಯ ಬೆದರಿಕೆಗಳ ಮೇಲೆ ಮಾತ್ರ ಗಮನಹರಿಸಲಾಗುತ್ತಿದೆ" ಎಂದು ಲೋಕಸಭೆಯಲ್ಲಿ ಜಮ್ಮು-ಕಾಶ್ಮೀರದ ಶ್ರೀನಗರ ಸಂಸದ ಆಗಾ ಸೈಯದ್ ರುಹುಲ್ಲಾ ಮೆಹದಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಮೇಲೆ...